ಬಿಲೇನಿಯರ್ ಎಲಾನ್ ಮಸ್ಕ್ ಅವರು ಸಾಮಾಜಿಕ ಜಾಲತಾಣ ಟ್ವಿಟರ್ ಅನ್ನು ಸ್ವಾಧೀನಪಡಿಸಿಕೊಂಡ ಒಂದು ವಾರದಲ್ಲೆ ಕಂಪೆನಿಯ ಸುಮಾರು 7,500 ಸಿಬ್ಬಂದಿಯನ್ನು ಶುಕ್ರವಾರ ವಜಾಗೊಳಿಸಿದೆ. “ಕಂಪೆನಿಯ ಸುಮಾರು 50% ದಷ್ಟು ಉದ್ಯೋಗಿಗಳ ಮೇಲೆ ಪರಿಣಾಮ ಬೀರಿದೆ” ಎಂದು ಸುದ್ದಿ ಸಂಸ್ಥೆ ಎಎಫ್‌ಫಿ ಹೇಳಿದೆ.
ಪ್ರಪಂಚದಾದ್ಯಂತದ ಉದ್ಯೋಗಿಗಳನ್ನು ವಜಾಗೊಳಿಸಿದ್ದು, ಅವರು ತಮ್ಮ ಹತಾಶೆಯನ್ನು ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ. “ಟ್ವಿಟ್ಟರ್‌ನಲ್ಲಿ ನನ್ನ ಕೆಲಸವು ಕೊನೆಗೊಂಡಿದೆ ಎಂಬ ಸುದ್ದಿಯಿಂದ ನನಗೆ ತಲುಪಿದೆ. ಈ ಬಗ್ಗೆ ನಾನು ಎದೆಗುಂದಿದ್ದು, ಇದನ್ನು ನಾನು ವಿರೋಧಿಸುತ್ತಿದ್ದೇನೆ” ಎಂದು ಟ್ವಿಟರ್‌ನ ಕೆನಡಾ ಮತ್ತು ಅಮರಿಕದ ಸಾರ್ವಜನಿಕ ನೀತಿ ನಿರ್ದೇಶಕ ಮಿಚೆಲ್ ಆಸ್ಟಿನ್ ಅವರು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ದುರದೃಷ್ಟವಶಾತ್ ಕಂಪನಿಯು ದಿನಕ್ಕೆ 40 ಲಕ್ಷ ಡಾಲರ್‌ನಷ್ಟು ಕಳೆದುಕೊಳ್ಳುತ್ತಿರುವಾಗ ಬೇರೆ ಯಾವುದೇ ಆಯ್ಕೆಯಿಲ್ಲ” ಎಂದು ಎಲಾನ್ ಮಸ್ಕ್ ಶುಕ್ರವಾರ ಸಂಜೆ ಈ ವಿಷಯದ ಕುರಿತು ತಮ್ಮ ಮೊದಲ ಕಾಮೆಂಟ್‌ನಲ್ಲಿ ಟ್ವೀಟ್ ಮಾಡಿದ್ದಾರೆ. ವಜಾಗೊಳಿಸುವ ಮುನ್ನ, ಟ್ವಿಟರ್ ವಿಶ್ವಾದ್ಯಂತ ತನ್ನ ಕಚೇರಿಗಳಿಗೆ ಪ್ರವೇಶವನ್ನು ಮುಚ್ಚಿತ್ತು ಮತ್ತು ಇಮೇಲ್ ಮೂಲಕ ತಮ್ಮ ಭವಿಷ್ಯದ ಸುದ್ದಿಗಾಗಿ ಕಾಯಲು ಉದ್ಯೋಗಿಗಳನ್ನು ಮನೆಯಲ್ಲಿಯೇ ಇರುವಂತೆ ಕೇಳಿತ್ತು.
ಇದನ್ನೂ ಓದಿ: ಬಲಪಂಥೀಯ ಮುಖ ಕಳಚಿಕೊಳ್ಳಲು ‘ದೇಸಿ ಟ್ವಿಟರ್ ಕೂ’ ಪ್ರಯತ್ನ: ವರದಿ
“ಜನರನ್ನು ಈ ರೀತಿ ನಡೆಸಿಕೊಳ್ಳುತ್ತಿರುವುದು ತುಂಬಾ ಅಮಾನವೀಯವಾಗಿದೆ. ಇದು ಕೂಲಿ ಪ್ರಯತ್ನದಂತೆ ತೋರುತ್ತದೆ, ಕಂಪೆನಿಯು ಏನು ಮಾಡಿಯಾದರೂ ಹಣ ಉಳಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಹೆಸರು ಹೇಳಲಿಚ್ಛಿಸದ ವಜಾಗೊಂಡ ಉದ್ಯೋಗಿಯೊಬ್ಬರು ಹೇಳಿದ್ದಾರೆ.
ಶತಕೋಟಿ ಡಾಲರ್‌ಗಳನ್ನು ಸಾಲ ಪಡೆದುಕೊಂಡು ಮಾಡಿದ್ದ ಒಪ್ಪಂದದಂತೆ 44 ಶತಕೋಟಿ ಡಾಲರ್‌ಗಳ ಬೃಹತ್ ಮೊತ್ತದವನ್ನು ಪಾವತಿಸಲು ಬೇಕಾಗಿ ಎಲಾನ್ ಮಸ್ಕ್ ಈ ಪ್ರಯತ್ನ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಇದಕ್ಕಾಗಿ ಅವರು ತಮ್ಮ ಎಲೆಕ್ಟ್ರಿಕ್ ಕಾರ್ ಕಂಪನಿಯಾದ ಟೆಸ್ಲಾದ 15.5 ಶತಕೋಟಿ ಡಾಲರ್ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.
ಕಂಪೆನಿಯಲ್ಲಿ ಉಳಿದ ಉದ್ಯೋಗಿಗಳ ಮೇಲೆ ಬಿರುಸಿನ ವೇಗವನ್ನು ಎಲಾನ್ ಮಸ್ಕ್ ಅವರ ತಂಡ ಹೇರುತ್ತಿವೆ ಎಂದು ಕಂಪನಿಯ ಮೂಲಗಳು ಹೇಳಿವೆ. ಟ್ವಿಟ್ಟರ್ ಉದ್ಯೋಗಿಗಳ ಕೆಲಸವನ್ನು ಮೇಲ್ವಿಚಾರಣೆ ಮಾಡಲು ಟೆಸ್ಲಾ ಡೆವಲಪರ್‌ಗಳನ್ನು ಕರೆತರುತ್ತಿವೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಅಪ್ರಾಪ್ತ ಹೆಣ್ಣುಮಕ್ಕಳ ವೈಯಕ್ತಿಕ ವಿವರ ಪೋಸ್ಟ್ ಮಾಡಿದ್ದ ಬಿಜೆಪಿ: ಟ್ವೀಟ್ ರದ್ದು ಮಾಡಿದ ಟ್ವಿಟರ್
ಭಾರಿ ಹಣ ಪಾವತಿಸಿ ಟ್ವಿಟರ್ ಅನ್ನು ಕೊಂಡುಕೊಂಡಿದ್ದ ಎಲಾನ್ ಮಸ್ಕ್ ಹಣ ಸಂಪಾದಿಸಲು ಹೊಸ ಮಾರ್ಗಗಳನ್ನು ಹುಡುಕಲು ಇದನ್ನೆಲ್ಲಾ ಮಾಡುತ್ತಿದ್ದು, ಬ್ಲೂಟಿಕ್ ಬಳಕೆದಾರರಿಗೆ ತಿಂಗಳಿಗೆ 8 ಡಾಲರ್ ಶುಲ್ಕ ವಿಧಿಸುವ ಕಲ್ಪನೆ ಕೂಡಾ ಇದರಲ್ಲಿ ಸೇರಿದೆ.


