Homeಕರ್ನಾಟಕಉಡುಪಿ ದ್ವೇಷ ಭಾಷಣ: ಬೇಷರತ್‌‌ ಕ್ಷಮೆ ಕೇಳಿದ ತೇಜಸ್ವಿ ಸೂರ್ಯ

ಉಡುಪಿ ದ್ವೇಷ ಭಾಷಣ: ಬೇಷರತ್‌‌ ಕ್ಷಮೆ ಕೇಳಿದ ತೇಜಸ್ವಿ ಸೂರ್ಯ

- Advertisement -
- Advertisement -

ಎಲ್ಲಾ ಮಠ ಮಂದಿರಗಳು ಮುಸ್ಲಿಮರನ್ನು ಹಿಂದೂಗಳಾಗಿ ಮತಾಂತರ ಮಾಡಬೇಕು ಎಂದು ಇತ್ತೀಚೆಗೆ ವಿವಾದಾತ್ಮಕವಾಗಿ ಹೇಳಿಕೆ ನೀಡಿದ್ದ ಬಿಜೆಪಿ ಯುವಮೋರ್ಚಾದ ರಾಷ್ಟ್ರಾಧ್ಯಕ್ಷ ಸಂಸದ ತೇಜಸ್ವಿ ಸೂರ್ಯ ತಮ್ಮ ಹೇಳಿಕೆಗಳಿಗೆ ಬೇಷರತ್‌ ಕ್ಷಮೆ ಕೋರಿದ್ದು, ಹೇಳಿಕೆಗಳನ್ನು ಹಿಂಪಡೆಯುವುದಾಗಿ ಹೇಳಿದ್ದಾರೆ.

ಅವರು ಉಡುಪಿಯ ಕೃಷ್ಣ ಮಠದಲ್ಲಿ ನಡೆದ ‘ವಿಶ್ವಾರ್ಪಣಮ್’ ಸಮಾರಂಭದಲ್ಲಿ ಮಾತನಾಡುತ್ತಾ, “ಎಲ್ಲ ಮಠ ಮಂದಿರಗಳು ವರ್ಷಕ್ಕೆ ಗುರಿಯನ್ನು ನಿಗದಿ ಪಡಿಸಿ ಬೇರೆ ಧರ್ಮದವರನ್ನು ವಾಪಾಸ್ಸು ಹಿಂದು ಧರ್ಮಕ್ಕೆ ಕರೆತರಬೇಕು. ಕೇವಲ ಭಾರತದಲ್ಲಿರುವ ಮುಸ್ಲಿಮರನ್ನು ಮಾತ್ರವಲ್ಲ ಪಾಕಿಸ್ತಾನದಲ್ಲಿರುವ ಮುಸ್ಲಿಮರನ್ನು ಕೂಡ ಹಿಂದುಗಳಾಗಿ ಪರಿವರ್ತನೆ ಮಾಡಬೇಕಾಗಿರುವುದು ನಮ್ಮ ಆದ್ಯ ಕರ್ತವ್ಯವಾಗಿದೆ” ಎಂದು ಹೇಳಿಕೆ ನೀಡಿದ್ದರು.

ಇದನ್ನೂ ಓದಿ:ಹುಸಿಯಾದ ತೇಜಸ್ವಿ ಸೂರ್ಯ ಭರವಸೆ: ‘ನನ್ನನ್ನು ಕೇಳಿ ಬ್ಯಾಂಕಲ್ಲಿ ಹಣ ಇಟ್ಟಿದ್ದೀರಾ?’ ಎಂದ ನಿರ್ಮಲಾ ಸೀತಾರಾಮನ್!

ಈ ಹೇಳಿಕೆ ನಂತರ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದು, ಭಾರಿ ವಿವಾದ ಸೃಷ್ಟಿಸಿತ್ತು. ಇದೀಗ ಅವರು ಸೋಮವಾರದಂದು ತಮ್ಮ ಹೇಳಿಕೆಯ ಬಗ್ಗೆ ಅವರ ವಿಷಾಧ ವ್ಯಕ್ತಪಡಿಸಿದ್ದು, ಹೇಳಿಕೆಯನ್ನುವ ಬೇಷರತ್ತಾಗಿ ಹಿಂಪಡೆಯುವುದಾಗಿ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ಎರಡು ದಿನಗಳ ಹಿಂದೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಭಾರತದಲ್ಲಿ ಹಿಂದೂ ಪುನರುತ್ಥಾನ’ ಎಂಬ ವಿಷಯದ ಕುರಿತು ಮಾತನಾಡಿದ್ದೆ. ತಪ್ಪಿಸಬಹುದಾಗಿದ್ದ ವಿವಾದವನ್ನು ಉಂಟುಮಾಡಿದ ನನ್ನ ಭಾಷಣದ ಕೆಲವು ಹೇಳಿಕೆಗಳಿಗಾಗಿ ವಿಷಾದಿಸುತ್ತೇನೆ. ಹಾಗಾಗಿ ಈ ಹೇಳಿಕೆಗಳನ್ನು ಬೇಷರತ್ತಾಗಿ ಹಿಂಪಡೆಯುತ್ತೇನೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ:‘ತಂಬಿ ತೇಜಸ್ವಿ ಸೂರ್ಯ, ಇದು ತಮಿಳುನಾಡು; ನಿಮ್ಮ ನಾಟಕ ಬೆಂಗಳೂರಲ್ಲೇ ಬಿಟ್ಟು ಬನ್ನಿ’

ಅವರು ಉಡುಪಿಯಲ್ಲಿ ಮಾತನಾಡುತ್ತಾ, “ಎಲ್ಲ ಮಠ ಮಂದಿರಗಳು ವರ್ಷಕ್ಕೆ ಗುರಿ ನಿಗದಿ ಪಡಿಸಿ, ವಿವಿಧ ಕಾರಣಕ್ಕೆ ಹಿಂದೂ ಧರ್ಮದಿಂದ ಮತಾಂತರ ಆದವರನ್ನು ವಾಪಾಸ್ಸು ಹಿಂದು ಧರ್ಮಕ್ಕೆ ಕರೆತರಬೇಕು. ಕೇವಲ ಭಾರತದಲ್ಲಿರುವ ಮುಸ್ಲಿಮರನ್ನು ಅಲ್ಲದೆ ಪಾಕಿಸ್ತಾನದಲ್ಲಿರುವ ಮುಸ್ಲಿಮರನ್ನು ಕೂಡ ಹಿಂದುಗಳಾಗಿ ಪರಿವರ್ತನೆ ಮಾಡಬೇಕಾಗಿದೆ. ಇದು ನಮ್ಮ ಆದ್ಯ ಕರ್ತವ್ಯವಾಗಿದೆ” ಎಂದು ಹೇಳಿದ್ದರು.

“ಟಿಪ್ಪು ಜಯಂತಿಯ ದಿನ ಮುಸ್ಲಿಮರನ್ನು ಮಠ ಮಂದಿರಗಳು ವಾಪಾಸ್ಸು ಹಿಂದು ಧರ್ಮಕ್ಕೆ ಕರೆದು ಕೊಂಡು ಬರಬೇಕು. ಮುಸ್ಲಿಮ್ ಕ್ರಿಶ್ಚಿಯನ್ನರನ್ನು ವಾಪಾಸ್ಸು ಹಿಂದು ಧಮಕ್ಕೆ ಕರೆತರುವುದು ನಮೆಲ್ಲರ ಜವಾಬ್ದಾರಿ. ನಾವು ಮೊಘಲರು ಮತ್ತು ಬಿಟ್ರಿಷರನ್ನು ಹೊರಗಡೆ ಓಡಿಸಿದ್ದೇವೆಯೇ ಹೊರತು ಅವರು ಬಿಟ್ಟು ಹೋದ ಸಿದ್ಧಾಂತವನ್ನಲ್ಲ. ಅದನ್ನು ಕಿತ್ತು ಹಾಕಿದರೆ ಮಾತ್ರ ನಮ್ಮ ವಿಜಯ ಸಂಪೂರ್ಣ ಆಗುತ್ತದೆ” ಎಂದು ಅವರು ಹೇಳಿದ್ದರು.

ಇದನ್ನೂ ಓದಿ:ಸಂಸದ ತೇಜಸ್ವಿ ಸೂರ್ಯರವರಿಂದ ಲಾಕ್ ಡೌನ್ ನಿಯಮ ಉಲ್ಲಂಘನೆ: RTI ಕಾರ್ಯಕರ್ತನಿಂದ ದೂರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಜನಪ್ರತಿನಿಧಿಗಳು ವೇದಿಕೆಯಲ್ಲಿ ಇರುವವರನ್ನು ಮೆಚ್ಚಿಸಲು ಸಡಿಲವಾಗಿ ಬಾಯಿ ಹರಿಬಿಡದೆ ಜಾಗರೂಕತೆಯಿಂದ ಮಾತಾಡಬೇಕು.‌ ಘನತೆ ಗಾಂಭೀರ್ಯ ಮುಂತಾದ ನಾಯಕತ್ವದ ಗುಣಗಳಿಂದ ಮುತ್ಸದ್ದಿ ಎನಿಸಿಕೊಳ್ಳಬೇಕು. ಈಗ ನಮ್ಮ ದೇಶದಲ್ಲಿ ಮುತ್ಸದ್ದಿಗಳ ಕೊರತೆಯಿದೆ. ಅದು ನಮ್ಮ ದೌರ್ಭಾಗ್ಯ.

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...