ಕೇಂದ್ರ ಸರ್ಕಾರ ಮಂಗಳವಾರ, ಜೂನ್ 8 ರಂದು ಉತ್ತರ ಪ್ರದೇಶ ಮೂಲದ ನಿವೃತ್ತ IAS ಅಧಿಕಾರಿ ಅನುಪ್ ಚಂದ್ರ ಪಾಂಡೆ ಅವರನ್ನು ಚುನಾವಣಾ ಆಯುಕ್ತರನ್ನಾಗಿ ಆಯ್ಕೆ ಮಾಡಿದೆ.
ನಿವೃತ್ತ ಮುಕ್ತ ಚುನಾವಣಾ ಆಯುಕ್ತ ಸುನಿಲ್ ಅರೋರಾ ಅವರಿಂದ ತೆರವಾದ ಸ್ಥಾನಕ್ಕೆ ಚುನಾವಣಾ ಆಯುಕ್ತರಾಗಿದ್ದ ಸುಶೀಲ್ ಚಂದ್ರ ಅವರನ್ನು ನೇಮಕ ಮಾಡಲಾಗಿತ್ತು. ನಂತರ 3 ತಿಂಗಳ ಕಾಲ ಸುಶೀಲ್ ಚಂದ್ರ ಅವರಿಂದ ತೆರವಾದ ಚುನಾವಣಾ ಆಯುಕ್ತರ ಸ್ಥಾನಕ್ಕೆ ಯಾರನ್ನು ನೇಮಕ ಮಾಡಿರಲಿಲ್ಲ. ಈಗ ಅನುಪ್ ಚಂದ್ರ ಪಾಂಡೆ ಚುನವಣಾ ಆಯುಕ್ತರಾಗಿ ಆ ಸ್ಥಾನವನ್ನು ತುಂಬಲಿದ್ದಾರೆ.
ಏಪ್ರಿಲ್ 12 ರಂದು ಸುನೀಲ್ ಅರೋರಾ ನಿವೃತ್ತಿಯ ನಂತರ 3 ತಿಂಗಳ ಕಾಲ ಚುನಾವಣಾ ಆಯೋಗದ 3 ಜನರ ಉನ್ನತ ಸಮಿತಿ ಅಪೂರ್ಣವಾಗಿತ್ತು. ಉತ್ತರ ಪ್ರದೇಶ, ಪಂಜಾಬ್, ಗೋವಾ, ಮಣಿಪುರ ಮತ್ತು ಉತ್ತರ ಖಂಡ ರಾಜ್ಯಗಳ ವಿಧಾನಸಭೆಗಳಿಗೆ ಮುಂದಿನ ವರ್ಷ ಚುನಾವಣೆಗಳು ನಡೆಯಲಿದ್ದು ಹೊಸ ಚುನಾವಣಾ ಆಯುಕ್ತರ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ.
ಇದನ್ನೂ ಓದಿ: ರೈತ ಹೋರಾಟ ತೀವ್ರಗೊಳಿಸಲು ನಿರ್ಧಾರ: ಮಮತಾ ಬ್ಯಾನರ್ಜಿ ಭೇಟಿಯಾಗಲಿರುವ ರಾಕೇಶ್ ಟಿಕಾಯತ್
1984 ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಅನುಪ್ ಚಂದ್ರ ಪಾಂಡೆ ಹಿಂದೆ ಉತ್ತರ ಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. 2019 ರಲ್ಲಿ ಸೇವೆಯಿಂದ ನಿವೃತ್ತಿಯಾಗಿರುವ ಅವರು ಬಿಟೆಕ್(ಮೆಕಾನಿಕಲ್ ಇಂಜಿನಿಯರಿಂಗ್), ಎಂಬಿಎ ಮತ್ತು ಡಾಕ್ಟರೇಟ್ ಪದವಿಗಳನ್ನು ಪಡೆದಿದ್ದಾರೆ. ಈ ಹಿಂದೆ ಉತ್ತರ ಪ್ರದೇಶದ ಕೈಗಾರಿಕಾ ಅಭಿವೃದ್ಧಿ ಮಂಡಳಿಯ ಆಯುಕ್ತರಾಗಿ ಕಾರ್ಯ ನಿರ್ವಹಿಸಿದ್ದರು.
2024 ರ ವರೆಗೆ ಅಂದರೆ 3 ವರ್ಷಗಳ ಕಾಲ ಅನುಪ್ ಚಂದ್ರ ಪಾಂಡೆಯವರ ಸೇವಾವಧಿಯಿದ್ದು, ಈ ಅವಧಿಯಲ್ಲಿ ಹಲವು ಮುಖ್ಯ ಚುನಾವಣೆಗಳು ಭಾರತದಲ್ಲಿ ನಡೆಯಲಿವೆ.
ಇದನ್ನೂ ಓದಿ: ಬಿಜೆಪಿಯಲ್ಲಿ ಪರ್ಯಾಯ ನಾಯಕರಿಲ್ಲ, ನಾಯಕತ್ವ ದಿವಾಳಿಯಾಗಿದೆ: ಸಿದ್ದರಾಮಯ್ಯ


