‘ಸ್ಟಾನ್‌ಸ್ವಾಮಿ’- ‘ಹೋರಾಟಗಾರರನ್ನು ಬಿತ್ತಲಾಗುತ್ತದೆ; ಹೂಳಲಾಗುವುದಿಲ್ಲ’: ದೇಶದಾದ್ಯಂತ ಆಕ್ರೋಶ

ಮಾನವ ಹಕ್ಕುಗಳ ಹೋರಾಟಗಾರ ಸ್ಟ್ಯಾನ್ ಸ್ವಾಮಿ ಸಾವಿಗೆ ಜಗತ್ತಿನ ಮಾನವಹಕ್ಕುಗಳ ಹೋರಾಟಗಾರರು ಮತ್ತು ಸಂಘಟನೆಗಳು ಕಂಬನಿ ಮಿಡಿದಿವೆ. ಸ್ವಾಮಿ ಸಾವು ಪ್ರಜಾಪ್ರಭುತ್ವ ವ್ಯವಸ್ಥೆಯ ಕಗ್ಗೊಲೆಗೆ ಹಿಡಿದ ಕನ್ನಡಿಯೆಂದು ವಿಷಾದ ವ್ಯಕ್ತಪಡಿಸಿದ್ದಾರೆ. ದೇಶ ವಿದೇಶದ ಸಾವಿರಾರು ಜನರ ಶೋಕ ತಪ್ತ ಸಂದೇಶಗಳಿಂದ ಟ್ವಿಟ್ಟರ್ ಮತ್ತು ಫೇಸ್‌ಬುಕ್‌ಗಳು ತುಂಬಿ ಹೋಗಿವೆ. ಸ್ಟಾನ್ ಸ್ಟಾಮಿ ಸಾವು ಜಾಗತಿಕ ಮಾನವ ಹಕ್ಕುಗಳ ಹೋರಾಟಕ್ಕೆ ದೊಡ್ಡ ಹಿನ್ನಡೆಯೆಂದು ವ್ಯವಸ್ಥೆಯ ವಿರುದ್ಧ ಜಾಗತಿಕ ಚಿಂತಕರು ಮತ್ತು ವಿಚಾರವಂತರು ಆಕ್ರೋಶ ಹೊರಹಾಕಿದ್ದಾರೆ.

ಯುರೋಪಿಯನ್ ಯೂನಿಯನ್ ಮಾನವ ಹಕ್ಕುಗಳ ವಿಶೇಷ ಪ್ರತಿನಿಧಿ ಎಮೋನ್ ಗ್ಲಿಮೋರ್, ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಹೋರಾಟದ ವರದಿಗಾರ್ತಿ ಮೇರಿ ಲಾವ್ಲರ್ ಫಾಧರ್ ಸ್ಟ್ಯಾನ್ ಸ್ವಾಮಿ ಸಾವಿಗೆ ಸಂತಾಪ ವ್ಯಕ್ತಪಡಿಸಿ ಅಂತರಾಷ್ಟ್ರೀಯ ಮಾನವ ಹಕ್ಕುಗಳ ವೇದಿಕೆಯಲ್ಲಿ ವಿಷಯವನ್ನು ಪ್ರಸ್ತಾಪಿಸುವುದಾಗಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಬುಡಕಟ್ಟು ಜನರ ಹಕ್ಕುಗಳ ಹೋರಾಟಗಾರ ಫಾದರ್ ಸ್ಟ್ಯಾನ್ ಸ್ವಾಮಿ ನಿಧನ

“ಸ್ಟ್ಯಾನ್ ಸ್ವಾಮಿ ಸಾವಿನ ಸುದ್ದಿ ಅತ್ಯಂತ ವಿನಾಶಕಾರಿಯಂತೆ ಬಡಿದಪ್ಪಳಿಸಿದೆ. ಫಾಧರ್ ಮತ್ತು ಮಾನವ ಹಕ್ಕುಗಳ ಹೋರಾಟಗಾರ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟಿದ್ದಾರೆ. ಅವರನ್ನು 9 ತಿಂಗಳು ಕಾಲ ಸುಳ್ಳು ಆರೋಪಗಳಡಿ ಜೈಲಿನಲ್ಲಿರಿಸಲಾಗಿದೆ. ಮಾನವ ಹಕ್ಕುಗಳ ಹೋರಾಟಗಾರರನ್ನು ಜೈಲಿಗೆ ಕಳಿಸುವ ಪ್ರಭುತ್ವದ ದಮನಕಾರಿ ನೀತಿಗಳನ್ನು ಸಹಿಸಲು ಸಾಧ್ಯವಿಲ್ಲವೆಂದು” ಮೇರಿ ಲಾವ್ಲರ್ ಟ್ವೀಟ್ ಮಾಡಿದ್ದಾರೆ.

ಯುರೋಪಿಯನ್ ಯೂನಿಯನ್‌ನ ಎಮೋನ್ ಗ್ಲಿಮೋರ್‌ ಟ್ವೀಟ್ ಮಾಡಿ “ಭಾರತದಿಂದ ಬಂದಿರುವ ಸುದ್ದಿ ನನಗೆ ಆಘಾತವನ್ನುಂಟುಮಾಡಿದೆ. ಫಾಧರ್ ಸ್ಟ್ಯಾನ್ ಸ್ವಾಮಿ ನಮ್ಮನ್ನಗಲಿದ್ದಾರೆ. ಯುರೋಪಿಯನ್ ಯೂನಿಯನ್ ಸತತವಾಗಿ ಸ್ವಾಮಿ ಅವರ ಬಂಧನದ ವಿರುದ್ಧ ಭಾರತದ ಅಧಿಕಾರಗಳೊಂದಿಗೆ ಮಾತುಕತೆ ನಡೆಸುತ್ತಲೇ ಬಂದಿದೆ” ಎಂದಿದ್ದಾರೆ.

ಕಳೆದ ನವೆಂಬರ್‌ನಲ್ಲಿ ಸ್ವಿಟ್ಜರ್‌ಲ್ಯಾಂಡ್‌ನಲ್ಲಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ಸ್ಟ್ಯಾನ್‌ ಸ್ವಾಮಿ ಆರೋಗ್ಯದ ಕುರಿತಾಗಿ ತೀವ್ರ ಕಳವಳ ವ್ಯಕ್ತಪಡಿಸಿತ್ತು.

ಇದನ್ನೂ ಓದಿ: ಜೈಲಿನಲ್ಲಿರುವ ಸ್ಟ್ಯಾನ್‌ ಸ್ವಾಮಿಗೆ ಅಗತ್ಯ ಸೌಲಭ್ಯ ಖಚಿತ ಪಡಿಸಲು NHRC ಮಧ್ಯಪ್ರವೇಶಕ್ಕೆ ಒತ್ತಾಯ

ವಿಶ್ವಸಂಸ್ಥೆ ಸ್ಟ್ಯಾನ್‌ ಸ್ವಾಮಿ ಅಥವಾ ಇತರರನ್ನು ಎಲ್ಗರ್ ಪರಿಷತ್ ಪ್ರಕರಣದ ಆರೋಪಿಗಳೆಂದು ಪರಿಗಣಿಸಿಲ್ಲ. ಭಾರತದಲ್ಲಿ ಬಂಧನಕ್ಕೆ ಒಳಗಾದ ಹೋರಾಟಗಾರರು ವಯಸ್ಸು ಮತ್ತು ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರನ್ನು ಬಂಧನದಿಂದ ಬಿಡುಗಡೆ ಗೊಳಿಸಬೇಕೆಂದು ಭಾರತ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ಅಂತರಾಷ್ಟ್ರೀಯ ಮಾನವಹಕ್ಕುಗಳ ಆಯೋಗ ಕೂಡ ಹೇಳಿತ್ತು. ಈ ಸಂಬಂಧ ಕಳೆದ ಮಾರ್ಚ್‌ನಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗವು ಭಾರತ ಸರ್ಕಾರಕ್ಕೆ ಈ ಸಂಬಂಧ ಪತ್ರವನ್ನು ಸಹ ಬರೆದಿತ್ತು.

ಅಂತರಾಷ್ಟ್ರೀಯ ಸಮುದಾಯದ ಜೊತೆ ಭಾರತದ ವಿವಿಧ ಗಣ್ಯರು ರಾಜಕಾರಣಿಗಳು ಸ್ಟ್ಯಾನ್ ಸ್ವಾಮಿ ಸಾವಿಗೆ ಸಂತಾಪ ಸೂಚಿಸಿ ಸರ್ಕಾರದ ದಮನಕಾರಿ ನಿಲುವನ್ನು ತೀವ್ರವಾಗಿ ಖಂಡಿಸಿದ್ದಾರೆ. ಝಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್ ಸೊರೇನ್, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌,  ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ, ಶಶಿ ತರೂರ್ ಸೇರಿದಂತೆ ಇನ್ನೂ ಅನೇಕ ನಾಯಕರು ಸ್ಟ್ಯಾನ್ ಸ್ವಾಮಿ ಸಾವಿಗೆ ದುಃಖ ವ್ಯಕ್ತಪಡಿಸಿದ್ದಾರೆ.

 

ಹೇಮಂತ್‌ ಸೊರೇನ್ ಅವರು “ಝಾರ್ಖಂಡ್‌ ರಾಜ್ಯದಲ್ಲಿ ಫಾದರ್ ಸ್ವಾಮಿ ದಶಕಗಳ ಕಾಲ ಬುಡಕಟ್ಟು ಜನರ ಹಕ್ಕಿಗಾಗಿ ಹೋರಾಟ ನಡೆಸಿದ್ದರು. ಸೊರೇನ್ ಸ್ವಾಮಿ ಸಾವಿಗೆ ಕೇಂದ್ರ ಸರ್ಕಾರವೇ ಹೊಣೆ” ಎಂದು ಆರೋಪಿಸಿದ್ದಾರೆ.


ಇದನ್ನೂ ಓದಿ: ‘ಹೋರಾಟಗಾರರನ್ನು ಬಿತ್ತಲಾಗುತ್ತದೆ; ಹೂಳಲಾಗುವುದಿಲ್ಲ’ – ಸ್ಟಾನ್‌ಸ್ವಾಮಿ ನಿಧನಕ್ಕೆ ಒಕ್ಕೂಟ ಸರ್ಕಾರದ ವಿರುದ್ದ ದೇಶದಾದ್ಯಂತ ಆಕ್ರೋಶ

 

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here