Homeಕರ್ನಾಟಕಕೋಮು ಸಾಮರಸ್ಯ ಸಾರುವ ಉರುಸುಗಳು

ಕೋಮು ಸಾಮರಸ್ಯ ಸಾರುವ ಉರುಸುಗಳು

- Advertisement -
- Advertisement -

ಭಾರತದಲ್ಲಿರುವ ವಿವಿಧ ಸಮುದಾಯಗಳ ಜನರು ಅವರವರ ಸಂಪ್ರದಾಯದಂತೆ, ಅನೇಕ ಹಬ್ಬಗಳನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ಆಯಾ ಧರ್ಮಗಳ ಸಂಪ್ರದಾಯ, ಆಚರಣೆ, ರೀತಿ, ರಿವಾಜುಗಳು ಹಬ್ಬಗಳಲ್ಲಿ ಹೆಚ್ಚೆಚ್ಚು ವ್ಯಕ್ತವಾಗುತ್ತವೆ. ಮುಖ್ಯವಾಗಿ ಗ್ರಾಮೀಣ ಭಾಗಗಳಲ್ಲಿ ಎಲ್ಲಾ ಜಾತಿ, ಮತ, ಧರ್ಮಗಳ ಜನರು ಒಟ್ಟಾಗಿ ಕಲೆತು ಭೇದ-ಭಾವಗಳನ್ನು ಸ್ವಲ್ಪಮಟ್ಟಿಗಾದರೂ ತಗ್ಗಿಸಿಕೊಂಡು ’ಊರಹಬ್ಬ’ ’ಉರುಸು’ಗಳನ್ನು ಮಾಡುತ್ತಾರೆ. ಇವು ಸರ್ವಧರ್ಮ ಸಮನ್ವಯತೆಯ ಪ್ರತೀಕವಾಗಿವೆ. ಅನೇಕ ಸಂಸ್ಕೃತಿಗಳ ತವರೂರಾಗಿರುವ ಭಾರತ ದೇಶದಲ್ಲಿ ಜನಸಮುದಾಯಗಳ ಆಚರಣೆ, ಅನೇಕ ಜಾತಿ ಸಮುದಾಯಗಳ ಒಳಗೊಳ್ಳುವಿಕೆಯಿಂದ ಇವು ಆಕರ್ಷಕವಾಗಿ ಕಾಣುತ್ತವೆ. ಜಾತಿ ಸಂಘರ್ಷ, ವರ್ಗ ಸಂಘರ್ಷಗಳನ್ನು ತುಸುವಾದರೂ ದೂರ ಮಾಡುವ ಊರಹಬ್ಬದಂತಹ ಸಂಪ್ರದಾಯ, ಆಚರಣೆಗಳು, ಕೋಮುಸಂಘರ್ಷಕ್ಕೆ ಮುಖಾಮುಖಿಯಾಗಿ ನಿಲ್ಲುತ್ತವೆ. ಊರಹಬ್ಬಗಳು ಹಾಗೂ ಉರುಸುಗಳು ಮರೆತುಹೋಗಬಹುದಾದ ಸಂಬಂಧಗಳನ್ನು ಬೆಸೆಯುವಂತೆ ಮಾಡುತ್ತವೆ. ದ್ವೇಷಾಸೂಯೆಗಳನ್ನು ದೂರ ಮಾಡುವತ್ತ ನಡೆಯುವುದಲ್ಲದೆ, ಮತೀಯ ಸಾಮರಸ್ಯದ ಅವಶ್ಯಕತೆಯನ್ನು ಸಾರುತ್ತವೆ.

ಪವಾಡಗಳನ್ನು ಮಾಡಿದರೆಂದು ನಂಬಲಾಗಿರುವ ಮುಸ್ಲಿಂ ಸಾಧುಗಳ (ವಲಿ) ಸಮಾಧಿಗಳ ಬಳಿ ಉರುಸುಗಳನ್ನು ಮಾಡಲಾಗುತ್ತದೆ. ಅವರ ಪವಾಡಗಳ ಕಥೆಗಳು ಸ್ಥಳೀಯವಾಗಿ ಅಲ್ಲದೆ, ಬೇರೆ ಕಡೆಗಳಲ್ಲಿಯೂ ಪಸರಿಸಿ ಭಕ್ತರನ್ನು ಅವರ ಸಮಾಧಿಯ ಬಳಿಗೆ ಸೆಳೆಯುವ ನೂರಾರು ಉದಾಹರಣೆಗಳಿವೆ. ಹೀಗಾಗಿ ಇದರ ಬಗ್ಗೆ ವಿಶೇಷವಾದ ಭಕ್ತಿಭಾವಗಳು ಮೂಡಿವೆ. ಅಲ್ಲಿಗೆ ಬರುವ ಭಕ್ತಾದಿಗಳು ವಲಿಗಳ ಮೂಲಕ, ದೇವರಲ್ಲಿ (ಅಲ್ಲಾ)ನಲ್ಲಿ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ. ಹರಕೆಗಳನ್ನು ಕಟ್ಟಿಕೊಂಡು ತೀರಿಸುತ್ತಾರೆ. ಉರುಸಿಗೆ ಸಂಬಂಧಿಸಿದಂತೆ ಮಹಮ್ಮದೀಯ ಸಾಧುಗಳ ಪುಣ್ಯತಿಥಿಯ ಆಚರಣೆ, ಸಮಾಧಿಗಳ ಆರಾಧನೆ, ದರ್ಗಾಗಳ ಜ಼ಿಯಾರತ್, ನಮ್ಮ ಭಾರತ ದೇಶದಲ್ಲಿ ಮಾತ್ರ ಹೆಚ್ಚಾಗಿ ಕಂಡುಬರುತ್ತದೆ. ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಇರಾಕ್ ದೇಶಗಳಲ್ಲಿಯೂ ಕೂಡ ಈ ಸಂಪ್ರದಾಯವಿದೆ. ಆದರೆ ಇನ್ನುಳಿದ ಮುಸ್ಲಿಂ ರಾಷ್ಟ್ರಗಳಲ್ಲಿ ಇದು ಕಂಡುಬರುವುದಿಲ್ಲ. ಇಸ್ಲಾಂ ಧರ್ಮದ ಮೂಲಾಚರಣೆಗೆ ವ್ಯತಿರಿಕ್ತವಾದ ಆಚರಣೆಗಳು ಇವಾಗಿವೆ. ಹೀಗಿದ್ದರೂ ಇವು ಧಾರ್ಮಿಕ ಚೌಕಟ್ಟನ್ನು ಮೀರಿ ಜನಸಂಸ್ಕೃತಿಯಲ್ಲಿ ವಿಲೀನವಾಗಿವೆ. ಎಲ್ಲಾ ಸಮುದಾಯದವರು ಇದರಲ್ಲಿ ಭಾಗವಹಿಸುವುದು ಇದನ್ನು ಇನ್ನಷ್ಟು ವಿಶೇಷಗೊಳಿಸಿದೆ. ಭಾರತೀಯ ಜಾತ್ಯತೀತ ಮನೋಭಾವನೆ ಕಾಣಿಸಿಕೊಳ್ಳುವುದು-ಪ್ರಕಟಗೊಳ್ಳುವುದು ಹೀಗೆ.

ಕಳೆದ ತಿಂಗಳು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ತೊಂಡೆಬಾವಿ ಗ್ರಾಮದಲ್ಲಿ ಸೊಂದಲ್ ಆಚರಣೆಯನ್ನು ಏರ್ಪಡಿಸಲಾಗಿತ್ತು. ನನ್ನ ಮಡದಿಯ ತವರೂರಾಗಿರುವುದರಿಂದ ಅಲ್ಲಿಗೆ ಹೋಗಿದ್ದೆ. ಊರಿನಿಂದ ಸುಮಾರು ಅರ್ಧ ಕಿ.ಮೀ ದೂರದಲ್ಲಿರುವ ಮುಸ್ಲಿಂ ಸಮುದಾಯದ ಸ್ಮಶಾನದಲ್ಲಿ ’ಸಯ್ಯದ್ ಅಹ್ಮದ್ ಶೇಕ್ ಷಾ ಖಾದ್ರಿ’ ಅವರ ಗೋರಿಯಿದೆ. ಇವರು ಸುಮಾರು ಐನೂರು ವರ್ಷಗಳ ಹಿಂದೆ ಜೀವಿಸಿದ್ದ ಪವಾಡ ಪುರುಷರು. ಇಡೀ ಸ್ಮಶಾನವನ್ನು ದೀಪಗಳಿಂದ ಅಲಂಕರಿಸಲಾಗಿತ್ತು. ವಿಶೇಷವಾಗಿ ಅವರ ಸಮಾಧಿಯನ್ನು ಚಾದರ್‌ನಿಂದ ಮುಚ್ಚಿ ಅಲಂಕರಿಸಲಾಗಿತ್ತು. ಅದೇ ಸ್ಮಶಾನದ ಒಳಗೆ ಒಂದು ಹಳೆಯ ಕಾಲದ ಮಸೀದಿ ಇತ್ತು. ಅದನ್ನು ಸೂಕ್ಷ್ಮವಾಗಿ ಗಮನಿಸಿದಾಗ ಮಾತ್ರ ಅದು ಮಸೀದಿ ಎಂದು ಗೊತ್ತಾಗುವುದು. ಅದರ ಮೂಲಸ್ವರೂಪ ಮರೆಯಾಗುವಂತೆ ಸುಣ್ಣ ಬಣ್ಣ ಹೊಡೆದಿದ್ದರು. ಅದು ಶಿಥಿಲಾವಸ್ಥೆಯಲ್ಲಿ ಇದ್ದದ್ದರಿಂದಾಗಿ ಹಾಗೆ ಮಾಡಲಾಯಿತು ಎಂದು ವ್ಯವಸ್ಥಾಪಕರು ಸಮಜಾಯಿಷಿ ಕೊಟ್ಟರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಕತ್ತಲಾದ ಮೇಲೆ ಈ ’ಉರುಸ್’ನ ನೇತೃತ್ವ ವಹಿಸಿಕೊಂಡ ಮನೆಯಿಂದ ಸೊಂದಲ್ (ಗಂಧ)ವನ್ನು ಹೊರಡಿಸಲಾಯಿತು. ಅದಕ್ಕಿಂತ ಮೊದಲು ಎಲ್ಲರೂ ಸೇರಿ ’ದುವಾ’ ಮಾಡಿದರು. ಸೊಂದಲ್ ಮೆರವಣಿಗೆ ಹೊರಡುವುದೆಂದರೆ ಒಬ್ಬ ವ್ಯಕ್ತಿಯ ತಲೆಯ ಮೇಲೆ ಸಿಂಬಿ ಇಟ್ಟು, ಅದರ ಮೇಲೆ ಒಂದು ಚಿಕ್ಕ ಬೆಳ್ಳಿಯ ಬಿಂದಿಗೆಯಲ್ಲಿ ಸೊಂದಲ್(ಗಂಧ)ಅನ್ನು ಇಡಲಾಗುತ್ತದೆ. ಅದನ್ನು ಹೂವುಗಳಿಂದ ಅಲಂಕರಿಸಲಾಗಿರುತ್ತದೆ. ಇಡೀ ಊರಿನ ಜನ ಆ ವ್ಯಕ್ತಿಯ ಹಿಂದೆ ಹೊರಡುತ್ತಾರೆ. ’ಮುರ್ಷದ್’ಗಳ ಗುಂಪು ಈ ’ಜುಲುಸ್’ಅಲ್ಲಿ ಶಾಮೀಲಾಗಿರುತ್ತದೆ. ಅವರ ಕೈಯಲ್ಲಿರುವ ದೈರಾವಿರುತ್ತದೆ (ಒಂದು ಬಗೆಯ ವಾದ್ಯ). ಧಾರ್ಮಿಕ ಗೀತೆಗಳನ್ನು ಹಾಡುತ್ತಾ ಊರೂರು ಅಲೆದು ದವಸ ಧಾನ್ಯ, ಹಣವನ್ನು ಸಂಗ್ರಹಿಸುವ ’ಮುರ್ಷದ್’ ಅಥವಾ ’ಫಕೀರ’ರು ಈ ಮೆರವಣಿಗೆಯ ಉಸ್ತುವಾರಿ ವಹಿಸಿಕೊಂಡಿರುತ್ತಾರೆ. ಧಾರ್ಮಿಕ ಪ್ರತಿನಿಧಿಯಂತೆ, ಗುರುವಿನಂತೆ ಕಾಣಿಸಿಕೊಳ್ಳುವ ಇವರ ಮುಖದ ಮೇಲೆ ಗಡ್ಡ, ತಲೆಗೆ ಹಸಿರು ಪೇಟ, ಬಿಳಿ ಅಥವಾ ಹಸಿರು ಜುಬ್ಬಾ, ಪಟ್ಟಾಪಟ್ಟಿ ಪಂಚೆ, ಕುತ್ತಿಗೆಗೆ ದಪ್ಪಕಲ್ಲಿನ ಮಣಿಸರ ಧರಿಸಿರುತ್ತಾರೆ. ಕೈಯಲ್ಲಿರುವ ದೈರಾವನ್ನು ಬಾರಿಸುತ್ತಾ:

ಆಯೆ ಹೈ ಫುಕ್ರಾ (ಫಕೀರ್) ತಮಾಮ್
ಆಪ್‌ಕೆ ದರ್‌ಕೆ ಗುಲಾಮ್
ಅಹ್ಮದ್ ಷಾ ಬಾವಾ ಸುಬ್ ಹೋ ಶಾಮ್
ಲೇಲೋ ಹಮಾರ ಸಲಾಮ್
ಆಪ್ ಹೈ ಆಲೆ ನಬಿ
ಔರ್ ಹೈ ಔಲಾದೆ ಅಲಿ
ಇಸ್‌ಲಿಯೇ ಹೈ ಧೂಮ್ ಧಾಮ್ // ಲೇಲೋ ಹಮಾರ ಸಲಾಮ್//

ಎಂದು ಹಾಡುತ್ತಾರೆ. ನಿಮ್ಮ ಗುಲಾಮರಾದ ನಾವೆಲ್ಲ ಫಕೀರರು ನಿಮ್ಮ ದರ್ಬಾರಿಗೆ ಬಂದಿದ್ದೇವೆ. ಹಗಲು-ರಾತ್ರಿ ನಮ್ಮ ನಮಸ್ಕಾರಗಳನ್ನು ಪಡೆದುಕೊಳ್ಳಿ. ನೀವು ನಮ್ಮೆಲ್ಲರ ಪ್ರವಾದಿ ಹಾಗೂ ಸಯ್ಯದ್ ಅಹ್ಮದ್ ಶೇಕ್ ಖಾದ್ರಿ ಹಜ಼ರತ್ ಅಲಿ ಅವರ ಸಂತತಿ. ಹಾಗಾಗಿ ಇಷ್ಟೊಂದು ಸಂಭ್ರಮ ಇಲ್ಲಿ ಮನೆ ಮಾಡಿದೆ ಎಂದು ಹಾಡುತ್ತಾ, ಅವರ ಗುಣಗಾನ ಮಾಡುತ್ತಾ ಹೊರಡುತ್ತಾರೆ. ಹಜ಼ರತ್ ಹಸನ್-ಹುಸೇನ್‌ರವರ ಕಾಲಾನಂತರದಲ್ಲಿ ಈ ’ವಲಿ’ ಸಂಸ್ಕೃತಿ ಬೆಳೆಯಿತು ಎನ್ನುವುದು ಮಹಮ್ಮದೀಯರ ನಂಬಿಕೆ. ಈ ಮೆರವಣಿಗೆಯನ್ನು ನೋಡಲು ಎಲ್ಲ ಸಮುದಾಯಗಳ ಜನ ತಮ್ಮ ಮನೆಗಳ ಮುಂದೆ ಜನ ನಿಂತಿರುತ್ತಾರೆ. ಯಾವುದೇ ಪೂರ್ವಾಗ್ರಹದ ಅಸಹನೆಯ ಆಲೋಚನೆ ಅಥವಾ ಅಸಹಿಷ್ಣುತೆ ಇಲ್ಲದ ಅವರ ಮನಸ್ಸು ನಿಷ್ಕಲ್ಮಶವಾಗಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತದೆ. ತಮ್ಮ ಊರಿನ ತಮ್ಮ ಸಮುದಾಯದ ಹಬ್ಬವೆಂದೇ ಭಾವಿಸಿ ಅದರ ಭಾಗವಾಗುತ್ತಾರೆ. ಮುಸ್ಲಿಂ ಜನರ ಜೊತೆಗೆ ಬೇರೆ ಸಮುದಾಯದ ಹಲವರು ಮೆರವಣಿಗೆ ಉದ್ದಕ್ಕೂ ಧಾರ್ಮಿಕ ಹಾಡುಗಳನ್ನು ಹಾಡುತ್ತಾ, ಜನಪದ ಕಲೆಗಳನ್ನು ಪ್ರದರ್ಶನ ಮಾಡುತ್ತಾ ಹೊರಡುವುದು ವಿಶೇಷವಾಗಿದೆ. ಈ ತೊಂಡೆಬಾವಿಯ ’ಜುಲುಸ್’ನಲ್ಲಿ ಮುಸ್ಲಿಮೇತರ ಯುವಕರು ಕೂಡ ತಮಟೆ ಹೊಡೆಯುತ್ತಾ, ನೃತ್ಯ ಮಾಡುತ್ತಾರೆ. ಮೆರವಣಿಗೆಯ ಪ್ರಾರಂಭದಲ್ಲಿ ಸೊಂದಲ್ ಹೊತ್ತ ವ್ಯಕ್ತಿ, ನಂತರದಲ್ಲಿ ಧಾರ್ಮಿಕ ಹಾಡುಗಳನ್ನು ಹಾಡುತ್ತಿರುವ ಮುರ್ಷದ್‌ಗಳು, ಅವರ ಹಿಂದೆ ತಮಟೆಯನ್ನು ಬಾರಿಸುತ್ತಿರುವ ಯುವಕರು ನಡೆಯುತ್ತಾರೆ. ನಡುವೆ ’ವಲಿ’ಗಳ ಹೆಸರನ್ನು ಜೋರಾಗಿ ಕೂಗುತ್ತಾ ಕತ್ತಿ-ಕಠಾರಿಗಳಿಂದ ತಲೆ ಹಾಗೂ ಮೈಮೇಲೆ ಹೊಡೆದುಕೊಳ್ಳುವ ಕೆಲ ಫಕೀರರು ಹಾಗೂ ಚೂಪಾದ ಸಲಾಕಿಯನ್ನು ನಾಲಿಗೆಯ ಮಧ್ಯೆ ಚುಚ್ಚಿಕೊಂಡಿದ್ದರೂ ಅಲ್ಲಾನ ಧ್ಯಾನದಲ್ಲಿ ಮಗ್ನರಾಗಿರುವುದರಿಂದ ತಮಗೆ ಏನೂ ಆಗುವುದಿಲ್ಲವೆಂದು ನಂಬಿರುವ ಮುರ್ಷದ್‌ಗಳು, ಮೆರವಣಿಗೆಯ ಸೊಬಗನ್ನು ಸವಿಯುತ್ತಿರುವ ಜನ; ಹೀಗೆ ಅಲ್ಲಿನ ಅಸಂಖ್ಯಾತ ಭಕ್ತಾದಿಗಳ ಉದ್ದದ ಸಾಲು ಕಣ್ಮನ ಸೆಳೆಯುತ್ತದೆ. ಈ ಬಗೆಯ ವಿಭಿನ್ನತೆಗಳನ್ನು ಉರುಸ್‌ನ ಜುಲುಸ್ ಹೊಂದಿದ್ದು ಇದನ್ನು ನೋಡಲು ಬಂದವರ ಮನಸನ್ನೂ ಸೂರೆಗೊಳ್ಳುತ್ತದೆ. ಅಲ್ಲಲ್ಲಿ ಭಕ್ತಾದಿಗಳು ತಮ್ಮ ತಮ್ಮ ಮನೆಗಳ ಮುಂದೆ ’ಫಾತೇಹಾ’ ಓದಿಸುತ್ತಾರೆ. ಹೀಗೆ ಹೊರಡುವ ಜುಲುಸ್ ಕೊನೆಗೆ ಸಯ್ಯದ್ ಅಹ್ಮದ್ ಶೇಕ್ ಷಾ ಖಾದ್ರಿ ಅವರ ಸಮಾಧಿಯ ಬಳಿ ತಲುಪುತ್ತದೆ. ಮೆರವಣಿಗೆಯೊಂದಿಗೆ ತಂದ ಗಂಧ, ಪುಷ್ಪಗಳನ್ನು ಬಹಳ ಗೌರವ ಆದರಗಳಿಂದ ಗೋರಿಯ ಮೇಲೆ ಮುರ್ಷದ್‌ಗಳು ಏರಿಸುತ್ತಾರೆ. ಅನಂತರ ಉಳಿದ ಭಕ್ತಾದಿಗಳಿಗೆ ಗಂಧ, ಹೂವುಗಳನ್ನು ಏರಿಸುವುದಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಇದೇ ಸಮಯದಲ್ಲಿ ಒಂದು ಕಡೆ ಊಟದ ವ್ಯವಸ್ಥೆ ಮಾಡಲಾಗಿರುತ್ತದೆ. ಅಲ್ಲಿಯೂ ಎಲ್ಲ ತಾರತಮ್ಯತೆಗಳನ್ನು ಮೀರಿ ಪ್ರತಿಯೊಬ್ಬರಿಗೂ ಊಟ ಬಡಿಸಲಾಗುತ್ತದೆ. ಸಹಭೋಜನ ನಡೆಯುತ್ತದೆ.

ಅಲ್ಲಾನ ಕೃಪೆಗೆ ಒಳಗಾಗಿ ಇಹದ ಬದುಕಿನ ಬಗ್ಗೆ ನಿರಾಸಕ್ತರಾಗಿ ಸಾಧನೆಗೈದು ಸರ್ವರಿಗೂ ಒಳಿತನ್ನು ಯೋಚಿಸುವ ಅದರತ್ತ ಕೆಲಸ ಮಾಡುವ ಪವಾಡ ಪುರುಷರಾಗಿದ್ದವರು ಈ ’ವಲಿ’ಗಳು. ಇವರು ಅಲ್ಲಾನ ಮಿತ್ರರು ಎಂದು ನಂಬಲಾಗಿದೆ. ಇವರೆಲ್ಲರೂ ಜನಸಾಮಾನ್ಯರ ನಡುವೆ ಇದ್ದವರು. ಇವರ ಗೋರಿಯ ಬಳಿ ಹರಕೆ ಹೊತ್ತುಕೊಂಡರೆ ಅದು ಈಡೇರುತ್ತದೆ ಎಂಬುದನ್ನು ಎಲ್ಲಾ ಸಮುದಾಯದವರು ನಂಬಿ ನಡೆದುಕೊಂಡು ಬರುತ್ತಿದ್ದಾರೆ. ಕಷ್ಟಗಳು, ಸಮಸ್ಯೆಗಳು ನಿವಾರಣೆಯಾಗುತ್ತವೆ. ಮೈಮೇಲಿರುವ ಭೂತಪಿಶಾಚಿ, ಗಾಳಿಸೋಂಕಿನಂತಹ ಉಪದ್ರವದ ಕಾಟವಿದ್ದವರು ಗೋರಿಯ ಸುತ್ತ ಪ್ರದಕ್ಷಿಣೆ ಹಾಕಿದರೆ ಇವು ಮಂಗಮಾಯವಾಗುತ್ತದೆ ಎಂದು ಜನ ನಂಬಿದ್ದಾರೆ. ಇಂತಹ ನಂಬಿಕೆಗಳನ್ನು ವೈಜ್ಞಾನಿಕವಾಗಿ ಸಾಬೀತು ಮಾಡಲು ಸಾಧ್ಯವಿಲ್ಲದೇ ಹೋದರೂ, ಇವು ಜನರನ್ನು ಬೆಸೆಯುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಬಹುತೇಕ ದರ್ಗಾಗಳ ಮುಂದೆ ಹಿಂದೂ-ಮುಸ್ಲಿಂ ಎನ್ನದೇ ಬಡವ್ಯಾಪಾರಿಗಳು, ಅಲ್ಲಿ ಬರುವ ಭಕ್ತಾದಿಗಳಿಗೆ ಬೇಕಾಗುವ ಅವಶ್ಯಕ ವಸ್ತುಗಳ ವ್ಯಾಪಾರ ಮಾಡುತ್ತಾರೆ. ಆದ್ದರಿಂದ ಇವುಗಳನ್ನು ಕೋಮು ಸಾಮರಸ್ಯದ ತಾಣಗಳು ಎಂದೇ ಕರೆಯಬಹುದು.

ಕರ್ನಾಟಕದ ಬೇರೆಬೇರೆ ಭಾಗಗಳಲ್ಲಿಯೂ ಈ ಬಗೆಯ ಸಾಮರಸ್ಯದ ಉರುಸುಗಳನ್ನು ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತದೆ. ಗುಲಬರ್ಗಾದ ಖ್ವಾಜ ಬಂದೇನವಾಜ಼್, ಮುಳಬಾಗಿಲಿನ ಹಜ಼ರತ್ ಹೈದರಷಾವಲಿ, ಬಾಗಲಕೋಟೆಯ ಹಜ಼ರತ್ ಮೆಹಬೂಬ್ ಸುಬಾನಿ, ಲಕ್ಷ್ಮೇಶ್ವರದ ದೂದ ಪೀರಾ, ಇಳಕಲ್ಲದ ಮುರ್ತು ಜಾ ಖಾದ್ರಿ, ಬೆಂಗಳೂರಿನ ತವಕ್ಕಲ್ ಮಸ್ತಾನ್ ದರ್ಗಾ ಹೀಗೆ ಅನೇಕ ಪ್ರಮುಖ ದರ್ಗಾಗಳು ಕರ್ನಾಟಕದಲ್ಲಿವೆ. ಇಲ್ಲಿ ಎಲ್ಲ ಸಮುದಾಯದವರಿಗೂ ಭಾಗವಹಿಸಲು ಮುಕ್ತ ಅವಕಾಶವಿದೆ. ಯಾವ ನಿರ್ಬಂಧವೂ ಇಲ್ಲದೆ ವಲಿಗಳ ದರ್ಶನ ಪಡೆದುಕೊಳ್ಳಬಹುದು. ಹಾಗಾಗಿ ಇಂತಹ ತಾಣಗಳು ಕೋಮು ಸಾಮರಸ್ಯಕ್ಕೆ ಸಾಕ್ಷಿಯಾಗಿವೆ.

ಡಾ. ರಿಯಾಜ್ ಪಾಷಾ

ಡಾ. ರಿಯಾಜ್ ಪಾಷ
ರಿಯಾಜ್ ಅವರು ಪ್ರಸ್ತುತ ಯಲಹಂಕದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕನ್ನಡ ಸಹ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. “ಜನಪದ ಸಾಹಿತ್ಯದಲ್ಲಿ ವರ್ಗ ಸಂಘರ್ಷದ ನೆಲೆಗಳು” ವಿಷಯದ ಕುರಿತು ಸಂಶೋಧನೆ ನಡೆಸಿ ಕನ್ನಡ ವಿಶ್ವವಿದ್ಯಾಲಯದಿಂದ ಪಿ. ಹೆಚ್‌ಡಿ ಪದವಿ ಪಡೆದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ಟಿಪ್ಪು ಮತ್ತು ಮೈಸೂರು ಚರಿತ್ರೆ ಕುರಿತ ಎರಡು ಅಮೂಲ್ಯ ಬರಹಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...