Homeಮುಖಪುಟಉದಯಪುರ್‌ ಘಟನೆ: ‘ತಾಲಿಬಾನೀಕರಣ’ ಚರ್ಚೆಯ ಜೊತೆಗೆ ಜುಬೈರ್‌‌ ಹೆಸರು ಥಳುಕುಹಾಕಿದ ಮಾಧ್ಯಮಗಳು!

ಉದಯಪುರ್‌ ಘಟನೆ: ‘ತಾಲಿಬಾನೀಕರಣ’ ಚರ್ಚೆಯ ಜೊತೆಗೆ ಜುಬೈರ್‌‌ ಹೆಸರು ಥಳುಕುಹಾಕಿದ ಮಾಧ್ಯಮಗಳು!

- Advertisement -
- Advertisement -

ರಾಜಸ್ಥಾನದ ಉದಯಪುರ್‌ನಲ್ಲಿ ನಡೆದ ಘಟನೆಯನ್ನು ‘ತಾಲೀಬಾನೀಕರಣ’ದ ಭಾಗವಾಗಿ ಚರ್ಚಿಸುತ್ತಿರುವ ಮಾಧ್ಯಮಗಳು, ಖ್ಯಾತ ಪತ್ರಕರ್ತ, ಆಲ್ಟ್‌ನ್ಯೂಸ್‌ ಸಹಸಂಸ್ಥಾಪಕ ಮೊಹಮ್ಮದ್ ಜುಬೇರ್‌ ಹೆಸರನ್ನು ಪ್ರಕರಣಕ್ಕೆ ಥಳುಕುಹಾಕುವ ಪ್ರಯತ್ನವನ್ನು ಮಾಡುತ್ತಿವೆ. ಈ ಕುರಿತು ‘ನ್ಯೂಸ್‌ಲಾಂಡ್ರಿ’ ಜಾಲತಾಣ ವಿಶೇಷ ವರದಿ ಮಾಡಿದೆ.

“ರಾಜಸ್ಥಾನದ ಉದಯಪುರದಲ್ಲಿ ಹಿಂದೂ ಟೈಲರ್‌ನ ಭೀಕರ ಹತ್ಯೆಯನ್ನು ಆಲ್ಟ್ ನ್ಯೂಸ್ ಸಹಸ್ಥಾಪಕ ಮೊಹಮ್ಮದ್ ಜುಬೇರ್ ಸಕ್ರಿಯಗೊಳಿಸಿದ್ದಾರೆ” ಎಂದು ನೀವು ನಂಬಬೇಕೆಂದು ಟೈಮ್ಸ್‌ನೌ ಪತ್ರಕರ್ತ ರಾಹುಲ್ ಶಿವಶಂಕರ್ ಹೇಳಿಬಿಟ್ಟರು.

“ಕಳೆದ ತಿಂಗಳು ಪ್ರವಾದಿ ಮುಹಮ್ಮದ್ ಕುರಿತು ಮಾಜಿ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಹೇಳಿದ್ದನ್ನು ಜುಬೈರ್ ಬೆಳಕಿಗೆ ತಂದಿದ್ದಕ್ಕಾಗಿ ಧನ್ಯವಾದಗಳು. ಅದಕ್ಕಾಗಿ ದಂಡ ತೆರಬೇಕಾಯಿತು. ಆ ದಂಡವನ್ನು ಇಂದು ಕನ್ಹಯ್ಯಾ ಲಾಲ್ ಪಾವತಿಸಿದ್ದಾರೆ” ಎನ್ನುತ್ತಾರೆ ರಾಹುಲ್‌. ಕಳೆದ ರಾತ್ರಿ ಟೈಮ್ಸ್ ನೌ ಪ್ರೈಮ್‌ಟೈಮ್ ಚರ್ಚೆಯು ಹೀಗೆ ನಡೆಯುತ್ತದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಇಬ್ಬರು ಮತಾಂಧರು ಕನ್ಹಯ್ಯಾ ಲಾಲ್‌ ಅವರ ಶಿರಚ್ಛೇದನ ಮಾಡಿದ ಭಯಾನಕ ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದವು. ಆ ಇಬ್ಬರು ವ್ಯಕ್ತಿಗಳು (ಗೌಸ್ ಮೊಹಮ್ಮದ್ ಮತ್ತು ಮೊಹಮ್ಮದ್ ರಿಯಾಜ್ ಅಖ್ತರಿ) ಘಟನೆಯನ್ನು ಚಿತ್ರೀಕರಿಸಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ನೂಪುರ್ ಶರ್ಮಾ ಅವರಿಗೆ ಬೆದರಿಕೆ ಹಾಕಿದರು.

ಸಾಮಾಜಿಕ ಮಾಧ್ಯಮದಲ್ಲಿ ಶರ್ಮಾ ಅವರನ್ನು ಬೆಂಬಲಿಸಿ ಪೋಸ್ಟ್ ಮಾಡಿದ್ದರಿಂದ, ಸಹಾಯಕ್ಕಾಗಿ ಪೊಲೀಸರನ್ನು ಸಂಪರ್ಕಿಸಿದ್ದರಿಂದ ಲಾಲ್ ಅವರನ್ನು ಟಾರ್ಗೆಟ್ ಮಾಡಲಾಯಿತು ಎಂದು ವರದಿಗಳು ಹೇಳುತ್ತವೆ.

ಟೈಮ್ಸ್ ನೌನಲ್ಲಿ ಪತ್ರಕರ್ತ ಶಿವಶಂಕರ್ ಇದನ್ನು “ಐಸಿಸ್ ಶೈಲಿಯ ಶಿರಚ್ಛೇದನೆ” ಎಂದು ಕರೆಯುತ್ತಲೇ ಜುಬೇರ್‌ ಹೆಸರನ್ನು ಎಳೆದುತಂದರು.

ಪ್ಯಾನೆಲಿಸ್ಟ್ ತೆಹ್ಸೀನ್ ಪೂನಾವಾಲಾ ಅವರನ್ನು ಉದ್ದೇಶಿಸಿ ಮಾತನಾಡಿದ ಶಿವಶಂಕರ್‌‌, “ಈ ಐಸಿಸ್ ಮಾದರಿಯ ಪ್ರತೀಕಾರಕ್ಕೆ ಸಕ್ರಿಯರು ಇದ್ದಾರೆ. ನೀವು ಇಂದು ರಾತ್ರಿ ಜುಬೈರ್ ಹೆಸರು ತೆಗೆದುಕೊಳ್ಳುತ್ತೀರಾ?… ಇಲ್ಲ, ನೀವು ಅವರ ಹೆಸರನ್ನು ತೆಗೆದುಕೊಳ್ಳಬೇಕು..” – ಹೀಗೆ ಮಾತನಾಡುತ್ತಾರೆ.

ನೂಪುರ್‌‌ ಶರ್ಮಾ ಪ್ರವಾದಿ ವಿರುದ್ಧ ಕಾಮೆಂಟ್ ಮಾಡಿದ ವೀಡಿಯೊ ಕ್ಲಿಪ್ ಜುಬೇರ್‌ ಹಂಚಿಕೊಂಡಿದ್ದನ್ನು ಶಿವಶಂಕರ್‌ ಪ್ರಸ್ತಾಪಿಸುತ್ತಾರೆ. ಶರ್ಮಾ ಅವರು ತಮ್ಮ ಅಭಿಪ್ರಾಯವನ್ನು ಟೈಮ್ಸ್ ನೌನಲ್ಲಿ ಹೇಳಿದರು. ಒಮ್ಮೆ ಹಿನ್ನಡೆ ಪ್ರಾರಂಭವಾದಾಗ, ಚಾನಲ್ ತಕ್ಷಣವೇ ಈ ವಿಷಯದಿಂದ ಅಂತರ ಕಾಯ್ದುಕೊಂಡಿದೆ. “ನಮ್ಮ ಚರ್ಚೆಗಳಲ್ಲಿ ಭಾಗವಹಿಸುವವರು ಸಂಯಮವನ್ನು ಕಾಪಾಡಿಕೊಳ್ಳಲು, ಸಹ ಪ್ಯಾನೆಲಿಸ್ಟ್‌ಗಳ ವಿರುದ್ಧ ಅಸಂಸದೀಯ ಭಾಷೆಯಲ್ಲಿ ಮಾತನಾಡದಂತೆ ನಾವು ಒತ್ತಾಯಿಸುತ್ತೇವೆ” ಎಂದು ಟೈಮ್ಸ್ ನೌ ತಿಳಿಸಿದ್ದನ್ನು ಉಲ್ಲೇಖಿಸಲಾಗಿದೆ.

ಕಳೆದ ರಾತ್ರಿಯ ಚರ್ಚೆಯಲ್ಲಿ ಶಿವಶಂಕರ್, ಜುಬೈರ್ ಅವರ ಈ ಟ್ವೀಟ್ ಅನ್ನು ಉಲ್ಲೇಖಿಸಿದ್ದಾರೆ. “ನೀವು ಪ್ರವಾದಿಯನ್ನು ನಿಂದಿಸಿದಾಗ, ನೀವು ದಂಡ ಕಟ್ಟಬೇಕಾಗುತ್ತದೆ. ಆ ದಂಡವನ್ನು ಇಂದು ಕನ್ಹಯ್ಯಾ ಲಾಲ್ ಪಾವತಿಸಿದ್ದಾರೆ” ಎನ್ನುತ್ತಾರೆ.

ಇಂಡಿಯಾ ಟುಡೇಯಲ್ಲಿ ರಾಜ್‌ದೀಪ್ ಸರ್ದೇಸಾಯಿ ಉದಯ್‌ಪುರ ಹತ್ಯೆಯ ಕುರಿತು ಚರ್ಚೆ ನಡೆಸಿದಾಗ ಅಲ್ಲಿಯೂ ಜುಬೇರ್‌ ಹೆಸರು ಪ್ರಸ್ತಾಪವಾಗಿದೆ. “ರಾಜಸ್ಥಾನದಲ್ಲಿ ಐಸಿಸ್ ಶೈಲಿಯ ಹತ್ಯೆ” ಎಂಬ ಚರ್ಚೆ ನಡೆಯುತ್ತಿದ್ದಾಗ, “ಭಾರತವು ಕೋಮು ಹಿಂಸಾಚಾರವನ್ನು ಹೇಗೆ ನಿಲ್ಲಿಸಬಹುದು” ಎಂದು ಸರ್ದೇಸಾಯಿಯವರು ಬಿಜೆಪಿ ವಕ್ತಾರ ಆರ್‌ಪಿ ಸಿಂಗ್ ಅವರನ್ನು ಕೇಳುತ್ತಾರೆ. ಅದಕ್ಕೆ ಸಿಂಗ್, “ನೀವು ನೂಪುರ್ ಶರ್ಮಾ ಅಥವಾ ಬೇರೆ ಯಾರನ್ನಾದರೂ ಖಂಡಿಸಿದರೆ, ಜುಬೈರ್ ಅವರನ್ನೂ ಸಹ ಖಂಡಿಸಬೇಕು” ಎನ್ನುತ್ತಾರೆ.

ಅದಕ್ಕೆ ಪ್ರತಿಕ್ರಿಯೆ ನೀಡಿದ ಸರ್ದೇಸಾಯಿ, “ಉದಯಪುರ್ ಘಟನೆಯನ್ನು ಎಲ್ಲರೂ ಒಕ್ಕೊರಲಿನಿಂದ ಖಂಡಿಸಬೇಕು” ಎಂದು ಸ್ಪಷ್ಟಪಡಿಸುತ್ತಾರೆ.

ತಾಲೀಬಾನೀನಿಕರಣದ ಚರ್ಚೆ

ಈ ಭೀಕರ ಘಟನೆಯನ್ನು ‘ತಾಲೀಬಾನೀಕರಣ’ ಎಂದು ಹೆಸರಿಸಿ ಚರ್ಚೆಗಳು ಮಾಧ್ಯಮಗಳಲ್ಲಿ ನಡೆದಿದೆ.

ಆಜ್ ತಕ್ ಮಾಧ್ಯಮದಲ್ಲಿ ಚಿತ್ರಾ ತ್ರಿಪಾಠಿ, “ರಾಜಸ್ಥಾನದಲ್ಲಿ ತಾಲಿಬಾನ್ ತರಹದ ಪರಿಸ್ಥಿತಿ ಏಕೆ ಸಂಭವಿಸಿದೆ?” ಅಥವಾ “ಇದು ಕ್ರೌರ್ಯದ ಕಥೆ, ತಾಲಿಬಾನಿ ಚಟುವಟಿಕೆ” ಎಂದು ತಿಳಿಸಿದ್ದಾರೆ.

ಚಿತ್ರಾ ತ್ರಿಪಾಠಿಯವರು, “ತಾಲಿಬಾನಿ” ಪದವನ್ನು ಬಳಸುವುದನ್ನು ಕಾಂಗ್ರೆಸ್ ವಕ್ತಾರ ಅಲೋಕ್ ಶರ್ಮಾ ಆಕ್ಷೇಪಿಸಿದಾಗ ಅವರು, “ನಿಮಗೆ ಅವಮಾನವಿಲ್ಲವೇ? ಮೂರು ಮಕ್ಕಳ ತಂದೆಯನ್ನು ಹಗಲಿನಲ್ಲಿ ನಿರ್ದಯವಾಗಿ ಕೊಲ್ಲಲಾಯಿತು. ಇಲ್ಲಿ ನೀವು ಆಂಕರ್‌ ಬಾಯಿಂದ ಯಾವ ರೀತಿಯ ಪದಗಳು ಬರಬೇಕು ಎಂದು ಹೇಳುತ್ತಿದ್ದೀರಿ” ಎನ್ನುತ್ತಾರೆ.

ನ್ಯೂಸ್ 18 ಇಂಡಿಯಾದಲ್ಲಿ, ಅಮಿಶ್ ದೇವಗನ್ ಅವರ ಕಾರ್ಯಕ್ರಮದಲ್ಲೂ ತಾಲೀಬಾನೀಕರಣ ಚರ್ಚೆಯ ವಿಷಯವಾಗಿತ್ತು. “ಉದಯಪುರದಲ್ಲಿ ತಾಲಿಬಾನ್ ಮಾದರಿಯ ಕೊಲೆ ನಡೆದಿದೆ” ಎನ್ನುತ್ತಾರೆ ದೇವಗನ್‌.

ಬಿಜೆಪಿ ಐಟಿ ಮುಖ್ಯಸ್ಥ ಅಮಿತ್ ಮಾಳವೀಯ ಮಾತನಾಡಿ, “ಕಳೆದ ಕೆಲವು ತಿಂಗಳುಗಳಲ್ಲಿ, ಈ ರೀತಿಯ ಹಲವಾರು ಘಟನೆಗಳು ನಡೆದಿವೆ. ಅಲ್ಲಿ ಹಿಂದೂಗಳ ಮೇಲೆ ಇಂತಹ ದಾಳಿಗಳನ್ನು ಮಾಡಲಾಗಿದೆ. ಅದು ರಾಮ ನವಮಿ ಮೆರವಣಿಗೆಯಾಗಲಿ ಅಥವಾ ಹನುಮಾನ್ ಉತ್ಸವ ಮೆರವಣಿಗೆಯಾಗಲಿ, ಮುಸ್ಲಿಮರು ಅವರ ಮೇಲೆ ದಾಳಿ ಮಾಡಿದ್ದಾರೆ” ಎಂದು ದೂರುತ್ತಾರೆ.

ಝೀ ನ್ಯೂಸ್‌ನಲ್ಲಿ ಆಂಕರ್‌ ರೋಹಿತ್ ರಂಜನ್ ‍ಮಾತನಾಡುತ್ತಾ, “ಈ ಘಟನೆಯು ಧಾರ್ಮಿಕ ಯುದ್ಧದ ಭಾಗವಾಗಿದೆ” ಎನ್ನುತ್ತಾರೆ.

2015ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಚಾರ್ಲಿ ಹೆಬ್ಡೊ ದಾಳಿ ಮತ್ತು 2020ರಲ್ಲಿ ಫ್ರೆಂಚ್ ಶಿಕ್ಷಕನ ಶಿರಚ್ಛೇದ ಪ್ರಕರಣವನ್ನು ಪ್ರಸ್ತಾಪಿಸಿದ ರಂಜನ್, “ಯಾರಾದರೂ ಪ್ರವಾದಿ ಮುಹಮ್ಮದ್ ಅವರನ್ನು ಅವಮಾನಿಸಿದರೆ ಅವರನ್ನು ಕೊಲ್ಲಲಾಗುತ್ತದೆ. ಅಂತಹ ಹತ್ಯೆಯನ್ನು ಸಮರ್ಥಿಸಲಾಗುತ್ತದೆ ಎಂದು ಇಡೀ ಜಗತ್ತು ಮಾನಸಿಕವಾಗಿ ಒಪ್ಪಿಕೊಳ್ಳುವಂತೆ ಒತ್ತಾಯಿಸಲಾಗಿದೆ” ಎನ್ನುತ್ತಾರೆ. ವಿಚಿತ್ರವೆಂದರೆ, ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಈ ಕಾರ್ಯಕ್ರಮದ ವಿಡಿಯೊವನ್ನು ಯೂಟ್ಯೂಬ್‌ನಲ್ಲಿ ತೆರವು ಮಾಡಲಾಗಿದೆ.

ಇದನ್ನೂ ಓದಿರಿ: ಪತ್ರಕರ್ತ ಜುಬೇರ್‌ ವಿರುದ್ಧ ದೂರು ನೀಡಿದ್ದ ಟ್ವಿಟರ್‌ ಅಕೌಂಟ್‌ ಡಿಲೀಟ್!

ಎಬಿಪಿ ನ್ಯೂಸ್‌ನಲ್ಲಿ ರೂಬಿಕಾ ಲಿಯಾಕತ್, “ರಾ‘ಜಸ್ಥಾನವು ಮತಾಂಧತೆಯ ಪ್ರಯೋಗಾಲಯ ಆಗಿ ಮಾರ್ಪಟ್ಟಿದೆಯೇ?” ಎಂದು ಕೇಳುತ್ತಾರೆ. ಕಾರ್ಯಕ್ರಮದ ವಾಯ್ಸ್‌ವೋವರ್‌ನಲ್ಲಿ, “ಭಾರತದಲ್ಲಿ ತಾಲಿಬಾನ್ ತರಹದ ಮನಸ್ಥಿತಿಯ ಕೆಲವು ಜನರು ಇದ್ದಾರೆ ಎಂಬ ಪ್ರಶ್ನೆಯನ್ನು ಈ ವೀಡಿಯೊ ಎತ್ತುವುದಿಲ್ಲವೇ?” ಎಂದು ಕೇಳಲಾಗುತ್ತದೆ.

NDTVಯಲ್ಲಿ ನಿಧಿ ರಜ್ದಾನ್ ಅವರು ಈ ಕುರಿತು ಚರ್ಚೆಯನ್ನು ನಡೆಸಿದರು. ಕಾಂಗ್ರೆಸ್ ವಕ್ತಾರರಾಗಿರುವ ಪ್ಯಾನೆಲಿಸ್ಟ್ ಗುರುದೀಪ್ ಸಿಂಗ್ ಸಪ್ಪಲ್ ಅವರು ಮಾತನಾಡುತ್ತಾ, “ಈ ಕೊಲೆಯು ಅನಾಗರಿಕವಾದದ್ದು. ತ್ವರಿತವಾಗಿ ತನಿಖೆ ನಡೆಸಲಾಗುವುದು” ಎಂದು ಭರವಸೆ ನೀಡಿದರು.

ಮಾಜಿ ಐಪಿಎಸ್ ಅಧಿಕಾರಿ ಯಶೋವರ್ಧನ್ ಆಜಾದ್ ಅವರು ಮಾತನಾಡಿ, “ಇದು ಐಸಿಸ್ ಶೈಲಿಯ ಮರಣದಂಡನೆ. ನಾವು ಎಚ್ಚರದಿಂದಿರಬೇಕು” ಅವರು ಎಚ್ಚರಿಸಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಲೋಫರ್ ಜುಬೇರ್ ನ ಪರ ಮಾತಾಡೋ ಲೋಫರ್ ಗಳನ್ನ ಸರ್ಕಾರವೇ ಗುಂಡುಕ್ಕಿ ಕೊಲ್ಲುವ ಸಮಯ ಹತ್ತಿರದಲ್ಲಿ ಇದೆ

LEAVE A REPLY

Please enter your comment!
Please enter your name here

- Advertisment -

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...