ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷದ ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಗಾಂಧಿ ಕುಟುಂಬದ ಬಿಜೆಪಿ ನಾಯಕರಾದ ಮೇನಕಾ ಗಾಂಧಿ ಮತ್ತು ವರುಣ್ ಗಾಂಧಿ ಅವರನ್ನು ಕೈಬಿಡಲಾಗಿದೆ.
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಬಿಜೆಪಿ 30 ಮಂದಿ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಜನವರಿ 19 ರಂದು ಬಿಡುಗಡೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಜೆಪಿ ನಡ್ಡಾ ಅವರ ಹೆಸರುಗಳು ಪಟ್ಟಿಯಲ್ಲಿ ಮೊದಲಿವೆ.
ಈ ಹಿಂದೆ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಿಂದ ತಾಯಿ ಮಗನನ್ನು ಕೈಬಿಟ್ಟ ನಂತರ ಪಕ್ಷದ ಸದಸ್ಯರ ನಡುವೆ ಎಲ್ಲವು ಸರಿಯಿಲ್ಲ ಎಂಬ ಬಗ್ಗೆ ವದಂತಿ ಹಬ್ಬಿತ್ತು. ಈಗ ಇಬ್ಬರನ್ನು ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಹೊರಗಿಟ್ಟಿರುವುದು ಈ ವದಂತಿಗಳಿಗೆ ಮತ್ತಷ್ಟು ಪುಷ್ಠಿ ನೀಡಿದೆ. ಮೇನಕಾ ಮತ್ತು ವರುಣ್ ಗಾಂಧಿ ಅವರು ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ ಸುಲ್ತಾನ್‌ಪುರ ಮತ್ತು ಪಿಲಿಭಿತ್‌ನಿಂದ ಜಯ ಗಳಿಸಿದ್ದಾರೆ.
ಇದನ್ನೂ ಓದಿ: ರೈತರ ಪರ ಟ್ವೀಟ್: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಿಂದ ವರುಣ್ ಗಾಂಧಿ, ಮೇನಕಾ ಗಾಂಧಿ ಔಟ್
ರೈತರ ಸಮಸ್ಯೆ ಮತ್ತು ಉತ್ತರ ಪ್ರದೇಶದ ಲಖಿಂಪುರ್ ಖೇರಿಯ ಘಟನೆಗಳನ್ನು ಖಂಡಿಸಿ ಬಿಜೆಪಿ ಸಂಸದ ವರುಣ್ ಗಾಂಧೀ ಪದೇ ಪದೇ ಟ್ವೀಟ್ ಮಾಡುತ್ತಿದ್ದರು. ಕೇಂದ್ರ ಸಚಿವ ಅಜಯ್ ಮಿಶ್ರಾ ತೆನಿ ಅವರ ಪುತ್ರ ಕಾರಣ ಎನ್ನಲಾಗಿರುವ ಲಖಿಂಪುರ್ ಖೇರಿ ಹತ್ಯಾಕಾಂಡದ ಬಗ್ಗೆ ಹಲವು ಬಾರಿ ಪ್ರಶ್ನಿಸಿದ್ದಾರೆ.
ಆರೋಪಿ ಆಶಿಶ್ ಮಿಶ್ರಾ ಬಂಧನಕ್ಕೆ ತ್ವರಿತ ಕ್ರಮ ಕೈಗೊಳ್ಳದ ಕೇಂದ್ರ ಮತ್ತು ರಾಜ್ಯದಲ್ಲಿನ ಬಿಜೆಪಿ ಸರ್ಕಾರವನ್ನು ಸೂಕ್ಷ್ಮವಾಗಿ ದೂಷಿಸಿದ್ದರು. ಈ ಕಾರಣದಿಂದ ಅವರನ್ನು ಕಾರ್ಯಕಾರಿಣಿಯಿಂದ ಕೈಬಿಡಲಾಗಿದೆ ಎನ್ನುವ ವದಂತಿಗಳು ಹರಡಿದ್ದವು. ಈಗ ಮತ್ತೆ ಸ್ಟಾರ್ ಪ್ರಚಾರಕರ ಪಟ್ಟಿಯಿಂದಲೂ ಕೈಬಿಡಲಾಗಿದೆ.
ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಮೊದಲ ಹೆಸರು ಪ್ರಧಾನಿ ನರೇಂದ್ರ ಮೋದಿ, ನಂತರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಇದ್ದಾರೆ. ಇವರ ಜೊತೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಮತ್ತು ಗೋರಖ್‌ಪುರದ ಬಿಜೆಪಿ ಅಭ್ಯರ್ಥಿ ಯೋಗಿ ಆದಿತ್ಯನಾಥ್, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ ಮತ್ತು ರಾಜ್ಯ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಸೇರಿದ್ದಾರೆ.
ಯುಪಿ ವಿಧಾನಸಭಾ ಚುನಾವಣೆ ಫೆಬ್ರವರಿ 10 ರಿಂದ ಮಾರ್ಚ್ 7 ರವರೆಗೆ ಏಳು ಹಂತಗಳಲ್ಲಿ ನಡೆಯಲಿದೆ. ಮಾರ್ಚ್ 10 ರಂದು ಫಲಿತಾಂಶ ಪ್ರಕಟವಾಗಲಿದೆ.
ಇದನ್ನೂ ಓದಿ: ರೈತ ಪರ ದನಿ ಎತ್ತಿದ ಬಿಜೆಪಿ ನಾಯಕರಿಗೆ ರಾಷ್ಟ್ರೀಯ ಕಾರ್ಯಕಾರಿಣಿಯಿಂದ ಗೇಟ್‌ಪಾಸ್



ಕಟ್ಟಾ ಹಿಂದೂ.ಧರ್ಮದ ದಪರವಾಗಿ ಹೋರಾಡುತ್ತಿದ್ದ ಮಹಾ ಸಾಂಮ್ರಟ ಶಿವಾಜಿಮಹಾರಾಜರು ಸಿಂಹಾಸನವನ್ನೇರವ ಸಮಯದಲ್ಲಿ ಮಹಾರಾಷ್ಟ್ರದ ಯಾವ ಬ್ರಾಹ್ಮಣರು ಮುಂದೆಬರಲಿಲ್ಲವೆಂದು ತಿಳಿಯಿತು.
ಈ ಪಟ್ಟಾಳಭಿಷೇಕ ಕಾರ್ಯಕ್ರಮಕ್ಕೆ ಕಲ್ಕತ್ತಾ ನಗರದಿಂದಾ ಬ್ರಾಹ್ಮಣರನ್ನು ಕರೆಸಿದ್ದರು ಅವರೂ ಕೂಡ ಅತ್ಯಂತ ಹೀನವಾಗಿ ಮರಾಠರೊಡನೆ ನಡೆದು ಕೊಂಡರು ಎಂದು ತಿಳಿಯಿತು.
ಇದರ ಬಗೆಗಿನ ಇತರೆವಿಶಯವನ್ನು ಸಂಪೂರ್ಣ ತಿಳಿಸಲು ತಮ್ಮಿಂದ ಸಾದ್ಯವಾರೆ ಬಹಳ ಕಾಲದಿಂದ ಹಾತೊರೆಯುವ ಮನಗಳಿಗೆ ಸಂತೋಷವಾಗುತ್ತದೆ.
ಧನ್ಯವಾದಗಳು.