“ಶಾಲೆಗೆ ಕೀರ್ತಿ ತರಲು” ಮತ್ತು “ಶಾಲಾ ನಿರ್ದೇಶಕರ ಕುಟುಂಬವು ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗಾಗಿ” ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ಮತ್ತು ಅದರ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದ 9 ವರ್ಷದ ಮಗುವನ್ನು ಮಾಟಮಂತ್ರದ ಅಚರಣೆಯ ಭಾಗವಾಗಿ ಕೊಂದಿರುವ ಘಟನೆ ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದಿದೆ ಎಂದು ವರದಿಯಾಗಿದೆ.ಉತ್ತರ ಪ್ರದೇಶ
ಸೆಪ್ಟೆಂಬರ್ 23 ರಂದು ಆಗ್ರಾದಿಂದ 35 ಕಿಮೀ ದೂರದಲ್ಲಿರುವ ಸದಾಬಾದ್ ಪ್ರದೇಶದ ಶಾಲಾ ನಿರ್ದೇಶಕರ ಕಾರಿನಲ್ಲಿ ಹತ್ರಾಸ್ ಪೊಲೀಸರು ಬಾಲಕನ ಶವವನ್ನು ಪತ್ತೆ ಮಾಡಿದಾಗ ಬಾಲಕನ ಸಾವು ಬೆಳಕಿಗೆ ಬಂದಿದೆ ಎಂದು ವರದಿಯು ಹೇಳಿದೆ. ಬಾಲಕನ ಸಾವಿಗೆ ಸಂಬಂಧಿಸಿದಂತೆ ಗುರುವಾರ ರಸ್‌ಗವಾನ್‌ನ ಶಾಲೆಯಲ್ಲಿ ನಿರ್ದೇಶಕ, ನಿರ್ದೇಶಕನ ತಂದೆ ಮತ್ತು ಮೂವರು ಶಿಕ್ಷಕರು ಸೇರಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಹತ್ರಾಸ್ ಪೊಲೀಸರು ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ನಾವು ಶಾಲಾ ನಿರ್ದೇಶಕ ದಿನೇಶ್ ಬಾಘೆಲ್, ಅವರ ತಂದೆ ಜಸೋಧನ್ ಸಿಂಗ್ ಮತ್ತು ಮೂವರು ಶಾಲಾ ಶಿಕ್ಷಕರಾದ ರಾಮಪ್ರಕಾಶ್ ಸೋಲಂಕಿ, ವೀರಪಾಲ್ ಸಿಂಗ್ ಮತ್ತು ಲಕ್ಷ್ಮಣ್ ಸಿಂಗ್ ಅವರನ್ನು ಬಂಧಿಸಿದ್ದೇವೆ” ಎಂದು ಹತ್ರಾಸ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ಅಶೋಕ್ ಕುಮಾರ್ ತಿಳಿಸಿದ್ದಾರೆ. ಶಾಲೆಯ ಆವರಣದಲ್ಲಿರುವ ಕೊಠಡಿಯೊಂದರಿಂದ ಹಗ್ಗ, ಧಾರ್ಮಿಕ ಚಿತ್ರಗಳು ಮತ್ತು ಕೀ ಕೂಡ ಸಿಕ್ಕಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂಓದಿ: ಪುಣೆ ಪೋರ್ಷೆ ಕಾರು ಅಪಘಾತ ಪ್ರಕರಣ: ಕುಡಿದ ಅಮಲಿನಲ್ಲೆ ಆಸ್ಪತ್ರೆಗೆ ಧಾವಿಸಿದ್ದ ಆರೋಪಿ ಕುಟುಂಬದ ಸದಸ್ಯರು
ಸೆಪ್ಟೆಂಬರ್ 22 ರಂದು ಬೆಳಿಗ್ಗೆ 12 ಗಂಟೆಗೆ ಶಾಲೆಯ ವಿದ್ಯಾರ್ಥಿಗಳು ಮಲಗಿದ್ದಾಗ ಶಾಲೆಯ ಶಿಕ್ಷಕಿ ಸೋಲಂಕಿ ಮಗುವನ್ನು ಹಾಸಿಗೆಯಿಂದ ಎತ್ತಿಕೊಂಡು ಹೊರಗೆ ಕರೆತಂದರು ಎಂದು ಅಶೋಕ್ ಕುಮಾರ್ ಹೇಳಿದ್ದಾರೆ. “ಅವರು ಮಗುವನ್ನು ಗೊತ್ತುಪಡಿಸಿದ ಕೋಣೆಯಲ್ಲಿ ಬಲಿಕೊಡಲು ಯೋಜಿಸಿದ್ದರು. ಆದರೆ ಈ ನಡುವೆ ಬಾಲಕ ಎಚ್ಚರಗೊಂಡು ಅಳಲು ಪ್ರಾರಂಭಿಸಿದ್ದರು. ಹಾಗಾಗಿ ಶಿಕ್ಷಕ ಸೋಲಂಕಿ ಮಗುವಿನ ಬಾಯಿಯನ್ನು ಮುಚ್ಚಿ ಹಾಸ್ಟೆಲ್‌ನ ನೆಲಮಹಡಿಗೆ ಕರೆತಂದು ಕತ್ತು ಹಿಸುಕಿದ್ದಾನೆ” ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಅವರನ್ನು ಮೇಲ್ವಿಚಾರಣೆ ಮಾಡಲು ವೀರಪಾಲ್ ಮತ್ತು ಲಕ್ಷ್ಮಣ್ ಸಿಂಗ್ ನಿಂತಿದ್ದರು ಎಂದು ಅಶೋಕ್ ಕುಮಾರ್ ಹೇಳಿದ್ದಾರೆ. ಶಾಲಾ ನಿರ್ದೇಶಕರ ತಂದೆ ಜಸೋಧನ್ ಸಿಂಗ್ ಈಗಾಗಲೇ ತನ್ನ ಮಗ ದಿನೇಶ್ ಬಘೇಲ್‌ಗೆ ವಿಧಿ ವಿಧಾನದ ಬಗ್ಗೆ ತಿಳಿಸಿದ್ದು, ಅವರು ಶವವನ್ನು ಬಿಸಾಕಲು ಸಿದ್ಧರಾಗಿದ್ದರು. ಈ ವೇಳೆ ಬಾಘೆಲ್ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಬಾಲಕನ ತಂದೆ ಸೆಪ್ಟೆಂಬರ್ 23 ರಂದು ಸಹ್ಪೌ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದು, ತನ್ನ ಮಗನ ಸಾವಿಗೆ ಶಾಲಾ ನಿರ್ದೇಶಕರನ್ನು ದೂಷಿಸಿದ್ದಾರೆ. “ಸೆಪ್ಟೆಂಬರ್ 23 ರಂದು ಬೆಳಿಗ್ಗೆ ನಮಗೆ ಕರೆ ಮಾಡಿದ ಬಾಘೆಲ್ ನನ್ನ ಮಗನಿಗೆ ಹುಷಾರಿಲ್ಲ ಮತ್ತು ತಕ್ಷಣದ ವೈದ್ಯಕೀಯ ಸಹಾಯಕ್ಕಾಗಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದೇವೆ ಎಂದು ಹೇಳಿದರು” ಎಂದು ಅವರು ಹೇಳಿದ್ದಾರೆ.
ನಾವು ಹಾಸ್ಟೆಲ್‌ಗೆ ಧಾವಿಸಿದೆವು ಆದರೆ ಅಲ್ಲಿ ಬಾಘೆಲ್ ಮತ್ತು ನಮ್ಮ ಮಗನನ್ನು ಕಂಡುಕೊಂಡೆವು ಎಂದು ಹೇಳಿದ್ದಾರೆ ನೋಡಿದ್ದೇವೆ. “ಹಾಸ್ಟೆಲ್ ತಲುಪಿ ನಾವು ಬಾಘೇಲ್ ಅವರನ್ನು ಸಂಪರ್ಕಿಸಿ ಮಗನ ಬಗ್ಗೆ ಕೇಳಿದಾಗ, ಅವರು ನನ್ನ ಮಗನ ಸ್ಥಿತಿ ಹದಗೆಟ್ಟಿದ್ದರಿಂದ ಆಗ್ರಾಕ್ಕೆ ಕರೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದರು. ನಮಗೆ ಅನುಮಾನ ಬಂದು ಆ ಪ್ರದೇಶದ ಪೊಲೀಸರಿಗೆ ಮಾಹಿತಿ ನೀಡಿದೆವು. ಬಾಘೇಲ್ ಅವರನ್ನು ದಾರಿಯಲ್ಲೆ ಕಾಯಲು ಹೇಳಿ, ನಂತರ ನಾವೂ ಅವರನ್ನು ಹಿಂಬಾಲಿಸಿದೆವು. ಈ ವೇಳೆ ಬಾಘೆಲ್‌ನನ್ನು ಪತ್ತೆಹಚ್ಚಿದಾಗ ನನ್ನ ಮಗ ಅವರ ಕಾರಿನಲ್ಲಿ ಶವವಾಗಿ ಬಿದ್ದಿರುವುದು ಕಂಡುಬಂದಿದೆ” ಎಂದು ತಂದೆ ಹೇಳಿದ್ದಾರೆ.
ಇದನ್ನೂಓದಿ: ತೆಲಂಗಾಣ: ಶವ ಸಂಸ್ಕಾರ ಮಾಡದಂತೆ ದಲಿತ ಕುಟುಂಬವನ್ನು ತಡೆದ ರಿಯಲ್ ಎಸ್ಟೇಟ್ ಏಜೆಂಟ್‌ಗಳು
ಪೊಲೀಸರು ಅದೇ ದಿನ ದಿನೇಶ್ ಬಘೇಲ್‌ನನ್ನು ಬಂಧಿಸಿದ್ದರೂ, ಬಾಲಕನ ಕೊಲೆಯ ಹಿಂದಿನ ಉದ್ದೇಶವನ್ನು ಕಂಡುಹಿಡಿಯಲು ಸಾಧ್ಯವಾಗಿರಲಿಲ್ಲ. “ನಾವು ಬಾಘೇಲ್‌ನನ್ನು ಬಂಧಿಸಿದ ನಂತರ ನಮ್ಮ ತನಿಖೆಯನ್ನು ಪ್ರಾರಂಭಿಸಿದೆವು. ರಸ್ಗವಾ ಗ್ರಾಮದಲ್ಲಿ ಅವನ ಮತ್ತು ಅವನ ಕುಟುಂಬಕ್ಕೆ ಹತ್ತಿರವಿರುವ ಹಲವಾರು ಜನರೊಂದಿಗೆ ಮಾತನಾಡಿದ್ದೇವೆ. ಅವರ ತಂದೆ ಜಸೋಧನ್ ಸಿಂಗ್ ವಾಮಾಚಾರದಲ್ಲಿ ನಂಬಿಕೆ ಹೊಂದಿದ್ದಾಗಿ, ಎರಡು ತಿಂಗಳ ಹಿಂದೆ ಅಪ್ರಾಪ್ತ ಬಾಲಕನನ್ನು ಬಲಿಕೊಡುವಂತೆ ಮಗನಿಗೆ ಸಲಹೆ ನೀಡಿದ್ದರು ಎಂದು ತಿಳಿದು ಬಂದಿತ್ತು” ಎಂದು ಪೊಲೀಸರು ಹೇಳಿದ್ದಾರೆ.
“ವಾಮಾಚಾರ ಯೋಜನೆಯನ್ನು ಕಾರ್ಯಗತಗೊಳಿಸಲು ಜಸೋಧನ್‌ಗೆ ಸಾಧ್ಯವಾಗಿರಲಿಲ್ಲ. ನಾವು ಅವರ ತಂದೆಯನ್ನು ವಿಚಾರಣೆಗೆ ಒಳಪಡಿಸಿದಾ, ಘೋರ ಅಪರಾಧದ ಹಿಂದಿನ ಸತ್ಯವನ್ನು ಬಹಿರಂಗಪಡಿಸಿದರು” ಎಂದು ಅಶೋಕ್ ಕುಮಾರ್ ಹೇಳಿದ್ದಾರೆ.
ಇದರ ನಂತರ ಪೊಲೀಸರು ಮತ್ತೆ ಬಾಘೇಲ್‌ನನ್ನು ವಿಚಾರಣೆಗೆ ಒಳಪಡಿಸಿದ್ದು, ಅವರು ತಮ್ಮ ತಂದೆಯ ಸಲಹೆಯ ಮೇರೆಗೆ ರಾಮ್ ಪ್ರಕಾಶ್ ಸೋಲಂಕಿ ಅವರನ್ನು ಸೆಪ್ಟೆಂಬರ್ 22 ರ ರಾತ್ರಿ ತನ್ನ ಹಾಸ್ಟೆಲ್ ಕೋಣೆಯಿಂದ ಅಪ್ರಾಪ್ತರನ್ನು ಕರೆದುಕೊಂಡು ಬರುವಂತೆ ಹೇಳಿದ್ದಾರೆ.ಉತ್ತರ ಪ್ರದೇಶ
“ಬಾಘೇಲ್ ಆರಂಭದಲ್ಲಿ ಮಗುವಿಗೆ ಅನಾರೋಗ್ಯವಿದೆ ಎಂದು ನಮಗೆ ತಿಳಿಸಿದ್ದರು. ಆದ್ದರಿಂದ ಅವನು ಮೊದಲು ಅವನನ್ನು ಸದಾಬಾದ್‌ನ ಆಸ್ಪತ್ರೆಗೆ ಮತ್ತು ನಂತರ ಆಗ್ರಾಕ್ಕೆ ಕರೆದೊಯ್ದನು. ಅಲ್ಲಿ ವೈದ್ಯರು ಬಾಲಕ ಸತ್ತಿದ್ದಾರೆ ಎಂದು ಘೋಷಿಸಿದರು. ಆದ್ದರಿಂದ ಅವನು ಬಾಲಕನ ಶವವನ್ನು ಹತ್ರಾಸ್‌ನಲ್ಲಿರುವ ರಾಸ್‌ಗಾವಾನ್‌ಗೆ ಕರೆತರುತ್ತಿದ್ದೆನು ಎಂದು ಅವರು ಹೇಳಿದ್ದರು” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು. ಆದರೆ, ಮರಣೋತ್ತರ ಪರೀಕ್ಷೆಯಲ್ಲಿ ಬಾಲಕನ್ನು ಕತ್ತು ಹಿಸುಕಿ ಕೊಲೆ ಮಾಡಿರುವುದು ಹಾಗೂ ಕತ್ತಿನ ಮೂಳೆಗಳು ಮುರಿದಿರುವುದು ದೃಢಪಟ್ಟಿದೆ.
ವಿಡಿಯೊ ನೋಡಿ: ಕಲಬುರಗಿ- ಗೌರಿಯದ್ದು ವೈಚಾರಿಕ ಕೊಲೆ: ಗೌರಿ ನೆನಪು ಕಾರ್ಯಕ್ರಮದಲ್ಲಿ ರಹಮತ್ ತರೀಕೆರೆ ಮಾತುಗಳು


