Homeಕರ್ನಾಟಕಉತ್ತರ ಕನ್ನಡ: ಬನವಾಸಿ ಮೇಲ್ಯಾಕೆ ಯಡ್ಡಿ ಕುಟುಂಬದ ಕಣ್ಣು!?

ಉತ್ತರ ಕನ್ನಡ: ಬನವಾಸಿ ಮೇಲ್ಯಾಕೆ ಯಡ್ಡಿ ಕುಟುಂಬದ ಕಣ್ಣು!?

`ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಂ' ಎಂದು ಎದೆತುಂಬಿ ಪಂಪ ಮಹಾಕವಿ ಹಾಡಿದ್ದ ಐತಿಹಾಸಿಕ ಮಹತ್ವದ ಬನವಾಸಿಗೆ ಉತ್ತರ ಕನ್ನಡದೊಂದಿಗೆ, ಅದರಲ್ಲೂ ಮಲೆನಾಡಿನ ಸೆರಗಿನ ಶಿರಸಿ ಸೀಮೆಯೊಂದಿಗೆ ಅವಿನಾಭಾವ ಸಂಬಂಧ.

- Advertisement -
- Advertisement -

| ನಹುಷ |

`ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಂ’ ಎಂದು ಎದೆತುಂಬಿ ಪಂಪ ಮಹಾಕವಿ ಹಾಡಿದ್ದ ಐತಿಹಾಸಿಕ ಮಹತ್ವದ ಬನವಾಸಿಗೆ ಉತ್ತರ ಕನ್ನಡದೊಂದಿಗೆ, ಅದರಲ್ಲೂ ಮಲೆನಾಡಿನ ಸೆರಗಿನ ಶಿರಸಿ ಸೀಮೆಯೊಂದಿಗೆ ಅವಿನಾಭಾವ ಸಂಬಂಧ. ಶಿವಮೊಗ್ಗ ಜಿಲ್ಲೆಯ ಸೊರಬ-ಶಿಕಾರಿಪುರ ತಾಲ್ಲೂಕಿನ ಅಂಚಿನಲ್ಲಿರುವ ಕನ್ನಡದ ಈ ಮೊದಲ ರಾಜಧಾನಿ, ಯಡ್ಡಿ ಮುಖ್ಯಮಂತ್ರಿ ಆದಾಗೆಲ್ಲಾ ಕರುಳು ಸಂಬಂಧವೇ ಕಡಿದು ಹೋಗುವ ಆತಂಕಕ್ಕೆ ಬಿದ್ದು ಒದ್ದಾಡುತ್ತದೆ.

ಯಡ್ಡಿ ಈ ಹಿಂದೆ ಸಿಎಂ ಆಗಿದ್ದಾಗ ಬನವಾಸಿಯನ್ನು ಸೊರಬದ ಆನವಟ್ಟಿ ಹೋಬಳಿಗೆ ಸೇರಿಸುವ ಮಸಲತ್ತು ನಡೆದಿತ್ತು. ಆದರೆ ಯಡ್ಡಿ ಭಿನ್ನಮತಕ್ಕೆ ಬಲಿಯಾಗಿ ಅಧಿಕಾರ ಕಳಕೊಂಡು ಬಿಜೆಪಿ ಪಾಲಿಗೆ “ಕಾಫಿರ್” ಆಗಿಹೋಗಿದ್ದರು. ಹೀಗಾಗಿ ಬನವಾಸಿಯನ್ನು ಉತ್ತರ ಕನ್ನಡದಿಂದ ಹೊತ್ತೊಯ್ಯುವ ಯಡ್ಡಿ ಮತ್ತವರ ಮಗನೂ ಸಂಸದನೂ ಆಗಿರುವ ಬಸ್‍ಸ್ಟ್ಯಾಂಡ್ ರಾಘುನ ಪ್ಲಾನ್ ಫ್ಲಾಪ್ ಆಗಿತ್ತು. ಈಗ ಮತ್ತೆ ಶಿರಸಿಯ ಬನವಾಸಿ ಮೇಲೆ ಯಡ್ಡಿ ಕುಟುಂಬದ ಕಣ್ಣು ಬಿದ್ದಿದೆ. ಈ ರಹಸ್ಯ ಹುನ್ನಾರದ ಹೂರಣ ಹೊರಬರುತ್ತಲೇ ಬನವಾಸಿ ಭಾಗದ ಜನರು ಕೆರಳಿ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ.

ಅಷ್ಟಕ್ಕೂ ಈ ಅಪ್ಪ-ಮಗನಿಗೆ ಉತ್ತರ ಕನ್ನಡ ಸಂಸ್ಕøತಿ-ಸಂಸ್ಕಾರದ ಬನವಾಸಿ ಮತ್ತದರ ಸುತ್ತಲಿನ ಹಳ್ಳಿಗಳನ್ನು ಕಬಳಿಸುವ ಹಠವೇಕೆಂದು ಬಲ್ಲಿರಾ? ಶಿವಮೊಗ್ಗ ಜಿಲ್ಲೆಯನ್ನು ಒಡೆದು ಶಿಕಾರಿಪುರ ಜಿಲ್ಲೆ ರಚನೆ ಮಾಡಿ ರಾಜಕೀಯ ಫಾಯ್ದೆ ಹೊಡೆಯಲು ಯಡ್ಡಿ-ರಾಘು ಸ್ಕೆಚ್ ಹಾಕಿದ್ದಾರೆ. ಆದರೆ ಜಿಲ್ಲೆ ರಚನೆಗೆ ಬೇಕಾದ ಭೌಗೋಳಿಕ ಪ್ರದೇಶ ಮತ್ತು ಜನಸಂಖ್ಯೆಯ ಕೊರತೆಯಿದೆ. ಪಕ್ಕದ ಬನವಾಸಿ ಮತ್ತು ಅದರ ಆಚೀಚೆಯ ಹತ್ತು ಗ್ರಾಮ ಪಂಚಾಯತ್ ಏರಿಯಾ ಸೇರಿಸಿಕೊಂಡರೆ ಏಕ್‍ದಮ್ 50 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆಯೂ ಸಿಗುತ್ತದೆ! ಈ ದೂ(ದು)ರಾಲೋಚನೆಯಿಂದ ಬನವಾಸಿ ಸೀಮೆ ಆಪೋಷನಕ್ಕೆ ಯಡ್ಡಿ-ರಾಘು ಸರ್ಕಸ್ ನಡೆಸಿದ್ದಾರೆ.

ಯಡ್ಡಿ ಅಕ್ರಮ ಸರ್ಕಾರದ ಚಕ್ರವರ್ತಿಯಾಗುತ್ತಲೇ ಆತನ ತವರೂರು ಶಿಕಾರಿಪುರಕ್ಕೆ ಭರಪೂರ ಅನುದಾನ ಹರಿದುಬರುತ್ತಿದೆ. ಪಕ್ಕದ ಶಿಕಾರಿಪುರದ ಉದ್ಧಾರಕ್ಕೆ ಯಥೇಚ್ಛವಾಗಿ ಹಣ ಹರಿದು ಬರುತ್ತಿದ್ದರೆ ಉತ್ತರ ಕನ್ನಡಕ್ಕೆ ಅನ್ಯಾಯ-ಅತ್ಯಾಚಾರ ಆಗುತ್ತಿದೆ! ಅನುದಾನ ತರುವುದು ಸಾಯಲಿ, ಜಿಲ್ಲೆ ಬರಡಾಗದಂತೆ ತಡೆಯಬೇಕೆಂಬ ಕನಿಷ್ಟ ಕಾಳಜಿಯೂ ಉತ್ತರ ಕನ್ನಡದ ಹೇತ್ಲಾಂಡಿ ಶಾಸಕ-ಸಂಸದ-ಮಂತ್ರಿಗಳಿಗಿಲ್ಲ. ಲಾಗಾಯ್ತಿನಿಂದ ಉತ್ತರ ಕನ್ನಡದ ಪ್ರಗತಿಗೆ ಅಡ್ಡಗಾಲು ಹಾಕಲಾಗುತ್ತಿದೆ. ಅಂಕೋಲಾ-ಹುಬ್ಬಳ್ಳಿ, ಹಾವೇರಿ-ಶಿರಸಿ ಮತ್ತು ತಾಳಗುಪ್ಪ-ಸಿದ್ಧಾಪುರ ರೈಲು ಮಾರ್ಗ ಹಲವು ವರ್ಷದಿಂದ ಬರೀ ಕನಸಾಗೇ ಕಾಡುತ್ತಿದೆ. ಉತ್ತರ ಕನ್ನಡಕ್ಕೆ ತೀರಾ ಹತ್ತಿರದಲ್ಲಿರುವ ಸಾಗರ ತಾಲ್ಲೂಕಿನ ತಾಳಗುಪ್ಪದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿದ್ದ ರೈಲು ಟರ್ಮಿನಲನ್ನು ಯಡ್ಡಿ ಪರ್ವದಲ್ಲಿ ಶಿವಮೊಗ್ಗಕ್ಕೆ ಸ್ಥಳಾಂತರಿಸುವ ಕಿತಾಪತಿ ನಡೆಯುತ್ತಿದೆ. ತಾಳಗುಪ್ಪ ಜಂಕ್ಷನ್ ಆಗಿದ್ದರೆ ಈ ರೈಲು ಮಾರ್ಗ ಸಿದ್ಧಾಪುರದವರೆಗೆ ವಿಸ್ತರಿಸಲು ಅನುಕೂಲವಾಗುತ್ತಿತ್ತು.

ಈಗ ಅದಕ್ಕೂ ಕಲ್ಲು ಹಾಕಲಾಗುತ್ತಿದೆ. ಜಂಕ್ಷನ್ ಸ್ಥಳಾಂತರಕ್ಕೆ ಸಾಕ್ಷಾತ್ ಸಿಎಂ ಸಾಹೇಬರೇ ಒಪ್ಪಿಗೆ ಕೊಟ್ಟಿದ್ದಾರೆ. ತಾಳಗುಪ್ಪ-ಸಿದ್ಧಾಪುರ ರೈಲು ಮಾರ್ಗಕ್ಕೆಂದು ಅಂದಿನ ರೈಲು ಮಂತ್ರಿ ಸುರೇಶ್ ಪ್ರಭು 320 ಕೋಟಿ ಮಂಜೂರು ಮಾಡುವುದಾಗಿ ಘೋಷಿಸಿದ್ದರು. ಈ ಹಣ ಎಲ್ಲಿ ಹೋಯಿತೆಂದು ಸಂಸದ ಅನಂತ್ಮಾಣಿಗೂ ಗೊತ್ತಾಗಿಲ್ಲ. ಉತ್ತರ ಕನ್ನಡದ ಅಭಿವೃದ್ಧಿಗಾಗೇ ಅವತಾರ ಎತ್ತಿದ್ದೇನೆಂದು ಒಣ ಘರ್ಜನೆ ಮಾಡುವ ಮಾಣಿ ಮೋದಿ ಮಂತ್ರಿಗಿರಿಯಿಂದ ತೆಗೆದುಹಾಕಿದ ಕ್ಷಣದಿಂದಲೇ ಬಿಲ ಸೇರಿಕೊಂಡಿದ್ದಾನೆ. ಬನವಾಸಿ ಅಪಹರಿಸುವ ಸುದ್ಧಿ ಕೇಳಿ ಜನರು ಬೀದಿಗಿಯಲು ಅಣಿಯಾದರೂ ಶಿರಸಿ ಶಾಸಕ ಕಂ ಸ್ಪೀಕರ್ ಕಾಗೇರಿಯಾಗಲಿ, ಬನವಾಸಿಯ ‘ಅನರ್ಹ’ ಶಾಸಕ ಶಿವರಾಮ ಹೆಬ್ಬಾರನಾಗಲಿ, ಶಿರಸಿಯಲ್ಲೇ ಐಷಾರಾಮಿ ಬಂಗಲೆ ಕಟ್ಟಿಕೊಂಡು ವಾಸಿಸುತ್ತಿರುವ ಸ್ವಯಂ ಘೋಷಿತ ದೇಶಭಕ್ತ ಅನಂತ್ಮಾಣಿಯಾಗಲಿ ತುಟಿಪಿಟಿಕ್ ಅಂದಿಲ್ಲ.

ಗುರುವಾರ 10ನೇ ತಾರೀಖಿನಂದು ಬನವಾಸಿ ಮತ್ತು ಸುತ್ತಲಿನ ಹಳ್ಳಿಗರು ಸಹಸ್ರಾರು ಸಂಖ್ಯೆಯಲ್ಲಿ ಮಧುಕೇಶ್ವರ ದೇವಾಲಯದ ಅಂಗಳದಲ್ಲಿ ಜಮೆಯಾಗಿ ಬನವಾಸಿ ಹೈಜಾಕ್ ಮಾಡದಂತೆ ಎಚ್ಚರಿಕೆಯ ರ್ಯಾಲಿ ನಡೆಸಿದ್ದಾರೆ. ಇದನ್ನು ಕಂಡು ಬೆಚ್ಚಿಬಿದ್ದಿರುವ ಅನರ್ಹ ಶಾಸಕ ಹೆಬ್ಬಾರ್ `ಬನವಾಸಿ ಶಿಕಾರಿಪುರಕ್ಕೆ ಸೇರಿಸುವ ಸುದ್ದಿ ಸುಳ್ಳೆಂದು’ ತಿಪ್ಪರಲಾಗ ಹೊಡೆದಿದ್ದಾನೆ. ಉಪಚುನಾವಣೆಯಲ್ಲಿ ಬನವಾಸಿ ಭಾನ್ಗಡಿ ತನಗೆ ದುಬಾರಿ ಆಗಬಾರದೆಂಬ ಭಯವೇ ಹೊರತು ಕ್ಷೇತ್ರದ ಬಗ್ಗೆ ಪ್ರಾಮಾಣಿಕ ಕಾಳಜಿಯೇನಿಲ್ಲ ಈ ರಾಜಕಾರಣಿಗೆ.

ಬನವಾಸಿ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿ ವರ್ಷಗಳು ಉರುಳಿದರೂ ಹೆಬ್ಬಾರ್‍ನ ಅಯೋಗ್ಯತೆಯಿಂದಾಗಿ ಅರ್ಧಕಾಸಿನ ಪ್ರಯೋಜನವಾಗಿಲ್ಲ. ಬನವಾಸಿಯನ್ನು ತಾಲ್ಲೂಕು ಮಾಡಿಯೆಂದು ಜನ ಬೊಬ್ಬೆ ಹೊಡೆಯುತ್ತಿದ್ದರೂ ಶಾಸಕನಾಗಿದ್ದ ಹೆಬ್ಬಾರ್‍ಗೆ ಅಡ್ಡದಾರಿಯಲ್ಲಿ ಮಂತ್ರಿಯಾಗುವುದೇ ಮುಖ್ಯವಾಗಿತ್ತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...