Homeಮುಖಪುಟಮೋದಿ, ಹಿಂದುತ್ವದ ಕಟು ಟೀಕಾಕಾರನನ್ನು ಸಲಹೆಗಾರನನ್ನಾಗಿ ನೇಮಿಸಿಕೊಂಡ ಶಿವರಾಜ್ ಚೌಹಾಣ್: ಟೀಕೆ ನಂತರ ಹಿಂದೆ ಸರಿದ...

ಮೋದಿ, ಹಿಂದುತ್ವದ ಕಟು ಟೀಕಾಕಾರನನ್ನು ಸಲಹೆಗಾರನನ್ನಾಗಿ ನೇಮಿಸಿಕೊಂಡ ಶಿವರಾಜ್ ಚೌಹಾಣ್: ಟೀಕೆ ನಂತರ ಹಿಂದೆ ಸರಿದ ತುಷಾರ್ ಪಾಂಚಾಲ್‍

ಪಾಂಚಾಲ್‍ ಈ ಹಿಂದೆ ‘ಮೋದಿ ಪುಣ್ಯಶಾಲಿ, ಪ್ರಶ್ನೆ ಕೇಳಲು ವಿಪಕ್ಷ ನಾಯಕನಿಲ್ಲ, ಮನೆಯಲ್ಲಿ ಪತ್ನಿಯಿಲ್ಲ...’ ಎಂದು ಟ್ವೀಟ್ ಮಾಡಿದ್ದರು.

- Advertisement -
- Advertisement -

ಮಧ್ಯಪ್ರದೇಶ ಮುಖ್ಯಮಂತ್ರಿ ಬಿಜೆಪಿಯ ಶಿವರಾಜ್‌ ಸಿಂಗ್‍ ಚೌಹಾಣ್‌ರವರ ಸಂವಹನ (ಮಾಧ್ಯಮ) ಸಲಹೆಗಾರರಾಗಿ ತುಷಾರ್ ಪಾಂಚಾಲ್‍ ಅವರನ್ನು ಅಧಿಕೃತವಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ. ಅವರಿಗೆ ಆಫೀಸರ್ ಆನ್‍ ಸ್ಪೆಷಲ್‍ ಡ್ಯೂಟಿ (ಒಎಸ್‍ಡಿ) ಸ್ಥಾನಮಾನ ನೀಡಲಾಗಿತ್ತು. ಆದರೆ ಇಂದು ಮಧ್ಯಾಹ್ನ ತುಷಾರ್ ಪಾಂಚಾಲ್ ಆ ಹುದ್ದೆ ವಹಿಸಿಕೊಳ್ಳಲು ನಿರಾಕರಿಸಿದ್ದಾರೆ.

ಆದರೆ ಅವರನ್ನು ಕೂಡಲೇ ತೆಗೆದು ಹಾಕುವಂತೆ ಕಟ್ಟಾ ಆರ್ಎಸ್‍ಎಸ್‍ ಮತ್ತು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ, ಟ್ವೀಟರ್ ಅಭಿಯಾನವನ್ನೂ ಶುರು ಮಾಡಿದ್ದಾರೆ.

ಏಕೆ ಅಂತೀರಾ? ಹಿಂದೆಲ್ಲ ಮೋದಿ ಮತ್ತು ಹಿಂದುತ್ವದ ವಿರುದ್ಧ ಪಾಂಚಾಲ್‍ ಬರೆದಿದ್ದಾರೆ. ಅವರ ಟ್ವೀಟ್‍ಗಳಂತೂ ಮೋದಿ ಮತ್ತು ಹಿಂದುತ್ವವಾದಿಗಳನ್ನು ಮೊನಚಾಗಿ ತಿವಿಯುವಂತಿವೆ.

ಪಾಂಜಾಲ್ ಅವರ ಹಿಂದಿನ ‘ಹಿಂದುತ್ವ ವಿರೋಧಿ’ ಮತ್ತು ಮೋದಿ ವಿರೋಧಿ ಟ್ವೀಟ್‌ಗಳನ್ನು ಉಲ್ಲೇಖಿಸಿ ಬಿಜೆಪಿ, ಆರ್‌ಎಸ್‌ಎಸ್ ಮುಖಂಡರು, ಬೆಂಬಲಿಗರು ತುಷಾರ್ ಪಾಂಚಾಲ್ ಅವರನ್ನು ಒಎಸ್‌ಡಿ ಸ್ಥಾನದಿಂದ ತೆಗೆದುಹಾಕುವಂತೆ ಸಿಎಂ ಶಿವರಾಜ್ ಚೌಹಾಣ್ ಅವರನ್ನು ಒತ್ತಾಯಿಸಿದ್ದರು.

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ತುಷಾರ್ ಪಾಂಚಾಲ್ ಅವರನ್ನು ತಮ್ಮ ವಿಶೇಷ ಕರ್ತವ್ಯದ ಅಧಿಕಾರಿಯಾಗಿ (ಒಎಸ್‍ಡಿ) ನೇಮಕ ಮಾಡಿದ ಒಂದು ದಿನದ ನಂತರ, ಹಲವಾರು ಬಿಜೆಪಿ, ಆರೆಸ್ಸೆಸ್ ಮುಖಂಡರು ಮತ್ತು ಬೆಂಬಲಿಗರು ಟ್ವಿಟರ್‌ನಲ್ಲಿ ಅಭಿಯಾನವನ್ನು ಪ್ರಾರಂಭಿಸಿದ್ದಾರೆ.

ಅನೇಕರು, ಚೌಹಾಣರಿಗೆ ಪಾಂಚಾಲ್‍ರಂತಹ ಜನರು ಅಗತ್ಯವಿದೆಯೇ ಎಂದು ಪ್ರಶ್ನಿಸಿದ್ದಾರಲ್ಲದೇ, ಪಾಂಚಾಲ್‍ ಅವರನ್ನು “ಮೋದಿ ದ್ವೇಷಿ” ಎಂದೂ ಕರೆದಿದ್ದಾರೆ.

“ಸ್ನೇಹಿತರೇ, ನಿಮ್ಮಲ್ಲಿ ಹಲವರು ನನ್ನನ್ನು ಪರದೆಯ ಹಿಂದೆ ಇರುವ ವ್ಯಕ್ತಿ ಎಂದು ತಿಳಿದಿದ್ದೀರಿ. ನಾನು 2001ರಿಂದ ದೇಶಾದ್ಯಂತ ಅನೇಕ ಸಿಎಂಗಳು ಮತ್ತು ರಾಜಕೀಯ ಮುಖಂಡರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇನೆ” ಎಂದು ಪಾಂಚಾಲ್ ಸೋಮವಾರ ಟ್ವೀಟ್ ಮಾಡಿದ್ದಾರೆ.

“ಇಂದು, ನನ್ನ ಹಣೆಬರಹ ನನ್ನನ್ನು ಮುಖ್ಯಮಂತ್ರಿ ಚೌಹಾಣ್‍ ಅವರ ಸಂವಹನ ಸಲಹೆಗಾರನ ಕಚೇರಿಯಲ್ಲಿ ಇರಿಸಿದೆ. ದಯವಿಟ್ಟು ನನಗೆ ಶುಭ ಹಾರೈಸಿ. ಹೆಚ್ಚಿನ ವಿವರಗಳನ್ನು ನಂತರ ನೀಡುವೆ” ಎಂದು ಟ್ವೀಟ್‍ನಲ್ಲಿ ಕೋರಿದ್ದರು.

ಇದಾದ ನಂತರ, ದೆಹಲಿ ಬಿಜೆಪಿ ವಕ್ತಾರ ತಾಜಿಂದರ್ ಬಗ್ಗ ಅವರು ಪಾಂಚಾಲ್ ಅವರ ಹಳೆಯ ಟ್ವೀಟ್‌ನ ಸ್ಕ್ರೀನ್‌ಶಾಟ್ ಅನ್ನು ಪೋಸ್ಟ್ ಮಾಡಿ, ಪಾಂಚಾಲ್ ಅವರಂತಹ “ಜನರು” ಅಗತ್ಯವಿದೆಯೇ ಎಂದು ಸಿಎಂ ಚೌಹಾಣ್ ಅವರನ್ನು ಕೇಳಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದೆಹಲಿ ರಾಜ್ಯ ಕಾರ್ಯವಾಹಕ ಸದಸ್ಯ ರಾಜೀವ್ ಟುಲಿ ಕೂಡ ಪಾಂಚಾಲ್‍ ಅವರ ಹಳೆಯ ಟ್ವೀಟ್ ಅನ್ನು ಪೋಸ್ಟ್ ಮಾಡಿದ್ದಾರೆ. “ಚೌಹಾನ್ ಶಿವರಾಜ್ ಜಿ ಅವರಿಗೆ ನಿಜವಾಗಿಯೂ ಅಗತ್ಯವಿದೆಯೇ? ಮಧ್ಯಪ್ರದೇಶವು ನಮ್ಮ ಸಿದ್ಧಾಂತ ನಂಬುವ ಪ್ರಖ್ಯಾತ ಪತ್ರಕರ್ತರ ಶ್ರೀಮಂತ ಸಂಸ್ಕೃತಿಯನ್ನು ನೀಡಿದೆ. ಹೀಗಿರುವಾಗ ನಮ್ಮವರಲ್ಲದ ಪಾಂಚಾಲ್‍ ಬೇಕಿತ್ತೆ? ಎಂದು ಪ್ರಶ್ನೆ ಮಾಡಿದ್ದಾರೆ.

ಇತರ ಕಾರ್ಯಕರ್ತರು ಕೂಡ ಪಾಂಚಾಲ್‍ ಅವರ ಟ್ವೀಟ್‌ಗಳ ಬಗ್ಗೆ ಪೋಸ್ಟ್ ಮಾಡಿ, ಅವರ ನೇಮಕಾತಿಯನ್ನು ಪ್ರಶ್ನಿಸಿದ್ದಾರೆ. ಆದರೂ ಕೆಲವರು ಅವರನ್ನು ಬೆಂಬಲಿಸಿದ್ದಾರೆ.

ಪಾಂಚಾಲ್‍ ಅವರು ಶಿವರಾಜ್ ಸಿಂಗ್ ಚೌಹಾಣ್‌ ಅವರೊಂದಿಗೆ ಸ್ವಲ್ಪ ಸಮಯದಿಂದ ಕೆಲಸ ಮಾಡುತ್ತಿದ್ದಾರೆ ಮತ್ತು ಅವರ ಸಾಮಾಜಿಕ ಮಾಧ್ಯಮವನ್ನು ಸಹ ನಿರ್ವಹಿಸುತ್ತಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

“ಇದು ರಾಜಕೀಯ ಪ್ರೇರಿತ ಅಭಿಯಾನವಲ್ಲದೆ ಮತ್ತೇನಲ್ಲ. ಅವರ ಹಳೆಯ ಟ್ವೀಟ್‌ಗಳನ್ನು ಸಂದರ್ಭವಿಲ್ಲದೆ ಪೋಸ್ಟ್ ಮಾಡಲಾಗಿದೆ. ಅವರು ಚೌಹಾಣ್ ಜೊತೆಯಲ್ಲಿ ತೆರೆಮರೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ಯಾವಾಗಲೂ ಪಕ್ಷಕ್ಕೆ ಮೊದಲ ಸ್ಥಾನ ನೀಡುತ್ತಾರೆ” ಎಂದು ಮೂಲವೊಂದು ತಿಳಿಸಿದೆ.

ಮಧ್ಯಪ್ರದೇಶದ ಹಿರಿಯ ಬಿಜೆಪಿ ಮುಖಂಡರ ಪ್ರಕಾರ, 2018ರ ಚುನಾವಣೆಯ ಸಮಯದಲ್ಲಿ ಪಾಂಚಾಲ್‍ ತಂಡವು ಚೌಹಾಣ್ ಮತ್ತು ಅವರ ಸರ್ಕಾರದ ಸಾಮಾಜಿಕ ಮಾಧ್ಯಮ ಕಾರ್ಯಗಳನ್ನು ನೋಡಿಕೊಂಡಿತ್ತು.

“ಕೊರೋನಾ ಎರಡನೇ ಅಲೆಯಿಂದ ರಾಜ್ಯ ಹಾನಿಗೊಳಗಾಯಿತು, ಅದು ರಾಜ್ಯ ಸರ್ಕಾರದ ಇಮೇಜ್‍ ಮೇಲೆ ನೇರವಾಗಿ ಪರಿಣಾಮ ಬೀರಿತು. ನಂತರ ಮುಖ್ಯಮಂತ್ರಿ ತುಷಾರ್ ಪಾಂಚಾಲ್ ಅವರನ್ನು ಸಂವಹನ ಸಲಹಾ ವಿಭಾಗದ ಮುಖ್ಯಸ್ಥರನ್ನಾಗಿ ಮಾಡಲು ನಿರ್ಧರಿಸಿದರು. ಮೊದಲಿಲ್ಲದ ಆಕ್ಷೇಪ ಈಗ ಅಧಿಕೃತ ನೇಮಕದ ನಂತರ ಶುರುವಾಗಿದೆ’ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.

ಮಧ್ಯಪ್ರದೇಶ ಕಾಂಗ್ರೆಸ್ ಕೂಡ ಈ ವಿಷಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಎತ್ತಿದೆ. “ಶಿವರಾಜ್ ಸಿಂಗ್‍ ಮೋದಿಯ ವಿರುದ್ಧ ಯುದ್ಧ ಮಾಡುತ್ತಿದ್ದಾರೆ! ಏಕೆಂದರೆ, ಮೋದಿಯವರನ್ನು ಅವರ ಹೊಸ ಸಲಹೆಗಾರರು ತೀವ್ರವಾಗಿ ವಿರೋಧಿಸಿದ್ದರು” ಎಂದು ಪಕ್ಷದ ಅಧಿಕೃತ ಹ್ಯಾಂಡಲ್ ಪೋಸ್ಟ್ ಮಾಡಿದೆ. ಮೋದಿಯವರನ್ನು ಸೋಶಿಯಲ್ ಮೀಡಿಯಾದಲ್ಲಿ ಅಪಹಾಸ್ಯ ಮಾಡಿದ, ಅವರ ನಿಲುವನ್ನು ಟೀಕಿಸಿದ ಮತ್ತು ಬಿಜೆಪಿಯ ತತ್ವಗಳ ಬಗ್ಗೆ ಅನಿಯಂತ್ರಿತ ಟೀಕೆಗಳನ್ನು ಮಾಡಿದವರನ್ನು ಶಿವರಾಜ್ ಸಿಂಗ್ ಚೌಹಾಣ್ ಅವರು ಒಎಸ್‍ಡಿ ಮಾಡಿದ್ದಾರೆ. ಯೋಗಿಯ ನಂತರ, ಈಗ ಶಿವರಾಜ್ ಮೋದಿಯ ಆಡಳಿತವನ್ನು ದುರ್ಬಲಗೊಳಿಸುತ್ತಾರೆ’ ಎಂದು ಕಾಂಗ್ರೆಸ್‍ ಹೇಳಿದೆ.

ಪಾಂಚಾಲ್‍ ಅವರ ಹಳೆಯ ಟ್ವೀಟ್‍ಗಳು ಮೊನಚಾಗಿವೆ: ‘ಮೋದಿ ಪುಣ್ಯಶಾಲಿ, ಪ್ರಶ್ನೆ ಕೇಳಲು ವಿಪಕ್ಷ ನಾಯಕನಿಲ್ಲ, ಮನೆಯಲ್ಲಿ ಪತ್ನಿಯಿಲ್ಲ…’ ಎಂದು ಈ ಹಿಂದೆ ಟ್ವೀಟ್ ಮಾಡಿದ್ದರು.

‘ದೇಸಿ ಸಾರಾಯಿ ಜೊತೆಗೆ ಗೋಮೂತ್ರ ಮಿಕ್ಸ್ ಮಾಡಿ ಕುಡಿದರೆ ಕೊರೋನಾ ಹೋಗುತ್ತಂತೆ. ಬೇಕಾದವರು ಪರೀಕ್ಷಿಸಿ ಅನುಭವಿಸಿ’ ಎಂದು ರಾಮದೇವ್‍ ಅವರನ್ನು ಟೀಕಿಸಿದ್ದರು.

ತೀವ್ರ ಟೀಕೆಗಳು ಕೇಳಿಬಂದ ನಂತರ “ಸಿಎಂ ಶಿವರಾಜ್‌ಸಿಂಗ್‌ ಚೌಹಾಣ್‌ರವರು ನನಗೆ ನೀಡಿದ ಜವಾಬ್ದಾರಿಯನ್ನು ಸ್ವೀಕರಿಸದಿರಲು ನಾನು ನಿರ್ಧರಿಸಿದ್ದೇನೆ. ಈ ನನ್ನ ಅಸಾಮರ್ಥ್ಯವನ್ನು ಸಿಎಂಗೆ ತಿಳಿಸಿದ್ದೇನೆ” ಎಂದು ತುಷಾರ್ ಪಾಂಚಾಲ್ ಟ್ವೀಟ್ ಮಾಡಿದ್ದಾರೆ.


ಇದನ್ನೂ ಓದಿ; ‘ಧರ್ಮಯುದ್ಧ ಮಾಡಲು ನನಗೆ ಆಯುಧ ಹಿಡಿದಿರುವವರು ಬೇಕಿದೆ’: ಬಹಿರಂಗ ಭಯೋತ್ಪಾದನೆಗೆ ಕರೆ ನೀಡಿದ ಯತಿ ನರಸಿಂಗಾನಂದ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಇದು ಸಂಸ್ಕೃತಿಯಲ್ಲ, ಪಿತೃಪ್ರಭುತ್ವ’: ಜಮುಯಿ ಅಪ್ರಾಪ್ತ ಬಾಲಕಿ ಮೇಲಿನ ಕಿರುಕುಳದ ವಿಡಿಯೋಗೆ ರಾಹುಲ್ ಗಾಂಧಿ ಆಕ್ರೋಶ 

ಪಾಟ್ನಾ: ಬಿಹಾರದ ಜಮುಯಿ ಜಿಲ್ಲೆಯಲ್ಲಿ 10ನೇ ತರಗತಿಯ ಅಪ್ರಾಪ್ತ ಬಾಲಕ ಮತ್ತು ಬಾಲಕಿಯನ್ನು ರಸ್ತೆಯಲ್ಲಿ ತಡೆದು ಪುರುಷರ ಗುಂಪೊಂದು ಕಿರುಕುಳ ನೀಡಿದೆ ಎಂದು ಆರೋಪಿಸಲಾದ ವೈರಲ್ ವಿಡಿಯೋ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಈ...

ನಕಲಿ ಔಷಧಗಳ ವಿತರಣೆ ಜಾಲದೊಂದಿಗೆ ನಂಟು; 16 ಫಾರ್ಮಸಿಗಳ ಪರವಾನಗಿ ರದ್ದು

ಬಿಡದಿಯ ಫಾರ್ಮ್‌ಹೌಸ್ (ತೋಟದ ಮನೆ) ಒಂದರಲ್ಲಿ ಪತ್ತೆಯಾದ ನಕಲಿ ಔಷಧಗಳ ವಿತರಣೆಯ ಜಾಲದೊಂದಿಗೆ ನಂಟು ಹೊಂದಿರುವ ಆರೋಪದ ಮೇಲೆ ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ (ಎಫ್‌ಡಿಎ) ಸಂಸ್ಥೆಯು 16 ಫಾರ್ಮಸಿಗಳ...

ಚಾಮರಾಜನಗರ: ಬಂಡಿ ಪೂಜೆ ಹಬ್ಬದಲ್ಲಿ ದಲಿತ ಮಕ್ಕಳಿಗೆ ಅಸ್ಪೃಶ್ಯತೆ ಆಚರಣೆ – ಊಟ ನೀಡದೆ ಅಪಮಾನಿಸಿದ ಆರೋಪ

ಸಮಾಜದಲ್ಲಿ ಜಾತಿಪದ್ದತಿ ಇಂದಿಗೂ ಜೀವಂತವಾಗಿದೆಯೇ ಎಂದು ಪ್ರಶ್ನಿಸುವವರಿಗೇನು ಕಡಿಮೆ ಇಲ್ಲ.ಆದರೆ ಜಾತಿ ಕಾರಣಕ್ಕೆ ಪುಟಾಣಿ ಮಕ್ಕಳಿಗೆ ಊಟವನ್ನು ನಿರಾಕರಿಸಿ ಅಸ್ಪೃಶ್ಯತೆ ಆಚರಣೆ ಮಾಡಿರುವುದು ನಾಗರಿಕ ಸಮಾಜ ನಿಜಕ್ಕೂ ತಲೆತಗ್ಗಿಸುವಂತೆ ಮಾಡಿದೆ. ಹೌದು ಚಾಮರಾಜನಗರ ಜಿಲ್ಲೆಯ...

ಥಾಣೆ ಗಣೇಶೋತ್ಸವ 2026: ತಿಟ್ವಾಲಾದಲ್ಲಿ ಗಣಪತಿ ವಿಸರ್ಜನೆ ವೇಳೆ 2 ಗುಂಪುಗಳ ಘರ್ಷಣೆ, ಬಿಜೆಪಿ ಮಾಜಿ ಉಪಮೇಯರ್ ಸೇರಿ 70-80 ಜನರ ವಿರುದ್ಧ ಪ್ರಕರಣ

ಮಹಾರಾಷ್ಟ್ರದ ಥಾಣೆ ಜಿಲ್ಲೆಯ ತಿಟ್ವಾಲಾದಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಬಿಜೆಪಿಯ ಮಾಜಿ ಉಪಮೇಯರ್ ಹಾಗೂ ಹಾಲಿ ಕಾರ್ಪೊರೇಟರ್ ಉಪೇಕ್ಷಾ ಭೋಯಿರ್...

ಬಿಜೆಪಿ ಆಡಳಿತದಲ್ಲಿ 151 ಅಂಬೇಡ್ಕರ್ ಪ್ರತಿಮೆಗಳ ಧ್ವಂಸ: ಅಖಿಲೇಶ್ ಯಾದವ್ ಆರೋಪ

ಉತ್ತರ ಪ್ರದೇಶದಲ್ಲಿ ಬಿಜೆಪಿ ಆಡಳಿತದ ಅವಧಿಯಲ್ಲಿ 72 ಜಿಲ್ಲೆಗಳಲ್ಲಿ ಬಾಬಾಸಾಹೇಬ್ ಬಿ.ಆರ್. ಅಂಬೇಡ್ಕರ್ ಅವರ 151 ಪ್ರತಿಮೆಗಳನ್ನು ಧ್ವಂಸಗೊಳಿಸಲಾಗಿದೆ. ಆದರೆ ಈವರೆಗೆ ಕೇವಲ 14 ಮಂದಿಯನ್ನು ಮಾತ್ರ ಬಂಧಿಸಲಾಗಿದೆ ಎಂದು ಸಮಾಜವಾದಿ ಪಕ್ಷದ...

ಜಾತಿ ತಾರತಮ್ಯ ಹಿಂದೂ ಸಮಾಜಕ್ಕಂಟಿದ ‘ಕಳಂಕ’: ಆರ್‌ಎಸ್‌ಎಸ್ ಮುಖಂಡ ದತ್ತಾತ್ರೇಯ ಹೊಸಬಾಳೆ

"ಜಾತಿ ಆಧಾರಿತ ತಾರತಮ್ಯವು ಹಿಂದೂ ಸಮಾಜಕ್ಕಂಟಿದ ಕಳಂಕ, ಕೇವಲ ಕಾನೂನುಗಳಿಂದ ಜಾತೀಯತೆ ಮತ್ತು ಅಸ್ಪೃಶ್ಯತೆಯನ್ನು ಕೊನೆಗೊಳಿಸಲು ಸಾಧ್ಯವಿಲ್ಲ, ಇದಕ್ಕೆ ಪ್ರತಿಯೊಬ್ಬ ವ್ಯಕ್ತಿಯ ನಡವಳಿಕೆಯಲ್ಲಿ ಬದಲಾವಣೆಯಾಗುವ ಅಗತ್ಯವಿದೆ" ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌)...

ಎಸ್‌ಐಆರ್‌ನ ಮೂರು ಹಂತಗಳಲ್ಲಿ 13.98 ಕೋಟಿ ಮತದಾರರು ಹೊರಕ್ಕೆ; 5.43 ಕೋಟಿ ಮತದಾರರಿಗೆ ಅಳಿಸುವಿಕೆಯ ಭೀತಿ: ಕಾಂಗ್ರೆಸ್ 

ನವದೆಹಲಿ: ಭಾರತೀಯ ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ದೇಶದ ಕೋಟ್ಯಂತರ ಮತದಾರರ ಹಕ್ಕಿನ ಮೇಲೆ ಪರಿಣಾಮ ಬೀರುತ್ತಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ. SIRನ...

ಧರ್ಮಸ್ಥಳ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ : ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶ

ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ಸುಪ್ರೀಂ ಕೋರ್ಟ್ ಸೋಮವಾರ (ಸೆ.21) ಆದೇಶಿಸಿದೆ. ಈ ಪ್ರಕರಣದಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಮೂರು ತಿಂಗಳೊಳಗೆ ಅನುಪಾಲನಾ ವರದಿಯನ್ನು (compliance report)...

1,400 ಮುಸ್ಲಿಂ ಕುಟುಂಬಗಳ ಬದುಕು ಕಸಿದುಕೊಂಡ ಭೂಮಿಯಲ್ಲಿ ಅದಾನಿ ವಿದ್ಯುತ್ ಯೋಜನೆಗೆ ಹಿಮಂತ್ ಬಿಸ್ವಾ ಶರ್ಮಾ ನೇತೃತ್ವದಲ್ಲಿ ಅಡಿಪಾಯ

ಗುವಾಹಟಿ: ಅಸ್ಸಾಂನ ಧುಬ್ರಿ ಜಿಲ್ಲೆಯಲ್ಲಿ ಸುಮಾರು 1,400 ಬಂಗಾಳಿ ಮೂಲದ ಮುಸ್ಲಿಂ ಕುಟುಂಬಗಳನ್ನು ತೆರವುಗೊಳಿಸಿ, ಅವರ ಮನೆಗಳನ್ನು ನೆಲಸಮಗೊಳಿಸಿದ ಪ್ರದೇಶದಲ್ಲೇ ಅದಾನಿ ಪವರ್ ಲಿಮಿಟೆಡ್‌ನ 3,200 ಮೆಗಾವ್ಯಾಟ್ ಸಾಮರ್ಥ್ಯದ ಉಷ್ಣ ವಿದ್ಯುತ್ ಯೋಜನೆಗೆ...

ಮಧುಗಿರಿ: ಗಣೇಶೋತ್ಸವದಲ್ಲಿ ಕುಣಿದಿದ್ದಕ್ಕೆ 17 ವರ್ಷದ ದಲಿತ ಬಾಲಕನ ಕೊಲೆ

ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕಸಾಪುರ ಗ್ರಾಮದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಕುಣಿದಿದ್ದಕ್ಕೆ ಆಕ್ಷೇಪಿಸಿ ದಲಿತ ಸಮುದಾಯದ17 ವರ್ಷದ ಬಾಲಕ ಸಿಂಹಾದ್ರಿಯನ್ನು ಕಲ್ಲಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ದಾರುಣ ಘಟನೆ ನಡೆದಿದೆ. ಘಟನೆಯ...