Homeಫ್ಯಾಕ್ಟ್‌ಚೆಕ್ಫ್ಯಾಕ್ಟ್‌ಚೆಕ್: ’ಬಾಲಾಕೋಟ್ ದಾಳಿಯಲ್ಲಿ 300 ಜನರ ಸಾವನ್ನು ಪಾಕಿಸ್ತಾನ ಒಪ್ಪಿಕೊಂಡಿದೆ’ ಎಂದು ಸುಳ್ಳು ಸುದ್ದಿ ಪ್ರಸಾರ...

ಫ್ಯಾಕ್ಟ್‌ಚೆಕ್: ’ಬಾಲಾಕೋಟ್ ದಾಳಿಯಲ್ಲಿ 300 ಜನರ ಸಾವನ್ನು ಪಾಕಿಸ್ತಾನ ಒಪ್ಪಿಕೊಂಡಿದೆ’ ಎಂದು ಸುಳ್ಳು ಸುದ್ದಿ ಪ್ರಸಾರ ಮಾಡಿದ ಮಾಧ್ಯಮಗಳು!

ಬಾಲಕೋಟ್ ವೈಮಾನಿಕ ದಾಳಿಯಲ್ಲಿ 300 ಮಂದಿ ಸಾವನ್ನಪ್ಪಿದ್ದಾರೆ ಎಂದು ವಿಡಿಯೋದ ಯಾವುದೇ ಸಮಯದಲ್ಲಿಯೂ ಪಾಕಿಸ್ತಾನದ ರಾಜತಾಂತ್ರಿಕರು ಒಪ್ಪಿಕೊಂಡಿಲ್ಲ. ಆದರೆ ವಿಡಿಯೋವನ್ನು ತಿರುಚಲಾಗಿದೆ.

- Advertisement -
- Advertisement -

ಪಾಕಿಸ್ತಾನದ ಬಾಲಾಕೋಟ್‌ನಲ್ಲಿ ಫೆಬ್ರವರಿ 26, 2019 ರಂದು ಭಾರತ ನಡೆಸಿದ್ದ ವೈಮಾನಿಕ ದಾಳಿಯಲ್ಲಿ 300 ಜನ ಪಾಕಿಸ್ತಾನಿಗಳು ಸಾವನ್ನಪ್ಪಿದ್ದರು ಎಂಬುದನ್ನು ಪಾಕಿಸ್ತಾನ ಒಪ್ಪಿಕೊಂಡಿದೆ ಎಂದು ಹತ್ತಾರು ಭಾರತೀಯ ಸುದ್ದಿ ಮಾಧ್ಯಮಗಳು ವರದಿ ಮಾಡಿದ್ದವು. ಪಾಕಿಸ್ತಾನದ ಮಾಜಿ ರಾಜತಾಂತ್ರಿಕ ಜಾಫರ್ ಹಿಲಾಲಿ ಇದನ್ನು ಖಚಿತಪಡಿಸಿದ್ದಾರೆ ಎಂದು ಹೇಳಲಾಗಿತ್ತು. ಸರ್ಕಾರಿ ಮೂಲಗಳ ಆಧಾರದಲ್ಲಿ ಈ ವರದಿಯನ್ನು ಮಾಡಲಾಗಿದೆ ಎಂದು ಹಲವು ಸುದ್ದಿ ಮಾಧ್ಯಮಗಳು ಹೇಳಿಕೊಂಡಿದ್ದವು. ಆದರೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, “ಇಂತಹ ಅಪಘಾತದ ಅಂಕಿಅಂಶಗಳನ್ನು ಬಹಿರಂಗಗೊಳಿಸುವುದಿಲ್ಲ” ಎಂದು ಹೇಳಿದ್ದರು.

ಈ ಸುದ್ದಿಯನ್ನು ಎಎನ್‌ಐ, ರಿಪಬ್ಲಿಕ್ ಟಿವಿ, ದಿ ಟೈಮ್ಸ್ ಆಫ್ ಇಂಡಿಯಾ, ಮನಿಕಂಟ್ರೋಲ್, ಡಬ್ಲ್ಯುಐಒಎನ್, ಹಿಂದೂಸ್ತಾನ್ ಟೈಮ್ಸ್, ಎನ್ಇ ನೌ, ಒಡಿಶಾ ಟಿವಿ, ಜಾಗ್ರಣ್, ಸ್ವರಾಜ್ಯ, ಲೋಕ್‌ಮತ್, ಒನ್‌ಇಂಡಿಯಾ, ಡೆಕ್ಕನ್ ಹೆರಾಲ್ಡ್, ಬ್ಯುಸಿನೆಸ್ ಟುಡೆ, ಲೈವ್‌ಮಿಂಟ್, ಡಿಎನ್‌ಎ, ದಿ ಕ್ವಿಂಟ್, ನ್ಯೂಸ್ 18 ಇಂಡಿಯಾ, ಎಚ್‌ಡಬ್ಲ್ಯೂ ನ್ಯೂಸ್, ಇಂಡಿಯಾ ಟುಡೆ, ಸಿಎನ್‌ಬಿಸಿ ಟಿವಿ 18, ಎಬಿಪಿ ನ್ಯೂಸ್, ಎನ್‌ಡಿಟಿವಿ, ಇಂಡಿಯಾ ಟಿವಿ ಸೇರಿದಂತೆ ಕನ್ನಡದ ವಿಜಯವಾಣಿ ಮತ್ತು ಪ್ರಜಾವಾಣಿ, ಸುವರ್ಣ ನ್ಯೂಸ್, ಟಿವಿ-9 ಸೇರಿದಂತೆ ಹಲವು ಮಾಧ್ಯಮಗಳು ವರದಿ ಮಾಡಿದೆ. ಈ ವರದಿಗಳಲ್ಲಿ ಹಲವು ಮಧ್ಯಮಗಳು ಎಎನ್‌ಐ ಸುದ್ದಿಯನ್ನು ಉಲ್ಲೇಖಿಸಿ ವರದಿ ಮಾಡಿವೆ.

“ಬಾಲಾಕೋಟ್ ಏರ್‌ಸ್ಟ್ರೈಕ್ ಸಾಕ್ಷಿ ಕೇಳಿದವರಿಗೆ ಪಾಕ್ ನೀಡಿದೆ ಸ್ಫೋಟಕ ಮಾಹಿತಿ” ಎಂದು ವಿಜಯವಾಣಿ ವರದಿ ಮಾಡಿದೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಇದು ಮೋದಿ ಯೋಗ ಮಾಡುತ್ತಿರುವ ವಿಡಿಯೋ! ಬಿಜೆಪಿಗರು ಹೇಳುತ್ತಿರುವುದು ನಿಜವೆ?

ಫ್ಯಾಕ್ಟ್‌ಚೆಕ್:

ಟಿವಿಯೊಂದರ ಚರ್ಚೆಯಲ್ಲಿ ಹಿಲಾಲಿ, “ಭಾರತವು ಅಂತರರಾಷ್ಟ್ರೀಯ ಗಡಿಯನ್ನು ದಾಟಿ ಯುದ್ಧ ಮಾಡಿತು. ಇದರಲ್ಲಿ ಕನಿಷ್ಠ 300 ಮಂದಿ ಸತ್ತಿದ್ದಾರೆ ಎಂದು ವರದಿಗಳು ಹೇಳುತ್ತವೆ. ಆದರೆ ನಮ್ಮ ಗುರಿ ಅವರಿಗಿಂತ ಭಿನ್ನವಾಗಿತ್ತು. ನಾವು ಅವರ ಹೈಕಮಾಂಡ್ ಅನ್ನು ಗುರಿಯಾಗಿಸಿಕೊಂಡಿದ್ದೆವು. ಅದು ನಮ್ಮ ಕಾನೂನುಬದ್ಧ ಗುರಿಯಾಗಿತ್ತು. ಏಕೆಂದರೆ ಅವರು ಮಿಲಿಟರಿಯ ಅಧಿಕಾರಿಯಾಗಿದ್ದರು. ಸರ್ಜಿಕಲ್ ಸ್ಟ್ರೈಕ್ ಒಂದು ಸೀಮಿತ ಕ್ರಮ. ಇದು ಯಾವುದೇ ಅಪಘಾತಕ್ಕೆ ಕಾರಣವಾಗುವುದಿಲ್ಲ ಎಂದು ನಾವು ಸಬ್‌ಕಾನ್ಷಿಯಸ್ ಆಗಿ ಒಪ್ಪಿಕೊಂಡಿದ್ದೇವೆ. ಈಗ ನಾವು ಅದೇ ಸಬ್‌ಕಾನ್ಷಿಯಸ್‌ನಿಂದ ಅವರಿಗೆ ಹೇಳುತ್ತಿದ್ದೇವೆ, ಅವರು ಏನು ಮಾಡುತ್ತಾರೋ ನಾವು ಅದನ್ನು ಮಾತ್ರ ಮಾಡುತ್ತೇವೆ. ಇದು ಉಲ್ಬಣಗೊಳ್ಳುವುದಿಲ್ಲ” ಎಂದು ಹೇಳಿದ್ದಾರೆ.

ಭಾರತೀಯ ಮಾಧ್ಯಮಗಳು ಉಲ್ಲೇಖಿಸಿದ ವೀಡಿಯೋ;

ಯೂಟ್ಯೂಬ್‌ನಲ್ಲಿ ಈ ಚರ್ಚೆಯನ್ನು ಹುಡುಕಿದಾಗ, ಈ ವೀಡಿಯೋವನ್ನು “ಅಜೆಂಡಾ ಪಾಕಿಸ್ತಾನ” ಎಂಬ ಕಾರ್ಯಕ್ರಮದ ಭಾಗವಾಗಿ HUM ಸುದ್ದಿ ಮಾಧ್ಯಮದಿಂದ ಅಪ್‌ಲೋಡ್ ಮಾಡಲಾಗಿದೆ ಎಂಬುದು ತಿಳಿದುಬಂದಿದೆ. ಇಲ್ಲಿನ ಚರ್ಚೆಯ ವಿಷಯವೇನೆಂದರೆ, “ಶತ್ರುಗಳ ಶಬ್ದಕೋಶವನ್ನು ಬಳಸುವುದರ ಮೂಲಕ (ಈ ಸಂದರ್ಭದಲ್ಲಿ ಸರ್ಜಿಕಲ್ ಸ್ಟ್ರೈಕ್ ) ಪಾಕಿಸ್ತಾನ ತನ್ನದೇ ಆದ ಪ್ರಕರಣವನ್ನು ದುರ್ಬಲಗೊಳಿಸುತ್ತಿದೆಯೇ?” ಎನ್ನುವುದು. ಜಾಫರ್ ಹಿಲಾಲಿ ಈ ಪ್ರಶ್ನೆಗೆ ಸುಮಾರು 4:17 ನೇ ನಿಮಿಷದಲ್ಲಿ ಉತ್ತರಿಸಲು ಪ್ರಾರಂಭಿಸುತ್ತಾರೆ. ಸುಮಾರು 5:14 ನೇ ನಿಮಿಷದಲ್ಲಿ, “ಭಾರತ, ನೀವು ಏನು ಮಾಡಿದ್ದೀರಿ? ಇದು ಯುದ್ಧ. ಅಂತರರಾಷ್ಟ್ರೀಯ ಗಡಿಯನ್ನು ದಾಟುವ ಮೂಲಕ ಭಾರತವು ಕನಿಷ್ಠ 300 ಜನರನ್ನು ಕೊಲ್ಲುವ ಉದ್ದೇಶದಿಂದ ಈ ಕೃತ್ಯ ಎಸಗಿತು” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಫ್ಯಾಕ್ಟ್‌‌ಚೆಕ್: ಅಮೆರಿಕ ಅಧ್ಯಕ್ಷೀಯ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಮನಮೋಹನ್ ಸಿಂಗ್‌‌ಗೆ ಆಹ್ವಾನವಿದೆಯೆ?

ಮುಂದಿನ ವಾಕ್ಯದಲ್ಲಿ 5:29 ನೇ ನಿಮಿಷದಲ್ಲಿ ಜಾಫರ್ ಹಿಲಾಲಿ ಭಾರತೀಯ ಕಾರ್ಯಾಚರಣೆ ವಿಫಲವಾಗಿದೆ ಎಂದು ಹೇಳುತ್ತಾರೆ. “ಕಾಕತಾಳೀಯವೆಂಬಂತೆ ಅವರು ಸಾಯಲಿಲ್ಲ (ಪಾಕಿಸ್ತಾನಿ ಜನರು). ಆದರೆ ಭಾರತವು ಫುಟ್ಬಾಲ್ ಮೈದಾನಕ್ಕೆ ಬಾಂಬ್ ಸ್ಫೋಟಿಸಿತು” ಎಂದು ಹೇಳಿದ್ದಾರೆ.

ವಾಸ್ತವದಲ್ಲಿ, ಈ ಭಾಗದ ವೀಡಿಯೋ ವೈರಲ್ ಆಗುವ ಮೊದಲು ಪಾಕಿಸ್ತಾನದ 300 ಜನರನ್ನು ಕೊಲ್ಲುವ ಭಾರತದ ಉದ್ದೇಶದ ಬಗ್ಗೆ ಹಿಲಾಲಿ ಮಾತನಾಡುತ್ತಿದ್ದರು.

ಸುಮಾರು 4:30 ನೇ ನಿಮಿಷಗಳಲ್ಲಿ ಅವರು ಹೀಗೆ ಹೇಳುತ್ತಾರೆ, “300 ಮಕ್ಕಳು ಅಧ್ಯಯನ ಮಾಡುತ್ತಿರುವ ಮದರಸಾದಲ್ಲಿ ದಾಳಿ ಮಾಡುವುದು ನಿಮ್ಮ ಉದ್ದೇಶವಾಗಿತ್ತು ಎಂದು ಹೇಳಲಾಗುತ್ತದೆ. ಇದರರ್ಥ 300 ಜನರನ್ನು ಕೊಲ್ಲುವುದು ನಿಮ್ಮ ಉದ್ದೇಶವಾಗಿತ್ತು ಎಂಬುದು. ಆದರೆ ಅವರು ಅಲ್ಲಿ ಇರಲಿಲ್ಲ. ಭಾರತಕ್ಕೆ ಸಿಕ್ಕಿದ ಮಾಹಿತಿ ತಪ್ಪಾಗಿದೆ. ಹಾಗಾಗಿ ಅದು ಸರ್ಜಿಕಲ್ ಸ್ಟ್ರೈಕ್ ಆಗಲಿಲ್ಲ. ನಿಮ್ಮ ಬಾಂಬ್ ಅನ್ನು ಫುಟ್ಬಾಲ್ ಮೈದಾನದಲ್ಲಿ ಎಸೆದಿದ್ದೀರಿ” ಎಂದು ಹೇಳಿದ್ದಾರೆ.

ಹಾಗಾಗಿ ಬಾಲಕೋಟ್ ವೈಮಾನಿಕ ದಾಳಿಯಲ್ಲಿ 300 ಮಂದಿ ಸಾವನ್ನಪ್ಪಿದ್ದಾರೆ ಎಂದು ಯಾವುದೇ ಸಮಯದಲ್ಲಿಯೂ ಪಾಕಿಸ್ತಾನದ ರಾಜತಾಂತ್ರಿಕರು ಒಪ್ಪಿಕೊಂಡಿಲ್ಲ ಎಂಬುದು ವಿಡಿಯೋದಿಂದ ಸ್ಪಷ್ಟವಾಗಿದೆ.

ಇದನ್ನೂ ಓದಿ: ಸುಳ್ಳು ಸುದ್ದಿ ಪ್ರಸಾರ: ಬಲಪಂಥೀಯ ಮಹಿಳೆ ಮೇಲೆ ಕ್ರಮಕ್ಕೆ ಮುಂದಾದ ಕೋಲ್ಕತ್ತ ಪೊಲೀಸ್!

ಪ್ರತಿಪಾದನೆಯ ಮೂಲ:

ಯಾವುದೇ ಮಾಧ್ಯಮ ಸಂಸ್ಥೆಗಳು ತಮ್ಮ ವರದಿಗಳಲ್ಲಿ ಮೂಲ ವೀಡಿಯೊವನ್ನು ಉಲ್ಲೇಖಿಸಿಲ್ಲ. ಆದರೆ ರಿಪಬ್ಲಿಕ್ ಮತ್ತು ಎನ್ಇ ನೌ ಟ್ವಿಟರ್ ಬಳಕೆದಾರರು ಅಪ್‌ಲೋಡ್ ಮಾಡಿದ ವೀಡಿಯೊವನ್ನು ಎಂಬೆಡ್ ಮಾಡಿದೆ. ನಾವು ಮೂಲ ವೀಡಿಯೊವನ್ನು ರಿಪಬ್ಲಿಕ್ ಎಂಬೆಡ್ ಮಾಡಿದ ವೀಡಿಯೊದೊಂದಿಗೆ ಹೋಲಿಸಿದರೆ, 7 ರಿಂದ 9 ನೇ ಸೆಕೆಂಡುಗಳಲ್ಲಿ ಎಡಿಟ್ ಮಾಡಿರುವುದು ಕಂಡುಬರುತ್ತದೆ. “ಮರ್ನಾ (ಕೊಲ್ಲಲು)” ಎಂಬ ಪದವು “ಮಾರ (ಕೊಲ್ಲಲ್ಪಟ್ಟರು)” ಎಂದು ಹಿಲಾಲಿ ಹೇಳಿದಂತೆ ಭಾಸವಾಗುತ್ತದೆ. ‘ಎನ್’ ಉಚ್ಚಾರಣೆಯನ್ನು ಎಡಿಟ್ ಮಾಡಲಾಗಿದೆ.

 

ಮೇಲಿನ ಪ್ರತಿಪಾದನೆಯ ನಂತರ ಅವರ ಹೇಳಿಕೆಯನ್ನು ವೈರಲ್ ಕ್ಲಿಪ್‌ನಲ್ಲಿ ತೆಗೆದುಹಾಕಲಾಗಿದೆ. ಭಾರತದ ಕಾರ್ಯಾಚರಣೆ ವಿಫಲವಾಗಿದೆ ಮತ್ತು ವಾಯುಪಡೆಯು ಫುಟ್ಬಾಲ್ ಮೈದಾನದ ಮೇಲೆ ಬಾಂಬ್ ಸ್ಫೋಟಿಸಿತು ಎಂದು ಹಿಲಾಲಿ ಹೇಳುತ್ತಾರೆ.

ಇದಲ್ಲದೆ, ವೈರಲ್ ವೀಡಿಯೊವನ್ನು ತಲೆಕೆಳಗಾಗಿ ಮತ್ತು ಸ್ಕ್ರೀನ್-ರೆಕಾರ್ಡ್ ಮಾಡಲಾಗಿದೆ. ಮೂಲ ವೀಡಿಯೊ ಬಾಲಕೋಟ್‌ನ ಹಾನಿಗೊಳಗಾದ ಮರಗಳನ್ನು ತೋರಿಸುತ್ತದೆ ಮತ್ತು ತಿರುಚಿರುವ ವೀಡಿಯೊ ಮಿಲಿಟರಿ ಕ್ಯಾಂಪ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಚಿತ್ರವನ್ನು ತೋರಿಸುತ್ತದೆ. ತಿರುಚಿದ ವೀಡಿಯೊವು ಫಲಕದಲ್ಲಿರುವ ಜನರ ಹೆಸರನ್ನು ಸಹ ಒಳಗೊಂಡಿರುವುದಿಲ್ಲ ಮತ್ತು ಮೂಲ ವೀಡಿಯೊದಲ್ಲಿನ ಬಿಳಿ ಬಾರ್ಡರ್ ಇದೆ. ಆದರೆ ತಿರುಚಿದ ವೀಡಿಯೋದಲ್ಲಿ ಬಾರ್ಡರ್ ಗುಲಾಬಿ ಬಣ್ಣದ್ದಾಗಿದೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಪಾಕ್ ಸದನದಲ್ಲಿ ’ಮೋದಿ ಮೋದಿ’ ಎಂದು ಘೋಷಣೆ ಹಾಕಲಾಗುತ್ತಿದೆಯೇ?

ತನ್ನ ಹೇಳಿಕೆಯನ್ನು ಎಡಿಟ್ ಮಾಡಲಾಗಿದೆ ಎಂದು ಸ್ವತಃ ಜಾಫರ್ ಹಿಲಾಲಿ ದೃಢಪಡಿಸಿದ್ದಾರೆ.

ಭಾರತದ ವೈಮಾನಿಕ ದಾಳಿಯು ಬಾಲಕೋಟ್‌ನಲ್ಲಿ 300 ಜನರನ್ನು ಕೊಂದಿದೆ ಎಂದು ಪಾಕಿಸ್ತಾನದ ಮಾಜಿ ರಾಜತಾಂತ್ರಿಕ ಜಾಫರ್ ಹಿಲಾಲಿ ಒಪ್ಪಿಕೊಂಡಿದ್ದಾರೆ ಎಂದು ಹಲವು ಮಾಧ್ಯಮಗಳು ಸುಳ್ಳು ವರದಿ ಮಾಡಿವೆ. ಆದರೆ ಈ ವರದಿಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೆಯಾದ ತಿರುಚಿದ ವೀಡಿಯೋಗಳನ್ನು ಬಳಸಲಾಗಿದೆ ಎಂಬುದು ಸ್ಪಷ್ಟವಾಗಿ ತಿಳಿದುಬಂದಿದೆ.

ಕೃಪೆ: ಆಲ್ಟ್ ನ್ಯೂಸ್


ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಪಾಕಿಸ್ತಾನದ ಪ್ರತಿಭಟನೆಯೊಂದರಲ್ಲಿ ಭಾರತದ ಬಾವುಟವನ್ನು ಬಳಸಲಾಗಿದೆಯೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...