Homeಫ್ಯಾಕ್ಟ್‌ಚೆಕ್FACT CHECK | ಮಹಾಲಕ್ಷ್ಮಿ ಕೊಲೆ : ಅಶ್ರಫ್‌ನನ್ನು ಕಟಕಟೆಯಲ್ಲಿ ನಿಲ್ಲಿಸಿದ ಸುಳ್ಳು ಸುದ್ದಿ ಜಾಲ

FACT CHECK | ಮಹಾಲಕ್ಷ್ಮಿ ಕೊಲೆ : ಅಶ್ರಫ್‌ನನ್ನು ಕಟಕಟೆಯಲ್ಲಿ ನಿಲ್ಲಿಸಿದ ಸುಳ್ಳು ಸುದ್ದಿ ಜಾಲ

- Advertisement -
- Advertisement -

ಸೆಪ್ಟೆಂಬರ್ 21, 2024ರಂದು ಬೆಂಗಳೂರಿನ ವೈಯ್ಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ 29 ವರ್ಷದ ಮಹಾಲಕ್ಷ್ಮಿ ಎಂಬ ಮಹಿಳೆಯ ಕೊಲೆ ನಡೆದಿರುವುದು ಬೆಳಕಿಗೆ ಬಂದಿತ್ತು. ಮಹಾಲಕ್ಷ್ಮಿಯ ದೇಹವನ್ನು ಸುಮಾರು 30 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿ ಇಡಲಾಗಿತ್ತು.

ದೆಹಲಿಯಲ್ಲಿ ಶ್ರದ್ದಾ ವಾಕರ್ ಎಂಬ ಯುವತಿಯ ಕೊಲೆ ನಡೆದ ರೀತಿಯಲ್ಲೇ ಮಹಾಲಕ್ಷ್ಮಿಯನ್ನು ಕೊಲೆ ನಡೆದಿತ್ತು. ಶ್ರದ್ದಾ ವಾಕರ್ ಕೊಲೆಯನ್ನು ಆಕೆಯ ಸ್ನೇಹಿತ ಅಫ್ತಾಬ್ ಅಮೀನ್ ಪೂನವಲ್ಲ ಎಂಬಾತ ಮಾಡಿರುವುದು ತನಿಖೆಯಿಂದ ಬಯಲಾಗಿತ್ತು. ಅದೇ ರೀತಿ ಮಹಾಲಕ್ಷ್ಮಿ ಕೊಲೆ ಪ್ರಕರಣದಲ್ಲೂ ಅಶ್ರಫ್ ಎಂಬಾತ ಹೆಸರು ತಳುಕು ಹಾಕಿಕೊಂಡಿತ್ತು.

‘ಅಶ್ರಫ್’ ಎಂಬ ಹೆಸರು ಕೇಳಿ ಬಂದಿದ್ದೆ ತಡ ಮಾಧ್ಯಮಗಳು, ಬಲಪಂಥೀಯ ಸಾಮಾಜಿಕ ಜಾಲತಾಣ ಪ್ರಭಾವಿಗಳು, ಕೆಲ ರಾಜಕೀಯ ಪಕ್ಷಗಳ ಮುಖಂಡರು ಒಂದು ಸಮುದಾಯದ ವಿರುದ್ದ ಆರೋಪಗಳ ಸುರಿಮಳೆ ಸುರಿಸಿದ್ದರು.

ಅನೇಕರು ಶ್ರದ್ದಾ ಕೊಲೆಗೆ ಮಹಾಲಕ್ಷ್ಮಿ ಕೊಲೆಯನ್ನು ಹೋಲಿಕೆ ಮಾಡಿ ಚರ್ಚಿಸಿದ್ದರು. ಇನ್ನೂ ಕೆಲವರು ‘ಲವ್‌ ಜಿಹಾದ್ ‘ ಆರೋಪ ಮಾಡಿದ್ದರು. ಮತ್ತೂ ಕೆಲವರು ಈ ರೀತಿಯ ಕೊಲೆಗಳು ‘ಒಂದು ಸಮುದಾಯದ ವಿರುದ್ದದ ವ್ಯವಸ್ಥಿತ ಸಂಚಿನ ಭಾಗ’ ಎಂದಿದ್ದರು. ಕೆಲ ಮಾಧ್ಯಮಗಳು ಸಾಮಾಜಿಕ ಜಾಲತಾಣವನ್ನೇ ಪ್ರಮುಖ ಮೂಲವನ್ನಾಗಿಟ್ಟುಕೊಂಡು ಒಂದು ಸಮುದಾಯದ ಜನರನ್ನು ಅರೋಪಿ ಸ್ಥಾನದಲ್ಲಿ ನಿಲ್ಲಿಸಿತ್ತು.

ಘಟನೆಯ ಕುರಿತು ಟಿವಿ ಚಾನೆಲ್‌ನಲ್ಲಿ ಸುದ್ದಿ ಓದಿದ ನ್ಯೂಸ್‌ 18 ಇಂಡಿಯಾದ ಸುದ್ದಿ ನಿರೂಪಕ ಹಾಗೂ ನೆಟ್‌ವರ್ಕ್‌ 18ನ ಹಿರಿಯ ಸಂಪಾದಕ ಅಮನ್ ಚೋಪ್ರಾ ” ಶ್ರದ್ಧಾ ವಾಕರ್ ಅನ್ನು ಹೇಗೆ ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿ ಇರಿಸಲಾಯಿತು ಎಂಬುವುದನ್ನು ನೆನಪಿಸಿಕೊಳ್ಳಿ. ಬೆಂಗಳೂರಿನಲ್ಲೂ ಅಂಥದ್ದೇ ಘಟನೆ ನಡೆದಿದೆ. ಆದರೆ, ಶ್ರದ್ದಾಳಿಂದ ಮಹಾಲಕ್ಷ್ಮಿಗೆ ಹೆಸರು ಬದಲಾಗಿದೆ. ಫ್ರಿಡ್ಜ್‌ನಲ್ಲಿ ಮಹಾಲಕ್ಷ್ಮಿ ಶವದ 50ಕ್ಕೂ ಹೆಚ್ಚು ತುಂಡುಗಳು ಪತ್ತೆಯಾಗಿವೆ. ಮೊದಲ ಪ್ರಕರಣದ ಆರೋಪಿ ಅಫ್ತಾಬ್, ಈಗ ಕುಟುಂಬ ಅಶ್ರಫ್‌ ಎಂಬಾತನ ಮೇಲೆ ಆರೋಪ ಹೊರಿಸಿದೆ” ಎಂದಿದ್ದರು. ಸುದ್ದಿ ಓದುವಾಗ ‘ಅಶ್ರಫ್’ ಎಂಬ ಹೆಸರನ್ನು ಅಮನ್‌ ಚೋಪ್ರಾ ಅನೇಕ ಬಾರಿ ಒತ್ತಿ ಹೇಳಿದ್ದರು. ಈ ಮೂಲಕ ಪರೋಕ್ಷವಾಗಿ ‘ಹಿಂದೂ ಮಹಿಳೆಯನ್ನು ಮುಸ್ಲಿಂ ಯುವಕ ಕೊಲೆ ಮಾಡಿದ್ದಾನೆ’ ಎಂಬ ಅಂಶವನ್ನು ಜನರ ತಲೆಗೆ ತುಂಬುವ ಪ್ರಯತ್ನ ಮಾಡಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕಟಿಸಿದ್ದ ವರದಿಯ ಸ್ಕ್ರೀನ್ ಶಾಟ್ ಅನ್ನು ಸೆಪ್ಟೆಂಬರ್ 22ರಂದು ಬಲಪಂಥೀಯ ಸುದ್ದಿ ವೆಬ್‌ಸೈಟ್ ಓಪ್‌ ಇಂಡಿಯಾ ತನ್ನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿತ್ತು. ಅದಕ್ಕೆ ಪ್ರತಿಕ್ರಿಯಿಸಿದ್ದ ಕರ್ನಾಟಕ ಬಿಜೆಪಿ “ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದೆಗೆಟ್ಟಿದೆ. ಅಶ್ರಫ್‌ನಿಂದ ಮಹಾಲಕ್ಷ್ಮಿಯ ಕ್ರೂರ ಹತ್ಯೆಯು ಹಿಟ್ಲರ್ ನೇತೃತ್ವದ ಈ ರಾಜ್ಯದಲ್ಲಿ ಕನ್ನಡಿಗರು ಇನ್ನು ಸುರಕ್ಷಿತವಾಗಿಲ್ಲ ಎಂಬುದನ್ನು ಸ್ಪಷ್ಟವಾಗಿ ನೆನಪಿಸುತ್ತದೆ. ಸಿದ್ದರಾಮಯ್ಯ ಸರ್ಕಾರ ಮತ ಬ್ಯಾಂಕ್‌ ಅನ್ನು ಮೆಚ್ಚಿಸಲು ಮತ್ತು ತಪ್ಪಿತಸ್ಥರನ್ನು ಸಮಾಧಾನಪಡಿಸಲು ಇದನ್ನು ಕೇವಲ ಅಪಘಾತ ಅಥವಾ ತಮಾಷೆಯಾಗಿ ಪರಿಗಣಿಸಬೇಡಿ ಎಂದು ನಾವು ಕಾಂಗ್ರೆಸ್ ಮಂತ್ರಿಗಳನ್ನು ಒತ್ತಾಯಿಸುತ್ತೇವೆ. ರಾಹುಲ್ ಗಾಂಧಿಯವರೇ ನೀವು ಹಮಾಸ್ ಭಯೋತ್ಪಾದಕರಿಗಾಗಿ ಅಳುತ್ತಿರುವಾಗ, ನೀವು ಪರಿಗಣಿಸಬೇಕಾದ ವಿಷಯ ಇಲ್ಲಿದೆ. ಕಾಂಗ್ರೆಸ್‌ ಏಕೆ ಅಪರಾಧಿಗಳನ್ನು ಗಲ್ಲಿಗೇರಿಸುವುದನ್ನು ಮತ್ತು ಲವ್ ಜಿಹಾದ್ ವಿರೋಧಿ ಕಾನೂನುಗಳನ್ನು ವಿರೋಧಿಸುತ್ತಿದೆ ಎಂದು ಈ ಮೂಲಕ ಸ್ಪಷ್ಟವಾಗಿದೆ” ಎಂದು ಬರೆದುಕೊಂಡಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 23,2024ರಂದು ಎಕ್ಸ್‌ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದ ಆಗಾಗ ಸುಳ್ಳು ಮತ್ತು ಕೋಮುದ್ವೇಷದ ಸುದ್ದಿಗಳನ್ನು ಹಬ್ಬಿಸುವ ಇಸ್ಕಾನ್ ಕೋಲ್ಕತ್ತಾದ ಉಪಾಧ್ಯಕ್ಷ ಮತ್ತು ವಕ್ತಾರ ರಾಧಾರಮನ್ ದಾಸ್ “ಅಬ್ದುಲ್‌ನ ಫ್ರಿಡ್ಜ್‌ನಲ್ಲಿ ಹಿಂದೂ ಹುಡುಗಿಯ ಮತ್ತೊಂದು ಶವ ಪತ್ತೆ. ಈ ಕಥೆ ಪುನರಾವರ್ತನೆಯಾಗುತ್ತಲೇ ಇರುತ್ತದೆ ಮತ್ತು ಅಬ್ದುಲ್‌ನ ಜೊತೆಗಿನ ಹಿಂದೂ ಹುಡುಗಿಯರು ‘ನನ್ನ ಅಬ್ದುಲ್ ಆ ರೀತಿಯಲ್ಲ’ ಎಂದು ಯೋಚಿಸುತ್ತಲೇ ಇರುತ್ತಾರೆ” ಎಂದು ಬರೆದುಕೊಂಡಿದ್ದರು.

ಸೆಪ್ಟೆಂಬರ್ 23, 2024ರಂದು ಎಕ್ಸ್‌ನಲ್ಲಿ ಇಂಡಿಯಾ ಟುಡೇ ಸುದ್ದಿಯನ್ನು ಪೋಸ್ಟ್ ಮಾಡಿದ್ದ ಕೋಮು ದ್ವೇಷದ ಸುದ್ದಿಗಳನ್ನು ಹರಡುವ ಬಲಪಂಥೀಯ ಸಾಮಾಜಿಕ ಜಾಲತಾಣ ಪ್ರಭಾವಿ ಮಿ.ಸಿನ್ಹಾ ” ಬೆಂಗಳೂರು ಕೊಲೆ ಪ್ರಕರಣದಲ್ಲಿ ಆಘಾತಕಾರಿ ಅಂಶ ಬಹಿರಂಗ: ಮಹಿಳೆಯ ಶವ 32 ತುಂಡಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿ ಶೇಖರಿಸಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇಂಡಿಯಾ ಟುಡೇ ವರದಿ ಪ್ರಕಾರ ಸಂತ್ರಸ್ತೆಯನ್ನು ಮಹಾಲಕ್ಷ್ಮಿ ಎಂದು ಗುರುತಿಸಲಾಗಿದೆ. ಅಶ್ರಫ್ ಎಂಬ ವ್ಯಕ್ತಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಳು ಎಂದು ಆಕೆಯ ಪತಿ ಆರೋಪಿಸಿದ್ದಾರೆ” ಎಂದು ಬರೆದುಕೊಂಡಿದ್ದರು.

ಮತ್ತೊಂದು ಪೋಸ್ಟ್ ಹಾಕಿದ್ದ ಸಿನ್ಹಾ ” ಪ್ರಮುಖ ಶಂಕಿತ ‘ಹೊರಗಿನವನು’ ಮತ್ತು ತಲೆಮರೆಸಿಕೊಂಡಿದ್ದಾನೆ- ಬೆಂಗಳೂರು ಸಿಪಿ. ಮಹಾಲಕ್ಷ್ಮಿ ಪತಿ ಅಶ್ರಫ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ…ಕಳೆದ 9 ತಿಂಗಳಿಂದ ಆತನೊಂದಿಗೆ ಆಕೆ ವಾಸವಿದ್ದಳು” ಎಂದು ಬರೆದುಕೊಂಡಿದ್ದರು.

ಇದೇ ರೀತಿ ಆರ್‌ಎಸ್‌ಎಸ್‌ ಮುಖವಾಣಿ ಪಾಂಚಜನ್ಯ, ಬಲಪಂಥೀಯ ಸಾಮಾಜಿಕ ಜಾಲತಾಣ ಪ್ರಭಾವಿಗಳಾದ ಕಾಜಲ್ ಹಿಂದುಸ್ತಾನಿ, ಜೈಪುರ್ ಡೈಲಾಗ್ಸ್, ರಿಶಿ ಬಾಗ್ರೀ, ಅಶ್ವಿನಿ ಶ್ರೀವಾಸ್ತವ್, ಸಂಜೀವ್ ನ್ಯೂವರ್, ಲಾಯರ್ ಶಶಾಂಕ್ ಶೇಖರ್ ಜ್ಹಾ, ಅಜೀತ್ ಭಾರ್ತಿ ಪೋಸ್ಟ್‌ ಹಾಕಿ, ಸುದ್ದಿ ಹಂಚಿಕೊಂಡು ಅಶ್ರಫ್ ಹೆಸರನ್ನು ಮುಂದಿಟ್ಟುಕೊಂಡು ಒಂದು ಸಮುದಾಯವನ್ನು ಗುರಿಯಾಗಿಸಿದ್ದರು.

ಕನ್ನಡ, ಹಿಂದಿ, ಇಂಗ್ಲಿಷ್‌ನ ಹಲವು ಮಾಧ್ಯಮಗಳು ಕೂಡ ಪ್ರಕರಣದ ಕುರಿತು ವರದಿ ಪ್ರಕಟಿಸಿತ್ತು. ಕೆಲವು ಅಶ್ರಫ್ ಕೊಲೆ ಮಾಡಿರುವುದಾಗಿ ನೇರವಾಗಿ ಆರೋಪಿಸಿದರೆ, ಇನ್ನೂ ಕೆಲವು ಮಹಾಲಕ್ಷ್ಮಿಯ ವಿಚ್ಚೇದಿತ ಪತಿಯ ಹೇಳಿಕೆಯನ್ನು ಉಲ್ಲೇಖಿಸಿತ್ತು.

ಫ್ಯಾಕ್ಟ್‌ಚೆಕ್ : ವರದಿಗಳ ಪ್ರಕಾರ, 29 ವರ್ಷದ ಮಹಾಲಕ್ಷ್ಮಿ ಅವರು ನೆಲಮಂಗಲದಲ್ಲಿ ವಾಸಿಸುವ ಮತ್ತು ಮೊಬೈಲ್ ಪರಿಕರಗಳ ಅಂಗಡಿಯನ್ನು ನಡೆಸುತ್ತಿರುವ ಹೇಮಂತ್ ದಾಸ್ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಒಂದು ಮಗು ಕೂಡ ಇದೆ. ತನ್ನ ಪತಿಯಿಂದ ಬೇರ್ಪಟ್ಟ ನಂತರ, ಆಕೆ ತನ್ನ ಸಹೋದರ ಹುಕುಮ್ ಸಿಂಗ್ ಮತ್ತು ಆತನ ಹೆಂಡತಿಯೊಂದಿಗೆ ವಾಸಿಸುತ್ತಿದ್ದರು. ಸಹೋದರರ ನಡುವೆ ಜಗಳ ನಡೆದ ನಂತರ ಹುಕುಮ್ ಸಿಂಗ್ ತನ್ನ ಹೆಂಡತಿಯೊಂದಿಗೆ ಮನೆ ಬಿಟ್ಟು ಹೋಗಿದ್ದರು. ಅಂದಿನಿಂದ ಮಹಾಲಕ್ಷ್ಮಿ ಒಂಟಿಯಾಗಿ ವಾಸಿಸುತ್ತಿದ್ದರು. ಆಕೆಯ, ತಾಯಿಯ ಹೇಳಿಕೆಯ ಪ್ರಕಾರ, ಮಹಾಲಕ್ಷ್ಮಿ ಸೆಪ್ಟೆಂಬರ್ 2 ರಂದು ಕೊನೆಯದಾಗಿ ತಾಯಿಗೆ ಕರೆ ಮಾಡಿ ಮಾತನಾಡಿದ್ದರು. ಶೀಘ್ರದಲ್ಲೇ ತನ್ನ ವಿಚ್ಛೇದಿತ ಪತಿಯನ್ನು ಭೇಟಿಯಾಗುವುದಾಗಿ ತಿಳಿಸಿದ್ದರು. ಸೆಪ್ಟೆಂಬರ್ 21 ರಂದು ಆಕೆ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.

ಮಹಾಲಕ್ಷ್ಮಿಯ ಕೊಲೆ ನಡೆದ ಬಳಿಕ, ಆಕೆಯ ವಿಚ್ಛೇದಿತ ಪತಿ ಹೇಮಂತ್ ದಾಸ್ ಒಬ್ಬ ವ್ಯಕ್ತಿಯ ಮೇಲೆ ಅನುಮಾನ ವ್ಯಕ್ತಪಡಿಸಿ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದರು. ಆಕೆ ಆತನೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದಿದ್ದರು. ಆರು ವರ್ಷಗಳ ವೈವಾಹಿಕ ಜೀವನದ ಬಳಿಕ, ಒಂಬತ್ತು ತಿಂಗಳ ಹಿಂದೆ ನಾವು ಬೇರೆಯಾಗಿದ್ದೇವೆ. ನೆಲಮಂಗಲದ ಸಲೂನ್‌ನಲ್ಲಿ ಕೆಲಸ ಮಾಡುತ್ತಿದ್ದ ಅಶ್ರಫ್ ಎಂಬಾತನೇ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆ ಇದೆ ಎಂದು ಅವರು ಹೇಳಿದ್ದರು.

ಹೇಮಂತ್ ದಾಸ್ ಹೇಳಿರುವಂತೆ, ಮಹಾಲಕ್ಷ್ಮಿ ಅಶ್ರಫ್ ಜೊತೆ ಅಕ್ರಮ ಸಂಬಂಧ ಹೊಂದಿದ್ದರು. ಕೆಲ ತಿಂಗಳ ಹಿಂದೆ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಅಶ್ರಫ್ ವಿರುದ್ಧ ಮಹಾಲಕ್ಷ್ಮಿ ವಂಚನೆ ಆರೋಪ ಮಾಡಿ ದೂರು ಕೂಡ ದಾಖಲಿಸಿದ್ದರು.

ವಾಸ್ತವವಾಗಿ, ಪೊಲೀಸರು ಅಶ್ರಫ್ ಅನ್ನು ಪ್ರಮುಖ ಆರೋಪಿ ಎಂದು ಹೆಸರಿಸಿರಲಿಲ್ಲ. ಆತನನ್ನು ವಿಚಾರಣೆಗೆ ಒಳಪಡಿಸಿ ಬಿಟ್ಟು ಕಳಿಸಿದ್ದರು. ಆ ಕುರಿತ ಮಾಧ್ಯಮ ವರದಿ ಇಲ್ಲಿದೆ 

ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 23 ರಂದು ಹೇಳಿಕೆ ನೀಡಿದ್ದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಅವರು “ಪ್ರಕರಣದ ಪ್ರಮುಖ ಶಂಕಿತನನ್ನು ಗುರುತಿಸಲಾಗಿದೆ. ಆತ ಹೊರಗಿನ (ಹೊರ ರಾಜ್ಯದ) ವ್ಯಕ್ತಿಯಾಗಿದ್ದು, ತಲೆ ಮರೆಸಿಕೊಂಡಿದ್ದಾನೆ. ಪೊಲೀಸರು ಆತನ ಬಗ್ಗೆ ಹೆಚ್ಚುವರಿ ಮಾಹಿತಿಗಳನ್ನು ಕಲೆ ಹಾಕಿದ್ದಾರೆ ಎಂದಿದ್ದರು.

ಇದಾದ ನಂತರ, ಕೊಲೆ ಪ್ರಕರಣದ ಶಂಕಿತ ಆರೋಪಿ ಒಡಿಶ್ಶಾದಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ಮಾಧ್ಯಮಗಳಲ್ಲಿ ವರದಿಯಾದಾಗ ಪ್ರಕರಣ ಮಹತ್ವದ ತಿರುವು ಪಡೆಯಿತು. ಆರೋಪಿ ಮುಕ್ತಿರಾಜನ್ ಪ್ರತಾಪ್ ರೇ ಯ ಮೃತದೇಹವು ಬುಧವಾರ (ಸೆ.25) ಬೆಳಿಗ್ಗೆ ಒಡಿಶಾದ ಭದ್ರಕ್ ಜಿಲ್ಲೆಯ ಭುಯಿನ್‌ಪುರ್ ಗ್ರಾಮದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆರೋಪಿ ಭುಯಿನ್‌ಪುರ್ ಗ್ರಾಮದವನು ಎಂದು ವರದಿಗಳು ಹೇಳಿತ್ತು. ಹೆಚ್ಚಿನ ವರದಿಗಳು ಆರೋಪಿ ಮುಕ್ತಿ ರಂಜನ್ ರೇ ಎಂದು ಹೆಸರನ್ನು ಉಲ್ಲೇಖಿಸಿತ್ತು.

ಭದ್ರಕ್ ಎಸ್ಪಿ ವರುಣ್ ಗುಂಟುಪಲ್ಲಿ ಅವರ ಪ್ರಕಾರ, ಬೆಂಗಳೂರು ಪೊಲೀಸ್ ತಂಡವು ಬಂಧಿಸುವ ಮೊದಲು, ಆರೋಪಿಯನ್ನು ಮುಕ್ತಿರಾಜನ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಪತ್ರ ಸಿಕ್ಕಿದ್ದು, ಅದರಲ್ಲಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

“ಬೆಂಗಳೂರಿನ ಕೊಲೆಗೆ ಸಂಬಂಧಿಸಿದಂತೆ ಬಂಧನದ ಭಯದಿಂದ ಆತನು ತನ್ನ ಜೀವನವನ್ನು ಕೊನೆಗೊಳಿಸಿದ್ದಾನೆ ಎಂದು ನಾವು ಬಲವಾಗಿ ಅನುಮಾನಿಸುತ್ತೇವೆ” ಎಂದು ಟೈಮ್ಸ್‌ ಆಫ್ ಇಂಡಿಯಾಗೆ ಎಸ್ಪಿ ಹೇಳಿದ್ದರು.

ವರದಿಗಳ ಪ್ರಕಾರ, ಆತ್ಮಹತ್ಯೆ ಆರೋಪಿ ಮುಕ್ತಿರಾಜನ್ ಪ್ರತಾಪ್ ರಾಯ್ ಮತ್ತು ಕೊಲೆಯಾದ ಮಹಾಲಕ್ಷ್ಮಿ 2023 ರಿಂದ ಸಹೋದ್ಯೋಗಿಗಳಾಗಿದ್ದರು. ಈ ವಿಷಯ ತಿಳಿದ ಪೊಲೀಸರು ಮಹಾಲಕ್ಷ್ಮಿಯೊಂದಿಗೆ ಸಂಪರ್ಕ ಹೊಂದಿದ್ದ ಜನರನ್ನು ವಿಚಾರಣೆ ನಡೆಸಿದ್ದರು. ಆಗ ಸ್ವಲ್ಪ ದಿನಗಳಿಂದ ರಾಯ್ ತಲೆಮರೆಸಿಕೊಂಡಿರುವುದು ಗೊತ್ತಾಗಿದೆ. ಸೆಪ್ಟೆಂಬರ್ 1ರಿಂದ ಮಹಾಲಕ್ಷ್ಮಿ ಮತ್ತು ರಾಯ್ ಇಬ್ಬರೂ ಕೆಲಸಕ್ಕೆ ಬಂದಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಪೊಲೀಸರು ರಾಯ್‌ನ ಸಹೋದರನನ್ನು ಸಂಪರ್ಕಿಸಿದಾಗ, “ರಾಯ್‌ ಪಶ್ವಿಮ ಬಂಗಾಳದಿಂದ ಕರೆ ಮಾಡಿ ಕೊಲೆ ಮಾಡಿರುವ ವಿಚಾರ ನನಗೆ ತಿಳಿಸಿದ್ದಾನೆ. ನಾನು ಆತನಿಗೆ ಒಡಿಶಾದ ತಮ್ಮ ಹಳ್ಳಿಗೆ ಬರುವಂತೆ ಹೇಳಿದ್ದೇನೆ” ಎಂದು ವಿವರಿಸಿದ್ದಾನೆ. ಪ್ರಸ್ತುತ ಪೊಲೀಸರು ಪ್ರಕರಣದ ತನಿಖೆ ಮುಂದುವರೆಸಿದ್ದಾರೆ.

ಒಟ್ಟಿನಲ್ಲಿ, 29 ವರ್ಷದ ಮಹಾಲಕ್ಷ್ಮಿಯ ಕೊಲೆ ಪ್ರಕರಣದ ಆರೋಪಿಯ ಹೆಸರು ಮುಕ್ತಿರಾಜನ್ ಪ್ರತಾಪ್ ರೇ ಎಂದಾಗಿದ್ದು, ಆತ ಒಡಿಶ್ಶಾದ ತನ್ನ ಹಳ್ಳಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಬಂಧನದ ಭೀತಿಯಿಂದ ಆತ ಆತ್ಮಹತ್ಯೆ ಮಾಡಿಕೊಂಡಿರಬಹುದು. ಆತನ ಡೆತ್ ನೋಟ್ ಪತ್ತೆಯಾಗಿದ್ದು, ಅದರಲ್ಲಿ ಮಹಾಲಕ್ಷ್ಮಿಯನ್ನು ಕೊಲೆ ಮಾಡಿರುವುದು ನಾನೇ ಎಂದು ಒಪ್ಪಿಕೊಂಡಿದ್ದಾನೆ ಎಂದು ವರದಿಗಳು ಮತ್ತು ಪೊಲೀಸರ ಹೇಳಿಕೆಯಿಂದ ತಿಳಿದು ಬಂದಿದೆ. ಆದ್ದರಿಂದ ಮಹಾಲಕ್ಷ್ಮಿಯನ್ನು ಅಶ್ರಫ್ ಕೊಲೆ ಮಾಡಿದ್ದಾನೆ ಎಂಬುವುದು ದೃಢಪಟ್ಟಿಲ್ಲ.

ಈ ಪ್ರಕರಣದ ತನಿಖೆ ಇನ್ನೂ ಪ್ರಗತಿಯಲ್ಲಿದೆ. ಸತ್ಯಾಸತ್ಯತೆ ಪೊಲೀಸರ ತನಿಖೆ ಪೂರ್ಣಗೊಂಡ ಬಳಿಕ ಗೊತ್ತಾಗಲಿದೆ. ಆದರೆ, ಪ್ರಸ್ತುತ ಅಶ್ರಫ್ ಎಂಬಾತ ಕೊಲೆ ಮಾಡಿದ್ದಾನೆ ಎಂಬುವುದನ್ನು ಪೊಲೀಸರು ದೃಢಪಡಿಸಿಲ್ಲ. ಆತ್ಮಹತ್ಯೆ ಮಾಡಿಕೊಂಡಿರುವ ಮುಕ್ತಿರಾಜನ್ ಪ್ರತಾಪ್ ರೇ ಕೂಡ ಆರೋಪಿ ಎಂದೇ ಪರಿಗಣಿಸಲ್ಪಟ್ಟಿದ್ದಾನೆ. ಪ್ರಕರಣಕ್ಕೆ ಕೆಲವರು ಕೋಮು ಬಣ್ಣ ಬಳಿದಿರುವುದರಿಂದ, ಇದುವರೆಗೆ ಆದ ಬೆಳವಣಿಗೆಯ ಸತ್ಯಾಸತ್ಯತೆಯನ್ನು ಮಾತ್ರ ನಾವಿಲ್ಲಿ ವಿವರಿಸಿದ್ದೇವೆ.

ಇದನ್ನೂ ಓದಿ : FACT CHECK : ಮುಂಬೈನಲ್ಲಿ ಮುಸ್ಲಿಮರಿಂದ ಶಕ್ತಿ ಪ್ರದರ್ಶನ ಎಂದು ಸಂಬಂಧವಿಲ್ಲದ ವಿಡಿಯೋ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಧರ್ಮದ ಕಾರಣಕ್ಕೆ ಹೈದರಾಬಾದ್ ಮೂಲದ ಮುಸ್ಲಿಂ ವ್ಯಕ್ತಿಗೆ ಹಲವು ಬಾರಿ ಇರಿತ: ಅಮೆರಿಕದ ಮಾಲ್‌ನಲ್ಲಿ ಕೃತ್ಯ

ಅಮೆರಿಕದ ಉತಾಹ್‌ನಲ್ಲಿರುವ ಶಾಪಿಂಗ್ ಮಾಲ್‌ನಲ್ಲಿ ಹೈದರಾಬಾದ್ ಮೂಲದ ಮುಸ್ಲಿಂ ವ್ಯಕ್ತಿಯೊಬ್ಬನಿಗೆ ಹಲವು ಬಾರಿ ಇರಿತದ ಆರೋಪ ಹೊರಿಸಲಾಗಿದೆ. ಹೈದರಾಬಾದ್‌ ನಗರದ ಟೋಲಿಚೌಕಿಯ ನಿವಾಸಿ ಸೈಯದ್ ಸೊಹೈಲ್ ಉದ್ದೀನ್, ಉತಾಹ್‌ನ ಸಾಲ್ಟ್ ಲೇಕ್ ಕೌಂಟಿಯ...

47 ವರ್ಷಗಳ ನಂತರ ಸಾಮೂಹಿಕ ಅತ್ಯಾಚಾರ ಪ್ರಕರಣದ ಶಿಕ್ಷೆ ಎತ್ತಿಹಿಡಿದ ಅಲಹಾಬಾದ್ ಹೈಕೋರ್ಟ್

1979 ರಲ್ಲಿ ನಡೆದಿದ್ದ ಅಪ್ರಾಪ್ತೆ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ 71 ವರ್ಷದ ವ್ಯಕ್ತಿಯ ಶಿಕ್ಷೆಯನ್ನು ಅಲಹಾಬಾದ್ ಹೈಕೋರ್ಟ್ ಎತ್ತಿಹಿಡಿದಿದೆ. ಆದರೆ, ಕ್ರಿಮಿನಲ್ ಮೇಲ್ಮನವಿಯ 43 ವರ್ಷಗಳ ಸುದೀರ್ಘ ವಿಚಾರಣೆ ಮತ್ತು ಆತನ...

ಪಶ್ಚಿಮ ಬಂಗಾಳ: ಮುರ್ಷಿದಾಬಾದ್‌ನಲ್ಲಿ ಶಾಲಾ ವ್ಯಾನ್‌ಗೆ ರೈಲು ಡಿಕ್ಕಿ: ಇಬ್ಬರು ವಿದ್ಯಾರ್ಥಿಗಳು ಸೇರಿ 3 ಮಂದಿ ಸಾವು

ಮುರ್ಷಿದಾಬಾದ್: ದೇಶದಲ್ಲಿ ರೈಲ್ವೆ ಸುರಕ್ಷತೆಯ ಕುರಿತು ಸರ್ಕಾರಗಳು ದೊಡ್ಡ ದೊಡ್ಡ ಭರವಸೆ ಹಾಗೂ ಯೋಜನೆಗಳನ್ನು ಮಂಡಿಸುತ್ತಿದ್ದರೂ, ತಳಮಟ್ಟದ ವಾಸ್ತವ ಮಾತ್ರ ಇಂದಿಗೂ ಅತ್ಯಂತ ಭೀಕರವಾಗಿದೆ ಎಂಬುದಕ್ಕೆ ಪಶ್ಚಿಮ ಬಂಗಾಳದಲ್ಲಿ ನಡೆದ ಈ ಘೋರ...

ವಿಜಯ್ ನೇತೃತ್ವದ ಟಿವಿಕೆ ಸರ್ಕಾರವನ್ನು ಅಸ್ಥಿರಗೊಳಿಸಲು ‘ಪ್ರಾಜೆಕ್ಟ್ ಮೇಘಾಲಯ’ ಸಂಚು ಆರೋಪ : ಪತ್ರಕರ್ತನ ವಿಚಾರಣೆ

ತಮಿಳುನಾಡಿನ ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಶಾಸಕ ಎನ್. ಇಲೈಯರಾಜ ಅವರಿಗೆ ಹಣದ ಆಮಿಷವೊಡ್ಡಲು ಯತ್ನಿಸಿದ ಆರೋಪ ಪ್ರಕರಣ ಸಂಬಂಧ ಚೆನ್ನೈ ಪೊಲೀಸರು 'ಪುದಿಯಾ ತಲೈಮುರೈ' ವಾಹಿನಿಯ ಪತ್ರಕರ್ತ ವಿಜಯನ್...

ಜಂತರ್ ಮಂತರ್ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಕೇಜ್ರಿವಾಲ್ ಭೇಟಿ

ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವ ನೀಟ್ (NEET) ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಜಂತರ್ ಮಂತರ್‌ನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಖ್ಯಾತ ಶಿಕ್ಷಣ ತಜ್ಞ ಹಾಗೂ ಪರಿಸರ...

E20 ಪೆಟ್ರೋಲ್ ಪ್ರಕರಣ : ‘ಗ್ರ್ಯಾಂಡ್ ವಿಟಾರಾ’ ಕಾರು ಬದಲಾಯಿಸಿ ಕೊಡಲು ಮಾರುತಿ ಸುಝುಕಿಗೆ ಗ್ರಾಹಕ ನ್ಯಾಯಾಲಯ ಆದೇಶ

ಛತ್ತೀಸ್‌ಗಢದ ರಾಯ್‌ಪುರದ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗವು (ಡಿಸಿಡಿಆರ್‌ಸಿ), E20 ಇಂಧನ (ಪೆಟ್ರೋಲ್) ಬಳಕೆಯಿಂದಾಗಿ ಕಾರು ಕೆಟ್ಟುಹೋಗಿದೆ ಎಂದು ಆರೋಪಿಸಿದ ವ್ಯಕ್ತಿಗೆ ಹೊಸ 'ಗ್ರಾಂಡ್ ವಿಟಾರಾ' ಕಾರನ್ನು ನೀಡುವಂತೆ ಕಾರು ತಯಾರಿಕಾ...

ಸಿಜೆಪಿ ಶಾಂತಿಯುತ ಪ್ರತಿಭಟನೆಗೆ ನಿರಂತರ ಪೊಲೀಸ್ ಕಣ್ಗಾವಲು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಅರ್ಜಿ

ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್‌ನಲ್ಲಿ ಜಿರಳೆ ಜನತಾ ಪಕ್ಷ (ಸಿಜೆಪಿ) ಆಯೋಜಿಸಿರುವ ಶಾಂತಿಯುತ ಧರಣಿ ಮತ್ತು ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸುವ ನಾಗರಿಕರ ಮೇಲೆ ದೆಹಲಿ ಪೊಲೀಸರು ನಿರಂತರ ಮತ್ತು ವ್ಯಾಪಕ ಕಣ್ಗಾವಲು...

IAS ಆಗುವ ಮುನ್ನ ‘ಪರಿಪೂರ್ಣ ತಾಯಿ’ಯಾಗಿ ಎಂದ ರಾಜ್ಯಪಾಲರ ಸಲಹೆ ಪುರುಷ ಪ್ರಾಧ್ಯಾನ್ಯತೆಯ ಮುಂದುವರೆದ ಆಚರಣೆ ಅಲ್ಲವೆ?

ಇತ್ತೀಚೆಗೆ ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರು, "ಮಹಿಳೆಯರು IAS ಅಧಿಕಾರಿ ಅಥವಾ ಶಿಕ್ಷಕಿಯಾಗುವ ಕನಸು ಕಾಣುವ ಮೊದಲು 'ಪರಿಣಿತ ತಾಯಿ' ಆಗುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದ್ದರು. ಕಾನ್ಪುರದ ಛತ್ರಪತಿ...

ಹಿಂದಿನ ಮದುವೆ, ಮಗು ವಿಚಾರ ಮುಚ್ಚಿಟ್ಟಿದ್ದಕ್ಕೆ ಸಹೋದರನೊಂದಿಗಿನ ಸಂಬಂಧ ಮುರಿದುಕೊಂಡಿದ್ದ ಕಾನೂನು ವಿದ್ಯಾರ್ಥಿನಿಯನ್ನು ಇರಿದು ಕೊಂದ ತಮ್ಮ

ಬೆಂಗಳೂರು: ಮೊದಲ ಮದುವೆ ಹಾಗೂ ಮಗುವಿದ್ದ ವಿಷಯವನ್ನು ಮುಚ್ಚಿಟ್ಟು ವಂಚಿಸಿದ್ದ ಪ್ರಿಯಕರನೊಂದಿಗಿನ ಸಂಬಂಧವನ್ನು ಮುರಿದುಕೊಂಡ ಕಾರಣಕ್ಕೆ, ಆತನ ಸಹೋದರನಿಂದಲೇ ಚಾಕು ಇರಿತಕ್ಕೊಳಗಾಗಿದ್ದ ಕಾನೂನು ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ...

ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯ ಮೇಲೆ ಅಮೆರಿಕ ದಾಳಿಗೆ ಇರಾನ್‌ನಿಂದ ಪ್ರತೀಕಾರ

ಕಳೆದ ಗುರುವಾರ (ಜು.16) ಖುಜೆಸ್ತಾನ್ ಪ್ರಾಂತ್ಯದಲ್ಲಿರುವ ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯ ಮೇಲೆ ನಡೆದ ದಾಳಿಗೆ ಪ್ರತೀಕಾರವಾಗಿ, ಕುವೈತ್ ಮತ್ತು ಬಹ್ರೇನ್ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕದ ವಾಯು ನೆಲೆಗಳ ಮೇಲೆ ಇರಾನ್ ಪ್ರತಿದಾಳಿ...