Homeದಲಿತ್ ಫೈಲ್ಸ್ಲಗಾನ್‌ ಚಿತ್ರದ ದಲಿತ ಪಾತ್ರ ‘ಕಚ್ರಾ’ ಬಳಸಿ ಜಾತಿಯತೆ ಮೆರೆದ ಜೊಮೊಟೊ; ಆಕ್ರೋಶ

ಲಗಾನ್‌ ಚಿತ್ರದ ದಲಿತ ಪಾತ್ರ ‘ಕಚ್ರಾ’ ಬಳಸಿ ಜಾತಿಯತೆ ಮೆರೆದ ಜೊಮೊಟೊ; ಆಕ್ರೋಶ

- Advertisement -
- Advertisement -

ಆನ್‌ಲೈನ್‌ ಮೂಲಕ ಆಹಾರ ಡೆಲಿವರಿ ಮಾಡುವ ಜೊಮಾಟೊ ಸಂಸ್ಥೆ ನೀಡಿದ ಜಾಹೀರಾತು ‘ಅಸ್ಪೃಶ್ಯತೆ’ ಆಚರಣೆ ಮಾಡಿದೆ ಎಂಬ ಗುರುತರವಾದ ಆರೋಪ ಬಂದಿದ್ದು, ಟೀಕೆಗಳು ವ್ಯಕ್ತವಾದ ಬಳಿಕ ಜಾಹೀರಾತನ್ನು ಜೊಮೊಟೊ ತೆರವು ಮಾಡಿದೆ.

ಅಮೀರ್‌ ಖಾನ್ ಅಭಿನಯದ ಲಗಾನ್ ಚಿತ್ರದಲ್ಲಿನ ದಲಿತ ಪಾತ್ರವಾದ “ಕಚ್ರಾ”ನನ್ನು ತ್ಯಾಜ್ಯದಿಂದ ತಯಾರಿಸಿದ ಮರು ಬಳಕೆಯ ವಸ್ತು ಎಂಬಂತೆ ಚಿತ್ರಿಸಿರುವುದು ಭಾರೀ ವಿರೋಧಕ್ಕೆ ಒಳಗಾಗಿದೆ. ಆನ್‌ಲೈನ್‌ನಲ್ಲಿ ಆಕ್ರೋಶ ವ್ಯಕ್ತವಾದ ಬಳಿಕ ಜಾಹೀರಾತನ್ನು ಹಿಂಪಡೆಯಲಾಗಿದೆ.

ಲಗಾನ್‌ನಲ್ಲಿ ‘ಕಾಚ್ರಾ’ ಪಾತ್ರವನ್ನು ಮಾಡಿರುವ ವ್ಯಕ್ತಿಯೇ ಈ ಜಾಹೀರಾತಿನಲ್ಲೂ ಅಭಿನಯಿಸಿದ್ದಾರೆ. ‘ಕಚ್ರಾ’ (ಕಸ) ಎಂಬ ಹಿಂದಿ ಪದವನ್ನು ಜಾಹೀರಾತಿನಲ್ಲೂ ಬಳಸಲಾಗಿದೆ. ಕಾಚ್ರಾ ಪಾತ್ರ ಮಾಡಿರುವ ವ್ಯಕ್ತಿ ಮತ್ತು ಕಸ ಎಂಬ ಪದವು ಒಂದಕ್ಕೊಂದು ತಾಳೆಯಾಗಿದ್ದು, ಟೀಕೆಗೆ ಗುರಿಯಾಗಿದೆ.

ಲಗಾನ್‌ ಚಿತ್ರದಲ್ಲಿ ‘ಕಚ್ರಾ’ ಪಾತ್ರವನ್ನು ನಿರ್ವಹಿಸಿದ ನಟ ಆದಿತ್ಯ ಲಖಿಯಾ ಅವರನ್ನು ಮರುಬಳಕೆಯ ವಸ್ತುವಿನಿಂದ ಮಾಡಿದ ‘ಟೇಬಲ್‌, ಹ್ಯಾಂಡ್ ಟವಲ್‌, ಲ್ಯಾಂಪ್‌, ಫ್ಲವರ್‌ ಫಾಟ್‌’ ರೀತಿ ಚಿತ್ರಿಸಲಾಗಿದೆ. ಈ ವಸ್ತುಗಳನ್ನು ತಯಾರಿಸಲು ಮರುಬಳಕೆ ಮಾಡಬಹುದಾದ ಕಸವನ್ನು ಬಳಸಲಾಗಿದೆ ಎಂಬಂತೆ ಬಿಂಬಿಸಲಾಗಿದೆ. ಜೂನ್ 5 ರಂದು ವಿಶ್ವ ಪರಿಸರ ದಿನದಂದು ಜಾಹೀರಾತನ್ನು ಅಪ್ಲೋಡ್ ಮಾಡಲಾಗಿತ್ತು.

ಕಸವನ್ನು ಮರುಬಳಕೆ ಮಾಡುವಂತೆ ಸಂದೇಶ ನೀಡುವ ಜಾಹೀರಾತು ನೀಡಲು ಹೋಗಿ ಈ ರೀತಿಯ ಅಸ್ಪೃಶ್ಯತೆಯನ್ನು ಜೊಮೊಟೊ ಆಚರಿಸಿದೆ. ವಿರೋಧ ವ್ಯಕ್ತವಾದ ಬಳಿಕ, “ನಾವು ಕೆಲವು ಸಮುದಾಯಗಳು ಮತ್ತು ವ್ಯಕ್ತಿಗಳ ಭಾವನೆಗಳನ್ನು ಘಾಸಿಗೊಳಿಸಿರಬಹುದು” ಎಂದಿರುವ ಜೊಮೊಟೊ, “ನಾವು ವೀಡಿಯೊವನ್ನು ತೆಗೆದುಹಾಕಿದ್ದೇವೆ” ಎಂದು ತಿಳಿಸಿದೆ.

ಚಲನಚಿತ್ರ ನಿರ್ದೇಶಕ ನೀರಜ್ ಘಯ್ವಾನ್ ಸೇರಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಹಲವರು ಜಾಹೀರಾತನ್ನು ಖಂಡಿಸಿದ್ದಾರೆ. “ಇದು ಜಾತಿವಾದಿ ಮತ್ತು ಅಮಾನವೀಯ” ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿರಿ: ‘ಅಂಬೇಡ್ಕರ್‌ ಜಯಂತಿ ಮಾಡ್ತೀಯಾ?’: ದಲಿತ ಯುವಕನ ಭೀಕರ ಹತ್ಯೆ

“ಲಗಾನ್‌ ಸಿನಿಮಾದಲ್ಲಿನ ಕಚ್ರಾ ಪಾತ್ರವು ದಲಿತರ ಅಮಾನವೀಯ (ಸ್ಥಿತಿ), ಧ್ವನಿರಹಿತ ಚಿತ್ರಣಗಳಲ್ಲಿ ಒಂದಾಗಿದೆ” ಎಂದು ಘಯ್ವಾನ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. “ಝೊಮಾಟೊ ಅದೇ ಪಾತ್ರವನ್ನು ಬಳಸಿದೆ. ಜಾತಿವಾದಿ ವಾಣಿಜ್ಯ ಉದ್ದೇಶವನ್ನು ಹೊಂದಿದೆ. ಮನುಷ್ಯ ಎಂಬುವವನು ಮಲವೇ? ನೀವು ಗಂಭೀರವಾಗಿದ್ದೀರಾ? ಇದು ಅಸೂಕ್ಷ್ಮ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

 

ಚಿತ್ರ ನಿರ್ಮಾಪಕಿ ಮಧುರಿತಾ ಆನಂದ್ ಪ್ರತಿಕ್ರಿಯಿಸಿ, “ಈ ಜಾಹೀರಾತು ಆಕ್ಷೇಪಾರ್ಹವಾಗಿದೆ. ಇದನ್ನು ರೂಪಿಸಿದ, ಅನುಮೋದಿಸಿದ ಮತ್ತು ಇದರ ಬಗ್ಗೆ ಒಮ್ಮೆ ಯೋಚಿಸದೆ ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡಿದ ಈ ಜನರು ಯಾರು ಎಂದು ಆಶ್ಚರ್ಯಪಡಬೇಕು” ಎಂದು ವಿಷಾದಿಸಿದ್ದಾರೆ.

ಸಂವಹನ ತಂತ್ರಗಾರಿಕೆ ಸಲಹೆಗಾರ ಕಾರ್ತಿಕ್ ಶ್ರೀನಿವಾಸನ್ ಪಿಟಿಐಗೆ ಪ್ರತಿಕ್ರಿಯಿಸಿ, “ಈ ಪಾತ್ರವು ಅಮಾನವೀಯ, ಕೀಳು ಕೆಲಸಗಳನ್ನು ಮಾಡುತ್ತದೆ ಎಂಬ ಬಗ್ಗೆ ಜೊಮಾಟೊ ಸಮರ್ಪಕವಾಗಿ ಯೋಚಿಸಲಿಲ್ಲ” ಎಂದಿದ್ದಾರೆ.

“ಲಗಾನ್‌ನಲ್ಲಿ ಕಚ್ರಾ ಪಾತ್ರಕ್ಕೆ ಒಂದು ಚಿತ್ರಣವಿದೆ. ವಾಣಿಜ್ಯ ಮನರಂಜನೆ ಕ್ಷೇತ್ರದಲ್ಲಿ ಜಾತಿಗಳನ್ನು ಹೇಗೆ ಚಿತ್ರಿಸಲಾಗಿದೆ, ನಿರ್ದಿಷ್ಟವಾಗಿ ದಲಿತರನ್ನು ಹೇಗೆ ನೋಡಲಾಗಿದೆ ಅಥವಾ ಸ್ಟೀರಿಯೊಟೈಪ್ ಮಾಡಲಾಗಿದೆ ಎಂದು ತಿಳಿಸಲಾಗಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...