Homeಅಂತರಾಷ್ಟ್ರೀಯಟ್ರಾವೆಲ್ ಏಜೆನ್ಸಿ ವಂಚನೆ - ಮದೀನಾದಲ್ಲಿ ಪರದಾಡುತ್ತಿರುವ ಕರಾವಳಿಯ 160 ಉಮ್ರಾ ಯಾತ್ರಾರ್ಥಿಗಳು

ಟ್ರಾವೆಲ್ ಏಜೆನ್ಸಿ ವಂಚನೆ – ಮದೀನಾದಲ್ಲಿ ಪರದಾಡುತ್ತಿರುವ ಕರಾವಳಿಯ 160 ಉಮ್ರಾ ಯಾತ್ರಾರ್ಥಿಗಳು

- Advertisement -
- Advertisement -

‘ಉಮ್ರಾ ಯಾತ್ರೆ’ಗೆಂದು ಜನರನ್ನು ಕರೆದೊಯ್ದ ಮಂಗಳೂರು ಮೂಲದ ಟ್ರಾವೆಲ್ಸ್‌ ಏಜೆನ್ಸಿಯೊಂದು, ಸೂಕ್ತ ವ್ಯವಸ್ಥೆಗಳನ್ನು ಮಾಡಿಕೊಡದೆ ಅರ್ಧ ದಾರಿಯಲ್ಲೆ ಕೈಬಿಟ್ಟ ಪರಿಣಾಮ ಸುಮಾರು 160ಕ್ಕೂ ಹೆಚ್ಚು ಜನರು ಸೌದಿ ಅರೇಬಿಯಾದ ಮದೀನದಲ್ಲೆ ಸಂಕಷ್ಟಕ್ಕೀಡಾಗಿದ್ದಾರೆ ಎಂದು ವರದಿಯಾಗಿದೆ. ಟ್ರಾವೆಲ್ ಏಜೆನ್ಸಿಯ ಮುಖ್ಯಸ್ಥ ತಮ್ಮೊಂದಿಗೆ ತೆರಳಿದ್ದ ಜನರನ್ನು ಅಲ್ಲಿಯೆ ಬಿಟ್ಟು ಪರಾರಿಯಾಗಿದ್ದು, ಸಂತ್ರಸ್ತ ಜನರು ಭಾರತಕ್ಕೆ ಹಿಂತಿರುಗಲು ಪರದಾಡುವಂತಾಗಿದೆ. ಟ್ರಾವೆಲ್ ಏಜೆನ್ಸಿ ವಂಚನೆ

‘ಉಮ್ರಾ ಯಾತ್ರೆ’ ಎನ್ನುವುದು ‘ಹಜ್‌ ಯಾತ್ರೆ’ ಮಾದರಿಯ ಪವಿತ್ರ ಯಾತ್ರೆಯಾಗಿದ್ದು, ಈ ಯಾತ್ರೆಯಲ್ಲಿ ಮುಸ್ಲಿಮರು ಸೌದಿ ಅರೇಬಿಯಾದ ಮಕ್ಕಾ ಮತ್ತು ಮದೀನಾ ನಗರಕ್ಕೆ ಭೇಟಿ ನೀಡಿ ವಿವಿಧ ಆರಾಧನಾ ಕರ್ಮಗಳನ್ನು ನಿರ್ವಹಿಸುತ್ತಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕಬಕದಲ್ಲಿ ಇರುವ ಮೊಹಮ್ಮದೀಯ ಹಜ್ ಆಂಡ್ ಉಮ್ರಾ ಟ್ರಾವೆಲ್ಸ್‌ ಅಡಿಯಲ್ಲಿ ಡಿಸೆಂಬರ್ 13 ಮತ್ತು 15 ನಡುವೆ ಸುಮಾರು 160 ಜನರನ್ನು ಉಮ್ರಾ ಯಾತ್ರೆಗೆಂದು ಸೌದಿ ಅರೇಬಿಯಾಕ್ಕೆ ತೆರಳಿದ್ದರು. ಈ ವೇಳೆ ಯಾತ್ರಾರ್ಥಿಗಳು ಕೇರಳದ ಕಣ್ಣೂರು, ಕ್ಯಾಲಿಕಟ್‌ ವಿಮಾನ ನಿಲ್ದಾಣಗಳ ಮೂಲಕ ಸೌದಿ ಅರೇಬಿಯಾಕ್ಕೆ ಪ್ರಯಾಣ ಮಾಡಿದ್ದರು. ಯಾತ್ರಾರ್ಥಿಗಳಲ್ಲಿ ಮಂಗಳೂರು, ಹಾಸನ, ಕೊಡಗು ಸೇರಿದಂತೆ ಹಲವಾರು ಜಿಲ್ಲೆಗಳ ಜನರು ಇದ್ದರು ಎಂದು ತಿಳಿದು ಬಂದಿದೆ. ಟ್ರಾವೆಲ್ ಏಜೆನ್ಸಿ ವಂಚನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ

ಅದಾಗ್ಯೂ, ಯಾತ್ರಾರ್ಥಿಗಳು ಮಕ್ಕಾ ಮತ್ತು ಮದೀನಾದಲ್ಲಿ ‘ಉಮ್ರಾ’ ಆರಾಧನೆಯನ್ನು ಮುಗಿಸಿ ಡಿಸೆಂಬರ್ 28ರ ನಂತರ ಭಾರತಕ್ಕೆ ವಾಪಾಸಾಗಬೇಕಾಗಿತ್ತು. ಆದರೆ ಈ ನಡುವೆ ಯಾತ್ರಾರ್ಥಿಗಳನ್ನು ಕರೆದುಕೊಂಡು ಹೋಗಿರುವ ಟ್ರಾವೆಲ್ಸ್‌ ಏಜೆನ್ಸಿಯ ಮುಖ್ಯಸ್ಥ ಅಶ್ರಫ್ ಸಖಾಫಿ ಪರ್ಪುಂಜ ನಾಪತ್ತೆಯಾಗಿದ್ದಾರೆ ಎಂದು ನಾನುಗೌರಿ.ಕಾಮ್‌ಗೆ ಸಂತ್ರಸ್ತ ಯಾತ್ರಾರ್ಥಿಯೊಬ್ಬರು ದೂರಿದರು. ಟ್ರಾವೆಲ್ ಏಜೆನ್ಸಿಯು ಪ್ರತಿ ಯಾತ್ರಾರ್ಥಿಯಿಂದ 65 ಸಾವಿರದಿಂದ 70 ಸಾವಿರದ ವರೆಗೆ ಪೂರ್ಣ ಹಣವನ್ನು ಪಡೆದಿದೆ ಎಂದು ಯಾತ್ರಾರ್ಥಿಗಳು ತಿಳಿಸಿದರು.

ಡಿಸೆಂಬರ್ 28ರಂದು ಟ್ರಾವೆಲ್ಸ್ ಏಜನ್ಸಿಯ ಮುಖ್ಯಸ್ಥ ನಾಪತ್ತೆಯಾದ ನಂತರ, ಅವರ ಅವರ ಇಬ್ಬರು ಸಹಾಯಕರು, ವಿಮಾನದ ಟಿಕೆಟ್ ಬೆಲೆ ಏರಿಕೆಯಾಗಿದೆ ಎಂದು ಸಬೂಬು ನೀಡಿ ಭಾರತಕ್ಕೆ ಹಿಂತಿರುಗುವ ದಿನವನ್ನು ಮುಂದೂಡುತ್ತಲೆ ಬಂದಿದ್ದರು. ಕೊನೆಗೆ ಅವರು ಯಾತ್ರಾರ್ಥಿಗಳಿಗೆ ವಿಷಯವನ್ನು ತಿಳಿಸಿದ್ದು, ತಮ್ಮ ಕೈಯ್ಯಿಂದಲೆ ಹಣವನ್ನು ಹಾಕಿ ಟಿಕೆಟ್ ಖರೀದಿಸುವಂತೆ ಕೇಳಿಕೊಂಡಿದ್ದಾರೆ ಎಂದು ನಾನುಗೌರಿ.ಕಾಮ್‌ಗೆ ಯಾತ್ರಾರ್ಥಿಯೊಬ್ಬರು ತಿಳಿಸಿದರು.

ನಾನುಗೌರಿ.ಕಾಮ್ ಜೊತೆಗೆ ಮಾತನಾಡಿದ ಯಾತ್ರಾರ್ಥಿ ಖಾದರ್ ರಂತಡ್ಕ ಅವರು, “ನಮ್ಮ ತಂಡದಲ್ಲಿ ಸುಮಾರು 160 ಜನರು ಇದ್ದಾರೆ. ನಮ್ಮ ತಂಡದಲ್ಲಿ ವೃದ್ಧರೇ ಹೆಚ್ಚಾಗಿದ್ದು, ಅವರಿಗೆ ಬಿಪಿ, ಡಯಬಿಟೀಸ್, ಹೃದ್ರೋಗ ಇರುವವರು ಇದ್ದಾರೆ. ಭಾನುವಾರ ರಾತ್ರಿಯಿಂದ ಯಾರೂ ಕೂಡಾ ಊಟ ಮಾಡಿಲ್ಲ. ಸೋಮವಾರ ಬೆಳಿಗ್ಗೆ ಚಹಾ ಮತ್ತು ಉಪ್ಪಿಟ್ಟುಕೊಟ್ಟಿದ್ದಾರೆ. ಮಧ್ಯಾಹ್ನದ ಊಟ ಇನ್ನೂ ಸಿಕ್ಕಿಲ್ಲ. ಇಂದು ಮಧ್ಯಾಹ್ನದ ವರೆಗೆ ನಾವು ಇರುವ ವಸತಿಯಲ್ಲಿ ಇರಬಹುದು. ನಂತರ ಅದನ್ನು ಕೂಡಾ ತೆರವು ಮಾಡಬೇಕಾಗುತ್ತದೆ. ಎಲ್ಲರೂ ದುಃಖದಲ್ಲಿದ್ದು, ಮುಂದಕ್ಕೇನು ಮಾಡಬೇಕು ಎಂದು ತಿಳಿಯುತ್ತಿಲ್ಲ” ಎಂದು ಹೇಳಿದರು.

”ಪವಿತ್ರ ಯಾತ್ರೆಗೆಂದು ಹೊರಟು ಬಂದಿರುವ ನಾವು ಯಾತ್ರೆ ಮುಗಿಸಿ ಸಂತೋಷದಿಂದ ಭಾರತಕ್ಕೆ ಹಿಂತಿರುಗಬೇಕಿತ್ತು. ನಾವೇನೂ ತುಂಬಾ ಶ್ರೀಮಂತರಲ್ಲ, ಪವಿತ್ರ ಯಾತ್ರೆಗಾಗಿ ಅಲ್ಪ ಸ್ವಲ್ಪ ಕೂಡಿಟ್ಟ ಹಣವನ್ನು ಟ್ರಾವೆಲ್ಸ್ ಏಜೆನ್ಸಿಗೆ ಕೊಟ್ಟು ನಾವು ಯಾತ್ರೆಗೆ ಬಂದಿದ್ದೇವೆ. ಇರುವ ಹಣ ಎಲ್ಲವೂ ಖಾಲಿಯಾಗಿದೆ. ಟ್ರಾವೆಲ್ಸ್ ಏಜೆನ್ಸಿ ಅವರು, ನಾವೇ ಟಿಕೆಟ್ ಮಾಡಿ ಭಾರತಕ್ಕೆ ಹಿಂತಿರುಗುವಂತೆ ಹೇಳುತ್ತಿದ್ದಾರೆ. ಅಷ್ಟೊಂದು ಹಣವನ್ನು ನಾವು ಈಗ ಎಲ್ಲಿಂದ ತರಲಿ” ಎಂದು ಮತ್ತೊಬ್ಬ ಯಾತ್ರಾರ್ಥಿ ನಾನುಗೌರಿ.ಕಾಮ್‌ಗೆ ಹೇಳಿದರು.

ಈ ನಡುವೆ ಟ್ರಾವೆಲ್ಸ್ ಏಜೆನ್ಸಿಯ ಪುತ್ತೂರಿನ ಕಬಕದಲ್ಲಿ ಮತ್ತು ಉಳ್ಳಾಲದ ಮುಡಿಪುವಿನ ಕಚೇರಿಗಳಲ್ಲಿ ಯಾತ್ರಾರ್ಥಿಗಳ ಸಂಬಂಧಿಕರು ತೆರಳಿ ಗಲಾಟೆ ಮಾಡಿದ್ದಾರೆ ಎಂದು ವರದಿಯಾಗಿವೆ. ಅದಾಗ್ಯೂ, ಟ್ರಾವೆಲ್ಸ್ ಏಜೆನ್ಸಿಯ ಮುಖ್ಯಸ್ಥ ಅಶ್ರಫ್ ಸಖಾಫಿಯ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಅವರು ಮೂರು ದಿನಗಳ ಹಿಂದೆಯೆ ಭಾರತಕ್ಕೆ ಹಿಂತಿರುಗಿದ್ದಾರೆ ಎಂದು ತಿಳಿದುಬಂದಿದೆ. ಪರಾರಿಯಾಗಿರುವ ಏಜೆನ್ಸಿ ಮುಖ್ಯಸ್ಥ ಈ ಹಿಂದೆ ಕೂಡಾ ಇದೇ ರೀತಿ ಜನರಿಗೆ ವಂಚನೆ ಮಾಡಿದ್ದರು ಎಂದು ಮೂಲವೊಂದು ನಾನುಗೌರಿ.ಕಾಮ್‌ಗೆ ಹೇಳಿದೆ.

ಈ ನಡುವೆ ಸೌದಿ ಅರೇಬಿಯಾದಲ್ಲಿ ಇರುವ ಅನಿವಾಸಿ ಭಾರತೀಯರ ಸಂಘಟನೆಯಾದ ಕೆಸಿಎಫ್‌ ಸಂತ್ರಸ್ತ ಯಾತ್ರಾರ್ಥಿಗಳಿಗೆ ಊಟದ ವ್ಯವಸ್ಥೆ ಮಾಡಿದೆ ಎಂದು ಅದರ ಪದಾದಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ನಾನುಗೌರಿ.ಕಾಮ್ ಜೊತೆಗೆ ಮಾತನಾಡಿದ ಕೆಸಿಎಫ್‌ ಪದಾಧಿಕಾರಿಯೊಬ್ಬರು ಅವರು,”ನಮಗೆ ವಿಷಯ ತಿಳಿದ ನಂತರ 160 ಜನರಿಗೆ ಮಧ್ಯಾಹ್ನ ಮತ್ತು ರಾತ್ರಿಯ ಊಟದ ವ್ಯವಸ್ಥೆ ಮಾಡಿದ್ದೇವೆ. ಈ ನಡುವೆ ಸೌದಿ ಸರ್ಕಾರಕ್ಕೆ ಯಾತ್ರಾರ್ಥಿಗಳು ದೂರು ನೀಡಿದ್ದಾರೆ. ಅವರಿಗೆ ವಂಚನೆ ಮಾಡಿರುವ ಟ್ರಾವೆಲ್ ಏಜೆನ್ಸಿ ಮುಖ್ಯಸ್ಥ ಅಶ್ರಫ್ ಸಖಾಫಿ ವಿರುದ್ಧ ಇಲ್ಲಿನ ಸರ್ಕಾರ ಕ್ರಮಕೈಗೊಳ್ಳುತ್ತದೆ. ಒಂದು ವೇಳೆ ಅವರು ಸೌದಿಯಲ್ಲಿ ಇರದೆ ಇದ್ದರೆ, ಅವರ ಸಂಸ್ಥೆಯ ಮೇಲೆ ಸರ್ಕಾರ ಕ್ರಮಕೈಗೊಳ್ಳಲಿದೆ” ಎಂದು ತಿಳಿಸಿದರು.

ಇದನ್ನೂ ಓದಿ: ಈಶ್ವರ ಅಲ್ಲಾ ತೇರೋ ನಾಮ್ ವಿವಾದ: ಈ ಭಜನೆ ಹಾಡುವುದನ್ನು ಮುಂದುವರಿಸುತ್ತೇನೆ; ಜನಪದ ಗಾಯಕಿ ದೇವಿ

ಈಶ್ವರ ಅಲ್ಲಾ ತೇರೋ ನಾಮ್ ವಿವಾದ: ಈ ಭಜನೆ ಹಾಡುವುದನ್ನು ಮುಂದುವರಿಸುತ್ತೇನೆ; ಜನಪದ ಗಾಯಕಿ ದೇವಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ: ಆರು ಜನ ಹಿರಿಯರು ಸೇರಿದಂತೆ 41 ಜನ ನಕ್ಸಲ್ ಕಾರ್ಯಕರ್ತರು ಪೊಲೀಸರಿಗೆ ಶರಣು

ದೇಶದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಬೆಳವಣಿಗೆಯಲ್ಲಿ, ಆರು ಜನ ಹಿರಿಯರು ಸೇರಿದಂತೆ 41 ಜನ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಕಾರ್ಯಕರ್ತರು ತೆಲಂಗಾಣ ಪೊಲೀಸರ ಮುಂದೆ ಇಂದು ಶರಣಾಗಿದ್ದಾರೆ. ಶರಣಾಗತಿ ಪ್ರಕ್ರಿಯೆಯ...

‘ವೀಸಾ ಅವಧಿ ಮುಗಿಯುವ ಮೊದಲು ಪಾಕ್ ಮಹಿಳೆಯ ಪೌರತ್ವ ಅರ್ಜಿ ಪರಿಗಣಿಸಿ..’; ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೂಚನೆ

ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಯ ಹೊಸ ಪೌರತ್ವ ಅರ್ಜಿಯನ್ನು ಸಕ್ರಿಯವಾಗಿ ಪರಿಗಣಿಸುವ ಜೊತೆಗೆ ಅವರ ದೀರ್ಘಾವಧಿಯ ವೀಸಾ ಅವಧಿ ಮುಗಿಯುವ ಮೊದಲೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು, ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ ಮತ್ತು...

ಎಚ್‌ಐವಿ ಪಾಸಿಟಿವ್ ಎಂದು ವಜಾಗೊಳಿಸಲಾದ ಬಿಎಸ್‌ಎಫ್ ಯೋಧನನ್ನು ಮತ್ತೆ ನೇಮಿಸುವಂತೆ ಹೈಕೋರ್ಟ್ ಆದೇಶ

ಜುಲೈ 2017 ರಲ್ಲಿ ಎಚ್‌ಐವಿ ಪಾಸಿಟಿವ್ ಎಂಬ ಕಾರಣಕ್ಕೆ ಸೇವೆಯಿಂದ ವಜಾಗೊಳಿಸಲಾದ ಗಡಿ ಭದ್ರತಾ ಪಡೆಯ ಕಾನ್‌ಸ್ಟೆಬಲ್‌ ಒಬ್ಬರನ್ನು ಮರುನೇಮಕ ಮಾಡುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.  ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಓಂ ಪ್ರಕಾಶ್...

ವೈದ್ಯೆ ಬುರ್ಖಾ ಎಳೆದ ನಿತೀಶ್‌ಕುಮಾರ್: ಶ್ರೀನಗರದಲ್ಲಿ ದೂರು ದಾಖಲಿಸಿದ ಇಲ್ತಿಜಾ ಮುಫ್ತಿ

ಪಾಟ್ನಾದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದ ಸಂದರ್ಭದಲ್ಲಿ ಮುಸ್ಲಿಂ ಮಹಿಳಾ ವೈದ್ಯರ ನಿಖಾಬ್ (ಬುರ್ಖಾ) ಎಳೆಯುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊದ ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಲು ಪೀಪಲ್ಸ್ ಡೆಮಾಕ್ರಟಿಕ್...

ಪ್ರಶ್ನೆಗಾಗಿ ಕಾಸು ಪ್ರಕರಣ: ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು ಅನುಮತಿಸಿದ್ದ ಲೋಕಪಾಲ್ ಆದೇಶ ರದ್ದು ಪಡಿಸಿದ ದೆಹಲಿ ಹೈಕೋರ್ಟ್

‘ಪ್ರಶ್ನೆಗಾಗಿ ಕಾಸು’ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಸಿಬಿಐಗೆ ಅನುಮತಿ ನೀಡಿದ್ದ ಲೋಕಪಾಲ್ ಆದೇಶವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಇದರಿಂದಾಗಿ ಮೊಯಿತ್ರಾ ಅವರಿಗೆ ಈ...

ಜಮ್ಮು-ಕಾಶ್ಮೀರ: ಪತ್ರಕರ್ತನ ಮೊಬೈಲ್ ಫೋನ್ ವಶಪಡಿಸಿಕೊಂಡ ಪೊಲೀಸರು

ಕಿಶ್ತ್ವಾರ್‌ನಲ್ಲಿನ ವಿದ್ಯುತ್ ಯೋಜನೆಯಲ್ಲಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಆರೋಪಗಳ ಕುರಿತು ವರದಿ ಮಾಡುತ್ತಿದ್ದಾಗ, ದಿ ವೈರ್ ಸುದ್ದಿ ಪೋರ್ಟಲ್‌ನ ಪತ್ರಕರ್ತ ಜೆಹಾಂಗೀರ್ ಅಲಿ ಅವರ ಮೊಬೈಲ್ ಫೋನ್ ಅನ್ನು ಬುಧವಾರ (ಡಿಸೆಂಬರ್ 17)...

ಕೇರಳದಲ್ಲಿ ಗುಂಪುಹತ್ಯೆ: ಛತ್ತೀಸ್‌ಗಢ ವಲಸೆ ಕಾರ್ಮಿಕನನ್ನು ‘ಕಳ್ಳ’ ಎಂದು ಥಳಿಸಿ ಕೊಂದ ಗುಂಪು 

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಗುರುವಾರ ಛತ್ತೀಸ್‌ಗಢದಿಂದ ಬಂದ ವಲಸೆ ಕಾರ್ಮಿಕನೊಬ್ಬನನ್ನು ಕಳ್ಳನೆಂದು ಶಂಕಿಸಿ ಗುಂಪೊಂದು ಥಳಿಸಿ ಕೊಂದಿದೆ. ಕೊಲೆಯಾದ ವ್ಯಕ್ತಿಯನ್ನು ರಾಮನಾರಾಯಣ್ ಭಯಾರ್ (31) ಎಂದು ಗುರುತಿಸಲಾಗಿದ್ದು, ಕಳೆದ ಒಂದು ತಿಂಗಳಿನಿಂದ ಪಾಲಕ್ಕಾಡ್‌ನ ಕಾಂಜಿಕೋಡ್‌ನಲ್ಲಿರುವ...

ನೋಯ್ಡಾ ಪೊಲೀಸ್ ಠಾಣೆಯೊಳಗೆ ವಕೀಲೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಸಿಸಿಟಿವಿ ದೃಶ್ಯಾವಳಿ ಕೇಳಿದ ಸುಪ್ರೀಂ ಕೋರ್ಟ್

ಮಹಿಳಾ ವಕೀಲೆಯೊಬ್ಬರನ್ನು 14 ಗಂಟೆಗಳ ಕಾಲ ಅಕ್ರಮವಾಗಿ ಬಂಧಿಸಿ ಪೊಲೀಸರು ಲೈಂಗಿಕ ದೌರ್ಜನ್ಯ esgi, ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಆರೋಪದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋಡರ್ಟ್, ಮುಚ್ಚಿದ ಕವರ್‌ನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು...

ಹಾಲು ಉತ್ಪಾದಕರಿಗೆ 1 ಲೀಟರ್ ಹಾಲಿನ ಪ್ರೋತ್ಸಾಹಧನ 5 ರಿಂದ 7 ರೂಗೆ ಏರಿಕೆ: ಅಧಿವೇಶನದಲ್ಲಿ ಸಿದ್ದರಾಮಯ್ಯ ಘೋಷಣೆ

ರೈತರ ಹಿತದೃಷ್ಠಿಯಿಂದ 1 ಲೀಟರ್ ಹಾಲಿಗೆ ಪ್ರೋತ್ಸಾಹಧನವನ್ನು 7 ರೂಪಾಯಿಗೆ ಏರಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಡಿಸೆಂಬರ್ 19ರಂದು ಬೆಳಗಾವಿ ಅಧಿವೇಶನದ ಕೊನೆಯ ದಿನ ಮಾತನಾಡಿದ ಅವರು, ರೈತರಿಗೆ ಹಸುಗಳನ್ನು ಸಾಕಿ...

ಬಾಂಗ್ಲಾ ದಂಗೆ: ಮಾಧ್ಯಮ ಸಂಸ್ಥೆಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಉರಿಯುತ್ತಿದ್ದ ಕಚೇರಿಗಳಿಂದ 25 ಕ್ಕೂ ಹೆಚ್ಚು ಪತ್ರಕರ್ತರ ರಕ್ಷಣೆ

ಜುಲೈ ದಂಗೆಯ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ಸುದ್ದಿ ಕೇಳಿದ ಬೆನ್ನಲ್ಲೇ ಶುಕ್ರವಾರ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆಗಳು ಆರಂಭವಾಗಿದ್ದು ಹಿಂಸಾಚಾರಕ್ಕೆ ನಾಂದಿ ಹಾಡಿವೆ. ಅನೇಕ ಪ್ರತಿಭಟನಾಕಾರರು ಬೀದಿಗಿಳಿದಿದ್ದು,...