ಈ ವಾರ ಟ್ವಿಟರ್ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, 2020 ರ ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ಸಂಬಂಧಿಸಿದಂತೆ ತಪ್ಪು ಮಾಹಿತಿ ನೀಡಿದ್ದಕ್ಕಾಗಿ ಸುಮಾರು 3 ಲಕ್ಷ ಟ್ವೀಟ್‌ಗಳನ್ನು ನಿರ್ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
“ವಿವಾದಿತ ಮತ್ತು ತಪ್ಪುದಾರಿಗೆಳೆಯುವ ವಿಷಯಕ್ಕಾಗಿ ಸುಮಾರು 3 ಲಕ್ಷ ಟ್ವೀಟ್‌ಗಳನ್ನು ನಮ್ಮ ಸಿವಿಕ್ ಸಮಗ್ರತೆ ನೀತಿಯಡಿಯಲ್ಲಿ ಲೇಬಲ್ ಮಾಡಲಾಗಿದೆ” ಎಂದು ಟ್ವಿಟರ್ ತನ್ನ ನವೆಂಬರ್ 12 ರ ಚುನಾವಣಾ ನೀತಿಯ ನವೀಕರಣದಲ್ಲಿ ಪ್ರಕಟಿಸಿದೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.
ಇದನ್ನೂ ಓದಿ: ಅಮೆರಿಕಾ ಚುನಾವಣೆ: ಇನ್ನೂ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಟ್ರಂಪ್- ಸರಣಿ ಟ್ವೀಟ್!
“ಈ ಅವಧಿಯಲ್ಲಿ ಕಳುಹಿಸಲಾದ ಎಲ್ಲಾ ಅಮೆರಿಕಾ ಚುನಾವಣಾ ಸಂಬಂಧಿತ ಟ್ವೀಟ್‌ಗಳಲ್ಲಿ ಇವು ಶೇಕಡಾ 0.2 ರಷ್ಟನ್ನು ಪ್ರತಿನಿಧಿಸುತ್ತವೆ” ಎಂದು ಮೈಕ್ರೋಬ್ಲಾಗಿಂಗ್ ಸೈಟ್ ಹೇಳಿದೆ.
ಎರಡು ವಾರಗಳ ಅವಧಿಯಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ 89 ಮಿಲಿಯನ್ ಅನುಯಾಯಿಗಳನ್ನುದ್ದೇಶಿಸಿ ಮಾಡಿದ ಕನಿಷ್ಠ 50 ಟ್ವೀಟ್ ಮತ್ತು ರಿಟ್ವೀಟ್‌ಗಳನ್ನು ನಿರ್ಬಂಧಿಸಿದೆ.
ಇದನ್ನೂ ಓದಿ: ಭಾರತ ಮೂಲದ ಕಮಲಾ ಹ್ಯಾರಿಸ್; ಅಮೆರಿಕಾದ ಮೊದಲ ಮಹಿಳಾ ಉಪಾಧ್ಯಕ್ಷೆಯಾದ ಕಥೆ!
ಚುನಾವಣಾ ತಪ್ಪು ಮಾಹಿತಿಯ ಹರಡುವಿಕೆಯನ್ನು ತಡೆಯಲು ಟ್ವಿಟರ್ ವೇದಿಕೆ ಈ ಕ್ರಮವನ್ನು ಕೈಗೊಂಡಿದೆ.
ತುದಿಗಾಲಿನಲ್ಲಿ ನಿಂತು ನಿರೀಕ್ಷಿಸುವಂತೆ ಮಾಡಿದ್ದ ಅಮೆರಿಕಾ ಚುನಾವಣೆಯಲ್ಲಿ ಜೋ ಬೈಡೆನ್ ಗೆಲುವು ಸಾಧಿಸಿದ್ದಾರೆ. ಆದರೆ ಟ್ರಂಪ್, ಜೋ ಬೈಡೆನ್‌ರ ಈ ಗೆಲುವನ್ನು ಇನ್ನೂ ಒಪ್ಪಿಕೊಂಡಿಲ್ಲ. ಬದಲಿಗೆ ನಾವೇ ಗೆಲ್ಲುತ್ತೇವೆ ಎನ್ನುವ ಭರವಸೆಯನ್ನು ಇನ್ನೂ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: Explainer: ಅಮೆರಿಕಾ ಚುನಾವಣಾ ಪದ್ದತಿ, ಅಧ್ಯಕ್ಷರ ಆಯ್ಕೆ ಮತ್ತು ಸಮಸ್ಯೆಗಳು


