Homeಕರ್ನಾಟಕಕೇಂದ್ರ ಬಜೆಟ್ 2026: ‘ಇದು ನನ್ನ ರಾಜಕೀಯ ಜೀವನದ ಅತ್ಯಂತ ನಿರಾಶಾದಾಯಕ ಬಜೆಟ್’: ಸಿಎಂ ಸಿದ್ದರಾಮಯ್ಯ

ಕೇಂದ್ರ ಬಜೆಟ್ 2026: ‘ಇದು ನನ್ನ ರಾಜಕೀಯ ಜೀವನದ ಅತ್ಯಂತ ನಿರಾಶಾದಾಯಕ ಬಜೆಟ್’: ಸಿಎಂ ಸಿದ್ದರಾಮಯ್ಯ

- Advertisement -
- Advertisement -

‘ಮೋದಿ ಸರ್ಕಾರ ಆರ್ಥಿಕ ದೂರದೃಷ್ಟಿಕೋನಗಳಿಲ್ಲದೆ, ದೇಶವನ್ನು ಯಾವ ದಿಕ್ಕಿನತ್ತ ಮುನ್ನಡೆಸಬೇಕು ಎನ್ನುವುದರ ಬಗ್ಗೆ ಸ್ಪಷ್ಟತೆ ಇಲ್ಲದೆ ದಣಿದಿದೆ ಎಂಬುದರ ಸಂಕೇತ ಈ 2026 ಬಜೆಟ್’ ಎಂದು ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ. 

ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ‘ವಿಕಸಿತ ಭಾರತದ ಸಂಕಲ್ಪ ಎನ್ನುವುದು ನಾಲಿಗೆ ಮೇಲಿನ ಮಾತಾಗಿದೆಯೇ ಹೊರತು ಕೃತಿಗಿಳಿಸಲು ಬೇಕಾದ ಯಾವುದೇ ಯೋಜನೆಗಳಿಲ್ಲ’ ಎಂದಿದ್ದಾರೆ. 

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಲೋಕಸಭೆಯಲ್ಲಿ ತಮ್ಮ ಸತತ 9 ನೇ ಬಜೆಟ್ ಅನ್ನು ಮಂಡಿಸಿದ್ದು, ಬಜೆಟ್ ಘೋಷಣೆಯ ನಂತರ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮಗೋಷ್ಠಿಯಲ್ಲಿ ಈ ಹೇಳಿಕೆ ನೀಡಿದ್ದಾರೆ.  

ಈ ವೇಳೆ ಕೇಂದ್ರದ ಬಜೆಟ್ ಕುರಿತು ದೀರ್ಘವಾಗಿ ಮಾತನಾಡಿರುವ ಅವರು ‘2025-26 ರಲ್ಲಿ ಬಜೆಟ್ ಗಾತ್ರ 50,65,345 ಕೋಟಿ ರೂ.ಗಳಷ್ಟಿತ್ತು. ಆದರೆ ಪರಿಷ್ಕೃತ ಅಂದಾಜು 49,64,842 ಕೋಟಿ ರೂ. ಆಗಿದೆ. ಸುಮಾರು 1 ಲಕ್ಷ ಕೋಟಿಗೂ ಕಡಿಮೆ ಗಾತ್ರಕ್ಕೆ ಪರಿಷ್ಕರಿಸಿದ್ದಾರೆ. 2025-26 ರಲ್ಲಿ ರೂ.28.37 ಲಕ್ಷ ಕೋಟಿ ನಿವ್ವಳ ತೆರಿಗೆ ಆದಾಯ ಇರುತ್ತದೆಂದು ಅಂದಾಜು ಮಾಡಿದ್ದರು. ಕೇಂದ್ರವು ಸ್ವೀಕರಿಸುವ ತೆರಿಗೆ ಆದಾಯ (ನಾನ್ ಟ್ಯಾಕ್ಸ್ ರೆವೆನ್ಯೂ ) 27.3 ಲಕ್ಷ ಕೋಟಿ ಸಂಗ್ರಹವಾಗುತ್ತದೆಂದು ಅಂದಾಜು ಮಾಡಿದ್ದರು. ಪರಿಷ್ಕೃತ ಅಂದಾಜಿನಲ್ಲಿ 1,62,748 ಕಡಿಮೆ ಸಂಗ್ರಹವಾಗಬಹುದೆಂದು ಅಂದಾಜಿಸಿ 26.74 ಲಕ್ಷ ಕೋಟಿಗೆ ಗುರಿಯನ್ನು ಕಡಿತಗೊಳಿಸಿದ್ದಾರೆ’ ಎಂದು ವಿವರಿಸಿದ್ದಾರೆ. 

ಈ ವರ್ಷದ ಬಜೆಟ್ ಗಾತ್ರ 53,47,315 ಕೋಟಿ ರೂಗಳಷ್ಟಿದೆ. ಸುಮಾರು ಶೇ.5.56 ರಷ್ಟು ಹೆಚ್ಚಿನ ಗಾತ್ರದ ಬಜೆಟ್ ಅನ್ನು 2026-27 ನೇ ಸಾಲಿಗೆ ಮಂಡಿಸಿದ್ದಾರೆ.

ಜಿಡಿಪಿ ಸಾಲದ ದರ ಶೇ.55 ರಷ್ಟು ಇರಲಿದೆ. ವಿತ್ತೀಯ ಕೊರತೆ ಶೇ. 4.3 ರಷ್ಟಿರಲಿದೆ ಎಂದು ಹೇಳಿದ್ದಾರೆ. ಆದರೆ ರಕ್ಷಣಾ ವಲಯ ಸೇರಿದಂತೆ ಅನೇಕ ಯೋಜನೆಗಳಿಗೆ ಅನುದಾನ ಕಡಿಮೆ ಮಾಡಿದ್ದಾರೆ.

ರಾಜಸ್ವ ಕೊರತೆ 5.92 ಲಕ್ಷ ಕೋಟಿಗಳಷ್ಟಿರಲಿದೆ. ಬಜೆಟ್ ಗಾತ್ರದ ಶೇ.1.5 ರಷ್ಟು ಎಂದು ಅಂದಾಜು ಮಾಡಿದ್ದಾರೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು 70 ಸಾವಿರ ಕೋಟಿ ರೂ.ಗಳಷ್ಟು ಹೆಚ್ಚು.

ಬಂಡವಾಳ ವೆಚ್ಚ ಕಳೆದ ವರ್ಷ 11.21 ಲಕ್ಷ ಕೋಟಿ ರೂಗಳಷ್ಟಿದ್ದರೆ ಈ ವರ್ಷ 12.2 ಲಕ್ಷ ಕೋಟಿ ರೂಗಳಷ್ಟಿರಲಿದೆ ಎಂದು ಪ್ರಸ್ತಾಪಿಸಿದ್ದಾರೆ. ಇದು ಸುಮಾರು ಶೇ. 8.8 ರಷ್ಟು ಹೆಚ್ಚಿನ ಬಂಡವಾಳ ವೆಚ್ಚವೆಂದು ಘೋಷಿಸಿದ್ದಾರೆ. ಕಳೆದ ವರ್ಷ 11.21 ಲಕ್ಷ ಕೋಟಿ ರೂಗಳಷ್ಟು ಬಂಡವಾಳ ವೆಚ್ಚ ಮಾಡುವುದಾಗಿ ಹೇಳಿ 25,335 ಕೋಟಿ ರೂ. ಗಳಷ್ಟು ಕಡಿಮೆ ವೆಚ್ಚವಾಗುತ್ತದೆಂದು ಪರಿಷ್ಕರಿಸಿದ್ದಾರೆ.

2025-26 ರಲ್ಲಿ 15.69 ಲಕ್ಷ ಕೋಟಿ ರೂ ಸಾಲ ಇರಲಿದೆ ಎಂದು ಹೇಳಿದ್ದರು. ಈ ವರ್ಷ 16,95,768 ಕೋಟಿ ರೂ. ಸಾಲ ಮಾಡುವುದಾಗಿ ಹೇಳಿದ್ದಾರೆ. ಕಳೆದ ವರ್ಷಕ್ಕಿಂತ 1,26,832 ಕೋಟಿ ರೂ. ಗಳಷ್ಟು ಹೆಚ್ಚು ಸಾಲ ಮಾಡುತ್ತಿದ್ದಾರೆ. ಶೇ.8 ರಷ್ಟು ಹೆಚ್ಚಿನ ಪ್ರಮಾಣದ ಸಾಲ ಮಾಡಲಾಗುತ್ತಿದೆ.

2025-26ರ ಬಜೆಟ್ ನಲ್ಲಿ ರಾಜ್ಯಗಳಿಗೆ ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ 5.41 ಲಕ್ಷ ಕೋಟಿ ಕೊಡುತ್ತೇವೆ ಅಂತ ಹೇಳಿದ್ದರು, ಅದನ್ನು 4.2 ಲಕ್ಷ ಕೋಟಿಗೆ ಕಡಿಮೆ ಮಾಡಿದ್ದಾರೆ. ಸುಮಾರು 1.21 ಲಕ್ಷ ಕೋಟಿಯಷ್ಟು ಕಡಿಮೆ ಆಗಿದೆ.

ಇದು ನನ್ನ ರಾಜಕೀಯ ಜೀವನದ ಅತ್ಯಂತ ನಿರಾಶಾದಾಯಕ ಬಜೆಟ್. ಕೇಂದ್ರದ ಬಜೆಟ್ ದೊಡ್ಡ ನಗರಗಳ ಕಾರ್ಪೊರೇಷನ್ ಬಜೆಟ್‌ಗಳಿಗಿಂತ ಮೇಲೆ ಹೋಗಲಿಲ್ಲ ಎಂದು ಹೇಳಿದ್ದಾರೆ. 

ಕರ್ನಾಟಕಕ್ಕೆ ಏನೂ ಸಿಗಲಿಲ್ಲ. ಯಥಾ ಪ್ರಕಾರ ಚೊಂಬು ಕೊಟ್ಟರು. ಕರ್ನಾಟಕ ಅಷ್ಟೇ ಅಲ್ಲ ಇಡೀ ದಕ್ಷಿಣ ಭಾರತಕ್ಕೂ ಏನೂ ಸಿಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಈ ವೇಳೆ  ಬೆಂಗಳೂರಿಗೆ, ಬೆಂಗಳೂರು- ಹೈದರಾಬಾದ್ ಮತ್ತು ಬೆಂಗಳೂರು-ಚೆನ್ನೈ ಎರಡು ಹೈ ಸ್ಪೀಡ್ ರೈಲುಗಳನ್ನು ಕೊಡುವುದಾಗಿ ಘೋಷಿಸಿದ್ದಾರೆ. ಆ ಎರಡರಿಂದ ಕರ್ನಾಟಕಕ್ಕೆ ಹೆಚ್ಚಿನ ಲಾಭವಿಲ್ಲ. ಅತಿ ಹೆಚ್ಚಿನ ಕಿ.ಮೀ ನಮಗೆ ಸಂಚರಿಸುವುದು ಕರ್ನಾಟಕದಲ್ಲಲ್ಲ. ನಮಗೆ ಸ್ವಲ್ಪ ಅನುಕೂಲವಾಗುವುದಿದ್ದರೆ, ಬೆಂಗಳೂರು- ಮುಂಬೈ, ಬೆಂಗಳೂರು ಮಂಗಳೂರಿಗೆ ಘೋಷಣೆ ಮಾಡಬೇಕಾಗಿತ್ತು ಎಂದಿದ್ದಾರೆ. 

ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ಅದೇ ಸವಕಲು ಪದಗಳಿಂದ ತುಂಬಿತ್ತು. ಕೇಂದ್ರ ಸರ್ಕಾರವು ದೇಶದ ಅಭಿವೃದ್ಧಿಯ ಬಗ್ಗೆ ಸ್ಪಷ್ಟ ದಿಕ್ಕೂಚಿಯಿಲ್ಲದೆ ಕಂಗಾಲಾಗಿರುವ ಕುರುಹುಗಳು ಈ ಬಜೆಟ್ನಲ್ಲಿ ಕಾಣಿಸುತ್ತಿವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 

ಇದು ಕೇಂದ್ರ ಸರ್ಕಾರ ನಮ್ಮಿಂದ ಈ ದೇಶವನ್ನು ಮುನ್ನಡೆಸಲು ಸಾಧ್ಯವಿಲ್ಲ ಸಂಪೂರ್ಣ ದಣಿದಿದ್ದೇವೆ ಎಂಬುದನ್ನು ಸಾಬೀತು ಪಡಿಸುವ ಬಜೆಟ್ ಎಂದಿರುವ ಅವರು ಮೋದಿ ಸರ್ಕಾರ ದಣಿದಿದೆ. ಅವರಿಗೆ 13 ನೇ ಬಜೆಟ್ ನಲ್ಲಿ ಗಾಂಧೀಜಿ ಹಾಗೂ ಕಾಂಗ್ರೇಸ್‌ನ ಆಶಯಗಳು ಸರಿಯಾಗಿವೆ ಎಂಬುದು ಅರ್ಥವಾಗಿರುವಂತಿದೆ. ಮೊದಲ ಬಾರಿಗೆ ಬೌದ್ಧರ ಐತಿಹಾಸಿಕ ಸ್ಥಳಗಳು ನೆನಪಾಗಿವೆ ಎಂದಿದ್ದಾರೆ. 

ಅದನ್ನು ಸರಿ ಮಾಡುವುದು ಹೇಗೆ ಎಂಬುದರ ಕುರಿತು ಒಂದೇ ಒಂದು ಮಾತು ಇಲ್ಲ. ವಿದೇಶಿ ಬಂಡವಾಳ ಹೂಡಿಕೆ ಕಡಿಮೆಯಾಗುತ್ತಿದೆ. ಇಂಪೋರ್ಟ್ ಹೆಚ್ಚಾಗುತ್ತಿದೆ. ಎಕ್ಸ್ ಪೋರ್ಟ್ ಕಡಿಮೆಯಾಗುತ್ತಿದೆ. ಇದನ್ನು ಹೇಗೆ ಸರಿ ಮಾಡುವುದು ಎಂಬುದರ ಕುರಿತು ಯಾವುದೇ ಪ್ರಸ್ತಾಪ ಇಲ್ಲ. ಎಕ್ಸ್ ಪೋರ್ಟ್ ಮಾಡುವವರಿಗೆ ತೆರಿಗೆಯಲ್ಲಿ ರಿಯಾಯಿತಿಗಳಿದ್ದವು ಅದನ್ನೂ ಕಡಿಮೆ ಮಾಡಿದ್ದಾರೆ. 

1.16 16. ಈ ಬಜೆಟ್ ನಲ್ಲಿ ಯೂರಿಯಾ ಸಬ್ಸಿಡಿಯನ್ನು 1.26 ಲಕ್ಷ ಕೋಟಿಯಿಂದ ಲಕ್ಷ ಕೋಟಿಗೆ ಕಡಿತಗೊಳಿಸಿದ್ದಾರೆ. ನ್ಯೂಟ್ರಿಯೆಂಟ್ ಬೇಸ್ಟ್ ಕಾರ್ಯಕ್ರಮಕ್ಕೆ 60000 ರಿಂದ 54000 ಕ್ಕೆ ಕಡಿತಗೊಳಿಸಿದ್ದಾರೆ. ರಕ್ಷಣಾ ವಲಯಕ್ಕೆ ಹೆಚ್ಚಿನ ಆದ್ಯತೆ ಕೊಡುತ್ತೇವೆಂದು ಹೇಳಿದ್ದ ಮೋದಿ ಸರ್ಕಾರ, ಏರ್ ಕ್ರಾಫ್ಟ್ ವಿಭಾಗಕ್ಕೆ ರೂ. 72780 ಕೋಟಿಯಿಂದ 63734 ಕೋಟಿಗೆ ಕಡಿತಗೊಳಿಸಿದ್ದಾರೆ.

ಪರಿಸರ ಮಾಲಿನ್ಯಕ್ಕೆ ಕಳೆದ ವರ್ಷ 1300 ಕೋಟಿ ರೂ. ಇಟ್ಟಿದ್ದರೆ, ಈ ವರ್ಷ 1091 ಕೋಟಿ ರೂ. ಮೀಸಲಿರಿಸಿದ್ದಾರೆ.  ರಾಷ್ಟ್ರೀಯ ಭದ್ರತಾ ತಂತ್ರಜಾನಕ್ಕೆ ಕಳೆದ ವರ್ಷ 31631 ಕೋಟಿ ಇಟ್ಟಿದ್ದರೆ, ಈ ವರ್ಷ ರೂ.9800 ಕೋಟಿಗೆ ಇಳಿದಿದೆ.

ರಫ್ತಿಗೆ ಉತ್ತೇಜನ ಕೊಡುವ ದೃಷ್ಟಿಯಿಂದ ಕಳೆದ ಬಜೆಟ್ಟಿನಲ್ಲಿ ರಫ್ತು, ಉತ್ಪನ್ನಗಳ ಮೇಲಿನ ತೆರಿಗೆ ವಿನಾಯತಿ 18,233 ಕೋಟಿ ರೂ. ಇಟ್ಟಿದ್ದರೆ, ಈ ಬಾರಿ ಕೇವಲ 10000 ಕೋಟಿಗೆ ಇಳಿಸಿದ್ದಾರೆ. ಇದು ಮೋದಿ ಸರ್ಕಾರದ ದೂರದೃಷ್ಟಿ ಇಲ್ಲದ ಬಜೆಟ್ ಎನ್ನುವುದಕ್ಕೆ ನಿದರ್ಶನಗಳು ಎಂದಿದ್ದಾರೆ. ಜೊತೆಗೆ ರೈತರ ಬೆಳೆ ವಿಮೆ ಹೆಚ್ಚು ಮಾಡಿಲ್ಲ,  ಉನ್ನತ ಶಿಕ್ಷಣಕ್ಕೆ ಆದ್ಯತೆ ಕೊಟ್ಟಿಲ್ಲ, ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಆದ್ಯತೆ ನೀಡಿಲ್ಲ, ವಿಬಿ ಜಿ ರಾಮ್ ಜಿ ಯೋಜನೆಗೆ 95,692 ಕೋಟಿ ಇಟ್ಟಿದ್ದಾರೆ, ವಿಜಿಎಫ್ ವಯಾ ಗ್ಯಾಪ್ ಫಂಡಿಂಗ್ ಮೂಲಕ ಹಾಸ್ಟೆಲುಗಳನ್ನು ನಿರ್ಮಿಸುವುದಾಗಿ ಹೇಳಿದ್ದಾರೆ. ಆದರೆ ಅದಕ್ಕೆ ಅನುದಾನ ಒದಗಿಸಿಲ್ಲ, ರೈತರಿಗೆ ಮತ್ತು ಗ್ರಾಮೀಣ ಆರ್ಥಿಕತೆಗೆ ಹೆಚ್ಚಿನ ಆದ್ಯತೆ ಇಲ್ಲ, ಕರ್ನಾಟಕದ ನೀರಾವರಿ ಯೋಜನೆಗಳ ಬಗ್ಗೆ ಪ್ರಸ್ತಾಪವಿಲ್ಲ,  ತೆಂಗು ಬೆಳೆಗಾರರಿಗೆ ಆದ್ಯತೆ ನೀಡುವುದಾಗಿ ಹೇಳಿ ಘೋಷಿಸಿದ್ದಾರೆ. ಆದರೆ ಅದಕ್ಕೂ ಅನುದಾನ ಒದಗಿಸಿಲ್ಲ,  ಮಾಧ್ಯಮಗಳಲ್ಲಿ ಹೆಡ್ ಲೈನ್ಸ್ ಗೋಸ್ಕರ ಬಯೋಫಾರ್ಮ ಶಕ್ತಿ ಘೋಷಿಸಿ, ಕೇವಲ 500 ಕೋಟಿ ರೂ. ಬಜೆಟ್ ನಲ್ಲಿ ಒದಗಿಸಿದ್ದಾರೆ ಎಂದು ಹೇಳಿದ್ದಾರೆ. 

ಈ ಬಜೆಟ್‌ನಲ್ಲಿ ಹಲವು ಬಾರಿ ಇಂಡಿಯಾ ಎಐ ಮಿಷನ್ ಬಗ್ಗೆ ಉಲ್ಲೇಖ ಮಾಡಿದರು. ಕಳೆದ ಬಜೆಟ್ ನಲ್ಲಿ ಇದಕ್ಕಾಗಿ 2000 ಕೋಟಿ ರೂ. ಒದಗಿಸಿದ್ದರೆ, ಈ ಬಾರಿ ಅದನ್ನು 1000 ಕೋಟಿ ರೂ.ಗೆ ಇಳಿಸಿದ್ದಾರೆ. ಬೆಂಗಳೂರು ಮೆಟ್ರೋ, ಸಬ್ ಅರ್ಬನ್ ರೈಲುಗಳ ಕುರಿತು ಯಾವುದೇ ಉಲ್ಲೇಖಗಳಿಲ್ಲ, ಒಟ್ಟಾರೆ ಈ ಬಜೆಟ್ಟಿನಲ್ಲಿ ದೊಡ್ಡ ದೊಡ್ಡ ಮಾತನಾಡಿದ್ದಾರೆ. ಆದರೆ, ಅದಕ್ಕೆ ಅನುದಾನ ಒದಗಿಸಿಲ್ಲ. ಯಾವುದೇ ದೂರದೃಷ್ಟಿಯೂ ಇಲ್ಲ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ. 

ಇನ್ನು ಹಣಕಾಸು ಆಯೋಗದ ವರದಿಯ ಶಿಫಾರಸ್ಸಿನ ಆಧಾರದ ಮೇಲೆ 2025-26 ರಲ್ಲಿ ದೇಶದ ಎಲ್ಲಾ ರಾಜ್ಯಗಳಿಗೆ SDRF ನಲ್ಲಿ 24,257 ಕೋಟಿ ಕೊಟ್ಟಿದ್ದರು. 2026-27 ರ ಬಜೆಟ್‌ನಲ್ಲಿ 22,574 ಕೋಟಿ ರೂ. ಮೀಸಲಿರಿಸಿದ್ದಾರೆ. SDMF ನಲ್ಲಿ 9250 ಕೋಟಿ ರೂ. ಕಳೆದ ವರ್ಷ ಇಟ್ಟಿದ್ದರೆ ಈ ವರ್ಷ 5641 ಕೋಟಿ ರೂ.ಗೆ ಇಳಿಸಿದ್ದಾರೆ. ನಿರಾಶೆಯ ವಿಚಾರವೆಂದರೆ 2025-26 ರಲ್ಲಿ ಆರೋಗ್ಯ ವಲಯಕ್ಕೆ 25,171 ಕೋಟಿ ರೂ. ಅನುದಾನ ಒದಗಿಸಿದ್ದು, 2026-27 ಕ್ಕೆ ಒಂದು ನಯಾಪೈಸೆಯಷ್ಟೂ ಕೊಟ್ಟಿಲ್ಲ ಎಂದು ತಿಳಿಸಿದ್ದಾರೆ. 

ಅಲ್ಲದೇ ಕರ್ನಾಟಕವು ದೇಶದ ಜಿಡಿಪಿಗೆ 8.7 ರಷ್ಟು ಕೊಡುಗೆ ನೀಡುತ್ತಿದೆ. ತಲಾವಾರು ತೆರಿಗೆ ಸಂಗ್ರಹದಲ್ಲಿ ಮೊದಲ ಸ್ಥಾನದಲ್ಲಿದೆ. 14ನೇ ಹಣಕಾಸು ಆಯೋಗದಿಂದ 1.25 ಲಕ್ಷ ಕೋಟಿ ರೂ. ಗಳಷ್ಟು ನಷ್ಟವಾಯಿತು. ಜಿಎಸ್‌ಟಿ ಪರಿಹಾರದಲ್ಲಿ ಪ್ರತಿ ವರ್ಷ 20000 ಕೋಟಿ ರೂ.ಗೂ ಹೆಚ್ಚು ನಷ್ಟವಾಗುತ್ತಿದೆ. ಇಷ್ಟಿದ್ದರೂ ಕೂಡ ನಮಗೆ ಹೆಚ್ಚು ನ್ಯಾಯ ಸಿಕ್ಕಿಲ್ಲ,  ಒಟ್ಟಾರೆ, ಈ ಬಜೆಟ್ ರಾಜ್ಯದ ದೃಷ್ಟಿಯಿಂದ ಯಾವುದೇ ಮಹತ್ವವಿಲ್ಲದ ಬಜೆಟ್ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ. 

16ನೇ ಹಣಕಾಸು ಆಯೋಗ

ಇನ್ನೂ 16 ನೇ ಹಣಕಾಸು ಆಯೋಗದ ಶಿಫಾರಸುಗಳಲ್ಲಿ ಕೂಡ ರಾಜ್ಯಕ್ಕೆ ಅನ್ಯಾಯವಾಗಿದೆ. 14 ನೇ ಹಣಕಾಸು ಆಯೋಗದ ವರದಿಯಲ್ಲಿ ರಾಜ್ಯಕ್ಕೆ ಶೇ. 4.71 ರಷ್ಟು ತೆರಿಗೆ ಪಾಲು ಸಿಕ್ಕಿತ್ತು. ಆದರೆ 14ನೇ ಹಣಕಾಸು ಆಯೋಗದಲ್ಲಿ ಅದು ಶೇ. 3.64 ಕ್ಕೆ ಇಳಿದ ಕಾರಣ ನಮಗೆ ಶೇ.23 ರಷ್ಟು ನಷ್ಟವಾಗಿತ್ತು. ಈ ಕಾರಣದಿಂದ ರಾಜ್ಯಕ್ಕೆ ಕನಿಷ್ಟ 14ನೇ ಹಣಕಾಸು ಆಯೋಗ ಕೊಟ್ಟ ತೆರಿಗೆ ಪಾಲಿಗಿಂತ ಹೆಚ್ಚಿನ ಪಾಲು ಕೊಟ್ಟರೆ ಮಾತ್ರ ನ್ಯಾಯ ಸಿಗುತ್ತದೆ ಎಂದು ಹೇಳಿದ್ದವು. ಹಲವು ಬಾರಿ ಚರ್ಚಿಸಿ ಮೆಮೊರಾಂಡಮ್ ಸಲ್ಲಿಸಿದ್ದೆವು. ಆದರೆ ನಾವು ನಿರೀಕ್ಷಿಸಿದ ಫಲಿತಾಂಶ ನಮಗೆ ಸಿಕ್ಕಿಲ್ಲ. 16 ನೇ ಹಣಕಾಸು ಆಯೋಗವು ಶೇ.4.131 ರಷ್ಟು ಪಾಲನ್ನು ನಮಗೆ ಹಂಚಿಕೆ ಮಾಡಿದೆ. 14 ನೇ ಹಣಕಾಸು ಆಯೋಗಕ್ಕೆ ಹೋಲಿಸಿದರೆ ಇನ್ನೂ ಶೇ. 0.58 ರಷ್ಟು ಕಡಿಮೆಯೇ ಇದೆ. 14 ನೇ ಹಣಕಾಸು ಆಯೋಗಕ್ಕೆ ಹೋಲಿಸಿದರೆ ಶೇ.14.1 ರಷ್ಟು ಕಡಿಮೆ ಹಂಚಿಕೆ ಮಾಡಿದ್ದಾರೆ.

15ನೇ ಹಣಕಾಸು ಆಯೋಗವು ತೆರಿಗೆ ಪಾಲಿನಲ್ಲಿ ಸ್ವಲ್ಪ ಹೆಚ್ಚಿಗೆ ಕೊಟ್ಟಂತೆ ಮಾಡಿ ಪ್ರಕೃತಿ ವಿಕೋಪ ನಿಧಿಯಡಿ ನಮಗೆ ಬಹಳ ಅನ್ಯಾಯವಾಗಿದೆ. 2026-27 ರಿಂದ 2030-21 ರವರೆಗೆ SDRF ಗೆ 5135 ಕೋಟಿ ರೂ. ಮಾತ್ರ ಹಂಚಿಕೆಯಾಗಿದೆ. ಮಹಾರಾಷ್ಟ್ರಕ್ಕೆ 31,597 ಕೋಟಿ ರೂ., ಮಧ್ಯ ಪ್ರದೇಶಕ್ಕೆ 12,847 ಕೋಟಿ ರೂ., ಉತ್ತರ ಪ್ರದೇಶಕ್ಕೆ 16,342 ಕೋಟಿ ರೂ. ಕೊಟ್ಟಿದ್ದಾರೆ. SDMF ನಿಧಿಯಲ್ಲಿ ಕರ್ನಾಟಕಕ್ಕೆ 5 ವರ್ಷಗಳಲ್ಲಿ 1712 ಕೋಟಿ ರೂ., ಮಹಾರಾಷ್ಟ್ರಕ್ಕೆ 7895 ಕೋಟಿ ರೂ. ಕೊಟ್ಟಿದ್ದಾರೆ. ಮಹಾರಾಷ್ಟ್ರಕ್ಕೆ 23,697 ಕೋಟಿ ರೂ., ಗುಜರಾತ್‌ಗೆ 6766 ಕೋಟಿ ರೂ., ಮಧ್ಯ ಪ್ರದೇಶಕ್ಕೆ 9357 ಕೋಟಿ ರೂ., ಹಾಗೂ ಉತ್ತರ ಪ್ರದೇಶಕ್ಕೆ 12256 ಕೋಟಿ ರೂ. ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ. 

ಹಾಗೇ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಕೂಡ ನಾವು ನಿರೀಕ್ಷಿಸಿದಷ್ಟು ಕೊಟ್ಟಿಲ್ಲ, ನಾವು ನೀರಾವರಿ ಯೋಜನೆಗಳಿಗೆ, ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ, ಬೆಂಗಳೂರು ಅಭಿವೃದ್ಧಿಗೆ, ಮಲೆನಾಡು-ಕರಾವಳಿ ಅಭಿವೃದ್ಧಿಗೆ ವಿಶೇಷ ನೆರವು ಕೋರಿದ್ದೆವು. ಈ ಕುರಿತಂತೆ ಯಾವುದೇ ಶಿಫಾರಸ್ಸುಗಳಿಲ್ಲ ಎಂದಿರುವ ಸಿದ್ದರಾಮಯ್ಯ ತೆರಿಗೆ ಹಂಚಿಕೆಯ ಪ್ರಮಾಣವನ್ನು ಶೇ.41 ರಿಂದ ಶೇ.50 ಕ್ಕೆ ಹೆಚ್ಚಿಸಬೇಕೆಂದು ಒತ್ತಾಯಿಸಿದ್ದೆವು. (ಶೇ.41 ರಷ್ಟನ್ನೆ ಉಳಿಸಿದ್ದಾರೆ.) ಬೆಂಗಳೂರಿಗೆ ರೂ. 27093 ಕೋಟಿ ಹಾಗೂ ಉಳಿದ ಭಾಗಗಳಿಗೆ ಅನುದಾನ ಘೋಷಿಸುವಂತೆ ಕೇಳಿದ್ದೆವು. ಸೆಸ್ ಅನ್ನು ಶೇ.5ಕ್ಕೆ ಮಿತಿಗೊಳಿಸುವಂತೆ ಕೇಳಿದ್ದವು. ಈ ಒತ್ತಾಯಗಳನ್ನು ಹಣಕಾಸು ಆಯೋಗವು ಪರಿಗಣಿಸದಿರುವುದು ದುರದೃಷ್ಟಕರ ಎಂದಿದ್ದಾರೆ. 

ಇನ್ನು ಕೇಂದ್ರದ 2026ರ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿರುವ ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಹ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಮಂಡಿಸಿದ 2026 ರ ಕೇಂದ್ರ ಬಜೆಟ್ ನಿಂದ ರಾಜ್ಯಕ್ಕೆ ಯಾವುದೇ ಪ್ರಯೋಜನವಿಲ್ಲ ಎಂದಿದ್ದಾರೆ. 

ಈ ಬಾರಿಯ ಬಜೆಟ್ ನಲ್ಲಿ ರೈತರಿಗಾಗಿರುವ ಅನ್ಯಾಯದ ಬಗ್ಗೆ ಮಾತನಾಡಿರುವ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಧ್ಯಕ್ಷರಾಗಿರುವ ಬಡಗಲಪುರ ನಾಗೇಂದ್ರ ಅವರು ಸಹ 2026-27 ಸಾಲಿನ ಬಜೆಟ್ ದೇಶದ ಅಭಿವೃದ್ಧಿಗೆ ಪೂರಕವಾಗಿಲ್ಲ ಎಂದಿದ್ದಾರೆ. 

ಇದು ಯಾವುದೇ ಹೊಸ ಭರವಸೆ ಹುಟ್ಟು ಹಾಕದ ಬಜೆಟ್ ಎಂದಿರುವ ಅವರು 9 ನೇ ಬಾರಿಗೆ ದೇಶದ ಬಜೆಟ್ ಅನ್ನು ಮಂಡಿಸಿರುವ ನಿರ್ಮಲಾ ಸೀತಾರಾಮನ್ ಮತ್ತೊಂದು ಠುಷ್ ಪಟಾಕಿ ಹಾರಿಸಿದ್ದಾರೆ ಎಂದು ಕಿಡಿ ಕಾರಿದ್ದಾರೆ. 

ಅಲ್ಲದೇ ಈ ಸಾಲಿನ ಬಜೆಟ್ ನಲ್ಲೂ ಕೃಷಿಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಗಿದೆ. ಕಳೆದ ಸಾಲಿನ ಬಜೆಟ್ ನಲ್ಲಿ ಕೃಷಿಗೆ 1.70 ಲಕ್ಷ ಕೋಟಿ ನೀಡಲಾಗಿತ್ತು ಆದರೆ ಈ ಸಾಲಿನಲ್ಲಿ ಕೇವಲ 1.62 ಲಕ್ಷಕ್ಕೆ ಇಳಿಸಿ ಕೃಷಿ ಕ್ಷೇತ್ರಕ್ಕೆ ಅನ್ಯಾಯ ಮಾಡಲಾಗಿದೆ. ಕಬ್ಬು ಬೆಳಗಾರರ ನಿರೀಕ್ಷೆ ಹುಸಿಯಾಗಿದೆ ಗ್ರಾಮೀಣ ಮೂಲಭೂತ ಸೌಕರ್ಯಗಳಿಗೂ ಒತ್ತು ನೀಡದೆ ಗ್ರಾಮೀಣ ಅಭಿವೃದ್ಧಿಗೆ ಕಾರ್ಯಕ್ರಮಗಳೇ ಬಜೆಟ್ ನಲ್ಲಿ ಇಲ್ಲ ಎಂದಿರುವ ರೈತ ನಾಯಕ ಎನ್.ಡಿ.ಎ ಅಂಗ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಿಗೆ ಹೆಚ್ಚು ಅನುದಾನ ನೀಡಿರುವ ಮೋದಿ ಬಜೆಟ್ ರಾಜ್ಯವನ್ನು ನಿರ್ಲಕ್ಷ್ಯ ಮಾಡಲಾಗಿದೆ, ದಕ್ಷಿಣ ಭಾರತವನ್ನು ಮರೆತಿದೆ. ಈ ಬಜೆಟ್ ದೇಶದ ಸಾಲದ ಒರೆಯನ್ನು ಹೆಚ್ಚಿಸಿದೆ ಎಂದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲಂಚ ಪಡೆಯುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕ; ಲೋಕಾಯುಕ್ತ ಪೊಲೀಸರಿಂದ ಚಂದ್ರು ಲಮಾಣಿ ಬಂಧನ

ಲಂಚ ಪಡೆಯುವಾಗಲೇ ಲೋಕಾಯುಕ್ತ ಪೊಲೀಸರು ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಗುತ್ತಿಗೆದಾರ ವಿಜಯ್ ಪೂಜಾರ್ ಅವರ ದೂರಿನ ಮೇರೆಗೆ ಗದಗ ಲೋಕಾಯುಕ್ತ ಪೊಲೀಸರು ನಡೆಸಿದ...

ಎಐ ಶೃಂಗಸಭೆಯಲ್ಲಿ ಪ್ರತಿಭಟನೆ : ನಾಲ್ವರು ಯುವ ಕಾಂಗ್ರೆಸ್‌ ಕಾರ್ಯಕರ್ತರು 5 ದಿನ ಪೊಲೀಸ್ ಕಸ್ಟಡಿಗೆ

ನವದೆಹಲಿಯ ಭಾರತ ಮಂಟಪದಲ್ಲಿ ಆಯೋಜಿಸಿದ್ದ ಎಐ ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಪ್ರತಿಭಟಿಸಿದ್ದ ನಾಲ್ವರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ದೆಹಲಿ ನ್ಯಾಯಾಲಯ ಶನಿವಾರ (ಫೆ.21) 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ದೆಹಲಿ ಪೊಲೀಸರು...

ಮೈಮೇಲೆ ದೇವರು ಬಂದಂತೆ ನಟಿಸಿ ದಲಿತ ನವದಂಪತಿ ದೇವಸ್ಥಾನ ಪ್ರವೇಶ ನಿರಾಕರಣೆ: ವ್ಯಕ್ತಿ ಬಂಧನ

ಮೈಮೇಲೆ ದೇವರು ಬಂದಂತೆ ನಾಟಕವಾಡಿದ ವ್ಯಕ್ತಿಯೊಬ್ಬ, ದೇವಸ್ಥಾನಕ್ಕೆ ಬಂದಿದ್ದ ದಲಿತ ನವದಂಪತಿಯನ್ನು ಹೊರಗೆ ಕಳುಹಿಸುವ ಮೂಲಕ ಅಸ್ಪೃಶ್ಯತೆ ಆಚರಣೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಗೋಣಿ ತುಮಕೂರಿನಲ್ಲಿ (ಫೆ.20) ನಡೆದಿದೆ. ಗೃಹ...

ಜಾತಿವಾದಿ ಹೇಳಿಕೆ: ಜೆಎನ್‌ಯು ಉಪಕುಲಪತಿ ರಾಜೀನಾಮೆಗೆ ವಿದ್ಯಾರ್ಥಿ ಸಂಘ ಆಗ್ರಹ

ದೆಹಲಿಯ ಜವಾಹರಲಾಲ್ ನೆಹರು ವಿಶ್ವ ವಿದ್ಯಾಲಯದ (ಜೆಎನ್‌ಯು) ಉಪಕುಲಪತಿ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರು 'ದ ಸಂಡೇ ಗಾರ್ಡಿಯನ್' ಯೂಟ್ಯೂಬ್‌ ಚಾನೆಲ್‌ನ ಪಾಡ್‌ಕಾಸ್ಟ್‌ನಲ್ಲಿ 'ಜಾತಿ ಮತ್ತು ವಿಕ್ಟಿಮ್ ಕಾರ್ಡ್' ಕುರಿತು ನೀಡಿದ ಹೇಳಿಕೆ...

10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ : ದಂಪತಿಗೆ ಮರಣದಂಡನೆ

ಸುಮಾರು 10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ದಂಪತಿಗೆ ಮರಣದಂಡನೆ ವಿಧಿಸಿ ಉತ್ತರ ಪ್ರದೇಶದ ಬಂಡಾ ವಿಶೇಷ ಪೋಕ್ಸೋ ನ್ಯಾಯಾಲಯ ಶುಕ್ರವಾರ (ಫೆ.20) ಆದೇಶಿಸಿದೆ. ಉತ್ತರ ಪ್ರದೇಶದ...

ರಾಜ್ಯಸಭೆ ಚುನಾವಣೆ : ಬಿಹಾರದಲ್ಲಿ ಕಿಂಗ್ ಮೇಕರ್ ಆದ ಓವೈಸಿ ಪಕ್ಷ

ಮಾರ್ಚ್ 16ರಂದು ನಡೆಯಲಿರುವ ಬಿಹಾರದ ಐದು ರಾಜ್ಯಸಭಾ ಸ್ಥಾನಗಳ ಚುನಾವಣೆಯಲ್ಲಿ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷವು 'ಕಿಂಗ್ ಮೇಕರ್' ಆಗಿ ಹೊರಹೊಮ್ಮಿದೆ. ಬಿಹಾರದಲ್ಲಿ ಒಂದು ರಾಜ್ಯಸಭಾ ಸ್ಥಾನ ಗೆಲ್ಲಲು ಕನಿಷ್ಠ...

ದೆಹಲಿ : ಪ್ರಧಾನಿ ಮನೆ ಬಳಿಯ ಕೊಳಗೇರಿಗಳ 717 ಕುಟುಂಬಗಳಿಗೆ ಮನೆ ಖಾಲಿ ಮಾಡುವಂತೆ ನೋಟಿಸ್

ನವದೆಹಲಿಯ ಪ್ರಧಾನಿ ನಿವಾಸದ ಬಳಿಯ ಮೂರು ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಏಳುನೂರ ಹದಿನೇಳು ಕುಟುಂಬಗಳು ಮಾರ್ಚ್ 6ರೊಳಗೆ ತಮ್ಮ ಮನೆಗಳನ್ನು ಖಾಲಿ ಮಾಡುವಂತೆ ಸೂಚಿಸಲಾಗಿದೆ. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಲು ಸಿದ್ದರಾಗುವಂತೆ ಎಚ್ಚರಿಕೆ ನೀಡಲಾಗಿದೆ...

ಹೊಸ ಅಸ್ತ್ರ ಪ್ರಯೋಗಿಸಿದ ಟ್ರಂಪ್ : ಎಲ್ಲಾ ರಾಷ್ಟ್ರಗಳ ಆಮದು ಮೇಲೆ ಶೇ.10ರಷ್ಟು ಜಾಗತಿಕ ಸುಂಕ ಘೋಷಣೆ

ಎಲ್ಲಾ ದೇಶಗಳ ಆಮದುಗಳ ಮೇಲೆ ಹೊಸದಾಗಿ ಶೇಕಡ 10 ಸುಂಕ ವಿಧಿಸುವ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ಘೋಷಿಸಿದ್ದಾರೆ. ಇದಕ್ಕೂ ಕೆಲ ಗಂಟೆಗಳ ಮೊದಲು,...

ಭಾರತದೊಂದಿಗಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಇಲ್ಲ: ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಟ್ರಂಪ್ ಹೇಳಿಕೆ

ಅಮೆರಿಕ ಸುಪ್ರೀಂ ಕೋರ್ಟ್ ಪ್ರತಿ ಸುಂಕ (Reciprocal tariffs) ನೀತಿಯನ್ನು ರದ್ದುಗೊಳಿಸಿದರೂ, ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ತಿಳಿಸಿದ್ದಾರೆ. ಶ್ವೇತಭವನದಲ್ಲಿ...

ಗುಜರಾತ್: ‘ಲವ್ ಜಿಹಾದ್’ ತಡೆಗೆ ವಿವಾಹ ನೋಂದಣಿ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುತ್ತೇವೆ; ಡಿಸಿಎಂ ಹರ್ಷ ಸಾಂಘವಿ ಘೋಷಣೆ

ಅಹಮದಾಬಾದ್: ಗುಜರಾತ್‌ನ ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಶುಕ್ರವಾರ, ರಾಜ್ಯ ಸರ್ಕಾರವು ವಿವಾಹ ನೋಂದಣಿ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ತರಲಿದೆ ಎಂದು ಘೋಷಿಸಿದ್ದು, "ಸಮಾಜ ವಿರೋಧಿ ಶಕ್ತಿಗಳು", ವಿಶೇಷವಾಗಿ ಗುಜರಾತ್‌ನ ಹೆಣ್ಣುಮಕ್ಕಳನ್ನು "ಲವ್ ಜಿಹಾದ್" ಗಾಗಿ...