Homeಮುಖಪುಟಉತ್ತರ ಪ್ರದೇಶ ಚುನಾವಣಾ ವಿಶ್ಲೇಷಣೆ ಸಮೀಕ್ಷೆಗಳನ್ನು ಕಾಡುತ್ತಿರುವ 3 ಸಾಧ್ಯತೆಗಳು

ಉತ್ತರ ಪ್ರದೇಶ ಚುನಾವಣಾ ವಿಶ್ಲೇಷಣೆ ಸಮೀಕ್ಷೆಗಳನ್ನು ಕಾಡುತ್ತಿರುವ 3 ಸಾಧ್ಯತೆಗಳು

- Advertisement -
- Advertisement -

| ನೀಲಗಾರ |

ಕನ್ನಡದಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ

ಉತ್ತರ ಪ್ರದೇಶ ಎಲ್ಲರೂ ಕಾತುರದಿಂದ ನೋಡುತ್ತಿರುವ ರಾಜ್ಯವಾಗಿದೆ. ಉತ್ತರ ಪ್ರದೇಶದಲ್ಲಿ ಗೆದ್ದವರು ದೇಶವನ್ನು ಗೆಲ್ಲುತ್ತಾರೆ ಎಂಬ ಹಳೆಯ ಮಾತು ಈ ಸಾರಿ ಮತ್ತಷ್ಟು ಮಹತ್ವ ಪಡೆದುಕೊಂಡಿದೆ. ಏಕೆಂದರೆ, 2014ಕ್ಕೆ ಹೋಲಿಸಿದರೆ, ಬಿಜೆಪಿಯು ದೇಶದ ಉಳಿದೆಲ್ಲಾ ಭಾಗಗಳಲ್ಲಿ ಪಡೆದುಕೊಳ್ಳುವ ಹೆಚ್ಚುವರಿ ಸೀಟುಗಳನ್ನು ರಾಜಸ್ತಾನ, ಮಧ್ಯಪ್ರದೇಶ ಮತ್ತು ಛತ್ತೀಸ್‍ಗಢಗಳಲ್ಲಿ ಕಳೆದುಕೊಳ್ಳಲಿದೆ. ಅದೇ ರೀತಿ ಕ್ಲೀನ್ ಸ್ವೀಪ್ ಮಾಡಿದ್ದ ಉಳಿದ ರಾಜ್ಯಗಳಲ್ಲೂ ಸೀಟುಗಳು ಕಡಿಮೆಯಾಗಿ ಅದರ ಬಹುಮತವನ್ನು 30 ಸೀಟುಗಳಷ್ಟು ಕಡಿಮೆ ಮಾಡಲಿದೆ. ಎನ್‍ಡಿಎ ಮೈತ್ರಿ ಪಕ್ಷಗಳ ಜೊತೆ ಸೇರಿ ಆಳ್ವಿಕೆ ಮಾಡುತ್ತಾರೋ ಇಲ್ಲವೋ ಎಂಬುದನ್ನು ಉ.ಪ್ರ ಮತ್ತು ಬಿಹಾರಗಳು ನಿರ್ಧಾರ ಮಾಡಲಿವೆ. ಎರಡೂ ರಾಜ್ಯಗಳು ಸೇರಿ ಬಿಜೆಪಿಯು 50 ಸೀಟುಗಳನ್ನು ಕಳೆದುಕೊಂಡರೆ ಅಲ್ಲಿಗೆ ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರ ಬರುವುದು ಖಾಯಂ.

ಹಾಗಾಗಿಯೇ ಎಲ್ಲರ ಕಣ್ಣು ಉತ್ತರ ಪ್ರದೇಶದತ್ತ. ಈಗಾಗಲೇ 4 ಹಂತದ ಚುನಾವಣೆಗಳು ಮುಗಿದಿದ್ದು, ಇನ್ನೆರಡು ಹಂತದ ಚುನಾವಣೆಗಳಾದ ನಂತರ ಸಂಪೂರ್ಣ ಚಿತ್ರಣ ಸಿಗುತ್ತದಾದರೂ, ಈಗಾಗಲೇ ಹಲವು ವಿಶ್ಲೇಷಣೆಗಳು ಹೊರಬಂದಿವೆ. ವಿಪರ್ಯಾಸವೆಂದರೆ, ವಿವಿಧ ವಿಶ್ಲೇಷಣೆಗಳು ಪರಸ್ಪರ ವಿರುದ್ಧ ದಿಕ್ಕಿನಲ್ಲಿವೆ.

ಉ.ಪ್ರದೇಶದಾದ್ಯಂತ ಸುತ್ತಾಡಿ, ಸ್ಥಳೀಯ ಸಂಗತಿಗಳನ್ನು ಅಧ್ಯಯನ ಮಾಡಿ ವರದಿ ಬರೆದಿರುವ ಮೀಡಿಯಾವಿಜಿಲ್.ಕಾಂನ ಅಭಿಜಿತ್ ಶ್ರೀವಾಸ್ತವ ಅವರು ಮಹಾಘಟಬಂಧನ್ (ಎಸ್ಪಿ ಬಿಎಸ್ಪಿ ಮತ್ತು ಆರ್‍ಎಲ್‍ಡಿ ಮೈತ್ರಿ)ಗೆ ಅನಾನುಕೂಲಕರ ಅಂಶಗಳು ಹೆಚ್ಚಿವೆ ಎನ್ನುತ್ತಾರೆ. ಆದರೆ, ಆಂತ್ರೋ.ಎಐ ಎಂಬ ಕೃತಕ ಬುದ್ಧಿಮತ್ತೆಯನ್ನಾಧರಿಸಿ ವಿಶ್ಲೇಷಣೆ ಮಾಡುವ ಗುಂಪು, ಚಾಣಕ್ಯ.ಕಾಂ ಮತ್ತು ತಮ್ಮದೇ ಮೂಲಗಳನ್ನಾಧರಿಸಿ ಕ್ವಿಂಟ್‍ನ ಆದಿತ್ಯ ಮೆನನ್ ಅದಕ್ಕೆ ವಿರುದ್ಧವಾದ ವಿಶ್ಲೇಷಣೆ ಮಾಡುತ್ತಾರೆ.

ಇದುವರೆಗೆ ಆಗಿರುವ ನಾಲ್ಕು ಹಂತದ ಮತದಾನದಲ್ಲಿ ಬಿಜೆಪಿಗೆ ಅಷ್ಟೇನೂ ಅನುಕೂಲವಾಗಿಲ್ಲ. ಉ.ಪ್ರ.ದ ಈ ಪಶ್ಚಿಮ ಭಾಗಗಳಲ್ಲಿ ಮುಸ್ಲಿಮರು, ಜಾಟರು, ಜಾಟವ್ (ಮಾಯಾವತಿಯವರ ಜೊತೆಗಿರುವ ದಲಿತ ಸಮುದಾಯ) ಮತ್ತು ಯಾದವರು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣದಿಂದ, ಮೈತ್ರಿಯು ಮುನ್ನಡೆ ಸಾಧಿಸಿದ್ದು ಶೇ.50ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಕ್ವಿಂಟ್ ಹೇಳುತ್ತದೆ. ಆದರೆ ಮಾಯಾವತಿಯವರು “ಮುಸ್ಲಿಮರು ಕಾಂಗ್ರೆಸ್‍ಗೆ ಮತ ನೀಡಿ ವ್ಯರ್ಥಗೊಳಿಸಿಕೊಳ್ಳಬೇಡಿ” ಎಂಬ ಹೇಳಿಕೆಯಿಂದ ಉಂಟಾಗಿರುವ ಪ್ರತಿಧ್ರುವೀಕರಣ ಹಾಗೂ ತಳಮಟ್ಟದಲ್ಲಿ ಇನ್ನೂ ಬೆರೆಯದ ಮೈತ್ರಿ ಕಾರ್ಯಕರ್ತರ ಕಾರಣದಿಂದ ಬಿಜೆಪಿಗೇ ಹೆಚ್ಚಿನ ಅನುಕೂಲ ಎಂದು ಅಭಿಜಿತ್ ವಾದಿಸುತ್ತಾರೆ.

ಅವರ ಪ್ರಕಾರ ಮೈತ್ರಿಯಿಂದ ‘ಮಹತ್ವ’ದ ಸಾಧನೆ ಮಾಡಿದ ಉಪಚುನಾವಣೆಗಳಲ್ಲೇ ಈ ಸಂಗತಿ ಎದ್ದು ಕಂಡಿತ್ತು. ಮೂರೂ ಪಕ್ಷಗಳು ಒಟ್ಟುಗೂಡಿದರೆ ಅವರೆಲ್ಲರ ಮತಗಳೂ ಒಟ್ಟುಗೂಡುತ್ತವೆ ಎಂಬುದು ಸತ್ಯವಾಗಿಲ್ಲ. 2017ರ ಅಸೆಂಬ್ಲಿ ಚುನಾವಣೆಗಳಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದ ವಿರೋಧ ಪಕ್ಷಗಳು ಪಡೆದುಕೊಂಡ ಮತಗಳನ್ನು ಕೂಡಿಸಿ, 2018ರ ಮಾರ್ಚ್‍ನ ಉಪಚುನಾವಣೆಯಲ್ಲಿ ಒಟ್ಟುಗೂಡಿ ಪಡೆದುಕೊಂಡ ಮತಗಳಿಗೆ ಹೋಲಿಸಿದರೆ ಇದು ಗೊತ್ತಾಗುತ್ತದೆ. ಬಿಜೆಪಿ ಪರ ಇರುವ ರಾಜಕೀಯ ವಿಶ್ಲೇಷಕ ಗುರುಮೂರ್ತಿಯವರು ಬರೆದಿರುವ ಅಂಕಣಲ್ಲಿನ ಸಂಗತಿಗಳು ಸರಿಯಿವೆ ಎಂಬುದು ಅಭಿಜಿತ್ ಅವರ ಅಂಬೋಣ. ಅಸೆಂಬ್ಲಿಗೆ ಹೋಲಿಸಿದರೆ, ಉಪಚುನಾವಣೆಯ ಹೊತ್ತಿಗೆ ಗೋರಖ್‍ಪುರದಲ್ಲಿ 14.8%ನಿಂದ 2.4%ಗೆ ಮೈತ್ರಿಯ ಮುನ್ನಡೆ ಇಳಿದಿತ್ತು. ಅಂದರೆ ಅಸೆಂಬ್ಲಿಯ ಸಂದರ್ಭದಲ್ಲಿ ಆ ಲೋಕಸಭಾ ಕ್ಷೇತ್ರದಲ್ಲಿ ಮೂರೂ ಪಕ್ಷಗಳು ಪ್ರತ್ಯೇಕವಾಗಿ ಪಡೆದುಕೊಂಡ ಮತಗಳಷ್ಟನ್ನು ಉಪಚುನಾವಣೆಯಲ್ಲಿ ಪಡೆದುಕೊಳ್ಳಲಿಲ್ಲ. ಅದೇ ರೀತಿ ಫುಲ್‍ಪುರದಲ್ಲಿ 24%ನಿಂದ 8%ಗಿಳಿದಿತ್ತು ಹಾಗೂ ಕೈರಾನಾದಲ್ಲಿ 19.2%ನಿಂದ 4.7%ಗಿಳಿದಿತ್ತು. ಈ ಅಂಶವನ್ನು ಎಲ್ಲರೂ ಕಡೆಗಣಿಸಿ, ಮೈತ್ರಿಯಾಗಿಬಿಟ್ಟರೆ ಈ ಪಕ್ಷಗಳ ಮತಗಳೂ ಕ್ರೋಢೀಕೃತವಾಗುತ್ತವೆ ಎನ್ನುತ್ತಿದ್ದಾರೆ, ಇದು ತಪ್ಪು ಎನ್ನುತ್ತಾರೆ. ಜೊತೆಗೆ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳಿಗಿಂತ ರಾಷ್ಟ್ರೀಯ ಪಕ್ಷಗಳಿಗೆ ಜನರು ಮತ ಹಾಕಲು ಬಯಸುತ್ತಾರಾದ್ದರಿಂದ, ಬಿಜೆಪಿಗೇ ಹೆಚ್ಚಿನ ಅನುಕೂಲವಾಗುತ್ತದೆ.

ಆದರೆ, ಆದಿತ್ಯ ಮೆನನ್ ಸರಳ ಅಂಗಗಣಿತ ಮುಂದಿಡುತ್ತಾರೆ. ಇದುವರೆಗೆ ಮತದಾನ ನಡೆದ 39 ಕ್ಷೇತ್ರಗಳ ಪೈಕಿ 18ರಲ್ಲಿ ಬಿಜೆಪಿಗೆ ಇದ್ದ ಮತಪ್ರಮಾಣವು ಮೈತ್ರಿಗಿಂತ ಹೆಚ್ಚಿತ್ತು. ಆದರೆ, ಮುಸ್ಲಿಂ, ಯಾದವ್, ಜಾಟವ್‍ರ ಜೊತೆಗೆ ಜಾಟ್ & ಗುಜ್ಜರ್ ಮತಗಳೂ ಸೇರಿ ಮೈತ್ರಿಗೆ ಹೆಚ್ಚಿನ ಅನುಕೂಲವಾಗಿದೆ. ಇನ್ನು ಉಳಿದ 41 ಸೀಟುಗಳಲ್ಲಿ ಮೈತ್ರಿಯು 24ರಲ್ಲಿ, ಬಿಜೆಪಿಯು 15ರಲ್ಲಿ ಮತ್ತು ಕಾಂಗ್ರೆಸ್ 2ರಲ್ಲಿ (ಮೈತ್ರಿಯ ಸೀಟುಗಳನ್ನು ಕೂಡಿದರೆ) ಮುನ್ನಡೆ ಹೊಂದಿದ್ದವು. ಹೀಗಾಗಿ ಮತಗಳ ಕೂಡಿಕೆಯಿಂದಲೇ ಅರ್ಧಕ್ಕಿಂತ ಹೆಚ್ಚು, ಅಂದರೆ 45, ಸೀಟುಗಳಲ್ಲಿ ಮೈತ್ರಿಯು ಗೆಲ್ಲುತ್ತದೆ. ಅದರ ಜೊತೆಗೆ ಮೈತ್ರಿಯಿಂದ ಸಂಚಯವಾಗಿರುವ ಬಲ ಹಾಗೂ ಗೆಲ್ಲುವ ಕೂಟವೆಂದು ಬಿಂಬಿತವಾಗಿರುವುದರಿಂದ ಇದು ಶೇ.80ರಷ್ಟು ಸೀಟು ಗೆದ್ದರೂ ಆಶ್ಚರ್ಯವಿಲ್ಲ ಎಂಬುದು ಅವರ ಲೆಕ್ಕಾಚಾರ. ಇದಕ್ಕೆ ಮತದಾನದ ಪ್ರಮಾಣದ ಆಧಾರದ ಮೇಲೆ ಆಂತ್ರೋ.ಎಐ ಮಾಡಿರುವ ವಿಶ್ಲೇಷಣೆಯ ಸಹಾಯವನ್ನೂ ಅವರು ತೆಗೆದುಕೊಂಡಿದ್ದಾರೆ.

ಮೂರೂ ಪಕ್ಷಗಳು ಸೇರಿಕೊಂಡು ಮೇಲ್ಮಟ್ಟದಲ್ಲಿ ಮಾಡಿಕೊಂಡಿರುವ ಮೈತ್ರಿಯು ತಳಮಟ್ಟದಲ್ಲಿ ಕಾರ್ಯಕರ್ತರು ಮತ್ತು ನಿಷ್ಠಾವಂತ ಮತದಾರರ ಮೇಲೆ ಯಾವ ಪ್ರಭಾವವನ್ನು ಬೀರಿದೆ ಎಂಬುದು ಮತ್ತು ಈ ಸಾರಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹಾರುವ ಮತಗಳೆಷ್ಟು ಎಂಬ ಅಂಶಗಳೂ ನಿರ್ಣಾಯಕ ಪಾತ್ರ ವಹಿಸುತ್ತವೆ. ಏಕೆಂದರೆ, ಉ.ಪ್ರ.ದಲ್ಲಿ ಮೂರು ವಿರೋಧ ಪಕ್ಷಗಳು ಜೊತೆಗೂಡಿರುವುದು ಜಿದ್ದಾಜಿದ್ದಿ ಸ್ಪರ್ಧೆಯನ್ನು ಕೂದಲೆಳೆಯ ಅಂತರಕ್ಕೆ ತಂದಿದೆ. ಹಾಗಾಗಿ ಪ್ರತಿಯೊಂದು ಅಂಶವೂ ಮುಖ್ಯವಾಗಲಿದೆ.

ಮತಬ್ಯಾಂಕುಗಳಲ್ಲಿ ಮೇಲ್ಜಾತಿಗಳು ಬಿಜೆಪಿಯ ಜೊತೆಗಿರುವುದರ ಜೊತೆಗೆ, ಎಲ್ಲಾ ಜಾತಿಗಳಿಗೂ ಸೇರಿದ ಹೊಸ ಮತದಾರರು ಜಾತಿ ಮೀರಿ ಬಿಜೆಪಿಗೇ ಮತ ಹಾಕುತ್ತಾರೆಂಬುದು ಹಲವಾರು ಸಮೀಕ್ಷೆಗಳಲ್ಲಿ ಸ್ಪಷ್ಟವಾಗಿದೆ. ಆದರೆ, ಯಾದವೇತರ ಓಬಿಸಿ ಮತ್ತು ಜಾಟವೇತರ ದಲಿತರು ಬಿಜೆಪಿಯಿಂದ ಈ ಸಾರಿ ಮೈತ್ರಿಯ ಕಡೆಗೆ ಹೋಗುವ ಸಾಧ್ಯತೆಯೇ ಹೆಚ್ಚು ಎನ್ನುತ್ತಾರೆ. ಯೋಗಿ ಆದಿತ್ಯನಾಥ್ ಆಳ್ವಿಕೆಯ ವಿರುದ್ಧವೂ ಖಚಿತವಾದ ಆಡಳಿತ ವಿರೋಧ ಅಲೆಯಿದ್ದು, ಅದು ಮೋದಿ ವಿರುದ್ಧ ಇನ್ನೂ ಕ್ರೋಢೀಕೃತವಾಗಿಲ್ಲ ಎಂದು ಹೇಳಲಾಗುತ್ತಿತ್ತು. ರೈತರಿಗೆ ಬೆಲೆಯ ಸಮಸ್ಯೆ ಮತ್ತು ಬೀಡಾಡಿ ದನಗಳ ಸಮಸ್ಯೆ ತೀವ್ರವಾಗಿದ್ದು, ಇದರ ಪರಿಣಾಮ ಯಾವ ಪ್ರಮಾಣಕ್ಕೆ ಆಗಬಹುದು ಎಂಬುದನ್ನೂ ನೋಡಬೇಕು.

ಯಾವ ಕಡೆಗೂ ಸೇರಿಕೊಳ್ಳದೇ ತೇಲುತ್ತಿದ್ದ 4ರಿಂದ 5% ಮತಗಳು ಬಿಜೆಪಿಯ ವಿರುದ್ಧವೇ ಇದ್ದವು (ಈ ಮಾತನ್ನು ಯೋಗೇಂದ್ರ ಯಾದವ್ ಸಹಾ ಪುಷ್ಟೀಕರಿಸುತ್ತಾರೆ). ಆದರೆ, ಅದನ್ನು ನಿರ್ಣಾಯಕವಾಗಿ ತಮ್ಮ ಕಡೆಗೆ ತಿರುಗಿಸಿಕೊಳ್ಳುವಲ್ಲಿ ಮೈತ್ರಿ ಪಕ್ಷಗಳು ಶಕ್ತರಾಗಲಿಲ್ಲ; ಮಾಯಾವತಿಯವರ ಮುಸ್ಲಿಂ ವೋಟಿನ ಹೇಳಿಕೆ ದೊಡ್ಡ ಡ್ಯಾಮೇಜ್ ಮಾಡಿತು ಎಂದು ಅಭಿಜಿತ್ ಹೇಳುತ್ತಾರೆ.

ಅದೇ ರೀತಿ ವಾರಣಾಸಿಯಲ್ಲಿ ಸ್ಪರ್ಧೆ ಮಾಡುವುದಾಗಿ ಸೂಚನೆ ನೀಡಿ ‘ಸಸ್ಪೆನ್ಸ್’ನಲ್ಲಿ ಇಟ್ಟಿದ್ದ ಪ್ರಿಯಾಂಕಾ ಮತ್ತು ಕಾಂಗ್ರೆಸ್ ಬಹಳ ದೊಡ್ಡ ತಪ್ಪನ್ನು (shock doctrine) ಮಾಡಿದರು ಹಾಗೂ ತೇಜ್ ಬಹದ್ದೂರ್ ಯಾದವ್‍ರನ್ನು ಕಣಕ್ಕಿಳಿಸುವ ಮೂಲಕ (ನಂತರ ನಾಮಪತ್ರ ತಿರಸ್ಕೃತಗೊಂಡಿತು) ಸ್ಪರ್ಧೆ ಇರುವುದು ಮೋದಿ ಹಾಗೂ ಮೈತ್ರಿಯ ಮಧ್ಯೆ ಎಂಬ ಚಿತ್ರಣವನ್ನು ಕೊಡುವಲ್ಲಿಯೂ ಅಖಿಲೇಶ್-ಮಾಯಾವತಿ ಯಶಸ್ವಿಯಾದರು ಎಂಬುದು ಅವರ ಅಭಿಪ್ರಾಯ. ಇವೆಲ್ಲದರ ಲಾಭ ಬಿಜೆಪಿಗಾಗುತ್ತದೆ ಎಂದು ಅವರು ಹೇಳುತ್ತಾರೆ.

ಜೊತೆಗೆ ಪೂರ್ವ ಉ.ಪ್ರ.ದಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಸ್ವಂತ ಶಕ್ತಿ, ಪ್ರಿಯಾಂಕಾರ ಎಂಟ್ರಿಯಿಂದ ಮತ್ತು ಬಾಬುಸಿಂಗ್ ಕುಶ್ವಾಹಾ ಹಾಗೂ ರಮಕಾಂತ ಯಾದವ್‍ರ ಸೇರ್ಪಡೆಯಿಂದ ಬಲ ಹೆಚ್ಚಿಸಿಕೊಂಡಿದೆ. ಆದರೆ, ಇವೆಲ್ಲವೂ ಬಿಜೆಪಿಗೆ ಸಹಾಯ ಮಾಡಬಹುದು ಎಂಬ ಅನಿಸಿಕೆ ವ್ಯಕ್ತ ಮಾಡುತ್ತಾರೆ.

ಅದೇನೇ ಇದ್ದರೂ, ಉತ್ತರ ಪ್ರದೇಶದಲ್ಲಿ ಬಿಜೆಪಿಯು ಹಿಂದಿನಷ್ಟು ಸೀಟುಗಳನ್ನು ಪಡೆದುಕೊಳ್ಳುವುದಿಲ್ಲ ಎಂಬುದು ಸರ್ವಸಮ್ಮತ ಅಭಿಪ್ರಾಯವಾಗಿದೆ. ಮೇಲೆ ಹೇಳಲಾಗಿರುವ ಹಲವು ಅಂಶಗಳು ಬಿಜೆಪಿಯ ವಿರುದ್ಧವಾದರೆ, ಅದು 10ರಿಂದ 15 ಸೀಟುಗಳಿಗೆ ತೃಪ್ತಿ ಪಟ್ಟುಕೊಳ್ಳಬೇಕಾಗುತ್ತದೆ. ಮೈತ್ರಿಯ ವಿರುದ್ಧವಾದರೆ, ಬಿಜೆಪಿಯು 65 ಸೀಟುಗಳವರೆಗೆ ಗೆಲ್ಲಬಹುದು. ವಿಶ್ಲೇಷಣೆಯಲ್ಲಿ ಸೇಫ್ ಇರಬೇಕು ಎಂದಾದಲ್ಲಿ ಬಿಜೆಪಿಯು 38, ಮೈತ್ರಿಯು 37 ಮತ್ತು ಕಾಂಗ್ರೆಸ್ 4-5 ಸೀಟುಗಳನ್ನು ಗೆಲ್ಲಬಹುದು ಎಂದು ಹೇಳಬೇಕಾಗುತ್ತದೆ.

ಅಂತಿಮ ಫಲಿತಾಂಶವು ಮೇ 23ಕ್ಕೇ ಬರುತ್ತದಾದರೂ, ಮೇ 18ರ ಹೊತ್ತಿಗೆ ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆ ಹೆಚ್ಚಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...