ಅಮೆರಿಕಾ ಮೊದಲ ಮಹಿಳಾ ಉಪಾಧ್ಯಕ್ಷರನ್ನಾಗಿ ಕಮಲಾ ಹ್ಯಾರಿಸ್ ಅವರನ್ನು ಈಗ ಆಯ್ಕೆ ಮಾಡಿದೆ. ಆದರೆ ಭಾರತ 50 ವರ್ಷಗಳ ಹಿಂದೆಯೇ ಇಂದಿರಾ ಗಾಂಧಿಯನ್ನು ಪ್ರಧಾನಿಯಾಗಿ ಆಯ್ಕೆ ಮಾಡಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.
ಗುರುವಾರ ಮಾಜಿ ಪ್ರಧಾನಿ ಮತ್ತು ಅವರ ಅಜ್ಜಿ ದಿವಂಗತ ಇಂದಿರಾ ಗಾಂಧಿ ಅವರಿಗೆ ಗೌರವ ಸಲ್ಲಿಸಿ ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್ ಮಾಡಿದ್ದಾರೆ.
.@KamalaHarris 2020 में अमेरिका की पहली उप-राष्ट्रपति बनीं। आज इंदिरा जी की जयंती पर हमें एहसास होना चाहिए कि भारत की जनता ने 50 साल पहले ही एक महिला, श्रीमती इंदिरा गांधी को अपना प्रधानमंत्री चुना। इंदिरा जी का साहस व सामर्थ्य पूरे विश्व भर में महिलाओं को हमेशा प्रेरित करेगी। pic.twitter.com/nX3WYh2363
— Priyanka Gandhi Vadra (@priyankagandhi) November 19, 2020
“2020 ರಲ್ಲಿ ಅಮೆರಿಕದ ಮೊದಲ ಉಪಾಧ್ಯಕ್ಷರಾದರು. ಇಂದು ಇಂದಿರಾ ಜೀ ಅವರ ಜನ್ಮ ದಿನಾಚರಣೆಯಂದು, ಭಾರತದ ಜನರು 50 ವರ್ಷಗಳ ಹಿಂದೆ ಶ್ರೀಮತಿ ಇಂದಿರಾ ಗಾಂಧಿ ಎಂಬ ಮಹಿಳೆಯನ್ನು ತಮ್ಮ ಪ್ರಧಾನಿಯಾಗಿ ಆಯ್ಕೆ ಮಾಡಿಕೊಂಡರು ಎಂಬುದನ್ನು ನಾವು ಅರಿತುಕೊಳ್ಳಬೇಕು. ಇಂದಿರಾ ಜೀ ಅವರ ಧೈರ್ಯ ಮತ್ತು ಶಕ್ತಿ ಯಾವಾಗಲೂ ಜಗತ್ತಿನ ಎಲ್ಲಾ ಮಹಿಳೆಯರಿಗೆ ಸ್ಫೂರ್ತಿ ನೀಡುತ್ತದೆ” ಎಂದಿದ್ದಾರೆ.
ನವೆಂಬರ್ 19, 1917 ರಂದು ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಮತ್ತು ಕಮಲಾ ನೆಹರೂ ದಂಪತಿ ಪುತ್ರಿಯಾಗಿ ಇಂದಿರಾ ಗಾಂಧಿ ಜನಿಸಿದರು. ದೇಶದ ಮೊದಲ ಮತ್ತು ಏಕೈಕ ಮಹಿಳಾ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.


