ಪ್ರಜಾಪ್ರಭುತ್ವವನ್ನು ಹ್ಯಾಕ್ ಮಾಡಲು ಸಾಮಾಜಿಕ ಮಾಧ್ಯಮಗಳನ್ನು ದುರುಪಯೋಗ ಮಾಡಿಕೊಳ್ಳುವ ಅಪಾಯ ಹೆಚ್ಚುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷರಾದ ಸೋನಿಯಾ ಗಾಂಧಿ ಆತಂಕ ವ್ಯಕ್ತಪಡಿಸಿದ್ದು, “ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಚುನಾವಣಾ ರಾಜಕೀಯದಲ್ಲಿ ಫೇಸ್‌ಬುಕ್ ಮತ್ತು ಇತರ ಸಾಮಾಜಿಕ ಮಾಧ್ಯಮಗಳ ಮೂಲಕ ಆಗುತ್ತಿರುವ ಬಲಾಢ್ಯರ ವ್ಯವಸ್ಥಿತ ಹಸ್ತಕ್ಷೇಪವನ್ನು ಕೊನೆಗೊಳಿಸಬೇಕು” ಎಂದು ಅವರು ಆಗ್ರಹಿಸಿದ್ದಾರೆ.
ಲೋಕಸಭೆಯಲ್ಲಿ ಬುಧವಾರ ಶೂನ್ಯ ವೇಳೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಸೋನಿಯಾ ಅವರು, “ರಾಜಕೀಯ ಪಕ್ಷಗಳ ನಾಯಕರು ರಾಜಕೀಯ ನಿರೂಪಣೆಗಳಿಗಾಗಿ ಜಾಗತಿಕ ಕಂಪನಿಗಳಾದ ಫೇಸ್‌ಬುಕ್ ಮತ್ತು ಟ್ವಿಟರ್ ಅನ್ನು ಬಳಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
“ಜಾಗತಿಕ ಸಾಮಾಜಿಕ ಮಾಧ್ಯಮ ಕಂಪನಿಗಳು ಎಲ್ಲಾ ರಾಜಕೀಯ ಪಕ್ಷಗಳಿಗೆ ಸಮನಾದ ಅವಕಾಶವನ್ನು ಒದಗಿಸುತ್ತಿಲ್ಲ ಎಂಬುದು ಪದೇ ಪದೇ ಸಾರ್ವಜನಿಕ ಗಮನಕ್ಕೆ ಬಂದಿದೆ” ಎಂದು ಅವರು ತಿಳಿಸಿದ್ದಾರೆ.
‘ಅಲ್ ಜಜೀರಾ’ ಮತ್ತು ‘ದಿ ರಿಪೋಟರ್ಸ್ ಕಲೆಕ್ಟಿವ್’ನಲ್ಲಿ ಪ್ರಕಟವಾದ ವರದಿಗಳನ್ನು ಉಲ್ಲೇಖಿಸಿದ ಅವರು, ಇತರ ರಾಜಕೀಯ ಪಕ್ಷಗಳಿಗೆ ಹೋಲಿಸಿದರೆ ಚುನಾವಣಾ ಜಾಹೀರಾತುಗಳಿಗಾಗಿ ಆಡಳಿತಾರೂಢ ಬಿಜೆಪಿಗೆ ಫೇಸ್‌ಬುಕ್ ಹೆಚ್ಚಿನ ಅವಕಾಶ ನೀಡಿದೆ. ಸರ್ಕಾರದ ವಿರುದ್ಧ ಮಾತನಾಡುತ್ತಿದ್ದ ಎಲ್ಲರ ಧ್ವನಿಯನ್ನು ಹತ್ತಿಕ್ಕಲಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ವಿಷಯ ಬಹಳ ಗಂಭೀರವಾದದ್ದು ಎಂದಿರುವ ಅವರು, “ಅಧಿಕಾರ ಸ್ಥಾಪನೆಗೆ ಸಹಿಕರಿಸುವುದರ ಜೊತೆಗೆ ಫೇಸ್‌ಬುಕ್‌ನಿಂದ ಸಾಮಾಜಿಕ ಸಾಮರಸ್ಯವನ್ನು ಕದಡುತ್ತಿರುವುದು ನಮ್ಮ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾಗಿದೆ. ಭಾವನಾತ್ಮಕ ಸಂಗತಿಗಳ ತಪ್ಪು ಮಾಹಿತಿ, ನಕಲಿ ಜಾಹೀರಾತಿನ ಮೂಲಕ ಯುವ ಮತ್ತು ಹಿರಿಯರ ಮನಸ್ಸಿನಲ್ಲಿ ದ್ವೇಷ ತುಂಬಲಾಗುತ್ತಿದೆ. ಫೇಸ್ ಬುಕ್ ನಂತಹ ಕಂಪನಿಗಳು ಇದನ್ನು ಅರಿತು ಲಾಭ ಮಾಡಿಕೊಳ್ಳುತ್ತಿವೆ” ಎಂದು ಎಚ್ಚರಿಸಿದ್ದಾರೆ.
“ಅಧಿಕಾರ ಸ್ಥಾಪನೆ, ಫೇಸ್‌ಬುಕ್‌ನಂತಹ ಜಾಗತಿಕ ಸಾಮಾಜಿಕ ಮಾಧ್ಯಮ ಹಾಗೂ ದೈತ್ಯ ಕಂಪನಿಗಳ ನಡುವೆ ಬೆಳೆಯುತ್ತಿರುವ ಸಂಬಂಧವನ್ನು ಈಗ ಬಹಿರಂಗವಾಗಿರುವ ವರದಿಗಳು ತೋರಿಸುತ್ತವೆ. ಇದು ಪಕ್ಷಪಾತದ ರಾಜಕೀಯವನ್ನು ಮೀರಿದೆ. ಯಾರು ಅಧಿಕಾರದಲ್ಲಿದ್ದರೂ ನಮ್ಮ ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ಸಾಮರಸ್ಯವನ್ನು ನಾವು ರಕ್ಷಿಸಬೇಕಾಗಿದೆ” ಎಂದು ಅವರು ಮನವಿ ಮಾಡಿದ್ದಾರೆ.
ಆಲ್‌ಜಜೀರಾ ವರದಿಯಲ್ಲಿ ಏನಿತ್ತು?
ನ್ಯೂ ಎಮರ್ಜಿಂಗ್ ವರ್ಲ್ಡ್ ಆಫ್ ಜರ್ನಲಿಸಂ ಲಿಮಿಟೆಡ್‌ನ ಸಂಕ್ಷಿಪ್ತ ರೂಪವಾಗಿರುವ NEWJ ಬಿಲಿಯನೇರ್ ಮುಖೇಶ್ ಅಂಬಾನಿಯವರ ರಿಲಯನ್ಸ್ ಗ್ರೂಪ್ ಒಡೆತನದ ಭಾರತದ ಅತಿದೊಡ್ಡ ಟೆಲಿಕಾಂ ಮತ್ತು ಇಂಟರ್ನೆಟ್ ಕಂಪನಿ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್‌ನ ಅಂಗಸಂಸ್ಥೆಯಾಗಿದೆ! ಈ ಫೇಸ್‌ಬುಕ್ ಪುಟವು ಹಿಂದಿ, ಇಂಗ್ಲಿಷ್, ಕನ್ನಡ, ತೆಲುಗು ಸೇರಿದಂತೆ ಭಾರತದ ಬಹುತೇಕ ಭಾಷೆಗಳಲ್ಲಿದೆ ಮತ್ತು ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುತ್ತಾ ಬಿಜೆಪಿಗೆ ರಾಜಕೀಯ ಅನುಕೂಲ ಮಾಡಿಕೊಡುತ್ತಿದೆ ಎಂದು ವಿಸ್ತೃತವಾಗಿ ಆಲ್‌ಜಜೀರಾ ವರದಿ ಮಾಡಿದೆ. (ವರದಿಯ ಅನುವಾದ ‘ಇಲ್ಲಿ’ ಓದಿರಿ)
ರಿಪೋಟರ್ಸ್ ಕಲೆಕ್ಟಿವ್ ಮತ್ತು ಆಡ್.ವಾಚ್ ವರದಿಯಲ್ಲಿ ಏನಿದೆ?
ಇತರ ವಿರೋಧ ಪಕ್ಷಗಳಿಗೆ ಹೋಲಿಸಿದರೆ ಫೇಸ್‌ಬುಕ್ ಬಿಜೆಪಿಗೆ ಹೆಚ್ಚಿನ ಅನುಕೂಲ ಮಾಡಿಕೊಟ್ಟಿದೆ. ಉಳಿದ ಪಕ್ಷಗಳಿಗಿಂತ ಬಿಜೆಪಿಯ ಜಾಹೀರಾತಿಗಳಿಗೆ ಕಡಿಮೆ ಮೊತ್ತವನ್ನೂ ಪಡೆದಿದೆ ಎಂದು ರಿಪೋಟರ್ಸ್ ಕಲೆಕ್ಟಿವ್ ಮತ್ತು ಆಡ್.ವಾಚ್ ನಡೆಸಿದ ವೆಚ್ಚದ ವಿಶ್ಲೇಷಣೆಯಲ್ಲಿ ಬಹಿರಂಗವಾಗಿದೆ. 2019ರ ಲೋಕಸಭಾ ಚುನಾವಣೆ ಸೇರಿದಂತೆ 10 ಚುನಾವಣೆಗಳಲ್ಲಿ ಒಂಬತ್ತರಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ. ಬಿಜೆಪಿಯು ತನ್ನ ವಿರೋಧಿಗಳಿಗಿಂತ ಕಡಿಮೆ ದರವನ್ನು ಫೇಸ್‌ಬುಕ್ ಜಾಹೀರಾತುಗಳಿಗೆ ವಿಧಿಸಿದೆ ಎಂದು ತಿಳಿದುಬಂದಿದೆ. (ಪೂರ್ಣ ವರದಿ ‘ಇಲ್ಲಿ’ ಓದಿರಿ)
ಇದನ್ನೂ ಓದಿರಿ: ಲಾಯರ್ ಜಗದೀಶ್ ಬಿಡುಗಡೆ; ಫೇಸ್‌ಬುಕ್ ಲೈವ್ ಮೂಲಕ ಜೈಲ್ ಡೈರಿ ರಿವೀಲ್



Madam Every one was knowing about congress defeat. Take wise desision merge with bigger parties to save democracy. and fight for removal of EVMs