Homeಮುಖಪುಟಪಿ.ಲಂಕೇಶ್‌ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಸಂಭವಿಸಿದ ಎರಡು ಘಟನೆಗಳು!

ಪಿ.ಲಂಕೇಶ್‌ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಸಂಭವಿಸಿದ ಎರಡು ಘಟನೆಗಳು!

ಶಂಕರಪ್ಪ ನಡೆಸುವ ಸಮ್ಮೇಳನ ಹಾಸ್ಯಾಸ್ಪದ ಚಟುವಟಿಕೆಗಳಿಂದ ಮುಕ್ತವಾಗಲು ಸಾಧ್ಯವಿಲ್ಲ. ಆದ್ದರಿಂದ ಮೊದಲನೆಯದಾಗಿ ಕುವೆಂಪು ರಂಗಮಂದಿರದ ಆವರಣ ಬುಕ್‌ಸ್ಟಾಲ್‌ಗಳಿಲ್ಲದೆ ಬಿಕೋ ಎನ್ನುತ್ತಿದ್ದವು.

- Advertisement -
- Advertisement -

ಕಳೆದವಾರ ಶಿವಮೊಗ್ಗದಲ್ಲಿ ಎರಡು ಘಟನೆ ಸಂಭವಿಸಿವೆ. ಒಂದು ಲಂಕೇಶರ ದೂರದ ಸಂಬಂಧಿಯಾದ ಡಿ.ಬಿ.ಶಂಕರಪ್ಪ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿರುವುದರಿಂದ, ನಡೆಸಿದ ಸಾಹಿತ್ಯ ಸಮ್ಮೇಳನ! ಇನ್ನೊಂದು ಡಿವಿಎಸ್ ಕಾಲೇಜಿನ ರೀಡರ್‍ಸ್ ಕ್ಲಬ್ ಏರ್ಪಡಿಸಿದ್ದ “ಲಂಕೇಶ್ ಹೊಸ ತಲೆಮಾರಿಗೆ’ ಎಂಬ ಕಾರ್ಯಕ್ರಮ.

ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಖ್ಯಾತ ಮನೋವೈದ್ಯ ಶ್ರೀಧರ್‌ವರ ಪತ್ನಿ ವಿಜಯಾ ಆಯ್ಕೆಯಾಗಿದ್ದರು. ಇವರ ಮೇಲಿರುವ ಆಪಾದನೆ, ಅದೂ ಗುರುತರ ಆಪಾದನೆಗಳೆಂದರೆ ವಿಜಯಾ ಅವರು ರಾಘವೇಶ್ವರ ಸ್ವಾಮಿಯ ರಾಸಲೀಲೆ ಪರವಾಗಿದ್ದಾರೆ ಎಂಬುದು. ಇನ್ನೊಂದು, ಇವರ ಸಾಹಿತ್ಯದಲ್ಲಿ ಹೆಣ್ಣಿನ ಶೋಷಣೆಯ ಯಾವ ವಿವರವೂ ಇಲ್ಲ ಎಂಬುದು ಸಹ್ಯಾದ್ರಿ ಕಾಲೇಜಿನ ಡಾ. ಹಾಲಮ್ಮ ಅವರ ಅಭಿಮತ.

ಡಿ.ಬಿ.ಶಂಕರಪ್ಪ

ಈ ಆಪಾದನೆಗಳನ್ನ ಬಿಟ್ಟರೆ ವಿಜಯಾ ದೇವರಂತಹ ಮಹಿಳೆ. ಅದಕ್ಕೇ ಏನೋ, ಏನಿದೆ ಅದನ್ನು ವಿಮರ್ಶೆ ಮಾಡಿ ಹೇಳಬೇಕಾದ ವಿದ್ವಾಂಸರನೇಕರು, ವಿಜಯಕ್ಕ, ವಿಜಯಕ್ಕ ಎನ್ನುತ್ತಿದ್ದರು. ವಿಜಯಕ್ಕ ಎಂದಕೂಡಲೇ ಅದರ ಸಾಹಿತ್ಯದಲ್ಲಿ ಕಂಡದ್ದನ್ನು ಹೇಳದೆ ಮರೆಮಾಚಬೇಕಾಗುತ್ತದೆ ಎಂಬ ಸರಳ ಸಿದ್ಧಾಂತ ಈ ಮೂರ್ಖ ವಿದ್ವಾಂಸರಿಗೆ ಹೊಳೆಯದಿದ್ದುದು ಸಹಜವೇ ಸರಿ.

ಶಂಕರಪ್ಪ ನಡೆಸುವ ಸಮ್ಮೇಳನ ಹಾಸ್ಯಾಸ್ಪದ ಚಟುವಟಿಕೆಗಳಿಂದ ಮುಕ್ತವಾಗಲು ಸಾಧ್ಯವಿಲ್ಲ. ಆದ್ದರಿಂದ ಮೊದಲನೆಯದಾಗಿ ಕುವೆಂಪು ರಂಗಮಂದಿರದ ಆವರಣ ಬುಕ್‌ಸ್ಟಾಲ್‌ಗಳಿಲ್ಲದೆ ಬಿಕೋ ಎನ್ನುತ್ತಿದ್ದವು. ವಿಚಾರಿಸಲಾಗಿ, ಶಂಕರಪ್ಪನ ಟೀಮು ಒಂದು ಸ್ಟಾಲಿಗೆ ಆರು ಸಾವಿರ ರೂ. ಕೇಳಿತಂತೆ. ಪುಸ್ತಕ ವಿರೋಧಿಗಳು ಮಾತ್ರ ಇಂತಹ ಶರತ್ತು ಹಾಕಬಲ್ಲರು. ಶಿವಮೊಗ್ಗದಲ್ಲಿ ಅಕ್ಷತಾ ನಡೆಸುವ ಅಹರ್ನಿಶಿ ಪ್ರಕಾಶನ, ಗೀತಾಂಜಲಿ ಪ್ರಕಾಶನ, ಪುಸ್ತಕಮನೆ ಇತ್ಯಾದಿ ನಾಡಿನಲ್ಲೇ ಹೆಸರಾದ ಪ್ರಕಾಶನಗಳಾಗಿವೆ. ಇವು ಕುವೆಂಪು ರಂಗಮಂದಿರದ ಆವರಣಕ್ಕೆ ಸಂಭ್ರಮವುಂಟುಮಾಡುತ್ತವೆ. ನಿರರ್ಥಕ ಗೋಷ್ಠಿಯಲ್ಲಿ ಕೂರಲಾಗದವರು ಈ ಪುಸ್ತಕ ಮಳಿಗೆಯಲ್ಲಿ ಸುತ್ತುತ್ತಾರೆ. ಇಂತಹ ವಾತಾವರಣವೇ ಇಲ್ಲದಂತೆ ಮಾಡಿದ್ದ ಶಂಕರಪ್ಪನ ಟೀಮು ಮೂರು ದಿನ ಜನಗಳೇ ಇಲ್ಲದ ನೀರಸ ಸಮ್ಮೇಳನ ನಡೆಸಿ ನಿರ್ಗಮಿಸಿತು.

ಗೋಷ್ಠಿಯಲ್ಲಿ ಮಾತನಾಡುವವರು ಒಂಬತ್ತು ಜನರಿದ್ದರೆ, ಅದನ್ನು ನಿರ್ವಹಿಸಲು ನಾಲ್ಕು ಜನರಿದ್ದುದರಿಂದ ವೇದಿಕೆ ಮೇಲೆ ಕನಿಷ್ಠ ಹದಿನೈದು ಜನರಿರುತ್ತಿದ್ದರು. ವೇದಿಕೆ ಉದ್ದ ಸಾಕಾಗದೆ ಅಡ್ಡ ಕುರ್ಚಿಗಳನ್ನು ಹಾಕುತ್ತಿದ್ದರು. ಇನ್ನು ಎಂಟುನೂರು ಸೀಟಿನ ಕುವೆಂಪು ರಂಗಮಂದಿರದಲ್ಲಿ ಎಪ್ಪತ್ತೈದರಿಂದ ನೂರ ಇಪ್ಪತ್ತೈದು ಜನರವರೆಗೆ ರಂಗಮಂದಿರ ಕಿಕ್ಕಿರಿದಿತ್ತು! ಎರಡನೇ ದಿನ ಕವಿಗೋಷ್ಠಿಗೆ ಜಿಲ್ಲೆಯ ದಶದಿಕ್ಕಿನಿಂದ ಕೆಲ ಕವಿಗಳು ದಾಳಿಯಿಟ್ಟು ಹೊಸದಾಗಿ ಹೆಸರು ಸೇರಿಸಿದ್ದರಿಂದ, ಹೆದರಿಕೊಂಡ ಶಂಕರಪ್ಪ ಹೊಸದಾಗಿ ಸೇರ್ಪಡೆಯಾದ ಕವಿಗಳಿಗೆ, ಪುರಸ್ಕಾರದ ಹಾರ ಶಾಲು ಇಲ್ಲದೇ ಇರುವುದರಿಂದ, ಅನುಸರಿಸಿಕೊಂಡು ಮುಂದಿನ ಬಾರಿ ಪಡೆಯಬೇಕು ಎಂದರು. ಅದರಬದಲು ಆನಂತರ ಅಥವಾ ಮರುದಿನ ಎನ್ನಬಹುದಿತ್ತು.

ಇನ್ನು ಕವಿಗೋಷ್ಠಿ ಆರಂಭವಾಗುತ್ತಿದ್ದಂತೆ, ಊಟ ಬಂದಿದ್ದರಿಂದ ಸಭಾಂಗಣದ ಜನ ಆ ಕಡೆ ಓಡಿದರು. ಆದರೂ ಪ್ರಯೋಜನವಾಗಲಿಲ್ಲ. ಅದ್ಯಾರೊ ಏನೊ ಬಂದು ತಿಂದು ಮುಗಿಸಿದ್ದರಿಂದ, ಸಿಟ್ಟಾದ ಕೆಲವರು ಮನೆಯ ಕಡೆ ಹೋದರು. ಶಂಕರಪ್ಪ ಸಮಯಾಭಾವದಿಂದ ಊಟದ ಬಿಡುವಿಲ್ಲದಂತೆ ನಿರಂತರ ಗೋಷ್ಠಿಗಳನ್ನು ನಡೆಸಿದರು. ಈ ಮಧ್ಯೆ ಒಂದಷ್ಟು ದಲಿತರು ಪ್ರತಿಭಟಿಸಿ ನಮಗೇಕೆ ಅವಕಾಶ ಕೊಟ್ಟಿಲ್ಲ ಎಂದು ತಕರಾರು ತೆಗೆದರು. ಶಂಕರಪ್ಪ ಮುಂದೆ ಕೊಡಲಾಗುತ್ತೆ ಎಂದು ಆಶ್ವಾಸನೆ ಕೊಟ್ಟರು.

ಇನ್ನ ನಮ್ಮ ಜಿಲ್ಲೆ ನಮ್ಮ ನೆಲೆ ಎಂಬ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಇಬ್ಬರು ಬೃಹಸ್ಪತಿಗಳ ಪೈಕಿ ಒಬ್ಬ ತರ್ಕಗಳು, ಪ್ರಶ್ನೆಗಳು ಇಲ್ಲದಿದ್ದರೆ ಈ ನಾಡು ಶಾಂತವಾಗಿರುತ್ತದೆ ಎಂದ. ಮತ್ತೊಬ್ಬ ದೇವಸ್ಥಾನಗಳು ನಮ್ಮ ಸಂಸ್ಕೃತಿ ಕೇಂದ್ರಗಳು. ಅವು ಚೆನ್ನಾಗಿರಬೇಕು ಎಂದ. ಸೂಕ್ಷ್ಮವಾಗಿ ನೋಡಿದರೆ ಅವು ಪುರೋಹಿತ ಪಿಂಡಗಳಾಗಿದ್ದುದ್ದು ಆಶ್ಚರ್ಯವಾಗಲಿಲ್ಲ. ಇಂಥವು ಶಂಕರಪ್ಪನ ತಲೆಗೆ ಹೋಗುವುದಿಲ್ಲ. ಮಗಳ ಮದುವೆಗೆ ಇಡೀ ನಾಡೇ ಬಂದಿತ್ತು, ಕರೆದವರೆಲ್ಲ ಬಂದು ಉಂಡರೆಂಬ ತೃಪ್ತಿಭಾವದ ಶಂಕರಪ್ಪನಿಗೆ ಸಾಹಿತ್ಯದ ಸೂಕ್ಷ್ಮಗಳು, ಜಾತ್ಯತೀತ ಮನಸ್ಸುಗಳು, ಸಾಹಿತ್ಯ ಸಮ್ಮೇಳನ ಹೇಗಿರಬೇಕೆಂಬ ಕಲ್ಪನೆಯೇ ಇಲ್ಲ. ಅದಕ್ಕಾಗಿಯೇ ಸಾಹಿತ್ಯ ಸಮ್ಮೇಳನವೂ ಸಾಮಾಜಿಕ ನ್ಯಾಯದ ಸಮಸ್ಯೆಗೆ ತುತ್ತಾಗಿ, ವೇದಿಕೆ ಮೇಲೆ ಒಂದು ಡಜನ್ ವಿದ್ವಾಂಸರು ಕೂರುವುದು. ಇನ್ನು ಅವರ ಆಹ್ವಾನ ಪತ್ರಿಕೆ ನೋಡಿದರೆ ಭಯವಾಗುತ್ತದೆ. ಅದರಲ್ಲಿರುವ ಹೆಸರುಗಳನ್ನು ನೋಡಿದರೆ, ಓಟರ್ ಲಿಸ್ಟು ನೋಡಿದಂತಾಗುತ್ತದೆ. ಇದು ಶಂಕರಪ್ಪನ ಕತೆಯಾದರೆ, ಕೇಂದ್ರ ಸ್ಥಾನದ ಅಧ್ಯಕ್ಷ ಮನು ಬಳಿಗಾರ್ ಎಂಬ ಸರಕಾರಿ ಆಸಾಮಿಗೆ ಕನ್ನಡ ಸಾಹಿತ್ಯದ ಆಳ ಅಗಲ ಗೊತ್ತಿದ್ದಿದ್ದರೆ, ಈ ದೇಶ ಕಂಡ ಅಪರೂಪದ ಸಂಶೋಧಕ ಶ.ಷಟ್ಟರ್ ಸಮ್ಮೇಳನದ ಅಧ್ಯಕ್ಷರಾಗುತ್ತಿದ್ದರು.

ಸದ್ಯಕ್ಕೆ ನಮ್ಮ ಸಮಾಜ ಕ್ಷೋಭೆಯಿಂದ ಕುದಿಯುತ್ತಿದೆ. ಎಲ್ಲಿ ನೋಡಿದರೂ ಗಲಾಟೆಯ ಶಬ್ದವೇ ತುಂಬಿದೆ. ಸಂಗೀತವೂ ಗಲಭೆಯಂತೆ ಕೇಳುತ್ತಿದೆ. ಆಶ್ಚರ್ಯವೆಂದರೆ, ಇದರೊಳಕ್ಕೆ ಸಾಹಿತ್ಯ ಸಮ್ಮೇಳನವೂ ಸೇರಿಕೊಂಡಿವೆ. ಸಭೆಯಲ್ಲಿ ಪ್ರಾರ್ಥನೆ ಮಾಡುವ, ಸ್ವಾಗತ ಮಾಡುವ, ನಿರೂಪಣೆ ಮಾಡುವ, ವಂದನಾರ್ಪಣೆ ಮಾಡುವಾಗ ಹಾರತುರಾಯಿ ಶಾಲು ತಂದು ಎಸೆಯುವ ಎಲ್ಲರೂ ಗಲಭೆಗೆ ತುತ್ತಾದವರಂತೆ ಕಾಣುತ್ತಿದ್ದಾರೆ. ನಿಜಕ್ಕೂ ಸಾಹಿತ್ಯ ಸಮ್ಮೇಳನ ಇಂತಹ ಗಲಭೆ ಸೃಷ್ಟಿಸಬಾರದು. ಭೀಕರವಾದ ಸೌಂಡ್ ಬಾಕ್ಸು, ಮೈಕುಗಳಿಂದ ಉಂಟಾಗುವ ಶಬ್ದಗಳಿಂದ ಮುಕ್ತವಾಗಿ ಸಾಂತ್ವನದಂತಿರುವಂತೆ ನೋಡಿಕೊಳ್ಳಬೇಕು.

ಇಂತಹ ಹೊತ್ತಿನಲ್ಲಿ ಡಿವಿಎಸ್‌ನಲ್ಲಿ ನಡೆದ ಲಂಕೇಶರ ಹುಟ್ಟುಹಬ್ಬರ ಸೆಮಿನಾರನ್ನು ಶಂಕರಪ್ಪ ಬಂದು ನೋಡಬೇಕಿತ್ತು. ಅಲ್ಲಿಗೆ ಲಂಕೇಶರ ನೀಲು ಕಾವ್ಯಕ್ಕೆ ಚಿತ್ರ ಬರೆದಿದ್ದ, ಮತ್ತವರಿಗೆ ಕುತೂಹಲ ಕೆರಳಿಸಿದ್ದ ಎಂ.ಎಸ್.ಮೂರ್ತಿ ಬಂದಿದ್ದರು. ಲಂಕೇಶರ ನಾಟಕಗಳನ್ನು ಪರಿಣಾಮಕಾರಿಯಾಗಿ ನಿರ್ದೇಶಿಸಿದ್ದ ನಟರಾಜ್ ಹೊನ್ನವಳ್ಳಿ ಆಗಮಿಸಿದ್ದರು. ಜೊತೆಗೆ ಲಂಕೇಶರ ಒಡನಾಡಿಯಾಗಿದ್ದ ಬಿ.ಚಂದ್ರೇಗೌಡರು ಆಶಯ ಭಾಷಣ ಮಾಡಿದರು. ವೇದಿಕೆಯ ಮೇಲೆ ಮೂವರು ಮಾತನಾಡುವವರಿದ್ದರೆ, ಸಭಾಂಗಣದಲ್ಲಿ ನೂರಿಪ್ಪತ್ತೈದು ವಿದ್ಯಾರ್ಥಿಗಳಿದ್ದರು.

ಈ ಹೊಸ ತಲೆಮಾರಿಗೆ ಮಾತನಾಡಿದವರೆಲ್ಲ ಸಾಧ್ಯವಾದಷ್ಟು ಲಂಕೇಶರನ್ನು ತಲುಪಿಸಿದರು. ಕಡೆಯಲ್ಲಿ ಕವಿಯತ್ರಿ ಅಕ್ಷತಾ ಹುಂಚದಕಟ್ಟೆ ಲಂಕೇಶರನ್ನು ತುಂಬಾ ಪರಿಣಾಮಕಾರಿಯಾಗಿ ನಿರೂಪಿಸಿ ವಿದ್ಯಾರ್ಥಿಗಳಿಂದ ಚಪ್ಪಾಳೆ ಗಿಟ್ಟಿಸಿದರು. ಅವರು ಓದಿದ ನೀಲು ಕವನ ವಿದ್ಯಾರ್ಥಿಗಳಿಗೆ ತುಂಬಾ ಪ್ರೇರಣೆ ನೀಡಿತು.

ಅಕ್ಷತಾ ಹುಂಚದಕಟ್ಟೆ

 

ನಟರಾಜ ಹೊನ್ನವಳ್ಳಿ ನಿರ್ದೇಶಿಸಿದ್ದ ಗುಣಮುಖ ನಾಟಕದ ಕಡೆ ದೃಶ್ಯಗಳನ್ನು ಹೊಂಗಿರಣದ ಮತ್ತು ನಾದಿರ್ ಶಾ ಪಾತ್ರವನ್ನು ಅದ್ಭುತವಾಗಿ ಅಭಿನಯಿಸುವ ಸಾಸ್ವೆಹಳ್ಳಿ ಸತೀಶ್ ಮತ್ತು ಕೊಟ್ರಪ್ಪ ವಾಚಿಸಿದರು. ಸಭೆಯಲ್ಲಿ ಪ್ರಸ್ತಾಪವಾದ ಸಾರಾ ಅಬೂಬಕರ್ ವಿಷಯ ಕೇಳಿ ಪ್ರೇರಣೆಗೊಂಡ ಮುಸ್ಲಿಂ ಹೆಣ್ಣುಮಗಳೊಬ್ಬಳು, “ನಾನು ಬರೀತಾಯಿದ್ದೀನಿ. ಆದ್ರೆ ಉರ್ದುವಿನಲ್ಲಿ ಬರೀತಿನಿ. ಇನ್ನುಮುಂದೆ ಕನ್ನಡದಲ್ಲಿ ಬರೀಬೇಕು” ಎಂದಳು. ಖಂಡಿತ ನೀನು ಬರೀಲೇಬೇಕು, ಸಾರಾ, ಬಾನು ಬರವಣಿಗೆ ನಿಲ್ಲುಸ್ತಾಯಿದಾರೆ. ಮುಸ್ಲಿಂ ಹೆಣ್ಣುಮಕ್ಕಳಲ್ಲಿ ಬರಹಗಾರ್ತಿಯರೇ ಇಲ್ಲ, ನೀನು ಬರಿಬೇಕು ಎಂದಾಗ ಚಿಟ್ಟೆಯಾಕಾರದ ಚೂಡಿದಾರ್ ಹಾಕಿದ್ದ ಆಕೆ ಅದೆಲ್ಲೊ ಮಡಗಿದ್ದ ಬುರ್ಖಾ ಧರಿಸಿಕೊಂಡು ಹೊರಟಳು! ಆಕೆ ಏನಾದರೂ ಬರೆಯಬಹುದು. ಲಂಕೇಶ್ ಅಂತಹವರ ಪ್ರೇರಣೆಯಾಗಿದ್ದರು. ಮುಂದೂ ಕೂಡಾ ಆಗಿರುತ್ತಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....