ಫಾದರ್ ಸ್ಟ್ಯಾನ್ ಸ್ವಾಮಿ ಸಾವಿಗೆ ಜಗತ್ತಿನೆಲ್ಲಡೆಯ ಮಾನವ ಹಕ್ಕುಗಳ ಹೋರಾಟಗಾರಿಂದ ಖಂಡನೆ ವ್ಯಕ್ತವಾಗಿದೆ. ದೇಶ ವಿದೇಶಗಳ ಸಂಘಟನೆಗಳಿಂದ ಕೇಂದ್ರ ಸರ್ಕಾರ ದಮನಕಾರಿ ಧೋರಣೆಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಸರ್ಕಾರ ಇಂದು ಸ್ಟ್ಯಾನ್ ಸ್ವಾಮಿ ಸಾವಿಗೆ ತಾನು ಕಾರಣವಲ್ಲವೆಂದು ಹೇಳಿಕೊಂಡಿದೆ. ಸ್ವಾವಿ ಬಂಧನದ ಸಂದರ್ಭದಲ್ಲಿ ಎಲ್ಲಾ ರೀತಿಯ ಕಾನೂನು ಪ್ರಕ್ರಿಯೆಗಳನ್ನು ಕಯಗೊಳ್ಳಲಾಗಿದೆ. ಯಾವ ಲೋಪವೂ ಆಗಿಲ್ಲ ಎಂದು ತನ್ನ ನಡೆಯನ್ನು ಸರ್ಕಾರ ಸಮರ್ಥಿಸಿಕೊಂಡಿದೆ.
ಮಾನವ ಹಕ್ಕುಗಳ ಹೋರಾಟಗಾರ 84 ವರ್ಷ ವಯಸ್ಸಿನ ಫಾದರ್ ಸ್ಟ್ಯಾನ್ ಸ್ವಾಮಿ ನಿನ್ನೆ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟಿದ್ದಾರೆ. ಭೀಮಾ ಕೋರೆಂಗಾವ್ ಪ್ರಕರಣಕ್ಕೆ ಸಂಚುರೂಪಿಸಿದ ಅರೋಪದಲ್ಲಿ ಸ್ಟ್ಯಾನ್ ಸ್ವಾಮಿ, ವರವವರದ ರಾವ್, ಸುಧಾ ಭಾರದ್ವಾಜ್, ಆನಂದ ತೇಲ್ತಂಬ್ಡೆ ಸೇರಿದಂತೆ ಹೋರಾಟಗಾರರು, ಕವಿಗಳು ಮತ್ತು ಚಿಂತಕರನ್ನು UAPA ಕಾನೂನಿನಡಿ ಬಂಧಿಸಲಾಗಿತ್ತು. ಬಂಧಿತ ಬಹುತೇಕರು 60-90 ವಯಸ್ಸಿನವರಾಗಿದ್ದು ನ್ಯಾಯಾಲಯಗಳು ಜಾಮೀನು ನೀಡಲು ನಿರಾಕರಿಸಿದ್ದವು.
90 ವರ್ಷ ವಯಸ್ಸಿನ ಸಾಹಿತಿ, ಫ್ರೊಪೆಸರ್ ವರವರದ ರಾವ್ ಅವರಿಗೆ ಇತ್ತೀಚೆಗಷ್ಟೆ ನ್ಯಾಯಾಲಯ ಜಾಮೀನು ನೀಡಿತ್ತು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಸ್ಟ್ಯಾನ್ ಸ್ವಾಮಿ ಅವರಿಗೆ ಜಾಮೀನು ನೀಡುವುದಿರಲಿ ಸೂಕ್ತ ಚಿಕಿತ್ಸೆಯನ್ನೂ ನೀಡಲಾಗಿರಲಿಲ್ಲ. ಅಂತರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ಭಾರತದ ರಾಜಕೀಯರು, ಚಿಂತಕರು ಎಲ್ಲರೂ ವಯೋವೃದ್ಧರಾಗಿದ್ದು ಅರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ಅವರನ್ನು ಬಿಡುಗಡೆ ಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಯಾರ ಮನವಿಗೂ, ಪತ್ರಕ್ಕೂ ಸ್ಪಂದಿಸದ ಕೇಂದ್ರ ಸರ್ಕಾರ ಸ್ಟ್ಯಾನ್ ಸ್ವಾಮಿ ಸಾವಿಗೆ ತಾನು ಕಾರಣವಲ್ಲ ಎಂದು ಇಂದು ಹೇಳಿದೆ. ವಿದೇಶಾಂಗ ಇಲಾಖೆ ಕಾರ್ಯದರ್ಶಿ ಅರಿಂದಾಮ್ ಬಗ್ಚಿ ಈ ಸಂಬಂಧ ಟ್ವಿಟ್ಟರ್ ಮೂಲಕ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
Our response to media queries on the demise of Father Stan Swamy:https://t.co/ENobB6wR2Y pic.twitter.com/HQWnmQt9sR
— Arindam Bagchi (@MEAIndia) July 6, 2021
ಭಾರತ ಸರ್ಕಾರದ ಸಂವಿಧಾನಿಕ ಮತ್ತು ಪ್ರಜಾಪ್ರಭುತ್ವವಾದಿ ನಿಲುವುಗಳು ದೇಶದ ಸ್ವತಂತ್ರ ನ್ಯಾಯಾಂಗದಿಂದ ಅನೇಕ ಬಾರಿ ಪ್ರಶಂಸೆಗೊಳಗಾಗಿದೆ. ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಮಾನವ ಹಕ್ಕುಗಳ ಆಯೋಗಗಳು ಉಲ್ಲಂಘನೆಯನ್ನು ಗಮನಿಸುತ್ತಲೇ ಇರುತ್ತವೆ. ಸ್ವತಂತ್ರ ಮಾಧ್ಯಮ ಮತ್ತು ಜಾಗೃತ ಸಮಾಜಕೂಡ ಸರ್ಕಾರದ ಪ್ರಜಾಪ್ರಭುತ್ವವಾದಿ ನಿಲುವುಗಳನ್ನು ಒಪ್ಪಿದೆ. ಮುಂದೆ ಕೂಡ ಭಾರತ ಸರ್ಕಾರ ಮಾನವ ಹಕ್ಕುಗಳ ರಕ್ಷಣೆಗೆ ತನ್ನ ಬದ್ಧತೆಯನ್ನು ಮುಂದುವೆರೆಸಿಕೊಂಡು ಹೋಗುತ್ತದೆ ಎಂದು ಸರ್ಕಾರ ಇಂದು ತನ್ನ ಪ್ರಕಟಣೆಯಲ್ಲಿ ತಿಳಿಸದೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ, ಶರದ್ ಪವಾರ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸೀತಾರಮ್ ಯೆಚೂರಿ ಸೇರಿದಂತೆ ವಿರೋಧಪಕ್ಷಗಳ 10 ಕ್ಕು ಹೆಚ್ಚು ನ್ಯಾಯಕರು ಇಂದು ರಾಷ್ಟ್ರಪತಿಗಳಿಗೆ ಪತ್ರ ಬರೆದು ಸ್ಟ್ಯಾನ್ ಸ್ವಾಮಿ ಸಾವಿಗೆ ಕಾರಣವಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪತ್ರ ಬರೆದಿದ್ದಾರೆ. UAPA ಕಾಯ್ದೆಯಡಿ ಬಂಧನಕ್ಕೆ ಒಳಗಾಗಿರುವ ಎಲ್ಲಾ ರಾಜಕೀಯ ಖೈದಿಗಳನ್ನು ಬಿಡುಗಡೆಗೊಳಿಸುವಂತೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಲ್ಲಿ ಮನವಿ ಮಾಡಿದ್ದಾರೆ.
ಝಾರ್ಕಂಡದಲ್ಲಿ ಆದಿವಾಸಿಗಳಿಗಾಗಿ ಹೋರಾಟ ನಡೆಸಿದ ಸ್ಟ್ಯಾನ್ ಸ್ವಾಮಿ ಶ್ರೇಷ್ಠ ಮಾನವ ಹಕ್ಕುಗಳ ಹೋರಾಟಗಾರರಾಗಿದ್ದರು. UAPA ನಂತಹ ಭಯೋತ್ಪಾದನೆ ತಡೆ ಕಾಯ್ದೆಯಡಿ ಸುಳ್ಳು ಆರೋಪಗಳಡಿ ಅವರನ್ನು ಸರ್ಕಾರ ಜೈಲಿಗೆ ಹಾಕಿದೆ ಎಂದು ವಿರೋಧ ಪಕ್ಷಗಳ ನಾಯಕರು ತಮ್ಮ ಪತ್ರದಲ್ಲಿ ನರೇಂದ್ರ ಮೋದಿ ಸರ್ಕಾದ ವಿರುದ್ಧ ನೇರ ಆರೋಪಗಳನ್ನು ಮಾಡಿದ್ದಾರೆ.
ಸ್ಟ್ಯಾನ್ ಸ್ವಾಮಿ ಕುಟುಂಬಸ್ಥರು ಮತ್ತು ಎಲ್ಗರ್ ಪರಿಷತ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಇತರ ಹೋರಾಟಗಾರರು ಸ್ಟ್ಯಾನ್ ಸ್ವಾಮಿಯವರದು ಸಾಮಾನ್ಯ ಸಾವಲ್ಲ ಇದೊಂದು ವ್ಯವಸ್ಥೆಯೇ ನಡೆಸಿದ ಕಗ್ಗೊಲೆ ಎಂದು ಆಕ್ರೋಶವನ್ನು ಹೊರಹಾಕಿದ್ದರು.
ಇದನ್ನೂ ಓದಿ: ಸ್ಟ್ಯಾನ್ ಸ್ವಾಮಿ ನಿಧನಕ್ಕೆ ದೇಶ ವಿದೇಶಗಳ ಗಣ್ಯರ ಕಂಬನಿ: ಭಾರತ ಸರ್ಕಾರದ ವಿರುದ್ಧ ಆಕ್ರೋಶ


