ಉತ್ತರ ಪ್ರದೇಶದ ಸೀತಾಪುರದಲ್ಲಿ ಶಾಲಾ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕರ ಮೇಲೆ ಸ್ವದೇಶಿ ದೇಶ ನಿರ್ಮಿತ ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದಾನೆ. ಬಾಲಕನೂ 10ನೇ ತರಗತಿಯಲ್ಲಿ ಕಲಿಯುತ್ತಿದ್ದು, ಸಹಪಾಠಿಯೊಂದಿಗೆ ಜಗಲವಾಡಿದ್ದಕ್ಕೆ ಶಿಕ್ಷಕನೂ ಆತನಿಗೆ ಗದರಿಸಿದ್ದರು ಎನ್ನಲಾಗಿದೆ ಎಂದು ಎನ್‌ಡಿಟಿವಿ ವರದಿ ಹೇಳಿದೆ.
ಆರೋಪಿ ವಿದ್ಯಾರ್ಥಿ ಶಿಕ್ಷಕರ ಮೇಲೆ ಮೂರು ಸುತ್ತು ಗುಂಡು ಹಾರಿಸಿ ಬಂದೂಕಿನೊಂದಿಗೆ ಪರಾರಿಯಾಗಿದ್ದಾನೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಗುಂಡೇಟಿನಿಂದಾಗಿ ಶಿಕ್ಷಕ ಗಂಭೀರವಾಗಿ ಗಾಯಗೊಂಡಿದ್ದರೂ, ಪ್ರಸ್ತುತ ಅಪಾಯದಿಂದ ಪಾರಾಗಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್ ದೀಕ್ಷಿತ್ ತಿಳಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಲಕ್ನೋಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಯುಪಿ: ದಲಿತ ಬಾಲಕಿಗೆ ಶಿಕ್ಷಣ ನೀಡಲು ನಿರಾಕರಿಸಿದ ಶಿಕ್ಷಕಿ
ಘಟನೆಯು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದರಲ್ಲಿ ವಿದ್ಯಾರ್ಥಿಯು ಕೈಯಲ್ಲಿ ಗನ್ ಹಿಡಿದು ಶಿಕ್ಷಕನನ್ನು ಹಿಂಬಾಲಿಸುತ್ತಿರುವುದನ್ನು ಕಾಣುತ್ತದೆ. ಆದರೆ ಕೆಲವೇ ಕ್ಷಣಗಳಲ್ಲಿ ಅವನ ಕೈಯಿಂದ ಬಂದೂಕನ್ನು ಕಸಿದುಕೊಳ್ಳಲು ಶಿಕ್ಷಕನು ಪ್ರಯತ್ನಿಸುತ್ತಾರೆ.
Video: Class 10 Student Shoots Teacher Thrice In UP https://t.co/Nu1mUbLOdz pic.twitter.com/b9njp6aXaX
— NDTV (@ndtv) September 24, 2022
ಈ ವೇಳೆ ವಿದ್ಯಾರ್ಥಿಯು ತನ್ನ ಪಿಸ್ತೂಲಿನಿಂದ ಶಿಕ್ಷಕನ ಮೇಲೆ ಹಲ್ಲೆ ನಡೆಸುತ್ತಾನೆ. ಅಷ್ಟರಲ್ಲಿ ಪ್ರತ್ಯಕ್ಷದರ್ಶಿ ಕೂಡಾ ವಿದ್ಯಾರ್ಥಿಯ ಕೈಯಿಂದ ಬಂದೂಕು ಕಸಿದುಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ನಂತರ ಇನ್ನೂ ಕೆಲವರು ಧಾವಿಸಿ ಬಂದು ವಿದ್ಯಾರ್ಥಿಯನ್ನು ಹಿಡಿದುಕೊಳ್ಳುತ್ತಾರೆ. ಒಬ್ಬರು ಕೋಲಿನಿಂದ ಅವನನ್ನು ಬೆದರಿಸುವುದು ವಿಡಿಯೊದಲ್ಲಿ ಕಾಣಬಹುದು.
ಇದನ್ನೂ ಓದಿ: ಯಾದಗಿರಿ | ‘ತನ್ನ ಸಾವಿಗೆ ಶಿಕ್ಷಕರೇ ಕಾರಣ’; ಪತ್ರ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ದಲಿತ ವಿದ್ಯಾರ್ಥಿ
ತನ್ನ ವಾಗ್ದಂಡನೆಗೆ ಒಳಗಾಗಿದ್ದ ವಿದ್ಯಾರ್ಥಿಗೆ ಇಷ್ಟೊಂದು ಬೇಸರವಾಗಿದೆ ಎಂದು ತನಗೆ ತಿಳಿದಿರಲಿಲ್ಲ ಎಂದು ಶಿಕ್ಷಕರು ಹೇಳಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.


