Homeಮುಖಪುಟಬಿಜೆಪಿಯಲ್ಲಿ ಪರ್ಯಾಯ ನಾಯಕರಿಲ್ಲ, ನಾಯಕತ್ವ ದಿವಾಳಿಯಾಗಿದೆ: ಸಿದ್ದರಾಮಯ್ಯ

ಬಿಜೆಪಿಯಲ್ಲಿ ಪರ್ಯಾಯ ನಾಯಕರಿಲ್ಲ, ನಾಯಕತ್ವ ದಿವಾಳಿಯಾಗಿದೆ: ಸಿದ್ದರಾಮಯ್ಯ

- Advertisement -
- Advertisement -

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜೀನಾಮೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಯಡಿಯೂರಪ್ಪ ಅವರನ್ನು ಕಿತ್ತುಹಾಕಲು ಹೈಕಮಾಂಡ್, ರಾಜ್ಯದ ನಾಯಕರು ಸಿದ್ದರಿದ್ದಾರೆ. ಆದರೆ ಪರ್ಯಾಯ ನಾಯಕರು ಆ ಪಕ್ಷದಲ್ಲಿ ಇಲ್ಲ ಎಂದಿದ್ದಾರೆ.

‘ರಾಜ್ಯದ ಜನರ ಹಿತ ಕಾಪಾಡಲು ವಿಫಲವಾಗಿರುವ ಬಿ.ಎಸ್ ಯಡಿಯೂರಪ್ಪ ಅವರು ಒಬ್ಬ ಅಸಮರ್ಥ, ವಿಫಲ ಮುಖ್ಯಮಂತ್ರಿ. ಅವರನ್ನು ಬದಲಾವಣೆ ಮಾಡುವುದರಿಂದ ಪಾಪ ತೊಳೆದುಕೊಳ್ಳಬಹುದು ಎಂದು ಬಿಜೆಪಿ ಹೈಕಮಾಂಡ್ ತಿಳಿದುಕೊಂಡಿದೆ. ಆದರೆ ಪೂರ್ತಿ ಬಸ್ ಕೆಟ್ಟುಹೋಗಿರುವ ಕಾರಣ ಡ್ರೈವರ್ ಬದಲಾಯಿಸಿದರೆ ಏನೂ ಪ್ರಯೋಜನವಾಗದು’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

’ಬಿಜೆಪಿಗೆ ಬಿ.ಎಸ್.ಯಡಿಯೂರಪ್ಪ ಬೇಡದ ಕೂಸಾಗಿದ್ದಾರೆ, ಕಿತ್ತುಹಾಕಲು ಹೈಕಮಾಂಡ್ ಸಿದ್ಧ ಇದೆ, ರಾಜ್ಯದ ನಾಯಕರು ಕೂಡಾ ಕೊಡವಿಕೊಳ್ಳಲು ಸಿದ್ಧ ಇದ್ದಾರೆ. ಯಡಿಯೂರಪ್ಪ ನಿರ್ಗಮನದ ನಂತರ ಪಕ್ಷದ ಸ್ಥಿತಿ ಏನಾಗಬಹುದೆಂಬ ಚಿಂತೆ ಅವರಿಗೆ. ಪರ್ಯಾಯ ನಾಯಕರು ಆ ಪಕ್ಷದಲ್ಲಿ ಇಲ್ಲ, ನಾಯಕತ್ವ ದಿವಾಳಿಯಾಗಿದೆ. ಅದಕ್ಕೆ ಒದ್ದಾಡುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ಯಡಿಯೂರಪ್ಪ ಗಟ್ಟಿ ಮನುಷ್ಯ, ಸಿಎಂ ಹೇಳಿಕೆಯನ್ನು 2-3 ರೀತಿಯಲ್ಲಿ ವಿಶ್ಲೇಷಿಸಬಹುದು- ಡಿ.ಕೆ.ಶಿವಕುಮಾರ್‌

 

’ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ತಮ್ಮ ಸ್ಥಾನ ಉಳಿಸಿಕೊಳ್ಳಲು ಬಗೆಬಗೆಯ ಕಸರತ್ತು ನಡೆಸುತ್ತಿದ್ದಾರೆ. ಒಂದೆಡೆ ಹೈಕಮಾಂಡ್ ಹೇಳಿದ ಕೂಡಲೇ ರಾಜೀನಾಮೆ ಕೊಡ್ತೀನಿ ಅಂತಾರೆ, ಇನ್ನೊಂದೆಡೆ ತಮ್ಮ ರಾಜಕೀಯ ಕಾರ್ಯದರ್ಶಿ ಮೂಲಕ ಶಾಸಕರ ಸಹಿ ಸಂಗ್ರಹಿಸುತ್ತಿದ್ದಾರೆ. ಅವರಿಗೆ ರಾಜ್ಯದ ಚಿಂತೆ ಇಲ್ಲ, ಕುರ್ಚಿ ಉಳಿಸಿಕೊಳ್ಳುವುದೇ ಚಿಂತೆಯಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

’ರಾಜ್ಯ ಸರ್ಕಾರ ಈವರೆಗೆ ಸರಿಯಾಗಿ 1 ಸಾವಿರ ಕೋಟಿಯನ್ನು ಪರಿಹಾರವಾಗಿ ನೀಡಿಲ್ಲ, ಕೇವಲ ತೋರಿಕೆಗಾಗಿ ಕೆಲವರಿಗೆ ಪರಿಹಾರ ನೀಡಿದ್ದಾರೆ. ಎಲ್ಲಾ ಬಿ.ಪಿ.ಎಲ್ ಕಾರ್ಡುದಾರರಿಗೆ ತಲಾ ಹತ್ತು ಕೆ.ಜಿ ಅಕ್ಕಿ ಮತ್ತು ರೂ.10,000 ಪರಿಹಾರ ನೀಡಿದ್ದರೆ ನಿಜವಾದ ಪರಿಹಾರವಾಗುತ್ತಿತ್ತು’ ಎಂದು ಹೇಳಿದ್ದಾರೆ.

’ರಾಜಕಾರಣದಲ್ಲಿ ನಾನಾ ತಂತ್ರಗಾರಿಕೆ ಇರುತ್ತವೆ. ಹಾಗೆಯೇ ಯಡಿಯೂರಪ್ಪನವರ ರಾಜೀನಾಮೆ ಕುರಿತ ಹೇಳಿಕೆ ಹಿಂದೆ ಬೇರೆಯದೇ ತಂತ್ರಗಾರಿಕೆ ಇದೆ. ಯಡಿಯೂರಪ್ಪ ಗಟ್ಟಿ ಮನುಷ್ಯ, ಅವರ ಹೇಳಿಕೆಯನ್ನು ಎರಡು-ಮೂರು ರೀತಿಯಲ್ಲಿ ವಿಶ್ಲೇಷಿಸಬಹದು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯಿಸಿದ್ದರು.


ಇದನ್ನೂ ಓದಿ: ರೈತ ಹೋರಾಟ ತೀವ್ರಗೊಳಿಸಲು ನಿರ್ಧಾರ: ಮಮತಾ ಬ್ಯಾನರ್ಜಿ ಭೇಟಿಯಾಗಲಿರುವ ರಾಕೇಶ್‌ ಟಿಕಾಯತ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...