ಹುಬ್ಬಳ್ಳಿಯಲ್ಲಿ ಎತ್ತಿನ ಗಾಡಿಗೆ ಸರ್ಕಾರಿ ಬಸ್ ಡಿಕ್ಕಿ ಹೊಡೆದು ಎರಡು ಎತ್ತುಗಳು ಸಾವನ್ನಪ್ಪಿದ್ದು, ಇಬ್ಬರು ರೈತರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಸ್ ಚಾಲಕ ಸಾಮಾಜಿಕ ಮಾಧ್ಯಮದಲ್ಲಿ ಫೋಸ್ಟ್ ಮಾಡಲು ರೀಲ್ಸ್ ಚಿತ್ರೀಕರಿಸುವುದರಲ್ಲಿ ನಿರತನಾಗಿದ್ದಾಗ ಈ ಅಪಘಾತ ಸಂಭವಿಸಿದೆ.
ಹುಬ್ಬಳ್ಳಿಯಿಂದ ಬಾಗಲಕೋಟೆಗೆ ತೆರಳುತ್ತಿದ್ದ ಬಸ್ ಚಾಲಕ ಹಿಂದಿನಿಂದ ಎತ್ತಿನ ಬಂಡಿಗೆ ಡಿಕ್ಕಿ ಹೊಡೆದಿದ್ದಾನೆ. ಈ ಅವಘಡದಲ್ಲಿ ಗಾಡಿಯನ್ನು ಎಳೆಯುತ್ತಿದ್ದ ಎರಡು ಎತ್ತುಗಳು ತಕ್ಷಣವೇ ಸಾವನ್ನಪ್ಪಿದ್ದು, ಇಬ್ಬರು ರೈತರು ಗಂಭೀರವಾಗಿ ಗಾಯಗೊಂಡಿದ್ದಾರೆ.
Farmers injured, two oxen killed after a speeding bus hits a bullock cart in Karnataka's Hubballi.
The bus driver was making reels at the time of the accident.#Karnataka pic.twitter.com/oX3vBIuO75
— Vani Mehrotra (@vani_mehrotra) July 17, 2024
ಎತ್ತನ ಬಂಡಿಗೆ ಬಸ್ ಡಿಕ್ಕಿ ಹೊಡೆಯುವ ಕೆಲವೇ ಸೆಕೆಂಡುಗಳ ಮೊದಲು ವೀಡಿಯೊ ಸೆರೆಹಿಡಿಯಲಾಗಿದೆ. ಗಾಯಗೊಂಡ ರೈತರು ಸದ್ಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದ ನಂತರ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಚಾಲಕನ ವಿರುದ್ಧದ ಆರೋಪಗಳ ತನಿಖೆಗಾಗಿ ಪೊಲೀಸ್ ಉಪ ಅಧೀಕ್ಷಕರು (ಡಿಎಸ್ಎಸ್) ತನಿಖಾಧಿಕಾರಿಯನ್ನು ನೇಮಿಸಿದ್ದಾರೆ. ಇದೇ ವೇಳೆ ಬಸ್ ಚಾಲಕನನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ.
ಇದನ್ನೂ ಓದಿ; ರೈತನಿಗೆ ಅವಮಾನ: ಏಳು ದಿನಗಳ ಕಾಲ ಜಿಟಿ ಮಾಲ್ ಮುಚ್ಚಿಸಲು ರಾಜ್ಯ ಸರ್ಕಾರ ನಿರ್ಧಾರ


