ರೈಲಿನ ಶೌಚಾಲಯದಲ್ಲಿ ವ್ಯಕ್ತಿಯೊಬ್ಬ ತನ್ನ ಟೀ ಪಾತ್ರೆಯನ್ನು ತೊಳೆಯುತ್ತಿರುವ ಅಸಹ್ಯಕಾರಿ ವಿಡಿಯೋವೊಂದು ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ವೈರಲ್ ವಿಡಿಯೊಗೆ ಹಲವಾರು ಜನರು ಪ್ರತಿಕ್ರಿಯಿಸಿದ್ದು, ರೈಲಿನಲ್ಲಿ ಮಾರಾಟ ಮಾಡುವ ಆಹಾರಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ರೈಲಿನ ಶೌಚಾಲಯದ
ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ, ಚಹಾ ಮಾರಾಟಗಾರನೊಬ್ಬ ರೈಲಿನ ಶೌಚಾಲಯದೊಳಗೆ ಜೆಟ್ ಸ್ಪ್ರೇ ಬಳಸಿ ತನ್ನ ಪಾತ್ರೆಯನ್ನು ಸ್ವಚ್ಛಗೊಳಿಸುತ್ತಿರುವುದನ್ನು ತೋರಿಸಲಾಗಿದೆ. ರೈಲಿನ ಶೌಚಾಲಯದ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಕಂಟೆಂಟ್ ಕ್ರಿಯೇಟರ್ ಒಬ್ಬರು ಈ ವಿಡಿಯೊವನ್ನು ಇನ್ಸ್‌ಟಾಗ್ರಾಮ್‌ನಲ್ಲಿ ‘ಟ್ರೈನ್ ಕಿ ಚಾಯ್(ರೈಲಿನ ಚಹಾ)’ ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಬಳಕೆದಾರರೊಬ್ಬರು “ರೈಲಿನ ಚಹಾವನ್ನು ಕುಡಿಯುತ್ತಾ, ಕುಡಿಯುತ್ತಾ ಇದನ್ನು ನೋಡುತ್ತಿದ್ದೇನೆ” ಎಂದು ಪ್ರತ್ಯುತ್ತರಿಸಿದ್ದಾರೆ. ಮತ್ತೊಬ್ಬ ಬಳಕೆದಾರರು “ಏಲಕ್ಕಿ ಸ್ವಾದದ ರಹತ್ಯ ಇದುವೆ ಆಗಿದೆ” ಎಂದು ಮತ್ತೊಬ್ಬರು ವ್ಯಂಗ್ಯವಾಗಿ ಬರೆದಿದ್ದಾರೆ.
ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು “ಭಾರತವನ್ನು ಶಾಶ್ವತವಾಗಿ ಬಿಡಲು ಇವು ಒಂದು ಕಾರಣ!! ನಾನು ಹೇಳುತ್ತೇನೆ, ನೀವು ಮಾರಾಟಗಾರರಿಂದ ಚಹಾವನ್ನು ನಂಬಲು ಮತ್ತು ಕುಡಿಯಲು ಸಹ ಸಾಧ್ಯವಿಲ್ಲ” ಎಂದು ಬರೆದಿದ್ದಾರೆ. ಮತ್ತೊಬ್ಬರು “ಶುಭ್ರ ಮತ್ತು ಸ್ವಚ್ಛ. ಶುದ್ಧ ಆರೋಗ್ಯಕರ ಗಿಡಮೂಲಿಕೆ ರೈಲಿನ ಚಹಾ” ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.
Tea in train gets taste from toilet water pic.twitter.com/gnjPnhzip2
— Woke Eminent (@WokePandemic) January 22, 2025
ಮತ್ತೊಬ್ಬರು, “ಇದು ತಮಾಷೆಯೇ?????” ಎಂಬ ಹೇಳಿದ್ದು, ಮತ್ತೊಬ್ಬರು, ನನ್ನ ಜೀವನದ ಮತ್ತೊಂದು ನಂಬಿಕೆಯ ಸಮಸ್ಯೆ ಎಂದು ಬರೆದು ಭಾರತೀಯ ರೈಲ್ವೆಗೆ ಟ್ಯಾಗ್ ಮಾಡಿದ್ದಾರೆ. ಜೊತೆಗೆ ಎಕ್ಸ್‌ನಲ್ಲಿ ಈ ವಿಡಿಯೊ ಹಂಚಿಕೆಯಾಗಿದ್ದು, ಈ ಬಗ್ಗೆ ಕ್ರಮಕೈಗೊಳ್ಳುವಂತೆ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರನ್ನು ವಿನಂತಿಸಿದ್ದಾರೆ.
ಎಕ್ಸ್‌ನ ಮತ್ತೊಬ್ಬ ಬಳಕೆದಾರರು, ” ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಶಕ್ತಿ, ಅದಕ್ಕಾಗಿಯೇ ಭಾರತದಲ್ಲಿ ಕೋವಿಡ್ ಯಶಸ್ವಿಯಾಗಲಿಲ್ಲ” ಎಂದು ವ್ಯಂಗ್ಯವಾಡಿದ್ದಾರೆ. ಮತ್ತೊಬ್ಬರು, “ಅದಕ್ಕಾಗಿಯೇ ನಾನು ಪಾನಿಪುರಿ ತಿನ್ನುವುದನ್ನು ನಿಲ್ಲಿಸಿ 8-9 ವರ್ಷಗಳಾಗಿವೆ” ಎಂದು ಹೇಳಿದ್ದಾರೆ.
ದಿ ಹಿಂದೂ 2018ರಲ್ಲಿ ಮಾಡಿದ್ದ ವರದಿಯೊಂದರ ಪ್ರಕಾರ, ಚಹಾ ಮತ್ತು ಕಾಫಿ ತಯಾರಿಸಲು ರೈಲು ಶೌಚಾಲಯಗಳಿಂದ ನೀರನ್ನು ಬಳಸಿದ್ದಕ್ಕಾಗಿ ಚಹಾ ಮಾರಾಟಗಾರನಿಗೆ 1 ಲಕ್ಷ ರೂ. ದಂಡ ವಿಧಿಸಲಾಗಿತ್ತು ಎಂದು ದಕ್ಷಿಣ-ಮಧ್ಯ ರೈಲ್ವೆ ತಿಳಿಸಿದೆ. ಘಟನೆಯ ವೀಡಿಯೊ ಆಗ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿತು, ನಂತರ ತನಿಖೆ ನಡೆಸಲಾಯಿತು ಮತ್ತು ಅದಕ್ಕೆ ಅನುಗುಣವಾಗಿ ಕ್ರಮ ಕೈಗೊಳ್ಳಲಾಯಿತು.
ಇದನ್ನೂಓದಿ: ದಬ್ಬಾಳಿಕೆ ಸಹಿಸುವುದಿಲ್ಲ, ಕಠಿಣ ಕ್ರಮ ಕೈಗೊಳ್ಳುತ್ತೇನೆ : ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ಸಿಎಂ ಎಚ್ಚರಿಕೆ
ದಬ್ಬಾಳಿಕೆ ಸಹಿಸುವುದಿಲ್ಲ, ಕಠಿಣ ಕ್ರಮ ಕೈಗೊಳ್ಳುತ್ತೇನೆ : ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ಸಿಎಂ ಎಚ್ಚರಿಕೆ


