HomeಮುಖಪುಟTRP ಹಗರಣ: 3 ತಿಂಗಳು TRP ರೇಟಿಂಗ್ ಸ್ಥಗಿತಗೊಳಿಸಿದ BARC!

TRP ಹಗರಣ: 3 ತಿಂಗಳು TRP ರೇಟಿಂಗ್ ಸ್ಥಗಿತಗೊಳಿಸಿದ BARC!

ಟಿಆರ್‌ಪಿಯನ್ನು ತಿರುಚಿದ ಆರೋಪದಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು, ರಿಪಬ್ಲಿಕ್ ಟಿವಿ ಸೇರಿದಂತೆ ಮೂರು ಚಾನೆಲ್‌ಗಳನ್ನು ತನಿಖೆಗೆ ಒಳಪಡಿಸಲಾಗುತ್ತಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

- Advertisement -
- Advertisement -

ಟಿಆರ್‌ಪಿ ತಿರುಚಿರುವ ಆರೋಪದ ನಡುವೆ ತನಿಖೆ ನಡೆಯುತ್ತಿರುವ ಕಾರಣ ಮೂರು ತಿಂಗಳವರೆಗೆ ಸುದ್ದಿ ಚಾನೆಲ್‌ಗಳಿಗೆ ಸಾಪ್ತಾಹಿಕ ರೇಟಿಂಗ್‌ ನೀಡದಿಲು ನಿರ್ಧರಿಸಲಾಗಿದೆ ಎಂದು ಟೆಲಿವಿಷನ್ ರೇಟಿಂಗ್ ಏಜೆನ್ಸಿ BARC (Broadcast Audience Research Council) ತಿಳಿಸಿದೆ.

ಎಲ್ಲಾ ಇಂಗ್ಲಿಷ್, ಹಿಂದಿ, ಪ್ರಾದೇಶಿಕ ಮತ್ತು ವ್ಯವಹಾರ ಸುದ್ದಿ ಚಾನೆಲ್‌ಗಳಿಗೂ ರೇಟಿಂಗ್ ನೀಡದಿರಲು ನಿರ್ಧರಿಸಲಾಗಿದೆ. ಈ ತಿಂಗಳ ಆರಂಭದಲ್ಲಿ ಟಿಆರ್‌ಪಿ ಹಗರಣವನ್ನು ಮುಂಬೈ ಪೊಲೀಸರು ಪತ್ತೆ ಹಚ್ಚಿ ಐದು ಜನರನ್ನು ಬಂಧಿಸಿದ್ದಾರೆ.

ಟಿವಿ ರೇಟಿಂಗ್‌ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿರುವ ಬಾರ್ಕ್ ನಿರ್ಧಾರವನ್ನು ದೇಶದ ಖಾಸಗಿ ಸುದ್ದಿ ವಾಹಿನಿಗಳನ್ನು ಪ್ರತಿನಿಧಿಸುವ ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಅಸೋಸಿಯೇಷನ್ ಸ್ವಾಗತಿಸಿದೆ.

 

ಇದನ್ನೂ ಓದಿ: TRP ತಿರುಚಿದ ಆರೋಪ; ರಿಪಬ್ಲಿಕ್ ಸೇರಿ 3 ಚಾನೆಲ್‌ಗಳ ಮೇಲೆ ತನಿಖೆ!

ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸಬೇಕೆಂದು ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಾಬ್‌ ಗೋಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. “ಸಾಮಾನ್ಯ ನಾಗರೀಕನಂತೆ ನೀವೂ ಹೈಕೋರ್ಟ್‌ಗೆ ಹೊಗಿ” ಎಂದು ಸುಪ್ರೀಂ ಹೇಳಿದೆ.

ಹಗರಣಕ್ಕೆ ಸಂಬಂಧಪಟ್ಟ ಪ್ರಕ್ರಿಯೆಯು ಸುಮಾರು ಎಂಟರಿಂದ ಹನ್ನೆರಡು ವಾರ ತೆಗೆದುಕೊಳ್ಳುವ ನಿರೀಕ್ಷೆಯಿದೆ ಎಂದು BARC ಹೇಳಿದೆ. ನಂತರ ವಾರಕ್ಕೋಮ್ಮೆ ಟಿಆರ್‌ಪಿ ಬಿಡುಗಡೆ ಮಾಡುವುದನ್ನು ಸಂಸ್ಥೆ ಮುಂದುವರಿಸುತ್ತದೆ ಎಂದು ಹೇಳಿದೆ.

ಬಾರ್ಕ್ ನಿರ್ಧಾರವನ್ನು ಸ್ವಾಗತಿಸಿರುವ ಪ್ರಸಾರ ಭಾರತಿಯ ಮಾಜಿ ಸಿಇಒ ಜವಾಹರ್ ಸಿರ್ಕಾರ್ ’ ಇದು ಒಳ್ಳೆಯ ಹೆಜ್ಜೆ, ಅವರು ಇದನ್ನು ಮೊದಲೇ ಮಾಡಬೇಕಿತ್ತು. ಕೆಲವೊಂದು ಕೆಲಸಗಳು ಸರಿಯಾಗಿ ಬ್ಯಾಲೆನ್ಸ್ ಆಗುತ್ತಿವೆಯೇ ಎಂಬುದನ್ನು ಆಂತರಿಕವಾಗಿ ವಿಮರ್ಶಿಸಿಕೊಳ್ಳಲು ಇದೊಂದು ಅವಕಾಶ’ ಎಂದಿದ್ದಾರೆ.

ನಕಲಿ ರೇಟಿಂಗ್ ಹಗರಣದ ಆರಂಭಿಕ ತನಿಖೆಯಲ್ಲಿ ಹೊರಹೊಮ್ಮಿದ ದೊಡ್ಡ ಹೆಸರು ರಿಪಬ್ಲಿಕ್ ಟಿವಿ. ವೀಕ್ಷಕರು ಕಾರ್ಯಕ್ರಮ ವೀಕ್ಷಿಸದಿದ್ದರೂ ಸಹ ಚಾನೆಲ್ ಆನ್‌ನಲ್ಲಿ ಇರಿಸಿಕೊಳ್ಳಲು ಅವರಿಗೆ ಹಣ ನೀಡಲಾಗಿದೆ ಎಂದು ಹೇಳಲಾಗಿತ್ತು.

ಟಿಆರ್‌ಪಿಯನ್ನು ತಿರುಚಿದ ಆರೋಪದಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು, ರಿಪಬ್ಲಿಕ್ ಟಿವಿ ಸೇರಿದಂತೆ ಮೂರು ಚಾನೆಲ್‌ಗಳನ್ನು ತನಿಖೆಗೆ ಒಳಪಡಿಸಲಾಗುತ್ತಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.


ಇದನ್ನೂ ಓದಿ: TRP ಹಗರಣ: ಎಲ್ಲರಂತೆ ಹೈಕೋರ್ಟ್‌ಗೆ ಹೋಗಿ ಎಂದ ಸುಪ್ರೀಂ, ರಿಪಬ್ಲಿಕ್ ಅರ್ನಾಬ್‌ಗೆ ಮುಖಭಂಗ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿ: ಆತ್ಮಹತ್ಯೆ ಮಾಡಿಕೊಂಡ ರೈತರ ತಲೆಬುರುಡೆ ಹಿಡಿದು ತಮಿಳುನಾಡಿನ ರೈತರಿಂದ ಪ್ರತಿಭಟನೆ

0
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ತಮಿಳುನಾಡಿನ ಸುಮಾರು 200ರೈತರು ನವದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಆತ್ಮಹತ್ಯೆ ಮಾಡಿಕೊಂಡ ರೈತರ ತಲೆಬುರುಡೆ ಮತ್ತು ಮೂಳೆಗಳನ್ನು ತಮಿಳುನಾಡಿನಿಂದ ದೆಹಲಿಗೆ ಹೊತ್ತೊಯ್ದಿದ್ದಾರೆ. ಕೃಷಿಯಲ್ಲಿ...