Homeಮುಖಪುಟಪ್ರಧಾನಿ ನಿವಾಸದ ಬಳಿಯ ಐತಿಹಾಸಿಕ ಮಸೀದಿ ತೆರವಿಗೆ ಆರು ದಿನಗಳ ಗಡುವು : ವಕ್ಫ್ ಬೋರ್ಡ್...

ಪ್ರಧಾನಿ ನಿವಾಸದ ಬಳಿಯ ಐತಿಹಾಸಿಕ ಮಸೀದಿ ತೆರವಿಗೆ ಆರು ದಿನಗಳ ಗಡುವು : ವಕ್ಫ್ ಬೋರ್ಡ್ ಕೈಬಿಟ್ಟಿದೆ, ಕುಡಿಯಲು ನೀರೂ ಇಲ್ಲ ಎಂದ ಇಮಾಮ್

- Advertisement -
- Advertisement -

ನವದೆಹಲಿಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧಿಕೃತ ನಿವಾಸದ ಬಳಿ ಇರುವ ಐತಿಹಾಸಿಕ ಮಸೀದಿಯೊಂದಕ್ಕೆ ಅಕ್ಟೋಬರ್ 19, ಸೋಮವಾರದಂದು ತೆರವು ನೋಟಿಸ್ ನೀಡಲಾಗಿದೆ ಎಂದು ವರದಿಯಾಗಿದೆ. ಭೂಮಿ ಮತ್ತು ಅಭಿವೃದ್ಧಿ ಕಚೇರಿಯು (ಎಲ್&ಡಿಒ) ಈ ಆವರಣವನ್ನು ‘ಅನಧಿಕೃತ’ ಎಂದು ಘೋಷಿಸಿದ್ದು, ಆರು ದಿನಗಳ ಒಳಗಾಗಿ ಅದನ್ನು ಖಾಲಿ ಮಾಡುವಂತೆ ಆದೇಶಿಸಿದೆ ಎಂದು ವರದಿಗಳು ಹೇಳಿವೆ.

ನವದೆಹಲಿ ಮುನ್ಸಿಪಲ್ ಕೌನ್ಸಿಲ್ (NDMC) ವೆಬ್‌ಸೈಟ್‌ನಲ್ಲಿ ಪಾರಂಪರಿಕ ಆಸ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ರೇಸ್ ಕೋರ್ಸ್ ಮಸೀದಿಯ ವಿದ್ಯುತ್ ಮತ್ತು ನೀರು ಸರಬರಾಜನ್ನು ಅಕ್ಟೋಬರ್ 7ರಂದು ಕಡಿತಗೊಳಿಸಲಾಗಿದ್ದು, ಪ್ರಾರ್ಥನಾ ಮಂದಿರಕ್ಕೆ ಭಕ್ತರ ಪ್ರವೇಶದ ಕುರಿತು ಕಳವಳ ಮೂಡಿಸಿದೆ. ಈ ಮಸೀದಿಯು ಸರ್ಕಾರಿ ಭೂಮಿಯಲ್ಲಿದೆ ಎಂದು ಎಲ್&ಡಿಒ ಪ್ರತಿಪಾದಿಸುತ್ತಿದೆ. ಈ ವಿವಾದದ ನಡುವೆ ಮಸೀದಿಯ ಪಾರಂಪರಿಕ ಆಸ್ತಿಯ ಮಾನ್ಯತೆಯೂ ಸಹ ತೀವ್ರ ಪರಿಶೀಲನೆಗೆ ಒಳಪಟ್ಟಿದೆ.

ಸಚಿವರ ತುರ್ತು ಮಧ್ಯಪ್ರವೇಶ ಕೋರಿದ ಓವೈಸಿ

ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಮತ್ತು ಸಂಸದ ಅಸಾದುದ್ದೀನ್ ಓವೈಸಿ ಅವರು ಈ ಪ್ರಕರಣಕ್ಕೆ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರ ‘ತುರ್ತು ಮಧ್ಯಸ್ಥಿಕೆ’ ಅಗತ್ಯವಿದೆ ಎಂದು ಹೇಳಿದ್ದಾರೆ.

“1977ರಿಂದಲೂ ಈ ಮಸೀದಿಯು ಗೆಜೆಟ್‌ನಲ್ಲಿ ದಾಖಲಾದ ವಕ್ಫ್ ಆಸ್ತಿಯಾಗಿದ್ದರೂ, ವಕ್ಫ್ ಮಂಡಳಿಯು ಧ್ವಂಸ ಆದೇಶವನ್ನು ಪ್ರಶ್ನಿಸಿಲ್ಲ ಅಥವಾ ಸಮಸ್ಯೆಯನ್ನು ಬಗೆಹರಿಸಲು ಯಾವುದೇ ಪ್ರಯತ್ನವನ್ನೂ ಮಾಡಿಲ್ಲ” ಎಂದು ಎಕ್ಸ್‌ ಪೋಸ್ಟ್‌ನಲ್ಲಿ ಓವೈಸಿ ತಿಳಿಸಿದ್ದಾರೆ.

“ಬಳಕೆಯ ಮೂಲಕ ವಕ್ಫ್’ (waqf by user) ಆಗಿರುವುದರಿಂದ, ವಕ್ಫ್ ತಿದ್ದುಪಡಿ ಕಾಯಿದೆ ಕೂಡ ಈ ಮಸೀದಿಯನ್ನು ರಕ್ಷಿಸುತ್ತದೆ. ಅಲ್ಲದೆ, ಈ ಹಿಂದೆ ನೋಂದಾಯಿಸಲಾದ ಇಂತಹ ಎಲ್ಲಾ ಆಸ್ತಿಗಳು ರಕ್ಷಣೆಯನ್ನು ಪಡೆಯುವುದನ್ನು ಮುಂದುವರಿಸುತ್ತವೆ. ಆದರೂ, ಯಾವುದೇ ಪ್ರಯತ್ನ ಮಾಡಲಾಗಿಲ್ಲ” ಎಂದು ಓವೈಸಿ ಬರೆದುಕೊಂಡಿದ್ದಾರೆ.

2023ರಿಂದ ದೆಹಲಿ ವಕ್ಫ್ ಮಂಡಳಿಯನ್ನು ರಚಿಸದಿರುವುದರಿಂದ, ಈ ವಿಷಯವನ್ನು ಬಗೆಹರಿಸುವುದು ಸಚಿವರ ಜವಾಬ್ದಾರಿಯಾಗಿದೆ ಎಂದು ಓವೈಸಿ ಹೇಳಿದ್ದಾರೆ. ಅಲ್ಲದೆ, ಮಂಡಳಿಯ ಸಿಇಒ ಈ ವಿಷಯದಲ್ಲಿ ಮಧ್ಯಪ್ರವೇಶಿಸಬಹುದಿತ್ತು, ಆದರೆ ‘ಅದೂ ಕೂಡ ಆಗಿಲ್ಲ” ಎಂದಿದ್ದಾರೆ.

ರೇಸ್ ಕೋರ್ಸ್ ಮಸೀದಿ ಮತ್ತು ಅದರ ಪಕ್ಕದಲ್ಲಿರುವ ಸ್ಮಶಾನವನ್ನು ರಕ್ಷಿಸಲು ಜಮಿಯತ್ ಉಲಮಾ-ಎ-ಹಿಂದ್ ಕೂಡ ರಿಜಿಜು ಅವರ ಮಧ್ಯಪ್ರವೇಶವನ್ನು ಕೋರಿದೆ.

ಸಂಸ್ಥೆಯ ನಿಯೋಗವನ್ನು ಪ್ರತಿನಿಧಿಸುವ ಮೊಹಮ್ಮದ್ ಹಕೀಮುದ್ದೀನ್ ಖಾಸ್ಮಿ ಅವರು ಮನವಿಯೊಂದನ್ನು ಸಲ್ಲಿಸಿದ್ದು, 1977ರ ದೆಹಲಿ ಗೆಜೆಟ್‌ನಲ್ಲಿ ಉಲ್ಲೇಖಿಸಲಾದ ಎನ್‌ಡಿಎಂಸಿ ಪಾರಂಪರಿಕ ಕಟ್ಟಡಗಳ ಪಟ್ಟಿಯಲ್ಲಿ ಹಾಗೂ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ನಿರ್ವಹಿಸುವ ಪರಿಷ್ಕೃತ ಪಟ್ಟಿಯಲ್ಲಿ ಈ ಸ್ಥಳವು ಸೇರಿದೆ ಎಂದು ಆ ಮನವಿಯಲ್ಲಿ ತಿಳಿಸಲಾಗಿದೆ.

ಜಮಿಯತ್ ದೆಹಲಿ ವಕ್ಫ್ ಬೋರ್ಡ್ ಮತ್ತು ಎನ್‌ಡಿಎಂಸಿಯಿಂದ ವರದಿಗಳನ್ನು ಕೋರಿದ್ದು, ಕಾನೂನು ವಿವಾದ ಇತ್ಯರ್ಥವಾಗುವವರೆಗೂ ಯಾವುದೇ ರೀತಿಯ ಧ್ವಂಸ ಕ್ರಮಗಳನ್ನು ಕೈಗೊಳ್ಳದಂತೆ ಅಧಿಕಾರಿಗಳನ್ನು ಒತ್ತಾಯಿಸಿದೆ. ‘ದಿ ಟ್ರಿಬ್ಯೂನ್’ ವರದಿಯ ಪ್ರಕಾರ, ರಿಜಿಜು ಅವರು ಈ ಸಂಘಟನೆಯ ಮನವಿಯನ್ನು ಆಲಿಸಿದ್ದು, ಈ ವಿಷಯದಲ್ಲಿ “ಸಾಧ್ಯವಾದ ಎಲ್ಲ ಪ್ರಯತ್ನಗಳನ್ನು” ಮಾಡುವುದಾಗಿ ಭರವಸೆ ನೀಡಿದ್ದಾರೆ.

“ನಾನು ತೀವ್ರ ಸಂಕಷ್ಟದಲ್ಲಿದ್ದೇನೆ” : ಆರು ತಿಂಗಳಿನಿಂದ ಮಾಡುತ್ತಿರುವ ಮನವಿಗಳಿಗೆ ಯಾರೂ ಸ್ಪಂದಿಸಿಲ್ಲ ಎಂದ ಇಮಾಮ್

ಮಸೀದಿಯ ಇಮಾಮ್ ಮೊಹಮ್ಮದ್ ಹಾರೂನ್ ಅವರು ವಿಡಿಯೋ ಹೇಳಿಕೆಯೊಂದರಲ್ಲಿ, ಕಳೆದ ಆರು ತಿಂಗಳಿನಿಂದ ದೆಹಲಿ ವಕ್ಫ್ ಮಂಡಳಿಯ ಬಳಿ ಈ ವಿಷಯವನ್ನು ನಿರಂತರವಾಗಿ ಪ್ರಸ್ತಾಪಿಸುತ್ತಿದ್ದರೂ, ಯಾವುದೇ ಫಲಿತಾಂಶ ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ.

ನೀರು ಮತ್ತು ವಿದ್ಯುತ್ ಸಂಪರ್ಕ ಕಡಿತದ ಕುರಿತು ಎನ್‌ಡಿಎಂಸಿಗೆ ಪತ್ರ ಬರೆದಿದ್ದನ್ನು ಹೊರತುಪಡಿಸಿ, ಈ ವಿಷಯವನ್ನು ಬಗೆಹರಿಸಲು ಮಂಡಳಿಯು ಯಾವುದೇ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಅವರು ಆರೋಪಿಸಿದ್ದಾರೆ.

“ನಾನು ವಕ್ಫ್ ಮಂಡಳಿಯ ಸಿಇಒ ಅವರಿಗೆ ಪದೇ ಪದೇ ಮನವಿ ಮಾಡಿಕೊಂಡಿದ್ದರೂ, ನನ್ನ ದೂರಿನ ಕಡೆಗೆ ಯಾರೂ ಗಮನ ಹರಿಸಿಲ್ಲ. ಕುಡಿಯುವ ನೀರು ಕೂಡ ಖಾಲಿಯಾಗಿದೆ. ಮಸೀದಿಗೆ ಹೋಗುವ ದಾರಿಯನ್ನು ತಡೆದಿರುವುದರಿಂದ ಬೇರೆಲ್ಲಿಂದಲೂ ನೀರು ತರಲು ಸಾಧ್ಯವಾಗುತ್ತಿಲ್ಲ; ಇದರಿಂದ ಮಸೀದಿಗೆ ಬಂದು ಹೋಗಲು ತುಂಬಾ ತೊಂದರೆಯಾಗುತ್ತಿದೆ” ಎಂದು ಹಾರೂನ್ ಹೇಳಿದ್ದಾರೆ.

“ಈ ವಿಷಯಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹೋಗುವಂತೆ ನಾನು ವಕ್ಫ್ ಮಂಡಳಿಗೆ ಹೇಳಿದೆ. ನಂತರ, ನಾನೇ ನ್ಯಾಯಾಲಯಕ್ಕೆ ಹೋಗಲು ಅನುಮತಿ ಕೋರಿದೆ. ದುರದೃಷ್ಟವಶಾತ್, ವಕ್ಫ್ ಮಂಡಳಿಯು ನ್ಯಾಯಾಲಯಕ್ಕೂ ಹೋಗಲಿಲ್ಲ ಮತ್ತು ನನ್ನನ್ನು ಹೋಗಲು ಅನುಮತಿಸಲೂ ಇಲ್ಲ” ಎಂದು ಇಮಾಮ್ ಹೇಳಿಕೊಂಡಿದ್ದಾರೆ.

“ಈ ಮಸೀದಿಯು ಅಧಿಕೃತ ಪಾರಂಪರಿಕ ಆಸ್ತಿಯಾಗಿದ್ದು, 2021ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ರೇಸ್ ಕೋರ್ಸ್ ಮಸೀದಿಯನ್ನು ‘ಅನಧಿಕೃತ’ ಅಥವಾ ‘ಒತ್ತುವರಿ’ ಎಂದು ಗುರುತಿಸಲಾಗಿಲ್ಲ ಎಂದು ಹಾರೂನ್ ವಾದಿಸಿದ್ದಾರೆ. ಆದಾಗ್ಯೂ, ಈ ಹೇಳಿಕೆಗಳನ್ನು ಇನ್ನೂ ಸ್ವತಂತ್ರವಾಗಿ ಪರಿಶೀಲಿಸಲಾಗಿಲ್ಲ ಎಂದು maktoobmedia.com ಹೇಳಿದೆ.

“ನಮ್ಮ ಹಿತೈಷಿಗಳಲ್ಲಿ ಹಾಗೂ ನ್ಯಾಯಪ್ರಿಯ ಜನರಲ್ಲಿ, ಈ ಮಸೀದಿಯನ್ನು ಉಳಿಸಲು ಪ್ರಯತ್ನಿಸುವಂತೆ ನಾನು ಮನವಿ ಮಾಡುತ್ತೇನೆ. ನಾನು ನನ್ನಿಂದಾದ ಎಲ್ಲ ಪ್ರಯತ್ನಗಳನ್ನೂ ಮಾಡಿದ್ದೇನೆ, ಆದರೆ ಇಂತಹ ಪ್ರಕರಣಗಳನ್ನು ನಿರ್ವಹಿಸಲು ಕಾನೂನುಬದ್ಧ ಅಧಿಕಾರ ಹೊಂದಿರುವ ವಕ್ಫ್ ಮಂಡಳಿಯು ನನಗಾಗಲಿ ಅಥವಾ ಈ ಮಸೀದಿಗಾಗಲಿ ಬೆಂಬಲವಾಗಿ ನಿಲ್ಲದಿರುವುದು ನನಗೆ ತೀವ್ರ ನೋವುಂಟುಮಾಡಿದೆ” ಎಂದು ಇಮಾಮ್ ಹಾರೂನ್ ಅಳಲು ತೋಡಿಕೊಂಡಿದ್ದಾರೆ.

Courtsy : maktoobmedia.com









ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಮತದಾನದ ಹಕ್ಕನ್ನು ಕಸಿದುಕೊಳ್ಳಲು ಬಿಡುವುದಿಲ್ಲ’: ಎಸ್ಐಆರ್ ವಿರೋಧಿಸಿ ಅ. 28ರಂದು ಮುಂಬೈನಲ್ಲಿ ಬೃಹತ್ ಪ್ರತಿಭಟನೆಗೆ ಪ್ರಕಾಶ್ ಅಂಬೇಡ್ಕರ್ ಕರೆ

ಮುಂಬೈ: ಮತದಾನದ ಹಕ್ಕು ಕೇವಲ ರಾಜಕೀಯ ಪ್ರಕ್ರಿಯೆಯಲ್ಲ, ಅದು ಪ್ರತಿಯೊಬ್ಬ ನಾಗರಿಕನ ವೈಯಕ್ತಿಕ ಸ್ವಾತಂತ್ರ್ಯದ ಭಾಗವಾಗಿದೆ. ಈ ಹಕ್ಕನ್ನು ಕಸಿದುಕೊಳ್ಳಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಡಾ. ಬಿ.ಆರ್. ಅಂಬೇಡ್ಕರ್ ಅವರ ಮೊಮ್ಮಗ,...

ಹೋರಾಟಗಾರನ ಕೊಲೆ, ಅಮಿತ್ ಶಾ ಭೇಟಿ : ಪಂಜಾಬ್‌ನಲ್ಲಿ ಎಎಪಿಗೆ ಮುಳುವಾಗುತ್ತಾ ಡ್ರಗ್ ವಿರೋಧಿ ಜನಾಕ್ರೋಶ?

ಕಳೆದ ವಾರ ಪಂಜಾಬ್‌ನ ಮಾನಸಾ ಜಿಲ್ಲೆಯಲ್ಲಿ ಮೆಡಿಕಲ್ ಶಾಪ್ ಮಾಲೀಕನೊಬ್ಬ 42 ವರ್ಷದ ಮಾದಕವಸ್ತು ವಿರೋಧಿ ಕಾರ್ಯಕರ್ತ (Anti-Drugs Activist's) ಪರ್ವಿಂದರ್ ಸಿಂಗ್ ಝೋಟಾ ಅವರನ್ನು ಹತ್ಯೆ ಮಾಡಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ....

ಜಂತರ್ ಮಂತರ್ ಅತಿಕ್ರಮಣ ಆರೋಪ: ಸಿಜೆಪಿಯ ಅಶುತೋಷ್, ಸೌರವ್ ಬಂಧನ ಮುಂದುವರಿಕೆ, ಅಪರಾಧ ವಿಭಾಗಕ್ಕೆ ತನಿಖೆ ವರ್ಗಾವಣೆ

ನವದೆಹಲಿ: ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಜಿರಳೆ ಜನತಾ ಪಕ್ಷದ (ಸಿಜೆಪಿ) ಸಹ-ಸಂಚಾಲಕರಾದ ಅಶುತೋಷ್ ರಂಕಾ ಮತ್ತು ಸೌರವ್ ದಾಸ್ ಅವರ ವಿರುದ್ಧ ದಾಖಲಾದ ಪ್ರಕರಣದ ತನಿಖೆಯನ್ನು ದೆಹಲಿ ಪೊಲೀಸರು...

‘ವೋಟ್ ಚೋರಿ ಸರ್ಕಾರ’ದಿಂದ ಗ್ರಾಮೀಣ ಕಾರ್ಮಿಕರ ಕೂಲಿ ಕಳ್ಳತನವೂ ಪರಿಪೂರ್ಣ: ವಿಬಿ-ಜಿ ರಾಮ್ ಜಿ ಕಾಯ್ದೆ ವಿರುದ್ಧ ಜೈರಾಮ್ ರಮೇಶ್ ವಾಗ್ದಾಳಿ

ನವದೆಹಲಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA) ಬದಲಿಗೆ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ಕಾಯ್ದೆ ಗ್ರಾಮೀಣ ಭಾರತದ ಬಡವರು ಮತ್ತು...

ದೆಹಲಿ ಪೊಲೀಸರಿಂದ ಎನ್‌ಎಸ್‌ಯುಐ ನಾಯಕರ ಮೇಲೆ ಹಲ್ಲೆ : ಜೈಪುರ ಕಮಿಷನರ್ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರಿಂದ ಆಹೋರಾತ್ರಿ ಧರಣಿ

ರಾಜಸ್ಥಾನ ಕಾಂಗ್ರೆಸ್‌ನ ಹಿರಿಯ ನಾಯಕರು ಮತ್ತು ರಾಜ್ಯ ಘಟಕದ ಅಧ್ಯಕ್ಷ ಗೋವಿಂದ್ ಸಿಂಗ್ ದೋತಾಸ್ರಾ ಸೇರಿದಂತೆ ಹಲವಾರು ಶಾಸಕರು ಜೈಪುರ ಪೊಲೀಸ್ ಕಮಿಷನರೇಟ್ ಕಚೇರಿಯಲ್ಲಿ ಸೋಮವಾರ (ಅಕ್ಟೋಬರ್ 19) ರಾತ್ರಿಯಿಡೀ ಧರಣಿ ಸತ್ಯಾಗ್ರಹ...

ಸೋಶಿಯಲ್ ಮೀಡಿಯಾ ಅಕೌಂಟ್ ಬ್ಲಾಕ್: ಬಳಕೆದಾರರಿಗೆ ಸರ್ಕಾರದ ನೋಟಿಸ್‌ ಪ್ರತಿ ನೀಡುವುದು ಕಡ್ಡಾಯ ಎಂದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌

ಸಾಮಾಜಿಕ ಜಾಲತಾಣಗಳಲ್ಲಿನ ಖಾತೆ ಅಥವಾ ವಿಷಯಗಳನ್ನು (Content) ತಡೆಹಿಡಿಯಲು ಸರ್ಕಾರವು ಮಧ್ಯವರ್ತಿ ಸಂಸ್ಥೆಗಳಿಗೆ (ಫೇಸ್‌ಬುಕ್, ಟ್ವಿಟರ್ ಇತ್ಯಾದಿ) ಸೂಚನೆ ಅಥವಾ ಆದೇಶ ರವಾನಿಸಿದ ತಕ್ಷಣ, ಆ ಆದೇಶ ಅಥವಾ ನೋಟಿಸ್‌ನ ಪ್ರತಿಯನ್ನು ಸಂಬಂಧಪಟ್ಟ...

ಉತ್ತರ ಪ್ರದೇಶ| ದೇವಾಲಯದಲ್ಲಿ ಪೂಜೆ ಸಲ್ಲಿಸಿದ ದಲಿತ ವ್ಯಕ್ತಿಯ ಮೇಲೆ ಹಲ್ಲೆ

ದಲಿತ ಸಮುದಾಯದ ವ್ಯಕ್ತಿಯೊಬ್ಬರು ಧಾರ್ಮಿಕ ಸ್ಥಳದಲ್ಲಿ ವಾಸಿಸುತ್ತಿರುವುದಕ್ಕೆ ಮತ್ತು ಅವರು ಪೂಜೆ ಸಲ್ಲಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಇಬ್ಬರು ವ್ಯಕ್ತಿಗಳು, ಅವರ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ್ದಾರೆ. ಸಾಲದ್ದಕ್ಕೆ ಅವರನ್ನು ದೇವಾಲಯದೊಳಗೆ...

ಸುಪ್ರೀಂ ಕೋರ್ಟ್‌ ತೀರ್ಪನ್ನು ‘ನ್ಯಾಯ ನಿರಾಕರಣೆ’ ಎಂದು ಟೀಕಿಸುವುದು ಅಪರಾಧವಲ್ಲ : ಕರ್ನಾಟಕ ಹೈಕೋರ್ಟ್

ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಹಕ್ಕಿನ ವ್ಯಾಪ್ತಿಯನ್ನು ಸ್ಪಷ್ಟಪಡಿಸಿರುವ ಕರ್ನಾಟಕ ಹೈಕೋರ್ಟ್, ಸುಪ್ರೀಂ ಕೋರ್ಟ್ ತೀರ್ಪೊಂದನ್ನು ಟೀಕಿಸುವ ಘೋಷವಾಕ್ಯಗಳನ್ನು ಸಾರ್ವಜನಿಕ ಗೋಡೆಯ ಮೇಲೆ ಬರೆದಿದ್ದಾರೆ ಎಂಬ ಆರೋಪದ ಮೇರೆಗೆ 13 ವ್ಯಕ್ತಿಗಳ ವಿರುದ್ಧ ದಾಖಲಿಸಲಾಗಿದ್ದ ಎಫ್‌ಐಆರ್...

‘ಭಾರತದಲ್ಲಿ ಆಡಳಿತ ಬದಲಾವಣೆ ಆಗುವುದಿಲ್ಲ’: ಪ್ರತಿಭಟನೆ, ಹೋರಾಟಗಳಿಗೆ ಪಶ್ಚಿಮ ದೇಶಗಳ ಪ್ರಭಾವ ಕಾರಣ ಎಂದ ಮೋಹನ್ ಭಾಗವತ್

ನಾಗ್ಪುರ: ಭಾರತದಲ್ಲಿ ಆಡಳಿತ ಬದಲಾವಣೆಯ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎನ್ನುವ ವಾದವನ್ನು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ವಿರೋಧಿಸಿದ್ದಾರೆ. ಆಡಳಿತ ಬದಲಾವಣೆಗೆ ಕರೆ ನೀಡುವ ಚಳವಳಿಗಳು ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ. ಬದಲಿಗೆ,...

ಗಾಜಿಯಾಬಾದ್‌| ದಲಿತ ವಿದ್ಯಾರ್ಥಿಗೆ ಸಹಪಾಠಿಗಳಿಂದ ಜಾತಿ ನಿಂದನೆ – ಹಲ್ಲೆ ಆರೋಪ

ಅಕ್ಟೋಬರ್ 7 ರ ಮಧ್ಯರಾತ್ರಿ ಮಹೇಶ್ ಕುಮಾರ್ (45) ಎಚ್ಚರಗೊಂಡಾಗ, ತಮ್ಮ ಮನೆಯ ಹೊರಗೆ 11ನೇ ತರಗತಿಯಲ್ಲಿ ಓದುತ್ತಿದ್ದ ಮಗ ಕುಳಿತಿರುವುದನ್ನು ಗಮನಿಸಿದರು. ಆ ಹದಿಹರೆಯದ ಬಾಲಕನ ಮುಖದಲ್ಲಿ ಆತಂಕವಿತ್ತು, ಶಾಲೆಯಲ್ಲಿ ತನಗಾಗುತ್ತಿದ್ದ...