Homeಎಕಾನಮಿ#BoycottJio ಜಿಯೊ ತೊಲಗಿಸಿ ಟ್ರೆಂಡಿಂಗ್‌. ಏಕೆ ಗೊತ್ತಾ?

#BoycottJio ಜಿಯೊ ತೊಲಗಿಸಿ ಟ್ರೆಂಡಿಂಗ್‌. ಏಕೆ ಗೊತ್ತಾ?

- Advertisement -
- Advertisement -

ಜೀವನ ಪೂರ್ತಿ ಉಚಿತ ಕರೆಗಳು ಎಂದು ಘೋಷಿಸಿದ್ದ ಜಿಯೋ ರಿಲೆಯನ್ಸ್‌ ಈಗ ಇದ್ದಕ್ಕಿದ್ದಂತೆಯೇ ಇತರ ನೆಟ್‌ವರ್ಕ್‌ಗೆ ಒಂದು ನಿಮಿಷಕ್ಕೆ 6ಪೈಸೆ ದರ ನಿಗದಿ ಮಾಡಿದೆ. ಇದು ಜಿಯೋ ಬಳಕೆದಾರರದಲ್ಲಿ ತೀವ್ರ ಆಕ್ರೋಶ ಹುಟ್ಟಿಸಿದ್ದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಿಯೋ ತನ್ನ ಹೊಸ ಪ್ಲಾನ್‌ ಅನ್ನು ಘೋಸಿಸುತ್ತಿದ್ದಂತೆಯೇ #BoycottJio ಜಿಯೊ ತೊಲಗಿಸಿ ಟ್ರೆಂಡಿಂಗ್‌ ಆಗಿದೆ. ಇದೇ ಸಂದರ್ಭದಲ್ಲಿ BSNL ಕೂಡ ಟ್ರೆಂಡಿಂಗ್‌ ಆಗಿದ್ದು ಜಿಯೋ ತ್ಯಜಿಸಿ ಬಿಎಸ್‌ಎನ್‌ಎಲ್‌ ಉಳಿಸಿ ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.

ವಿಪರ್ಯಾಸವೆಂದರೆ ಬಹಳಷ್ಟು ಜನರು ಜಿಯೋ ನೆಟ್‌ವರ್ಕ್ ಬಳಸಿಯೇ #BoycottJio ಟ್ರೆಂಡಿಂಗ್ ಮಾಡುತ್ತಿರುವುದು ಮಜವಾಗಿದೆ ಎಂದು ಕೆಲವರು ಕಿಚಾಯಿಸಿದ್ದಾರೆ.

ಇದೆಲ್ಲವೂ ಪೂರ್ವಯೋಜಿತವಾಗಿದೆ…

ಉಚಿತ ಡೇಟಾವನ್ನು ನೀಡಿ
ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಿ
ಅವರನ್ನು ಇಂಟರ್ನೆಟ್‌ಗೆ ವ್ಯಸನಿಯನ್ನಾಗಿ ಮಾಡಿ
ಉಚಿತ ಡೇಟಾವನ್ನು ವಿಸ್ತರಿಸಿ
1 ಕುಟುಂಬಕ್ಕೆ 1 ಫೋನ್‌ನಿಂದ 1 ವ್ಯಕ್ತಿಗೆ 1 ಫೋನ್‌ ಬಂದು
ಪೋರ್ಟಬಿಲಿಟಿಯನ್ನು ಪ್ರೋತ್ಸಾಹಿಸಿ
ಸಣ್ಣ ಮೊತ್ತವನ್ನು ವಿಧಿಸಿ
ಏಕಸ್ವಾಮ್ಯವನ್ನು ರಚಿಸಿ
ಶುಲ್ಕವನ್ನು ಹೆಚ್ಚಿಸಿ
ಎಲ್ಲಾ ಸೇವೆಗೂ ಶುಲ್ಕ ವಿಧಿಸಿ
ನಂತರ ಉಚಿತ ಬಳಕೆ ಇಲ್ಲ ಎಂದು ಘೋಷಿಸುವುದು ಪೂರ್ವಯೋಜಿತವಲ್ಲವೇ ಎಂದು ಡಿಗಿ ಚಂದ್ರುರವರು ಟ್ವಿಟ್ಟರ್‌ನಲ್ಲಿ ಕಿಡಿಕಾರಿದ್ದಾರೆ.

ಮೊದಲು ಅವರು ಅದನ್ನು ಉಚಿತ/ಅಗ್ಗವಾಗಿ ನೀಡುತ್ತಾರೆ.
ಜನರು ಕುರಿಗಳಂತೆ ಸೇರುತ್ತಾರೆ.
ಇತರ ಕಂಪನಿಗಳು ಭಾರಿ ನಷ್ಟವನ್ನು ಅನುಭವಿಸುತ್ತಾರೆ ಮತ್ತು ಕಾರ್ಯಾಚರಣೆಯನ್ನು ಮುಚ್ಚಬೇಕಾಗುತ್ತದೆ.
ಏಕಸ್ವಾಮ್ಯದ ಹತ್ತಿರ ತಲುಪಿದೆ.
ನಂತರ, ನಿಮಗೆ ಯಾವುದೇ ವಿಶ್ವಾಸಾರ್ಹ ಆಯ್ಕೆ ಇಲ್ಲದಿದ್ದಾಗ ನೀವು ಅವರ ನಿಜವಾದ ಬಣ್ಣಗಳನ್ನು ನೋಡುತ್ತೀರಿ ಎಂದು ಕೌ ಮಾಮ್‌ರವರು ಟ್ವೀಟ್‌ ಮಾಡಿದ್ದಾರೆ.

ದಯವಿಟ್ಟು ಹುಡುಗರೇ …. ಬಿಎಸ್ಎನ್ಎಲ್‌ಗೆ ಬದಲಿಸಿ ಮತ್ತು ಈ ಅನಾರೋಗ್ಯದ ಉದ್ಯಮವನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡಿ.

ಇದರಿಂದ ನೀವು ಆರ್ಥಿಕತೆಗೆ ಸಹಾಯ ಮಾಡುತ್ತೀರಿ ಮತ್ತು ಚಿಂತೆಗೀಡಾದ ಲಕ್ಷಾಂತರ ಬಿಎಸ್‌ಎನ್‌ಎಲ್ ಸಿಬ್ಬಂದಿ ನಿಮಗೆ ಆಶೀರ್ವಾದ ನೀಡುತ್ತಾರೆ.? ಎಂದು ಮತ್ತೊಬ್ಬರು ಕಿಚಾಯಿಸಿದ್ದಾರೆ..

ಈ ನಡುವೆ ಏರ್‌ಟೆಲ್ ಕಂಪನಿಯ ಸಂಭ್ರಮಚರಣೆ ಈ ರೀತಿ ಇರುತ್ತದೆ..

ಇನ್ನು ಜಿಯೋ ಮತ್ತು ಮುಖೇಶ್ ಅಂಬಾನಿ ವಿರುದ್ಧ ಕ್ಷಣಾರ್ಧದಲ್ಲಿ ಸಾವಿರಾರು ಮೀಮ್ಸ್‌ಗಳು ತಯಾರಾಗಿದ್ದು ಭಾರೀ ಟ್ರೋಲ್‌ಗಳು ಆರಂಭವಾಗಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...