Homeಪುಸ್ತಕ ವಿಮರ್ಶೆತುಂಟ, ಹೈಪರ್ ಆಕ್ಟೀವ್‌ ಹುಡುಗಿಯನ್ನು ಮುದ್ದಾಗಿ ಬೆಳೆಸಿ ಮಾದರಿಯಾದ ತಾಯಿ

ತುಂಟ, ಹೈಪರ್ ಆಕ್ಟೀವ್‌ ಹುಡುಗಿಯನ್ನು ಮುದ್ದಾಗಿ ಬೆಳೆಸಿ ಮಾದರಿಯಾದ ತಾಯಿ

- Advertisement -
- Advertisement -

ಇದು ಬಲು ತೀಟೆ ಅಥವಾ ಹೈಪರ್ ಆ್ಯಕ್ಟೀವಾಗಿದ್ದ ಹುಡುಗಿಯೊಬ್ಬಳು ಕಲಿಯುತ್ತಿದ್ದ ಶಾಲೆಯಿಂದ ಹೊರಹಾಕಲ್ಪಟ್ಟು ನಂತರ ಸಹಜ ಕಲಿಕೆಯ ಶಾಲೆಗೆ ಸೇರಿ ಯಶಸ್ವೀ ಮಹಿಳೆಯಾದ ಕತೆಯಾದರೂ, ಇದು ತೊಮೊಯೆ ಎಂಬ ಶಾಲೆಯು ಮಕ್ಕಳೊಡನೆ ಜೀವ ತಳೆದಿದ್ದ ಕತೆ. ಸೊಸಾಕು ಕೊಬಾಯಾಶಿ ಎಂಬ ಶಿಕ್ಷಣ ತಜ್ಞ ಸಹಜ ಶಿಕ್ಷಣವನ್ನು ಮಕ್ಕಳಿಗೆ ಧಾರೆ ಎರೆದ ಅಮರಕತೆ.

ಹೌದು, ಒಂದು ವ್ಯಕ್ತಿಯ ವ್ಯಕ್ತಿತ್ವದ ನಿರ್ಮಾಣದಲ್ಲಿ, ಅದು ವ್ಯಕ್ತಿಗತವಾಗಿಯಾದರೂ ಅಥವಾ ಸಾಮಾಜಿಕವಾಗಿಯಾದರೂ, ಕುಟುಂಬ, ಶಿಕ್ಷಕರು ಮತ್ತು ಕಲಿಕೆಯ ಕೇಂದ್ರ; ಎಲ್ಲವೂ ಪ್ರಧಾನ ಪಾತ್ರವನ್ನು ವಹಿಸುತ್ತದೆ. ಇವರಲ್ಲಿ ಯಾರೂ ಮಕ್ಕಳ ಬಗ್ಗೆ ಅಲಕ್ಷ್ಯ ಮಾಡಬಾರದು ಎಂದು ತೊತ್ತೊ-ಚಾನ್ ಧ್ವನಿಸುತ್ತದೆ.

ತಾಯಿ

ತನ್ನ ಪುಟ್ಟ ಮಗಳು ತೊತ್ತೊ-ಚಾನ್ ಶಾಲೆಯಲ್ಲಿ ಡೆಸ್ಕನ್ನು ಪದೇಪದೇ ತೆಗೆದು ಮುಚ್ಚುತ್ತಾಗಲಾಟೆ ಮಾಡುವುದನ್ನು ಉಪಾಧ್ಯಾಯಿನಿ ದೂರಿನ ಪಟ್ಟಿಯಲ್ಲಿಟ್ಟರೂ ತಾಯಿ ಅದರ ಹಿಂದಿನ ಕಾರಣ, ಕುತೂಹಲ ಮತ್ತು ಅದರ ಪರಿಣಾಮವನ್ನು ಯೋಚಿಸುತ್ತಾಳೆ. ತಮ್ಮ ಮನೆಯಲ್ಲಿದ್ದ ಮೇಜಿನಲ್ಲಿ ಎಳೆಯುವ ಡ್ರಾಯರ್ ಇದ್ದು, ಶಾಲೆಯಲ್ಲಿ ಡೆಸ್ಕಿನ ಡಬ್ಬಿಯ ಮುಚ್ಚಳದಂತೆ ತೆಗೆದುಹಾಕುವುದಕ್ಕೆ ಅವಳಿಗೆ ಸಂತೋಷ ಎಂದು ತಿಳಿಯುತ್ತಾಳೆ. ಅದರ ಬಗ್ಗೆ ಉಪಾಧ್ಯಾಯರಿಗೂ ಹೇಳುವುದಿಲ್ಲ. ತನ್ನ ಮಗುವಿಗೂ ಹೇಳುವುದಿಲ್ಲ. ತೊತ್ತೋ ಗುಬ್ಬಚ್ಚಿಯ ಬಳಿ ಮಾತಾಡುವುದು, ಕಿಟಕಿಯ ಬಳಿ ನಿಂತುಕೊಂಡು ಸ್ಟ್ರೀಟ್ ಬ್ಯಾಂಡ್‍ರವರನ್ನು ಕರೆದು ಸಂಗೀತವಾದ್ಯಗಳನ್ನು ನುಡಿಸುವಂತೆ ಮಾಡುವುದೇ ಮೊದಲಾದ ಎಲ್ಲಾ ಆರೋಪಗಳ ಪಟ್ಟಿಯು “ನಿಮ್ಮ ಮಗಳನ್ನು ಶಾಲೆಯಿಂದ ಹೊರ ಹಾಕಲಾಗಿದೆ” ಎಂದು ಉಪಾಧ್ಯಾಯಿನಿ ತಾಯಿಗೆ ಹೇಳುವಂತಾಯಿತು. ಶಾಲೆಯಿಂದ ಹೊರಹಾಕುವುದನ್ನು ಸ್ವೀಕರಿಸಿದ ತಾಯಿ, ಅವಳ ಮಗಳ ಮೇಲಿನ ಆರೋಪಗಳ ಪಟ್ಟಿಯನ್ನು ಸ್ವೀಕರಿಸುವುದಿಲ್ಲ. ಬದಲಿಗೆ ನನ್ನ ಮಗಳು ಇವರಿಗರ್ಥವಾಗಲಿಲ್ಲ ಎಂದೇ ಬೇರೆ ಶಾಲೆಗೆ ಹೊರಳುತ್ತಾಳೆ. ಆದರೆ ಮಗಳಿಗೆ ನೀನು ಶಾಲೆಯಿಂದ ಹೊರದೂಡಲ್ಪಟ್ಟವಳೆಂದು ಹೇಳುವುದೇ ಇಲ್ಲ. ಹೇಳುತ್ತಾಳೆ, ತೊತ್ತೋಗೆ ಇಪ್ಪತ್ತನೇ ವರ್ಷದ ಹುಟ್ಟುಹಬ್ಬದಲ್ಲಿ. ಸಣ್ಣ ಮಗುವಿನ ಮೃದು ಮನಸ್ಸಿಗೆ ನೀನು ತಿರಸ್ಕೃತೆ ಎಂಬ ಭಾವಉಂಟಾಗದಿರುವಂತೆ ನೋಡಿಕೊಂಡತಾಯಿ ಅವರು.

ತೊಮೊಯೆ

ತೊಮೊಯೆ ಶಾಲೆಯ ಹೆಸರು. ನಿಸರ್ಗದ ಒಡಲಲ್ಲಿ ಆ ಶಾಲೆ ಮಕ್ಕಳಿಗೆ ಮಡಿಲನ್ನೊದಗಿಸಿತ್ತು. ಇನ್ನು ತರಗತಿಗಳೋ ರೈಲಿನ ಡಬ್ಬಿಗಳು. ಮಕ್ಕಳ ಆಯ್ಕೆಯ ವಿಷಯಗಳು ಅವರ ಕಲಿಕೆಗೆ. ಅವರವರ ಕಲಿಕೆ ಅವರಿಗೆ ಬಿಟ್ಟದ್ದು.ಉಪಾಧ್ಯಾಯರ ಸಹಾಯ ಬೇಕಾದಾಗ ಅವರೊದಗುತ್ತಾರೆ. ಮಧ್ಯಾಹ್ನ ಎಲ್ಲರೂ ಕಲೆತು ಊಟ ಮಾಡಿದ ಮೇಲೆ ತರಗತಿಗಳೆಂದು ಕರೆಸಿಕೊಳ್ಳುವ ರೈಲಿನ ಬೋಗಿಗಳಿಗೆ ಹೋಗುವಷ್ಟಿಲ್ಲ. ಹೊರಗೆ ನಿಸರ್ಗದಲ್ಲಿ ಮಿಕ್ಕೆಲ್ಲಾ ಸಹಜ ಕಲಿಕೆ. ನಿರ್ಬಂಧಿಸುವರಿಲ್ಲ, ತಾಕೀತು ಮಾಡುವವರಿಲ್ಲ, ಕಲಿಸುವಿಕೆ, ಕಲಿಯುವಿಕೆ, ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಸಂಬಂಧ ಎಲ್ಲವೂ ಸಹಜ.

ತೊತ್ತೊ ತನ್ನ ಮುನ್ನುಡಿಯಲ್ಲಿ ಹೇಳುವ ಮಾತು ನಿಜ. “ಈಗ ತೊಮೊಯೆದಂತಹ ಶಾಲೆಗಳಿದ್ದಿದ್ದರೆ ಇಂದು ಕಂಡುಬರುತ್ತಿರುವ ಕ್ರೌರ್ಯ ಎಷ್ಟೋ ಕಡಿಮೆಯಾಗುತ್ತಿತ್ತು.”

ಕೊಬಾಯಾಶಿ

ಸೊಸಾಕು ಕೊಬಾಯಾಶಿಯೇ ತೊತ್ತೊ-ಚಾನ್ ಪುಸ್ತಕದ ನಾಯಕ. ತೊಮೊಯೆ ಶಾಲೆಯ ಅಡಿಪಾಯ. ಅವರ ಶಿಕ್ಷಣ ನೀತಿಯೇ ಮಕ್ಕಳಿಗೆ ಉಸಿರಾಡಲು ತಂಗಾಳಿಯನ್ನು ನೀಡುತ್ತಿದ್ದದ್ದು. ಇಡೀ ಪುಸ್ತಕ ಹೇಳುವುದು ಕೊಬಾಯಾಶಿಯವರ ಸಹಜ ಕಲಿಕೆಯ ಪದ್ಧತಿ ಮಕ್ಕಳ ವ್ಯಕ್ತಿತ್ವ ವಿಕಾಸದಲ್ಲಿಸಾಧಿಸಿದ ಯಶಸ್ಸನ್ನು. ಎಲ್ಲಾ ಮಕ್ಕಳೂ ಸ್ವಾಭಾವಿಕವಾಗಿ ಉತ್ತಮರೇ. ಪರಿಸರ ಮತ್ತುದೊಡ್ಡವರ ಬೇಡದೇ ಇರುವ ಪ್ರಭಾವದಿಂದ ಹಾಳಾಗುತ್ತದೆ ಎಂಬುದು ಅವರ ತಿಳಿವಳಿಕೆ. ಮಕ್ಕಳು ತಮ್ಮ ಸಹಜ ಸ್ವಭಾವದಂತೆ ಕಲಿತುಕೊಂಡು ಹೋಗಲು, ಪ್ರಕೃತಿಯಿಂದ ತಿಳಿವಳಿಕೆ ಪಡೆಯಲು ಸಹಕರಿಸುವುದನ್ನು ತಮ್ಮ ಹೊಣೆಯಾಗಿಸಿಕೊಂಡಿದ್ದರು.

ಅವರ ಶಾಲೆಯಲ್ಲಿ ಪದವಿ ಪಡೆದ ವಿದ್ಯಾರ್ಥಿಗಳು ಎಲ್ಲರೂ ಗ್ರೂಪ್ ಪೋಟೋ ತೆಗೆಸಿಕೊಳ್ಳುವಾಗ ಕೊಬಾಯಾಶಿ ಅಲ್ಲಿಕಾಣುವ ಇತರ ಮಕ್ಕಳನ್ನೆಲ್ಲಾ ಕರೆದು ಪೋಟೋಗೆ ನಿಲ್ಲಿಸಿಕೊಳ್ಳುತ್ತಿದ್ದರು. ಔಪಚಾರಿಕವಾದ ಪದವೀಧರರ ಚಿತ್ರಗಳಿಗಿಂತ ಮಕ್ಕಳ ಜೀವಂತ ಚಿತ್ರಗಳನ್ನು ನೋಡುವ ಪ್ರೀತಿ ಅವರದು.

ಮೊದಲ ದಿನ ತೊತ್ತೊ ಶಾಲೆಗೆ ಸೇರಲು ಬಂದಾಗ ಕೊಬಾಯಾಶಿ ಮಗುವಿಗೆ ಪ್ರಶ್ನೆಗಳನ್ನು ಕೇಳದೇ ಅವಳೇ ಅವಳಿಷ್ಟದ್ದನ್ನೆಲ್ಲಾ ಹೇಳಲು ಬಿಡುತ್ತಾರೆ. ಇದೇ ಅವರಿಗೆ ಮಗುವಿನ ಪ್ರೀತಿ ಪಡೆಯಲು ಸಾಧ್ಯವಾಗುವುದು. ಅವಳು ಹೇಳಿದ್ದನ್ನೆಲ್ಲಾ ಕೇಳಿ, “ನೀನು ನಮ್ಮ ಶಾಲೆಯ ಹುಡುಗಿಯಾಗಿಬಿಟ್ಟೆ”ಎಂದಾಗ ಅವಳು ಅನುಭವಿಸುವ ವಾತ್ಸಲ್ಯ ಅನುಪಮವಾದದ್ದು.

ಅವರು ಪದೇಪದೇ ಹೇಳುತ್ತಿರುತ್ತಾರೆ, “ನೀನು ನಿಜವಾಗಿ ಒಳ್ಳೆಯ ಹುಡುಗಿ”ಅಂತ. ಇದನ್ನು ಕೇಳಿ ಕೇಳಿಯೇ ತೊತ್ತೋ ಆತ್ಮವಿಶ್ವಾಸವನ್ನು ಮತ್ತು ತನ್ನ ಬಗ್ಗೆ ಧನಾತ್ಮಕ ಧೋರಣೆಯನ್ನು ಹೊಂದಲು ಸಾಧ್ಯವಾಗಿದ್ದು. ಇಲ್ಲವಾಗಿದ್ದರೆ ಕೆಟ್ಟ ಹುಡುಗಿ ಎಂಬ ಕೀಳರಿಮೆಯಲ್ಲಿ ತನ್ನ ವ್ಯಕ್ತಿತ್ವವನ್ನು ತಾನೇ ನಾಶ ಮಾಡಿಕೊಳ್ಳುತ್ತಿದ್ದಳೇನೋ ಎಂದು ತಾನೇ ಹೇಳಿಕೊಳ್ಳುತ್ತಾರೆ. ಮುಂದೆ ತೊಮೊಯೆ ಯುದ್ಧದಲ್ಲಿ ನಾಶವಾದಾಗ ಸಂಕಟವಾಗುತ್ತದೆ.

ಇಡೀ ಪುಸ್ತಕವು ನವಿರಾದ ಹಾಸ್ಯ ಮತ್ತು ಗಂಭೀರದಲ್ಲಿ ವಿಚಾರಗಳನ್ನು ತೆರೆದಿಡುತ್ತದೆ. ನಗಿಸುತ್ತದೆ, ಚಿಂತಿಸುವಂತೆ ಮಾಡುತ್ತದೆ. ಮಕ್ಕಳ ವಿಕಾಸಕ್ಕೆ ಪೂರಕವಾದ ಕಲಿಕೆಯ ಕ್ರಮವನ್ನು ಅರಿವಿಗೆಟಕಿಸುತ್ತದೆ.

ಮಕ್ಕಳನ್ನು ಪ್ರೀತಿಸುವವರು ಈ ಪುಸ್ತಕದ ಓದನ್ನು ತಪ್ಪಿಸಿಕೊಂಡರೆ ಒಂದು ಕೊರತೆಯೆಂದೇ ನನ್ನ ಭಾವನೆ. ಇದನ್ನು ಕನ್ನಡಕ್ಕೆ ವಿ ಗಾಯತ್ರಿಯವರು ತಂದಿದ್ದು, ನ್ಯಾಷನಲ್ ಬುಕ್‍ಟ್ರಸ್ಟ್ ಪ್ರಕಟಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...