Homeಮುಖಪುಟತೆಲಂಗಾಣ: ಸೆಲ್ಫಿ ತೆಗೆಯಲು ಹೋಗಿ ಕೆರೆಗೆ ಬಿದ್ದು ಮೂವರು ಅಪ್ರಾಪ್ತೆಯರ ದುರ್ಮರಣ

ತೆಲಂಗಾಣ: ಸೆಲ್ಫಿ ತೆಗೆಯಲು ಹೋಗಿ ಕೆರೆಗೆ ಬಿದ್ದು ಮೂವರು ಅಪ್ರಾಪ್ತೆಯರ ದುರ್ಮರಣ

- Advertisement -
- Advertisement -

ಸೆಲ್ಫಿ ತೆಗೆದುಕೊಳ್ಳಲು ಹೋಗಿ ಮೂವರು ಅಪ್ರಾಪ್ತ ಸಹೋದರಿಯರು ಕೆರೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ತೆಲಂಗಾಣದ ನಿರ್ಮಲ್ ಜಿಲ್ಲೆಯ ಶಿಂಗಾಂಗಮ್ ಗ್ರಾಮದಲ್ಲಿ ನಡೆದಿದೆ. ಸೆಲ್ಫಿ ಕ್ರೇಜ್‌ನಿಂದ ಬಲಿಯಾಗುತ್ತಿರುವವರ ಸಾಲಿಗೆ ಈ ಬಾಲಕಿಯರು ಸೇರಿದ್ದಾರೆ.

ಮೃತ ಬಾಲಕಿಯರನ್ನು ಸುನೀತಾ (16), ವೈಶಾಲಿ (14) ಮತ್ತು ಅಂಜಲಿ (14) ಎಂದು ಗುರುತಿಸಲಾಗಿದೆ. ಈ ಮೂವರು ಕಾಣೆಯಾಗಿದ್ದಾರೆ ಎಂದು ಪೋಷಕರು ಭಾನುವಾರ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮರುದಿನ (ಸೋಮವಾರ) ಗ್ರಾಮದ ಹೊರವಲಯದಲ್ಲಿರುವ ಕೆರೆಯಲ್ಲಿ ಮೂವರ ಮೃತದೇಹಗಳು ಪತ್ತೆಯಾಗಿವೆ.

ಮೂವರು ಸಹೋದರಿಯರು ಸೆಲ್ಫಿ ತೆಗೆದುಕೊಳ್ಳಲು ಕೆರೆಯ ಬಳಿ ಹೋಗಿದ್ದರು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

ಇದನ್ನೂ ಓದಿ: ತೆಲಂಗಾಣ: ಭೂ ಕಬಳಿಕೆ ಆರೋಪದಿಂದ ಟಿಆರ್‌ಎಸ್‌ ತೊರೆದಿದ್ದ ಮಾಜಿ ಸಚಿವ ಬಿಜೆಪಿ ಸೇರ್ಪಡೆ

ಬಾಲಕಿಯರಲ್ಲಿ ಒಬ್ಬಾಕೆ ಸೆಲ್ಫಿ ತೆಗೆದುಕೊಳ್ಳುವಾಗ ಆಯತಪ್ಪಿ ಕೆರೆಗೆ ಬಿದ್ದಿದ್ದು, ಆಕೆಯನ್ನು ಕಾಪಾಡಲು ಆಕೆಯ ಇಬ್ಬರು ಸಹೋದರಿಯರು ಕೆರೆಗೆ ಹಾರಿದ್ದಾರೆ. ದುರದೃಷ್ಟವಶಾತ್, ಮೂವರೂ ಕೆರೆಯಲ್ಲಿಯೇ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತೊಂದು ಘಟನೆಯಲ್ಲಿ, ಕಳೆದ ವರ್ಷ ನವೆಂಬರ್‌ನಲ್ಲಿ ಮಧ್ಯಪ್ರದೇಶದ ಇಂದೋರ್‌ನ ಹೊರವಲಯದಲ್ಲಿರುವ ಪ್ರವಾಸಿ ಸ್ಥಳದಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಬೆಟ್ಟದಿಂದ ಜಾರಿಬಿದ್ದು ಮಹಿಳೆ ಸಾವನ್ನಪ್ಪಿದ್ದರು.

ನೀತು ಮಹೇಶ್ವರಿ ಎಂದು ಮೃತರನ್ನು ಗುರುತಿಸಿದ್ದು, ಮಹಿಳೆ ತನ್ನ ಕುಟುಂಬದೊಂದಿಗೆ ಪ್ರವಾಸಕ್ಕಾಗಿ ಇಂದೋರ್‌ನ ಜಾಮ್ ಗೇಟ್‌ಗೆ ತೆರಳಿದ್ದರು. ಸೆಲ್ಫಿ ತೆಗೆದುಕೊಳ್ಳುವಾಗ ಆಯತಪ್ಪಿ ಬೆಟ್ಟದಿಂದ ಬಿದ್ದು ಸಾವನ್ನಪ್ಪಿದ್ದರು.

ದೇಶದಲ್ಲಿ ಇದೇ ರೀತಿ ಹಲವು ಪ್ರಕರಣಗಳು ವರದಿಯಾಗುತ್ತಿರುತ್ತವೆ. ಆದರೂ ಕೂಡ ಈ ಸೆಲ್ಫಿ ಕ್ರೇಜ್‌ಗೆ ಯುವಜನತೆಯ ಜೊತೆ ಜೊತೆಗೆ ಎಲ್ಲಾ ವಯೋಮಾನದವರು ಬಲಿಯಾಗುತ್ತಿರುವುದು ದುರಂತ.


ಇದನ್ನೂ ಓದಿ: ಕೊರೊನಾ ಭೀತಿ ಸೃಷ್ಟಿಸಿದ ಆರೋಪ: ಟಿವಿ ಪ್ಯಾನಲಿಸ್ಟ್‌ ವಿರುದ್ಧ ದೂರ ದಾಖಲಿಸಿದ ತೆಲಂಗಾಣ ಸರ್ಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...