Homeಅಂತರಾಷ್ಟ್ರೀಯಕಳೆದು ಹೋಗಿದ್ದ ರಷ್ಯಾ ವಿಮಾನ ಪತ್ತೆ-ಅಪಘಾತದಲ್ಲಿ 28 ಪ್ರಯಾಣಿಕರ ಸಾವು

ಕಳೆದು ಹೋಗಿದ್ದ ರಷ್ಯಾ ವಿಮಾನ ಪತ್ತೆ-ಅಪಘಾತದಲ್ಲಿ 28 ಪ್ರಯಾಣಿಕರ ಸಾವು

- Advertisement -
- Advertisement -

ರಷ್ಯಾದ ಪೆಟ್ರೋಪಾವ್ಲೋಸ್ಕ್‌ ಕಮ್ಚಾಸ್ಕಿ ವಿಮಾನ ನಿಲ್ಧಾಣದಿಂದ ಪಲಾನಾ ನಿಲ್ಧಾಣಕ್ಕೆ ಹೊರಟಿದ್ದ Antonov An-26 ವಿಮಾನವು  ವಿಮಾನ ನಿಲ್ಧಾಣದಿಂದ ಸಂಪರ್ಕವನ್ನು ಕಳೆದುಕೊಂಡು ಕಣ್ಮರೆಯಾಗಿತ್ತು. ಇಂದು ಸಂಜೆಯ ಹೊತ್ತಿಗೆ ವಿಮಾನ ಪತ್ತೆಯಾಗಿದ್ದು ಲ್ಯಾಂಡಿಂಗ್ ವೇಳೆಯಲ್ಲಿ ಅಪಘಾತಕ್ಕೆ ಈಡಾಗಿದೆ ಎಂದು ರಷ್ಯಾದ ತುರ್ತುಸೇವೆಗಳ ಇಲಾಖೆ ತಿಳಿಸಿದೆ. ವಿಮಾನದಲ್ಲಿದ್ದ ಎಲ್ಲಾ 28 ಪ್ರಯಾಣಿಕರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಮಂದ ಬೆಳಕಿನ ಕಾರಣದಿಂದ ವಿಮಾನ ಲ್ಯಾಂಡಿಂಗ್ ವೇಳೆ ಚಾಲಕನ ನಿಯಂತ್ರಣವನ್ನು ಕಳೆದುಕೊಂಡು ಬೆಟ್ಟವೊಂದರಲ್ಲಿ ಪತನಗೊಂಡಿದೆ. ಕಳೆದ ಹೋದ ವಿಮಾನವನ್ನು ಹುಡುಕಲು ರಷ್ಯಾದ ನಾಗರಿಕ ವಿಮಾನಯಾಯನ ಇಲಾಕೆಯು ಹೆಲಿಕ್ಯಾಪಟ್ಟರ್‌ಗಳನ್ನು ಕಳುಹಿಸಿ ಕೊಟ್ಟಿತ್ತು.

ವಿಮಾನದಲ್ಲಿ 6 ಜನ ಸಿಬ್ಬಂದಿಗಳು ಮತ್ತು 22 ಇತರ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. 1982 ರಿಂದ ವಿಮಾನವು ಸೇವೆಯಲ್ಲಿ ಇದೆ ಎಂದು ರಷ್ಯಾದ ವಿಮಾನಯಾನ ಇಲಾಖೆ ಹೇಳಿದೆ.

ಇತ್ತೀಚೆಗೆ ರಷ್ಯಾದಲ್ಲಿ ವಿಮಾನದ ಸುರಕ್ಷತೆಗೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದರೂ ಸಹ ಕಳೆದ ಕೆಲ ವರ್ಷಗಳಲ್ಲಿ ವಿಮಾನ ದುರಂತಗಳು ನಡೆದಿವೆ. ಸೋವಿಯತ್ ಕಾಲದ ಹಳೆಯ ವಿಮಾನಗಳನ್ನು ನಾಗರಿಕ ಮತ್ತು ಮಿಲಿಟರಿ ಸೇವೆಗೆ ಬಳಸಿಕೊಳ್ಳುತ್ತಿರುವುದು ಹೆಚ್ಚಿನ ದುರಂತಗಳಿಗೆ ಕಾರಣ ಎನ್ನಲಾಗುತ್ತಿದೆ.

ರಷ್ಯಾ ಮೂಲದ ಸೋವಿಯತ್ ಕಾಲದ 12 ವಿಮಾನಗಳು ಇದುವರೆ ಅಪಘಾತಕ್ಕೆ ಈಡಾಗಿವೆ. Antonov An-26 ಮಾದರಿಯ ಮತ್ತೊಂದು ವಿಮಾನ ರಷ್ಯಾದ ಕಮಚಾತ್ಕ ಅರಣ್ಯ ಪ್ರದೇಶದಲ್ಲಿ 2012 ರಲ್ಲಿ ಅಪಘಾತಕ್ಕೆ ಈಡಾಗಿತ್ತು. 10 ಜನ ಪ್ರಯಾಣಿಕರು ಈ ಅಪಘಾತದಲ್ಲಿ ಮೃತಪಟ್ಟಿದ್ದರು.

ಇದನ್ನೂ ಓದಿ: ಫಿಲಿಪೈನ್ಸ್ ಮಿಲಿಟರಿ ವಿಮಾನ ದುರಂತ: 17 ಜನರ ಸಾವು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...