2020 ರ ಜೈಲು ಅಂಕಿಅಂಶಗಳ ವಾರ್ಷಿಕ ಪ್ರಕಟಣೆಯಲ್ಲಿ ಕೈದಿಗಳ ಲಿಂಗ ವರ್ಗೀಕರಣದಲ್ಲಿ ಲೈಂಗಿಕ ಅಲ್ಪಸಂಖ್ಯಾತರನ್ನು ಪ್ರತ್ಯೇಕ ವರ್ಗವಾಗಿ ಸೇರಿಸಲು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಒಪ್ಪಿಕೊಂಡಿದೆ.
ಜೈಲು ಅಂಕಿಅಂಶಗಳ ವರದಿಯಲ್ಲಿ ಲೈಂಗಿಕ ಅಲ್ಪಸಂಖ್ಯಾತರನ್ನು ಪ್ರತ್ಯೇಕ ಲಿಂಗ ವರ್ಗವಾಗಿ ಸೇರಿಸಲಾಗುವುದು ಎಂದು ಕೇಂದ್ರ ಸರ್ಕಾರ ಸೋಮವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.
ಜೈಲು ಅಂಕಿಅಂಶಗಳ ವಾರ್ಷಿಕ ಪ್ರಕಟಣೆಯಲ್ಲಿ ಲೈಂಗಿಕ ಅಲ್ಪಸಂಖ್ಯಾತರನ್ನು ಪ್ರತ್ಯೇಕ ಮೂರನೇ ಲಿಂಗವೆಂದು ಗುರುತಿಸಲು ಮತ್ತು ವರ್ಗೀಕರಿಸಲು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಗೆ ನಿರ್ದೇಶನ ಕೋರಿ ದೆಹಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಮೊಕದ್ದಮೆ ಹೂಡಿದ ನಂತರ ಈ ನಿರ್ಧಾರ ಹೊರಬಿದ್ದಿದೆ.
ಇದನ್ನೂ ಓದಿ: ‘ಅದಾನಿ-ಅಂಬಾನಿ ಕೃಷಿ ಕಾನೂನುಗಳನ್ನು’ ಹಿಂತೆಗೆದುಕೊಳ್ಳಿ: ರಾಹುಲ್ ಗಾಂಧಿ
National Crime Records Bureau (NCRB) informs Delhi High Court that it has agreed to include transgender as a separate category in the gender classification of prisoners in their annual publication of prison statistics 2020. pic.twitter.com/g7xtFwqpzQ
— ANI (@ANI) December 7, 2020
ಈಗಾಗಲೇ ನಡೆಯುತ್ತಿರುವ ಎನ್‌ಸಿಆರ್‌ಬಿಯ 2020 ರ ಜೈಲು ಅಂಕಿಅಂಶ ವರದಿಯ ದತ್ತಾಂಶ ಸಂಗ್ರಹಣೆಯ ಪ್ರಕ್ರಿಯೆಯಾಗಿ ಕಾನೂನು ಪದವೀಧರ ಕರಣ್ ತ್ರಿಪಾಠಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನಂತರ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಎನ್‌ಸಿಆರ್‌ಬಿ ಪ್ರಕಟಿಸಿದ ಪ್ರಿಸನ್ ಸ್ಟ್ಯಾಟಿಸ್ಟಿಕ್ಸ್ ಇಂಡಿಯಾ ವರದಿಯಲ್ಲಿ ಇಲ್ಲಿಯವರೆಗೆ ಕೇವಲ ಎರಡು ಲಿಂಗ ವರ್ಗಗಳು ಮಾತ್ರ ಕಾಣಿಸಿಕೊಂಡಿವೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಗಂಡು ಮತ್ತು ಹೆಣ್ಣು ಎಂಬ ಎರಡೇ ಲಿಂಗವನ್ನು ಪರಿಗಣಿಸಿದ್ದು, ತೃತೀಯ ಲಿಂಗವನ್ನು ಸಂಪೂರ್ಣವಾಗಿ ಹೊರಗಿಡಲಾಗಿದೆ ಎಂದು ಹೇಳಲಾಗಿತ್ತು.
“ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಕಲ್ಯಾಣದ ಬಗ್ಗೆ ನಿರ್ಲಕ್ಷ್ಯ ಹೆಚ್ಚುತ್ತಿದೆ. ವಿಶೇಷವಾಗಿ ಕೊರೊನಾ ಸಂದರ್ಭದಲ್ಲಿ ಈ ಸಮುದಾಯಕ್ಕೆ ಮೂಲಭೂತ ಅವಶ್ಯಕತೆಗಳನ್ನು ನಿರಾಕರಿಸಲಾಗುತ್ತಿದೆ. ಇಂತಹ ಸ್ಥಿತಿಯಲ್ಲಿ ಲೈಂಗಿಕ ಅಲ್ಪಸಂಖ್ಯಾತ ಕೈದಿಗಳು ಜೈಲುಗಳಲ್ಲಿರುವ ಸ್ಥಿತಿಯನ್ನು ಊಹಿಸಿಕೊಳ್ಳುವುದು ಕಷ್ಟ. ಕಾಗದದ ಮೇಲೂ ಕೂಡ ಮೂರನೇ ಲಿಂಗವೆಂದು ಗುರುತಿಸಲ್ಪಟ್ಟಿಲ್ಲ ಎಂದು ಅರ್ಜಿಯಲ್ಲಿ ಕರಣ್ ತ್ರಿಪಾಠಿ ವಿವರಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಜೈಲಿನ ಅಂಕಿಅಂಶಗಳ ಕುರಿತ ತನ್ನ ವಾರ್ಷಿಕ ವರದಿಯಲ್ಲಿ ಲೈಂಗಿಕ ಅಲ್ಪಸಂಖ್ಯಾತ ವ್ಯಕ್ತಿಗಳನ್ನು ಪ್ರತ್ಯೇಕ ತೃತೀಯ ಲಿಂಗವಾಗಿ ಸೇರಿಸಬೇಕೆಂಬ ಬೇಡಿಕೆಯ ಬಗೆಗಿನ ಯಾವುದೇ ನಿರ್ಧಾರವನ್ನು ತಿಳಿಸುವಂತೆ ಕಳೆದ ವಾರ ದೆಹಲಿ ಹೈಕೋರ್ಟ್ ಎನ್‌ಸಿಆರ್‌ಬಿಗೆ ಸೂಚಿಸಿತ್ತು.


