ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿದ ಕಾರಣಕ್ಕೆ ಟ್ರಕ್ ಚಾಲಕರೊಬ್ಬರಿಗೆ 1,000 ರೂ. ದಂಡ ಹಾಕಿದ ಘಟನೆ ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ಬುಧವಾರ ನಡೆದಿದೆ. ಟ್ರಕ್ ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸುವ ಅಗತ್ಯವಿಲ್ಲದಿದ್ದರೂ ಅಧಿಕಾರಿಗಳು ಟ್ರಕ್ ಚಾಲಕನ ವಿರುದ್ದ ಚಲನ್ ಹೊರಡಿಸಿದ್ದಾರೆ.
2020 ರ ಡಿಸೆಂಬರ್ 24 ರಂದು ಈ ಚಲನ್ ಅನ್ನು ಹೊರಡಿಸಲಾಗಿದೆ. ಟ್ರಕ್ ಚಾಲಕ ತನ್ನ ವಾಹನದ ಪರ್ಮಿಟ್ ನವೀಕರಣ ಮಾಡಲು ಸಾರಿಗೆ ಇಲಾಖೆಗೆ ಹೋದಾಗ, ಅವರ ವಾಹನದ ಹೆಸರಲ್ಲಿ ಬಾಕಿ ಇರುವ ದಂಡದ ಬಗ್ಗೆ ತಿಳಿಸಲಾಗಿದೆ.
ಇದನ್ನೂ ಓದಿ: ಪ.ಬಂಗಾಳದ 15 ಕಡೆ ಕಚ್ಚಾ ಬಾಂಬ್ ಸ್ಫೋಟ, ಮಗು ಸೇರಿ ಮೂವರ ಸ್ಥಿತಿ ಗಂಭೀರ
“ನನ್ನ ಟ್ರಕ್‌ನ ಪರ್ಮಿಟ್ ಅವಧಿ ಮುಗಿದಿದ್ದರಿಂದ, ವಾಹನ ಪರವಾನಗಿ ಶುಲ್ಕವನ್ನು ಠೇವಣಿ ಇರಿಸಲು ನಾನು ಆರ್‌ಟಿಒ ಕಚೇರಿಗೆ ಹೋದೆ. ಆದರೆ ಅಲ್ಲಿನ ಅಧಿಕಾರಿಗಳು ನನ್ನ ವಾಹನದ ಹೆಸರಿನಲ್ಲಿ ಮೂರು ದಂಡಗಳು ಬಾಕಿ ಇರುವುದನ್ನು ತಿಳಿಸಿದ್ದಾರೆ”
“ಇದಕ್ಕಾಗಿ ನಾನು ಆ ಮೊತ್ತವನ್ನು ಪಾವತಿಸಿ ಚಲನ್ ಪಡೆದುಕೊಂಡೆ. ನಂತರ ಚಲನ್ ನೋಡಿದಾಗ ದಂಡವನ್ನು ಹೆಲ್ಮೆಟ್ ಧರಿಸದ ಕಾರಣಕ್ಕಾಗಿ ವಿಧಿಸಲಾಗಿದೆ” ಎಂದು ಟ್ರಕ್ ಚಾಲಕ ಪ್ರಮೋದ್ ಕುಮಾರ್ ಸ್ವೈನ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ವಾಹನ ಮಾಲೀಕ ಪ್ರಮೋದ್ ಕುಮಾರ್ ಸ್ವೈನ್ ಅವರನ್ನು ಒಡಿಶಾದ ಗಂಜಾಂನ ಜಿ ಜಗನ್ನಾಥಪುರದರಾಗಿದ್ದಾರೆ.
ಇದನ್ನೂ ಓದಿ: ಪ.ಬಂಗಾಳದಲ್ಲಿ TMC ಬೆಂಬಲಿಸದಂತೆ NCP ಮತ್ತು RJD ಗೆ ಪತ್ರ ಬರೆದ ಕಾಂಗ್ರೆಸ್


