Homeಮುಖಪುಟ‘ಫೋಟೋ ತೆಗೆಸಿಕೊಳ್ಳುವಾಗ ಬ್ರಿಜ್‌ಭೂಷಣ್ ನಿತಂಬ ಸ್ಪರ್ಶಿಸಿದ್ದ’: ಕುಸ್ತಿಪಟುವಿನ ಆರೋಪ ದೃಢೀಕರಿಸಿದ ಅಂತಾರಾಷ್ಟ್ರೀಯ ರೆಫರಿ

‘ಫೋಟೋ ತೆಗೆಸಿಕೊಳ್ಳುವಾಗ ಬ್ರಿಜ್‌ಭೂಷಣ್ ನಿತಂಬ ಸ್ಪರ್ಶಿಸಿದ್ದ’: ಕುಸ್ತಿಪಟುವಿನ ಆರೋಪ ದೃಢೀಕರಿಸಿದ ಅಂತಾರಾಷ್ಟ್ರೀಯ ರೆಫರಿ

- Advertisement -
- Advertisement -

ಭಾರತೀಯ ಕುಸ್ತಿ ಫೆಡರೇಷನ್‌ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಹೊಸ ಸಂಗತಿಗಳು ಹೊರಬೀಳುತ್ತಿವೆ. ವಯಸ್ಕ ಆರು ಮಂದಿ ಮಹಿಳಾ ಕುಸ್ತಿಪಟುಗಳು ನೀಡಿರುವ ದೂರಿನ ಪೈಕಿ ಒಬ್ಬ ಕುಸ್ತಿಪಟುವಿನ ಆರೋಪಗಳನ್ನು ಅಂತಾರಾಷ್ಟ್ರೀಯ ರೆಫರಿ ದೃಢೀಕರಿಸಿದ್ದಾರೆ.

“ಏಷಿಯನ್ ಚಾಂಪಿಯನ್‌ಶಿಪ್‌ಗಾಗಿ ಅಭ್ಯಾಸವನ್ನು ನಡೆಸಿದ ಬಳಿಕ ಕೊನೆಯಲ್ಲಿ ತಂಡದ ಫೋಟೋ ಸೆಷನ್‌ ಇತ್ತು. ಆ ಸಂದರ್ಭದಲ್ಲಿ ಆತ (ಬ್ರಿಜ್‌ ಭೂಷಣ್) ನನ್ನ ನಿತಂಬದ (ಕುಂಡಿ) ಮೇಲೆ ಕೈ ಇಟ್ಟನು. ನಂತರ ನಾನು ದೂರು ಸರಿಯಲು ಯತ್ನಿಸಿದೆ” ಎಂದು ತಿಳಿಸಿದ್ದಾರೆ. ಈ ಆರೋಪವನ್ನು ಅಂತಾರಾಷ್ಟ್ರೀಯ ಕುಸ್ತಿ ರೆಫರಿ ದೃಢಪಡಿಸಿದ್ದಾರೆ ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.

2007ರಿಂದಲೂ ಅಂತಾರಾಷ್ಟ್ರೀಯ ಕುಸ್ತಿ ರೆಫರಿಯಾಗಿರುವ ಜಗಬೀರ್‌ ಸಿಂಗ್‌, ಸಂತ್ರಸ್ತ ಕುಸ್ತಿಪಟು ಮಾಡಿರುವ ಆರೋಪವನ್ನು ದೃಢಪಡಿಸಿದ್ದಾರೆ. ಅಂದು ಈ ರೆಫರಿಯು ದೂರದಾರ ಕುಸ್ತಿಪಟು ಮತ್ತು ಬ್ರಿಜ್ ಭೂಷಣ್‌ ಅವರಿಂದ ಕೆಲವೇ ಅಡಿಗಳ ಅಂತರದಲ್ಲಿ ನಿಂತಿದ್ದರು. ದೆಹಲಿ ಪೊಲೀಸರಿಗೆ ಕುಸ್ತಿಪಟು ಫೋಟೋ ಸಾಕ್ಷಿಯನ್ನು ಒದಗಿಸಿದ್ದಾರೆ.

ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಬುಧವಾರ ನೀಡಿದ ಹೇಳಿಕೆಯ ಪ್ರಕಾರ, “ಜೂನ್ 15ರಂದು ಪೊಲೀಸ್ ತನಿಖೆ ಮುಕ್ತಾಯಗೊಳ್ಳಲಿದೆ. ತನಿಖೆಗೆ ಒಳಪಡಿಸಲಾದ ನಾಲ್ಕು ರಾಜ್ಯಗಳ 125ಕ್ಕೂ ಹೆಚ್ಚು ಸಂಭಾವ್ಯ ಸಾಕ್ಷಿಗಳಲ್ಲಿ ಜಗ್ಬೀರ್‌ ಸಿಂಗ್‌ ಕೂಡ ಒಬ್ಬರಾಗಿದ್ದಾರೆ.”

ಒಲಿಂಪಿಯನ್, ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ, ಅಂತಾರಾಷ್ಟ್ರೀಯ ರೆಫರಿ ಮತ್ತು ರಾಜ್ಯ ಮಟ್ಟದ ಕೋಚ್- ಈ ನಾಲ್ವರು ಕನಿಷ್ಠ ಮೂವರು ಮಹಿಳಾ ಕುಸ್ತಿಪಟುಗಳ ಆರೋಪಗಳನ್ನು ದೃಢಪಡಿಸಿದ್ದಾರೆ ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಹೇಳಿದೆ.

“ಅವನು (ಬ್ರಿಜ್ ಭೂಷಣ್) ಅವಳ ಪಕ್ಕದಲ್ಲಿ ನಿಂತಿರುವುದನ್ನು ನಾನು ನೋಡಿದೆ. ಆಕೆ ಆತನಿಂದ ದೂರ ನಿಲ್ಲಲು ಮುಂದಾದಳು, ದೂರ ನಿಂತಳು, ಗೊಣಗಿದಳು. ಆಕೆ ಮೊದಲು ಅಧ್ಯಕ್ಷರ ಪಕ್ಕದಲ್ಲಿ ನಿಂತಿದ್ದಳು, ಆದರೆ ನಂತರ ಮುಂದೆ ಬಂದಳು. ಈ ಮಹಿಳಾ ಕುಸ್ತಿಪಟು ಹೇಗೆ ಪ್ರತಿಕ್ರಿಯಿಸುತ್ತಿದ್ದಾರೆಂದು ನಾನು ನೋಡಿದೆ. ಆಕೆ ತೊಂದರೆಯಲ್ಲಿದ್ದಾಳೆ ಅನಿಸಿತು. ಆಕೆಯೊಂದಿಗೆ ಏನೋ ತಪ್ಪಾಗಿರುವುದು ತಿಳಿಯಿತು. ಇಲ್ಲಿ ಬಾ, ಇಲ್ಲಿ ಬಂದು ನಿಲ್ಲು ಎಂದು ಕುಸ್ತಿಪಟುಗಳನ್ನು ಆತ ಮುಟ್ಟುತ್ತಲೇ ಇದ್ದನು. ಕುಸ್ತಿಪಟುವಿಗೆ ಆ ದಿನ (ಫೋಟೋ ಸೆಷನ್ ಸಮಯದಲ್ಲಿ) ಏನೋ ತಪ್ಪಾಗಿದೆ ಎಂದು ಸ್ಪಷ್ಟವಾಯಿತು” ಎಂದು ಜಗ್ಬೀರ್‌ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಎಫ್‌ಐಆರ್‌ನ ಪ್ರಕಾರ, “ಫೋಟೋ ತೆಗೆಸಿಕೊಳ್ಳುವ ಸಂದರ್ಭದಲ್ಲಿ ಆತನಿಂದ ಬಿಡಿಸಿಕೊಂಡು ಮುಂದಿನ ಸಾಲಿಗೆ ತೆರಳುವ ಮುನ್ನ ಆತ ಬಲವಂತವಾಗಿ ಆಕೆಯ ಭುಜವನ್ನು ಹಿಡಿದಿದ್ದನು.”

“ನಾನು ಅತ್ಯಂತ ಎತ್ತರದ ಕುಸ್ತಿಪಟುಗಳಲ್ಲಿ ಒಬ್ಬಳಾಗಿದ್ದರಿಂದ, ನಾನು ಕೊನೆಯ ಸಾಲಿನಲ್ಲಿ ನಿಲ್ಲಬೇಕಾಗಿತ್ತು. ನಾನು ಕೊನೆಯ ಸಾಲಿನಲ್ಲಿ ನಿಂತು, ಇತರ ಕುಸ್ತಿಪಟುಗಳು ತಮ್ಮ ಸ್ಥಾನಗಳಲ್ಲಿ ನಿಲ್ಲಲೆಂದು ಕಾಯುತ್ತಿದ್ದಾಗ ಬ್ರಿಜ್ ಭೂಷಣ್‌ ಬಂದು ನನ್ನ ಪಕ್ಕದಲ್ಲಿ ನಿಂತನು. ನನ್ನ ನಿತಂಬದ ಮೇಲೆ ಕೈ ಹಾಕಿದ್ದು ನನ್ನ ಅನುಭವಕ್ಕೆ ಬಂದಿತು…”

“…ನಾನು ತಕ್ಷಣ ಗಾಬರಿಯಿಂದ ಹಿಂತಿರುಗಿ ನೋಡಿದೆ. ಆರೋಪಿಯು ನನ್ನ ನಿತಂಬದ ಮೇಲೆ ತನ್ನ ಕೈಗಳನ್ನು ಇಟ್ಟಿದ್ದನು. ಆರೋಪಿಯು ಮತ್ತಷ್ಟು ಅನುಚಿತ ಸ್ಪರ್ಶ ಮಾಡುವುದರಿಂದ ತಪ್ಪಿಸಿಕೊಳ್ಳಲು ನಾನು ತಕ್ಷಣವೇ ಆ ಸ್ಥಳದಿಂದ ದೂರ ಸರಿಯಲು ಪ್ರಯತ್ನಿಸಿದೆ. ಆದರೆ, ನಾನು ದೂರ ಹೋಗಲು ಯತ್ನಿಸಿದಾಗ ಆರೋಪಿ ಬ್ರಿಜ್ ಭೂಷಣ್‌ ನನ್ನ ಭುಜವನ್ನು ಬಲವಂತವಾಗಿ ಹಿಡಿದಿದ್ದರು. ಹೇಗೋ ಆರೋಪಿಯ ಕಪಿಮುಷ್ಠಿಯಿಂದ ಪಾರಾದೆ. ತಂಡದ ಫೋಟೋ ಕ್ಲಿಕ್ಕಿಸುವುದನ್ನು ನಾನು ತಪ್ಪಿಸಲು ಸಾಧ್ಯವಾಗದ ಕಾರಣ, ನಾನು ಆರೋಪಿಯಿಂದ ದೂರವಿದ್ದು ಮೊದಲ ಸಾಲಿನಲ್ಲಿ ಕುಳಿತುಕೊಳ್ಳಲು ನಿರ್ಧರಿಸಿದೆ” ಎಂದು ದೂರುದಾರರು ವಿವರಿಸಿರುವುದಾಗಿ ಎಫ್‌ಐಆರ್‌ನಲ್ಲಿ ಉಲ್ಲೇಖಗೊಂಡಿದೆ.

“ಒಪ್ಪಿಗೆಯಿಲ್ಲದ ‘ಅತ್ಯಂತ ಅಸಭ್ಯ’ ಮತ್ತು ‘ಆಕ್ಷೇಪಾರ್ಹ’ ನಡೆಯಿಂದಾಗಿ ನಾನು ದಿಗ್ಭ್ರಮೆಗೊಂಡಿದ್ದೇನೆ” ಎಂದಿದ್ದಾರೆ ಕುಸ್ತಿಪಟು.

ಮತ್ತೊಬ್ಬ ಸಾಕ್ಷಿ, 2010ರ ಸಿಡಬ್ಲ್ಯುಜಿ ಚಿನ್ನದ ಪದಕ ವಿಜೇತೆ ಅನಿತಾ ಕೂಡ ಈ ಆರೋಪಗಳನ್ನು ದೃಢೀಕರಿಸಿದ್ದಾರೆ.

ಇದನ್ನೂ ಓದಿರಿ: ಜೂ.15ರ ವರೆಗೆ ಪ್ರತಿಭಟನೆ ಸ್ಥಗಿತ: ಕ್ರೀಡಾ ಸಚಿವರ ಭೇಟಿ ಬಳಿಕ ಕುಸ್ತಿಪಟುಗಳ ಹೇಳಿಕೆ

“ತನ್ನನ್ನು ಕೋಣೆಗೆ ಕರೆದು ಬಲವಂತವಾಗಿ ಬ್ರಿಜ್ ಭೂಷಣ್ ತಬ್ಬಿಕೊಂಡಿರುವ ಕುರಿತು ಕುಸ್ತಿಪಟು ತಿಳಿಸಿದ್ದರು” ಎಂದು ಅನಿತಾ ವಿವರಿಸಿದ್ದಾರೆ.

ಪಟಿಯಾಲದ ರಾಷ್ಟ್ರೀಯ ಶಿಬಿರಕ್ಕೆ ಹಿಂದಿರುಗಿದ ನಂತರ ಸಂತ್ರಸ್ತ ಕುಸ್ತಿಪಟು, ಅನಿತಾ ಅವರಲ್ಲಿ ತಮ್ಮ ನೋವನ್ನು ಹೇಳಿಕೊಳ್ಳುತ್ತಾ ಕಣ್ಣೀರು ಹಾಕಿದ್ದರು.

ಅಪ್ರಾಪ್ತ ಕುಸ್ತಿಪಟು ಸೇರಿದಂತೆ ಏಳು ಮಹಿಳಾ ಕುಸ್ತಿಪಟುಗಳು ದಾಖಲಿಸಿರುವ ಎರಡು ಎಫ್‌ಐಆರ್‌ಗಳು ಅಘಾತಕಾರಿ ಅಂಶಗಳನ್ನು ಹೊಂದಿವೆ. “ನೀನು ಈ ಕ್ಷೇತ್ರದಲ್ಲಿ ಬೆಳೆಯಬೇಕಾದರೆ ಲೈಂಗಿಕವಾಗಿ ಸಹಕರಿಸಬೇಕು” ಎಂದು ಬ್ರಿಜ್‌ ಭೂಷಣ್ ಒತ್ತಾಯಿಸುತ್ತಿದ್ದ ಕನಿಷ್ಠ ಎರಡು ನಿದರ್ಶನಗಳು ಉಲ್ಲೇಖಗೊಂಡಿವೆ.

ಅನುಚಿತ ಸ್ಪರ್ಶ ಕುರಿತ 15 ಲೈಂಗಿಕ ಕಿರುಕುಳ ಘಟನೆಗಳು, ಸ್ತನಗಳ ಮೇಲೆ ಕೈಗಳನ್ನು ಆಡಿಸಿದ್ದು, ಹೊಕ್ಕುಳನ್ನು ಸ್ಪರ್ಶಿಸಿದ್ದು, ಹಿಂಬಾಲಿಸಿದ್ದು-  ಮೊದಲಾದ ಆರೋಪಗಳನ್ನು ಕುಸ್ತಿಪಟುಗಳು ಮಾಡಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...