Homeದಲಿತ್ ಫೈಲ್ಸ್ಗಾಜಿಯಾಬಾದ್‌| ದಲಿತ ವಿದ್ಯಾರ್ಥಿಗೆ ಸಹಪಾಠಿಗಳಿಂದ ಜಾತಿ ನಿಂದನೆ - ಹಲ್ಲೆ ಆರೋಪ

ಗಾಜಿಯಾಬಾದ್‌| ದಲಿತ ವಿದ್ಯಾರ್ಥಿಗೆ ಸಹಪಾಠಿಗಳಿಂದ ಜಾತಿ ನಿಂದನೆ – ಹಲ್ಲೆ ಆರೋಪ

"ನೀನು ಅಂಬೇಡ್ಕರ್ ಆಗಬೇಕೇ? ನಾವು ನಿಮಗೆ ಓದಲು ಬಿಡುವುದಿಲ್ಲ"

- Advertisement -
- Advertisement -

ಅಕ್ಟೋಬರ್ 7 ರ ಮಧ್ಯರಾತ್ರಿ ಮಹೇಶ್ ಕುಮಾರ್ (45) ಎಚ್ಚರಗೊಂಡಾಗ, ತಮ್ಮ ಮನೆಯ ಹೊರಗೆ 11ನೇ ತರಗತಿಯಲ್ಲಿ ಓದುತ್ತಿದ್ದ ಮಗ ಕುಳಿತಿರುವುದನ್ನು ಗಮನಿಸಿದರು. ಆ ಹದಿಹರೆಯದ ಬಾಲಕನ ಮುಖದಲ್ಲಿ ಆತಂಕವಿತ್ತು, ಶಾಲೆಯಲ್ಲಿ ತನಗಾಗುತ್ತಿದ್ದ ಕಿರುಕುಳ ನೆನೆದು ಆತನಿಗೆ ನಿದ್ರೆ ಬಂದಿರಲಿಲ್ಲ.

ದಲಿತ ಸಮುದಾಯಕ್ಕೆ ಸೇರಿರುವ ಮಹೇಶ್‌ ಕುಮಾರ್ ಗಾರೆ ಕೆಲಸ ಮಾಡುತ್ತಾರೆ. ಅವರ ಮಗ ಗಾಜಿಯಾಬಾದ್ ಮೂಲದ ಶಾಲೆಯೊಂದರಲ್ಲಿ ಓದುತ್ತಿದ್ದಾನೆ. “ಅಕ್ಟೋಬರ್ 6 ರಂದು ತನ್ನ ಸಹಪಾಠಿಗಳು ಮಗನ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ್ದರಿಂದ ಆತನ ಮೈಯೆಲ್ಲಾ ಗಾಯಗಳಾಗಿದ್ದು, ಮನೆಗೆ ವಾಪಸಾಗಿದ್ದಾನೆ” ಎಂದು ಅವರು ಆರೋಪಿಸಿದ್ದಾರೆ. “ಸಹಪಾಠಿಗಳು ಕಳೆದ ಒಂದು ತಿಂಗಳಿನಿಂದ ನನ್ನ ಮಗನಿಗೆ ಕಿರುಕುಳ ನೀಡುತ್ತಿದ್ದಾರೆ, ಆದ್ದರಿಂದ ನಾನು ಅಕ್ಟೋಬರ್ 8 ರಂದು ಪೊಲೀಸ್ ದೂರು ದಾಖಲಿಸಿದ್ದೇನೆ” ಎಂದು ಅವರು ತಿಳಿಸಿದರು.

ಭಾನುವಾರದಂದು, ಗಾಜಿಯಾಬಾದ್ ಪೊಲೀಸರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯಗಳ ತಡೆ) ಕಾಯ್ದೆ, 1989 ರ ಸೆಕ್ಷನ್ 3(2)(ವಿಎ), ನರಹತ್ಯೆಗೆ ಯತ್ನ, ಶಾಂತಿಭಂಗವನ್ನು ಉಂಟುಮಾಡುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ ಮತ್ತು ಗಂಭೀರ ಕ್ರಮಿನಲ್ ಬೆದರಿಕೆ ಇತ್ಯಾದಿ ಸೆಕ್ಷನ್‌ಗಳ ಅಡಿಯಲ್ಲಿ ಶಾಲೆಯ ಹಲವಾರು ವಿದ್ಯಾರ್ಥಿಗಳು ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ, “ನಾವು ಎಫ್‌ಐಆರ್ ದಾಖಲಿಸಿದ್ದೇವೆ ಮತ್ತು ಆರೋಪಗಳ ಕುರಿತು ತನಿಖೆ ನಡೆಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.

ದಿನಪತ್ರಿಕೆಯೊಂದಿಗೆ ಮಾತನಾಡಿದ ಮಹೇಶ್‌ ಕುಮಾರ್, “ಅವನ ಸಹಪಾಠಿಗಳು ಶಾಲೆಯಲ್ಲಿ ನನ್ನ ಮಗನಿಗೆ ‘ನೀನು ಅಂಬೇಡ್ಕರ್ ಆಗಬೇಕೇ?’ ಮತ್ತು ‘ನಾವು ನಿಮಗೆ ಓದಲು ಬಿಡುವುದಿಲ್ಲ’ ಎಂಬಂತಹ ಅನಗತ್ಯ ಜಾತಿ ನಿಂದನೆ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಅಂದು ಶಾಲೆ ಮುಗಿಯುವ ಸಮೀಪದಲ್ಲಿದ್ದಾಗ, ಅವರು ಮತ್ತೊಮ್ಮೆ ಆತನಿಗೆ ಅಸಹ್ಯಕರ ಭಾಷೆಯಿಂದ ಬೈದಿದ್ದಾರೆ. ಅವರು 5-7 ಸ್ನೇಹಿತರನ್ನು ಕರೆಸಿ ನನ್ನ ಮಗನಿಗೆ ಹೊಡೆದು, ಮುಷ್ಟಿಯಿಂದ ಹಲ್ಲೆ ನಡೆಸಿದ್ದಾರೆ ಹಾಗೂ ಬೆಲ್ಟ್‌ನಿಂದ ಹೊಡೆದಿದ್ದಾರೆ” ಎಂದು ಆರೋಪಿಸಿದ್ದಾರೆ.

“ಈ ಹಲ್ಲೆ ನಡೆದಾಗಿನಿಂದ, ಅವನು ಶಾಲೆಗೆ ಹೋಗಿರುವುದು ಕೇವಲ ಒಮ್ಮೆ ಮಾತ್ರ. ಅಂದು ನೋವು ಕಾಣಿಸಿಕೊಂಡಿದ್ದರಿಂದ ಎರಡು ಗಂಟೆಯ ನಂತರ ಬಂದು ಕರೆದುಕೊಂಡು ಹೋಗುವಂತೆ ಅವರ ಶಿಕ್ಷಕರು ನನಗೆ ಕರೆ ಮಾಡಿದ್ದರು. ಈ ಘಟನೆಗೂ ಮುಂಚೆಯೂ ಅವನು ಅನಿಯಮಿತವಾಗಿ ಶಾಲೆಗೆ ಹೋಗುತ್ತಿದ್ದ, ನಾನು ಅವನನ್ನು ಬೈಯುತ್ತಿದ್ದೆ. ಸಹಪಾಠಿಗಳು ತನಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಅವನು ನಂತರ ನನಗೆ ಹೇಳಿದ” ಎಂದು ಕುಮಾರ್ ಆರೋಪಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ದೇವಾಲಯದಲ್ಲಿ ಪೂಜೆ ಸಲ್ಲಿಸಿದ ದಲಿತ ವ್ಯಕ್ತಿಯ ಮೇಲೆ ಹಲ್ಲೆ

ದಲಿತ ಸಮುದಾಯದ ವ್ಯಕ್ತಿಯೊಬ್ಬರು ಧಾರ್ಮಿಕ ಸ್ಥಳದಲ್ಲಿ ವಾಸಿಸುತ್ತಿರುವುದಕ್ಕೆ ಮತ್ತು ಅವರು ಪೂಜೆ ಸಲ್ಲಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಇಬ್ಬರು ವ್ಯಕ್ತಿಗಳು, ಅವರ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ್ದಾರೆ. ಸಾಲದ್ದಕ್ಕೆ ಅವರನ್ನು ದೇವಾಲಯದೊಳಗೆ...

ಸುಪ್ರೀಂ ಕೋರ್ಟ್‌ ತೀರ್ಪನ್ನು ‘ನ್ಯಾಯ ನಿರಾಕರಣೆ’ ಎಂದು ಟೀಕಿಸುವುದು ಅಪರಾಧವಲ್ಲ : ಕರ್ನಾಟಕ ಹೈಕೋರ್ಟ್

ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಹಕ್ಕಿನ ವ್ಯಾಪ್ತಿಯನ್ನು ಸ್ಪಷ್ಟಪಡಿಸಿರುವ ಕರ್ನಾಟಕ ಹೈಕೋರ್ಟ್, ಸುಪ್ರೀಂ ಕೋರ್ಟ್ ತೀರ್ಪೊಂದನ್ನು ಟೀಕಿಸುವ ಘೋಷವಾಕ್ಯಗಳನ್ನು ಸಾರ್ವಜನಿಕ ಗೋಡೆಯ ಮೇಲೆ ಬರೆದಿದ್ದಾರೆ ಎಂಬ ಆರೋಪದ ಮೇರೆಗೆ 13 ವ್ಯಕ್ತಿಗಳ ವಿರುದ್ಧ ದಾಖಲಿಸಲಾಗಿದ್ದ ಎಫ್‌ಐಆರ್...

‘ಭಾರತದಲ್ಲಿ ಆಡಳಿತ ಬದಲಾವಣೆ ಆಗುವುದಿಲ್ಲ’: ಪ್ರತಿಭಟನೆ, ಹೋರಾಟಗಳಿಗೆ ಪಶ್ಚಿಮ ದೇಶಗಳ ಪ್ರಭಾವ ಕಾರಣ ಎಂದ ಮೋಹನ್ ಭಾಗವತ್

ನಾಗ್ಪುರ: ಭಾರತದಲ್ಲಿ ಆಡಳಿತ ಬದಲಾವಣೆಯ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎನ್ನುವ ವಾದವನ್ನು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ವಿರೋಧಿಸಿದ್ದಾರೆ. ಆಡಳಿತ ಬದಲಾವಣೆಗೆ ಕರೆ ನೀಡುವ ಚಳವಳಿಗಳು ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ. ಬದಲಿಗೆ,...

ಪ್ರಧಾನಿ, ಮಾಜಿ ಪ್ರಧಾನಿ ವಿದೇಶಿ ಪ್ರವಾಸ ವಿವರ ಬಹಿರಂಗಪಡಿಸುವ ಅಗತ್ಯವಿಲ್ಲ: ದೆಹಲಿ ಹೈಕೋರ್ಟ್!

ಮಾಹಿತಿ ಹಕ್ಕು ಕಾಯ್ದೆಯಡಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಮಾಜಿ ಪ್ರಧಾನಿ ಡಾ. ಮನ್ಮೋಹನ್ ಸಿಂಗ್ ಅವರು ಭಾರತೀಯ ವಾಯುಪಡೆಯ (IAF) ವಿಮಾನಗಳಲ್ಲಿ ನಡೆಸಿದ್ದ ವಿದೇಶಿ ಪ್ರವಾಸಗಳಿಗೆ ಸಂಬಂಧಿಸಿದ ವಿವರವಾದ ದಾಖಲೆಗಳನ್ನು ಬಹಿರಂಗಪಡಿಸುವಂತೆ...

ಗಾಯಕಿ ನೇಹಾ ಸಿಂಗ್ ಕುರಿತು ಎಬಿಪಿ ನ್ಯೂಸ್ ಸುಳ್ಳು, ಮಾನಹಾನಿಕರ ವರದಿ : ಸ್ವಯಂಪ್ರೇರಿತ ಪ್ರಕರಣ ಕೈಗೆತ್ತಿಕೊಂಡ ರಾಷ್ಟ್ರೀಯ ಮಹಿಳಾ ಆಯೋಗ

ಗಾಯಕಿ ಹಾಗೂ ಹೋರಾಟಗಾರ್ತಿ ನೇಹಾ ಸಿಂಗ್ ರಾಥೋರ್ ಬಗ್ಗೆ ಎಬಿಪಿ ನ್ಯೂಸ್ ಸುಳ್ಳು ಹಾಗೂ ಅವಹೇಳನಕಾರಿ ಸುದ್ದಿ ಪ್ರಸಾರ ಮಾಡಿರುವುದಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು) ಸ್ವಯಂಪ್ರೇರಿತವಾಗಿ ಪ್ರಕರಣ ಕೈಗೆತ್ತಿಕೊಂಡಿದೆ. ಎಬಿಪಿ ನ್ಯೂಸ್...

ಜಂತರ್ ಮಂತರ್ ಪ್ರತಿಭಟನೆ: ಕಾಕ್ರೋಚ್ ಜನತಾ ಪಾರ್ಟಿ ನಾಯಕರ ನ್ಯಾಯಾಂಗ ಬಂಧನ ಎರಡು ದಿನಗಳಿಗೆ ವಿಸ್ತರಣೆ; ಪ್ರಕರಣ ಕ್ರೈಂ ಬ್ರಾಂಚ್‌ಗೆ ವರ್ಗಾವಣೆ!

ದೆಹಲಿಯ ನಿರ್ಬಂಧಿತ ಜಂತರ್ ಮಂತರ್ ಪ್ರದೇಶಕ್ಕೆ ಅತಿಕ್ರಮ ಪ್ರವೇಶ ಮಾಡಿ ಪ್ರತಿಭಟನೆ ನಡೆಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ 'ಕಾಕ್ರೋಚ್ ಜನತಾ ಪಾರ್ಟಿ' (CJP) ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರ...

‘ಅನ್ಯಧರ್ಮೀಯರು ಹೊರಹೋಗಿ’: ಗುಜರಾತ್ ಗರ್ಬಾ ಉತ್ಸವಗಳಲ್ಲಿ ಹಿಂದುತ್ವ ಸಂಘಟನೆಗಳಿಂದ ಕಿರುಕುಳ, ಬೆದರಿಕೆ!

ಗುಜರಾತ್‌ನಾದ್ಯಂತ ನಡೆಯುತ್ತಿರುವ ನವರಾತ್ರಿ ಗರ್ಬಾ ಉತ್ಸವಗಳಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಸೇರಿದಂತೆ ಬಲಪಂಥೀಯ ಹಿಂದುತ್ವ ಸಂಘಟನೆಗಳು ಮುಸ್ಲಿಮರು ಹಾಗೂ ಮುಸ್ಲಿಮೇತರರನ್ನು ಪ್ರವೇಶಿಸದಂತೆ ತಡೆಯಲು ಹೊಸ ನಿಯಮಗಳನ್ನು ಜಾರಿಗೆ ತರುತ್ತಿವೆ ಎಂದು...

ಮಣಿಪುರ ಹಿಂಸಾಚಾರ: ಉರುವಲು ಸಂಗ್ರಹಿಸುತ್ತಿದ್ದ ಮೂವರನ್ನು ಕೊಂದ ಉಗ್ರರು; ಸಿಎಂ ನಿವಾಸದ ಮುಂದೆ ಶವಗಳನ್ನಿಟ್ಟು ಸ್ಥಳೀಯರ ಪ್ರತಿಭಟನೆ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಕಾಡಿನಲ್ಲಿ ಉರುವಲು ಸಂಗ್ರಹಿಸಲು ತೆರಳಿದ್ದ ಮೂವರನ್ನು ಉಗ್ರಗಾಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ಇಂಫಾಲ್ ಪೂರ್ವ ಮತ್ತು ಕಾಂಗ್ಪೋಕ್ಪಿ ಜಿಲ್ಲೆಗಳ ಗಡಿಯಲ್ಲಿರುವ ಬೆಟ್ಟ ಪ್ರದೇಶದಲ್ಲಿ ಸೋಮವಾರ ಈ ದಾಳಿ ನಡೆದಿದೆ....

ಆಂಧ್ರ ಪ್ರದೇಶ | ಹಿಂಸಾಚಾರದಿಂದ ಮುನ್ಸಿಪಲ್ ಚುನಾವಣೆ ನಾಮಪತ್ರ ಸಲ್ಲಿಕೆಗೆ ಅಡ್ಡಿ ಆರೋಪ : ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ವೈಎಸ್‌ಆರ್‌ ಕಾಂಗ್ರೆಸ್

ಆಂಧ್ರ ಪ್ರದೇಶದಲ್ಲಿ ನಡೆದ ವ್ಯಾಪಕ ಹಿಂಸಾಚಾರದಿಂದಾಗಿ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ತಮ್ಮ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಸಾಧ್ಯವಾಗಿಲ್ಲ ಎಂದು ಆರೋಪಿಸಿ ವೈಎಸ್‌ಆರ್‌ ಕಾಂಗ್ರೆಸ್ ಪಕ್ಷ ಸೋಮವಾರ (ಅಕ್ಟೋಬರ್ 19) ಸುಪ್ರೀಂ ಕೋರ್ಟ್‌ನ...

ಮೂಲಭೂತ ಸೌಕರ್ಯ- ವಿದ್ಯಾರ್ಥಿ ಸಂಘಕ್ಕಾಗಿ ಉಪವಾಸ ಸತ್ಯಾಗ್ರಹ; ಸಮಸ್ಯೆಗಳ ಪರಿಹಾರಕ್ಕೆ ಮುಂದಾದ ಜಾಮಿಯಾ ಆಡಳಿತ ಮಂಡಳಿ

ದೆಹಲಿಯಲ್ಲಿರುವ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನಡೆಸುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ಒಂದು ವಾರ ತುಂಬಿದ ಹಿನ್ನೆಲೆಯಲ್ಲಿ, ಸೋಮವಾರ (ಅ.19) ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ಏಳು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. ವಿದ್ಯಾರ್ಥಿಗಳು...