ಅಮೆರಿಕಾದ ಹಲವಾರು ರಾಜ್ಯಗಳಲ್ಲಿ ಮತ ಎಣಿಕೆ ಮುಂದುವರೆದಿದೆ. ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಯಾರಿಗೆ ಗೆಲುವು ಎನ್ನುವುದು ಫಲಿತಾಂಶವು ಇನ್ನೂ ಸ್ಪಷ್ಟವಾಗಿ ಹೊರಬಿದ್ದಿಲ್ಲ. ಅದು ಪೂರ್ಣಗೊಳ್ಳಲು ಇನ್ನೂ ಕೆಲವು ದಿನಗಳು ಬೇಕಾಗಬಹುದು ಎಂದು ವರದಿಗಳು ಹೇಳುತ್ತಿವೆ.
ಒಟ್ಟು 538 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು ಸ್ಪಷ್ಟ ಬಹುಮತಕ್ಕೆ 270 ಸ್ಥಾನಗಳ ಅಗತ್ಯವಿದ್ದು, ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ ಜೋ ಬೈಡೆನ್ 264 ಸ್ಥಾನಗಳನ್ನು ತಮ್ಮ ತೆಕ್ಕೆಗೆ ಸೇರಿಸಿಕೊಂಡಿದ್ದರೆ, ಟ್ರಂಪ್ 214 ಸ್ಥಾನಗಳನ್ನು ಗೆದ್ದುಕೊಂಡಿದ್ದಾರೆ. ಇನ್ನೂ ಹಲವು ಕ್ಷೇತ್ರಗಳಲ್ಲಿ ಮತ ಎಣಿಕೆ ನಡೆಯುತ್ತಿದ್ದು, ಇದು ಗೆಲುವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರವಹಿಸಲಿದೆ.
ಇದನ್ನೂ ಓದಿ: ಅಮೆರಿಕಾ ಚುನಾವಣೆ: ಟ್ರಂಪ್ ಪಾರುಪತ್ಯದ ರಾಜ್ಯಗಳಲ್ಲಿ ಜೋ ಬೈಡೆನ್ ಗೆಲುವು!
9 ರಾಜ್ಯಗಳಲ್ಲಿ ಯಾರು ಎಷ್ಟರಲ್ಲಿ ಮೇಲುಗೈ ಸಾಧಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ಇಂಡಿಯಾ ಟುಡೆ ವರದಿ ಮಾಡಿದೆ.
ಅಲಾಸ್ಕಾ
ಇಲ್ಲಿ ಟ್ರಂಪ್ ವ್ಯಾಪಕ ಮುನ್ನಡೆ ಹೊಂದಿದ್ದು, ಕೇವಲ 56% ಮತಗಳನ್ನು ಎಣಿಸಲಾಗಿದೆ.
ಅರಿಝೋನಾ
ಇಲ್ಲಿ ಬೈಡೆನ್ ಗಮನಾರ್ಹ ಮುನ್ನಡೆ ಸಾಧಿಸಿದ್ದಾರೆ. ಅಸೋಸಿಯೇಟೆಡ್ ಪ್ರೆಸ್ ಮತ್ತು ಫಾಕ್ಸ್ ನ್ಯೂಸ್ ಈಗಾಗಲೇ ಡೆಮೋಕ್ರಾಟ್ ಗೆದ್ದಿದೆ ಎಂದು ಘೋಷಿಸಿದೆ.
ಜಾರ್ಜಿಯಾ
ಇಲ್ಲಿ ಟ್ರಂಪ್ ಅಲ್ಪ ಮುನ್ನಡೆ ಸಾಧಿಸುತ್ತಿದ್ದಾರೆ. ಆದರೆ ಅಟ್ಲಾಂಟಾದ ಸುತ್ತಮುತ್ತಲಿನ ಹಲವಾರು ದೊಡ್ಡ ಕೌಂಟಿಂಗ್‌ಗಳು ಡೆಮೋಕ್ರಾಟಿಕ್‌ನ ಬೈಡೆನ್‌ನತ್ತ ಒಲವು ಇದೆ ಎಂದು ವರದಿಯಾಗಿದೆ.
ಮಿಚಿಗನ್
ಇಲ್ಲಿ ಬೈಡೆನ್ ಭಾರೀ ಬಹುಮತದಿಂದ ಮುನ್ನಡೆಯಲ್ಲಿದ್ದಾರೆ. ಮಿಚಿಗನ್ ವಿದೇಶಾಂಗ ಕಾರ್ಯದರ್ಶಿ ಜೋಸೆಲಿನ್ ಬೆನ್ಸನ್ ಅವರು ಬುಧವಾರ ರಾತ್ರಿ ರಾಜ್ಯದ ಎಲ್ಲಾ ಮಾನ್ಯ ಮತಪತ್ರಗಳನ್ನು ಎಣಿಕೆ ಮಾಡಿದ್ದಾರೆ ಮತ್ತು ಅಲ್ಲಿನ ಮತಗಳ ಎಣಿಕೆಯನ್ನು ನಿಲ್ಲಿಸಲು ಟ್ರಂಪ್ ಕೋರಿರುವ ಮೊಕದ್ದಮೆ ಕ್ಷುಲ್ಲಕ ಎಂದು ಹೇಳಿದರು.
ಇದನ್ನೂ ಓದಿ: ಮತದಾನದಲ್ಲಿ ವಂಚನೆ, ಸುಪ್ರೀಂಕೋರ್ಟ್‌ಗೆ ಹೋಗಲಿದ್ದೇವೆ: ಡೊನಾಲ್ಡ್ ಟ್ರಂಪ್
ನೆವಾಡಾ
ಇಲ್ಲಿ ಬೈಡೆನ್ ಮತ್ತು ಟ್ರಂಪ್ ನಡುವಿನ ಮತ ಹಂಚಿಕೆಯ ವ್ಯತ್ಯಾಸ ತೀರಾ ಕಡಿಮೆಯಿದೆ.
ಉತ್ತರ ಕೆರೊಲಿನಾ
ಟ್ರಂಪ್ ಮತ್ತು ಬಿಡೆನ್ ನಡುವಿನ ಅಂತರವು ಶೇಕಡಾ 2 ಕ್ಕಿಂತ ಕಡಿಮೆ ಇದೆ. ಇಲ್ಲಿ ಟ್ರಂಪ್ ಮುನ್ನಡೆ ಸಾಧಿಸಿದ್ದಾರೆ. ನಿರೀಕ್ಷಿತ 95% ಮತಗಳ ಎಣಿಕೆ ಮಾಡಲಾಗಿದೆ.
ಪೆನ್ಸಿಲ್ವೇನಿಯಾ
ಇಲ್ಲಿ ಟ್ರಂಪ್ ಮುನ್ನಡೆ ಕಾಯ್ದುಕೊಂಡಿದ್ದಾರೆ.
ವಿಸ್ಕಾನ್ಸಿನ್
ಇಲ್ಲಿ ಅಭ್ಯರ್ಥಿಗಳ ನಡುವಿನ ಅಂತರವು ಶೇಕಡಾ 1 ಕ್ಕಿಂತ ಕಡಿಮೆ ಇದೆ.
ಇದನ್ನೂ ಓದಿ: ಅಮೆರಿಕಾ ಚುನಾವಾಣೆ: ಭಾರತ ಮೂಲದ ರಾಜ ಕೃಷ್ಣಮೂರ್ತಿ ಪ್ರತಿನಿಧಿಗಳ ಸದನಕ್ಕೆ ಮರು ಆಯ್ಕೆ