Homeಮುಖಪುಟಚುನಾವಣಾ ಜಾಹೀರಾತು: ಬಿಜೆಪಿಗೆ ಹೆಚ್ಚು ಅನುಕೂಲ ಮಾಡಿಕೊಟ್ಟ ಫೇಸ್‌ಬುಕ್!

ಚುನಾವಣಾ ಜಾಹೀರಾತು: ಬಿಜೆಪಿಗೆ ಹೆಚ್ಚು ಅನುಕೂಲ ಮಾಡಿಕೊಟ್ಟ ಫೇಸ್‌ಬುಕ್!

ಇತರ ಪಕ್ಷಗಳಿಗೆ ಹೋಲಿಸಿದರೆ ಬಿಜೆಪಿಯಿಂದ ಕಡಿಮೆ ಮೊತ್ತವನ್ನು ಪಡೆದು ಫೇಸ್‌ಬುಕ್‌ ಚುನಾವಣಾ ಜಾಹೀರಾತುಗಳನ್ನು ಪ್ರಕಟಿಸುತ್ತಿದೆ ಎಂಬ ಆತಂಕಕಾರಿ ಸಂಗತಿಯನ್ನು ರಿಪೋಟರ್ಸ್ ಕಲೆಕ್ಟಿವ್ ಮತ್ತು ಆಡ್‌.ವಾಚ್‌ ವರದಿ ಬಹಿರಂಗಪಡಿಸಿದೆ. (ಬಿಜೆಪಿ ಎಷ್ಟು ಪಾವತಿಸಿದೆ? ಇತರ ಪಕ್ಷಗಳು ಎಷ್ಟು ಪಾವತಿಸಿವೆ? ವಿವರಗಳಿಗೆ ಓದಿ ಮುಂದೆ ಓದಿ...)

- Advertisement -
- Advertisement -

ಇತರ ವಿರೋಧ ಪಕ್ಷಗಳಿಗೆ ಹೋಲಿಸಿದರೆ ಫೇಸ್‌ಬುಕ್‌ ಬಿಜೆಪಿಗೆ ಹೆಚ್ಚಿನ ಅನುಕೂಲ ಮಾಡಿಕೊಟ್ಟಿದೆ. ಉಳಿದ ಪಕ್ಷಗಳಿಗಿಂತ ಬಿಜೆಜೆಯ ಜಾಹೀರಾತಿಗಳಿಗೆ ಕಡಿಮೆ ಮೊತ್ತವನ್ನೂ ಪಡೆದಿದೆ ಎಂದು ರಿಪೋರ್ಟರ್ಸ್ ಕಲೆಕ್ಟಿವ್ ಮತ್ತು ಆಡ್‌.ವಾಚ್‌ ನಡೆಸಿದ ವೆಚ್ಚದ ವಿಶ್ಲೇಷಣೆಯು ಬಹಿರಂಗವಾಗಿದೆ.

2019ರ ಲೋಕಸಭಾ ಚುನಾವಣೆ ಸೇರಿದಂತೆ 10 ಚುನಾವಣೆಗಳಲ್ಲಿ ಒಂಬತ್ತರಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ. ಬಿಜೆಪಿಯು ತನ್ನ ವಿರೋಧಿಗಳಿಗಿಂತ ಕಡಿಮೆ ದರವನ್ನು ಫೇಸ್‌ಬುಕ್‌‌ ಜಾಹೀರಾತುಗಳಿಗೆ ವಿಧಿಸಿದೆ. ಭಾರತದಲ್ಲಿ ಫೇಸ್‌ಬುಕ್‌ನ ಅತಿದೊಡ್ಡ ರಾಜಕೀಯ ಗ್ರಾಹಕನಾಗಿ ಬಿಜೆಪಿ ಬೆಳೆದಿದ್ದು, ಕಡಿಮೆ ಹಣಕ್ಕೆ ಹೆಚ್ಚಿನ ಮತದಾರರನ್ನು ತಲುಪಲು ಫೇಸ್‌ಬುಕ್‌ ಅನುವು ಮಾಡಿಕೊಟ್ಟಿದೆ. ಚುನಾವಣಾ ಪ್ರಚಾರಗಳಲ್ಲಿ ಬಿಜೆಪಿಗೆ ಹೆಚ್ಚಿನ ಅನುಕೂಲವಾಗಲು ಇದು ಸಹಕಾರಿಯಾಗಿದೆ” ಎಂದು ವರದಿ ಹೇಳಿದೆ.

“ಸರಾಸರಿಯಾಗಿ, ಒಂದು ಜಾಹೀರಾತನ್ನು ಒಂದು ಮಿಲಿಯನ್ ಬಾರಿ ತೋರಿಸಲು ಬಿಜೆಪಿ, ಅದರ ಅಭ್ಯರ್ಥಿಗಳು ಮತ್ತು ಅಂಗಸಂಸ್ಥೆಗಳಿಗೆ ಫೇಸ್‌ಬುಕ್‌ 41,844 ರೂಪಾಯಿಗಳನ್ನು ವಿಧಿಸಿದೆ. ಆದರೆ ಇಷ್ಟೇ ಪ್ರಮಾಣದ ವೀವ್ಸ್‌‌ ಗಳಿಸಲು ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್, ಅದರ ಅಭ್ಯರ್ಥಿಗಳು ಮತ್ತು ಅಂಗಸಂಸ್ಥೆಗಳಿಗೆ 53,776 ರೂಪಾಯಿಗಳನ್ನು ಫೇಸ್‌ಬುಕ್‌ ವಿಧಿಸಿದೆ. ಬಿಜೆಪಿಗಿಂತ ಸುಮಾರು ಶೇ. 29 ಹೆಚ್ಚು ಮೊತ್ತವನ್ನು ವಿರೋಧ ಪಕ್ಷಗಳು ಪಾವತಿಸಬೇಕಾಗಿತ್ತು” ಎಂಬುದು ವರದಿಯಿಂದ ತಿಳಿದುಬಂದಿದೆ.

ತನಿಖೆ ನಡೆಸಿರುವ ಸಂಸ್ಥೆಗಳು ಪ್ರಾಥಮಿಕವಾಗಿ ಬಿಜೆಪಿಯನ್ನು ಕಾಂಗ್ರೆಸ್‌ನೊಂದಿಗೆ ಹೋಲಿಸಿ ವಿಶ್ಲೇಷಣೆ ಮಾಡಿವೆ. ಏಕೆಂದರೆ ಈ ಎರಡು ಪಕ್ಷಗಳು ರಾಜಕೀಯ ಜಾಹೀರಾತುಗಳಿಗೆ ಅತಿ ಹೆಚ್ಚು ಖರ್ಚು ಮಾಡುತ್ತಿವೆ. ವಿಶ್ಲೇಷಣೆಗೆ ಒಳಪಡಿಸಲಾಗಿರುವ 10 ಚುನಾವಣೆಗಳಲ್ಲಿ ಒಂಬತ್ತರಲ್ಲಿ ಬಿಜೆಪಿಗೆ ಅನುಕೂಲಕರ ವ್ಯವಹಾರ ಕುದಿರಿದೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.

22 ತಿಂಗಳ ಅವಧಿಯಲ್ಲಿನ ದತ್ತಾಂಶಗಳ ಪ್ರಕಾರ, ಬಿಜೆಪಿ ಮತ್ತು ಅದರ ಅಂಗಸಂಸ್ಥೆಗಳು ತಮ್ಮ ಅಧಿಕೃತ ಪುಟಗಳ ಮೂಲಕ ಫೇಸ್‌ಬುಕ್‌ನಲ್ಲಿ ಜಾಹೀರಾತುಗಳನ್ನು ನೀಡಲು ಒಟ್ಟು 104.1 ಮಿಲಿಯನ್ ರೂಪಾಯಿಗಳಿಗಿಂತ ಹೆಚ್ಚು ಖರ್ಚು ಮಾಡಿದೆ. ಇದಕ್ಕೆ ಪ್ರತಿಯಾಗಿ, ಕಾಂಗ್ರೆಸ್ ಮತ್ತು ಅದರ ಅಂಗಸಂಸ್ಥೆಗಳು 64.4 ಮಿಲಿಯನ್ ರೂಪಾಯಿಗಳನ್ನು ಖರ್ಚು ಮಾಡಿವೆ.

ಬಿಜೆಪಿ ಹಾಗೂ ಕಾಂಗ್ರೆಸ್ ನಿಗದಿತ ವೀವ್ಸ್‌ಗಳಿಗಾಗಿ ಖರ್ಚು ಮಾಡಿದ ದರವನ್ನು ಹೋಲಿಸಿ ನೋಡಿದರೆ, ಕನಿಷ್ಠ 11.7 ಮಿಲಿಯನ್‌ ರೂ.ಗಳನ್ನು ಕಾಂಗ್ರೆಸ್‌ ಹೆಚ್ಚುವರಿಯಾಗಿ ಪಾವತಿಸಿದೆ. ಕಾಂಗ್ರೆಸ್‌ ಮೇಲೆ ಹೆಚ್ಚಿನ ದರವನ್ನು ಫೇಸ್‌ಬುಕ್‌ ವಿಧಿಸಿದೆ.

ಒಡಿಶಾ, ಅರುಣಾಚಲ ಪ್ರದೇಶ, ಸಿಕ್ಕಿಂ ಮತ್ತು ಆಂಧ್ರಪ್ರದೇಶದ ರಾಜ್ಯ ಚುನಾವಣೆ ಹಾಗೂ 2019ರ ಲೋಕಸಭಾ ಚುನಾವಣೆಗಳಿಗೆ ಮುನ್ನ ಮೂರು ತಿಂಗಳ ಪ್ರಚಾರಕ್ಕಾಗಿ ಫೇಸ್‌ಬುಕ್‌ ಅಲ್ಗಾರಿದಮ್ ಹೇಗೆ ಕೆಲಸ ಮಾಡಿತ್ತೆಂಬುದನ್ನು ವರದಿ ಉಲ್ಲೇಖಿಸಿದೆ.

ಫೇಸ್‌ಬುಕ್‌ನ ಅಲ್ಗಾರಿದಮ್ ಮೂಲಕ 1 ಮಿಲಿಯನ್ ವೀವ್ಸ್‌ಗಳನ್ನು ಪಡೆಯಲು ಬಿಜೆಪಿ ಮತ್ತು ಅದರ ಅಭ್ಯರ್ಥಿಗಳಿಗೆ ಸರಾಸರಿ 61,584 ರೂಪಾಯಿಗಳನ್ನು ವಿಧಿಸಲಾಗಿತ್ತು. ಆದರೆ ಅದೇ ಸಂಖ್ಯೆಯ ವೀವ್ಸ್‌ಗಳಿಗೆ ಕಾಂಗ್ರೆಸ್ 66,250 ರೂಪಾಯಿಗಳನ್ನು ಪಾವತಿಸಿದೆ.

“ಹರಿಯಾಣ ಮತ್ತು ಜಾರ್ಖಂಡ್‌ನಲ್ಲಿ ನಡೆದ ರಾಜ್ಯ ಚುನಾವಣೆಗಳಲ್ಲೂ  ಇದೇ ರೀತಿಯ ವ್ಯತ್ಯಾಸಗಳನ್ನು ಗುರುತಿಸಲಾಗಿದೆ. 2020ರ ದೆಹಲಿ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ, ಕಾಂಗ್ರೆಸ್ ಮತ್ತು ಅದರ ಅಭ್ಯರ್ಥಿಗಳು ಫೇಸ್‌ಬುಕ್‌ಗೆ ಸರಾಸರಿ ಪ್ರತಿ ಮಿಲಿಯನ್ ವೀಕ್ಷಣೆಗೆ 39,909 ರೂಪಾಯಿಗಳನ್ನು ಪಾವತಿಸಿದ್ದಾರೆ. ಆದರೆ ಬಿಜೆಪಿ ಪಾವತಿಸಿದ್ದು ಕೇವಲ 35,596 ರೂಪಾಯಿಗಳು ಮಾತ್ರ. ಬಿಜೆಪಿಯ ಪ್ರತಿಸ್ಪರ್ಧಿಯಾಗಿ ದೆಹಲಿ ಚುನಾವಣೆಯಲ್ಲಿ ಗೆದ್ದ ಆಮ್ ಆದ್ಮಿ ಪಕ್ಷದ (ಎಎಪಿ) ಪ್ರತಿ ಮಿಲಿಯನ್ ವೀಕ್ಷಣೆಗೆ 64,173 ರೂಪಾಯಿ ವಿಧಿಸಲಾಯಿತು. ಈ ಮೊತ್ತವು ಬಿಜೆಪಿ ಪಾವತಿಸಿದ್ದಕ್ಕಿಂತ ಶೇ. 80 ಹೆಚ್ಚಿತ್ತು” ಎಂದು ವರದಿ ಆತಂಕಪಡಿಸಿದೆ.

ವರದಿ ಕೃಪೆ: ದಿ ವೈರ್‌‌


ಇದನ್ನೂ ಓದಿರಿ: ಬಿಜೆಪಿ ಪರ ಪ್ರಚಾರ ಮಾಡುತ್ತಿರುವ NEWJ ಫೇಸ್‌ಬುಕ್ ಪೇಜ್: ದುಡ್ಡು ಮಾತ್ರ ಅಂಬಾನಿಯದ್ದು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...