ಟ್ವಿಟ್ಟರ್ ಮಾದರಿಯ ಮೈಕ್ರೋಬ್ಲಾಂಗಿಗ್ ಸಾಮಾಜಿಕ ಜಾಲತಾಣವಾದ ಟೂಟರ್‌ನಲ್ಲಿ ಪ್ರಧಾನಿ ಮೋದಿಯ ನಕಲಿ ಖಾತೆಯನ್ನು ತೆರೆಯಲಾಗಿದೆ ಎನ್ನಲಾಗಿದ್ದು, ಈ ಖಾತೆಗೆ ಟೂಟರ್ ಅಧಿಕೃತ ಎಂದು ತಿಳಿಸುವ ಬ್ಲೂಟಿಕ್ ನೀಡಿದೆ. ಆದರೆ ಈ ಬಗ್ಗೆ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯ ಸ್ಪಷ್ಟನೆ ನೀಡಿದ್ದು, ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರು ಟೂಟರ್‌ನಲ್ಲಿ ಇಲ್ಲ ಎಂದ ಸ್ಪಷ್ಟನೆ ನೀಡಿದ್ದಾರೆ.
ಟೂಟರ್ ತನ್ನನ್ನು ತಾನು “ಸ್ವದೇಶಿ ಸಾಮಾಜಿಕ ಜಾಲತಾಣ” ಎಂದು ಬಣ್ಣಿಸುತ್ತದೆ. ಅದರಲ್ಲಿ, ಪ್ರಧಾನಿ ನರೇಂದ್ರ ಮೋದಿಯದ್ದೆಂದು ಹೇಳಲಾಗಿರುವ ಬ್ಲೂಟಿಕ್ ಹೊಂದಿರುವ ಖಾತೆಯಿದೆ. ಅದರಲ್ಲಿ ಪ್ರಧಾನಿಯ ಚಿತ್ರ ಹಾಗೂ ಪೋಸ್ಟ್‌ಗಳನ್ನು ಹಂಚಲಾಗಿದೆ. ಆದರೆ, ಟೂಟರ್ ತನ್ನ ಬಳಕೆದಾರರನ್ನು ಹೇಗೆ ಪರಿಶೀಲಿಸುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅದರ ಆರ್ಕೈವ್ ಇಲ್ಲಿದೆ.
ಅಷ್ಟೇ ಅಲ್ಲದೆ ಅದರ ಸಿಇಒ ಎಂದು ಹೇಳಿಕೊಳ್ಳುವ ’ನಂದ’ ಅವರ ಟ್ವೀಟ್ಟರ್ ಖಾತೆಯನ್ನು ಕೂಡಾ ಅಮಿತ್ ಶಾ, ಆದಿತ್ಯನಾಥ್ ಸೇರಿದಂತೆ ಬಿಜೆಪಿ ಹಾಗೂ ಬಲಪಂಥೀಯ ಸಂಘಟನೆಗಳ ನಾಯಕರು ಫಾಲೋ ಮಾಡುತ್ತಿದ್ದಾರೆ.
“ಬಿಜೆಪಿಯ ಯಾವುದೇ ರಾಜ್ಯ ಘಟಕಗಳು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಟೂಟರ್‌ನಲ್ಲಿ ಇಲ್ಲ ಎಂಬುದನ್ನು ದಯವಿಟ್ಟು ಗಮನಿಸಿ” ಎಂದು ಬಿಜೆಪಿಯ ಐಟಿ ಮುಖ್ಯಸ್ಥ ಅಮಿತ್ ಮಾಳವಿಯಾ ಮಧ್ಯಾಹ್ನ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಸಾಮಾಜಿಕ ಜಾಲತಾಣಿಗರು ನೋಡಲೇಬೇಕಾದ ಚಿತ್ರ ‘ದಿ ಸೋಷಲ್ ಡೈಲೆಮಾ’: ನಮಗೇನಾದರೂ ಪಾಠಗಳಿವೆಯೇ?
Please note that neither the BJP or any of its state units, nor Prime Minister Narendra Modi, Home Minister Amit Shah, BJP National President J P Nadda have a presence on Tooter.
— Amit Malviya (@amitmalviya) January 11, 2021
ಅಮಿತ್ ಮಾಳವಿಯ ಟ್ವೀಟ್‌ಗೆ ಬಿಜೆಪಿಯ ಮತ್ತೊಬ್ಬ ವಕ್ತಾರ ಸುರೇಶ್ ನಖುವಾ ಕೂಡಾ ಧ್ವನಿ ಸೇರಿಸಿದ್ದಾರೆ. “ಅಮಿತ್ ಮಾಳವಿಯ ಅವರು ಗಣ್ಯರು ಟೂಟರ್‌ನಲ್ಲಿ ಇಲ್ಲ ಎಂಬುವುದನ್ನು ಸ್ಪಷ್ಟಪಡಿಸಿದ್ದಾರೆ. ಈಗ ಈ ಬಗ್ಗೆ ಟೂಟರ್ ಸ್ಪಷ್ಟಪಡಿಸಬೇಕು. 1) ಯಾರ ಅನುಮತಿಯೊಂದಿಗೆ ಈ ಹ್ಯಾಂಡಲ್‌ಗಳನ್ನು ಮಾಡಲಾಗಿದೆ? 2) ಈ ಹ್ಯಾಂಡಲ್‌ಗಳನ್ನು ಹೇಗೆ ಪರಿಶೀಲಿಸಲಾಗಿದೆ? 3) ಈ ಹ್ಯಾಂಡಲ್‌ಗಳಿಗೆ ಯಾರು ಪೋಸ್ಟ್ ಮಾಡುತ್ತಿದ್ದಾರೆ ?” ಎಂದು ಅವರು ಪ್ರಶ್ನಿಸಿದ್ದಾರೆ.
I think tweet by @amitmalviya settles the issue of presence of dignitaries on the platform.
Now will Tooter clarify
1) With whose permission the handles made ?
2) How did the handles got verified ?
3) Who is posting on behalf of these handles ? https://t.co/BCiMaaTSrP— Suresh Nakhua (सुरेश नाखुआ) (@SureshNakhua) January 11, 2021
ಇದನ್ನೂ ಓದಿ: ಜನಪರ ಜಾಲತಾಣಗಳ ಸಮಾಗಮ: ಓದುಗರಿಗೆ ಆರೋಗ್ಯಕರ ಸುದ್ದಿ ನೀಡುವ ವಿಶ್ವಾಸದಲ್ಲಿ ’ಡಿಜಿಪಬ್’
ತಮಾಷೆಯೆಂದರೆ ”ಟೂಟರ್ ಜಾಲತಾಣದ”ನ ಟ್ವಿಟ್ಟರ್ ಖಾತೆಯನ್ನು ಪ್ರಧಾನಿ ಕಚೇರಿ, ಪ್ರಧಾನಿಯ ವೈಯಕ್ತಿಕ ಖಾತೆ, ಅಮಿತ್ ಶಾ, ಬಿಜೆಪಿಯ ಖಾತೆ, ಸಂಸದ ಸುಬ್ರಮಣಿಯನ್ ಸ್ವಾಮಿ ಸೇರಿದಂತೆ ಕೆಲವು ಬಲಪಂಥಿಯ ವೆಬ್‌ಸೈಟ್‌ಗಳು ಫಾಲೋ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಅದರ ಸಿಇಒ ಎಂದು ಹೇಳಿಕೊಳ್ಳುವ ’ನಂದ’ ಅವರ ಟ್ವಿಟ್ಟರ್ ಖಾತೆಯನ್ನು ಕೂಡಾ ಅಮಿತ್ ಶಾ, ಆದಿತ್ಯನಾಥ್ ಸೇರಿದಂತೆ ಬಿಜೆಪಿ ಹಾಗೂ ಬಲಪಂಥೀಯರು ಫಾಲೋ ಮಾಡುತ್ತಿದ್ದಾರೆ. ಅದರ ಆಕೈವ್ ಇಲ್ಲಿದೆ.

ಕಳೆದ ವಾರ ಅಮೆರಿಕ ಸಂಸತ್ತಿನ ಮೇಲೆ ದಾಳಿ ನಡೆದು ಅಲ್ಲಿ ಹಿಂಸಾಚಾರವಾದ ನಂತರ ಟ್ವಿಟ್ಟರ್ ಗಲಭೆಗೆ ಟ್ರಂಪ್ ಪ್ರಚೋಚನೆ ನೀಡಿದ್ದಾರೆ ಎಂದು ಎಂದು ಹೇಳಿ ಅವರ ಟ್ವಿಟ್ಟರ್ ಖಾತೆಯನ್ನು ಶಾಶ್ವತವಾಗಿ ನಿಷೇಧ ಹೇರಿತ್ತು. ಇದಕ್ಕೆ ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಬಿಜೆಪಿಯ ಹಲವು ನಾಯಕರು ಟ್ವಿಟ್ಟರ್ ವಿರುದ್ದ ವಾಗ್ದಾಳಿ ನಡೆಸಿದ್ದರು.
ಇದನ್ನೂ ಓದಿ: ಪ್ರತಿಯೊಬ್ಬರ ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಣಿಡಲು ಖಾಸಗಿ ಕಂಪನಿಗಳಿಗೆ ಟೆಂಡರ್ ಕರೆದ ಸರ್ಕಾರ!


