Homeಕರ್ನಾಟಕಬಾಬಾ ಸಾಹೇಬರ ರಥವನ್ನು ಮುನ್ನಡೆಸಿದ ನಾಯಕ ಸಿ.ಎಂ ಆರ್ಮುಗಂ

ಬಾಬಾ ಸಾಹೇಬರ ರಥವನ್ನು ಮುನ್ನಡೆಸಿದ ನಾಯಕ ಸಿ.ಎಂ ಆರ್ಮುಗಂ

- Advertisement -
- Advertisement -

 

 

 

| ರಮೇಶ್ ಸಂಕ್ರಾಂತಿ |

ಕೆ.ಜಿ.ಎಫ್ ನಲ್ಲಿ ಗಣಿ ಕಾರ್ಮಿಕರಿಗಾಗಿ ನಿರ್ಮಿಸಿದ್ದ ವಸತಿ ಸಮುಚ್ಚಯಗಳಲ್ಲಿ, ಮಾರಿಕುಪ್ಪಂ ಕ್ವಾಟ್ರ್ರಸ್ ಸಹಾ ಒಂದು. ಇಲ್ಲಿ ವಾಸವಾಗಿದ್ದ ಮುನಿಸಾಮಿ ಹಾಗೂ ಚಿನ್ನತಾಯಿ ದಂಪತಿಗಳಿಗೆ ಒಟ್ಟು ಐದು ಮಕ್ಕಳು. ನಮ್ಮ ನಾಯಕ ಆರ್ಮುಗಂ ಜನಿಸಿದ್ದು ದಿನಾಂಕ 15 ಜನವರಿ 1925ರಲ್ಲಿ. ಮುನಿಸಾಮಿ ಹಾಗೂ ಚಿನ್ನತಾಯಿ ದಂಪತಿಗಳಿಗೆ ಹುಟ್ಟಿದ ಐದು ಮಕ್ಕಳಲ್ಲಿ ಆರ್ಮುಗಂ ಮೂರನೇಯವರು. ತುಂಬು ಕುಟುಂಬದ ಪ್ರೀತಿ ಆದರಗಳು ಮಗುವಿನ ಮೇಲಾದವು. ಈ ಪ್ರೀತಿಯೇ ಮುಂದೆ ದೇಶದ ಅಸ್ಪೃಷ್ಯ ಜನಾಂಗದ ಕಣ್ಣೀರು ಒರೆಸುವ ನಾಯಕನಾಗಿ ಬೆಳೆಯಲು ಸಹಕಾರಿಯಾಯಿತು.

ಆರ್ಮುಗಂ ಡಿಪ್ಲೋಮೊ ಇನ್-ಸಿವಿಲ್ ಕಲಿತು, ಬ್ರೀಟೀಷ್ ಸರ್ಕಾರದ ಅಧೀನದಲ್ಲಿದ್ದ ಜಾನ್ ಟೇಲರ್ ಕಂಪನಿಯ ಸ್ಯಾನಿಟರಿ ಬೋರ್ಡ್‍ನಲ್ಲಿ ಕೆಲಸಕ್ಕೆ ಸೇರಿದರು. ಬ್ರೀಟೀಷರ ಸಂಪರ್ಕದಲ್ಲಿದ್ದರಿಂದ ಇಂಗ್ಲೀಷನ್ನು ಸರಾಗವಾಗಿ ಮಾತನಾಡುತ್ತಿದ್ದ ಈ ಹೊತ್ತಿಗಾಗಲೇ ಬಾಬಾ ಸಾಹೇಬ್ ಅಂಬೇಡ್ಕರ್‍ರವರ ಹೋರಾಟ ದೇಶದ ಮೂಲೆ ಮೂಲೆಗೂ ತಲುಪಿತ್ತು. ಅದೇ ರೀತಿ ಕೆ.ಜಿ.ಎಫ್‍ನ ಕಾರ್ಮಿಕರಿಗೂ ಬಾಬಾ ಸಾಹೇಬರ ಹೋರಾಟದ ಮಹತ್ವದ ಅರಿವಾಗಿತ್ತು. ಮಾರಿಕುಪ್ಪಂನ ಕ್ವಾಟ್ರ್ರಸ್‍ನಲ್ಲಿ ವಾಸವಾಗಿದ್ದವರು ಶೇ 95% ಜನ ಎಸ್ಸಿಗಳೇ ಆಗಿದ್ದರಿಂದ, ನಾವು ಶೋಷಿತರು, ಅವಕಾಶ ವಂಚಿತರು ಮತ್ತು ನಾವೆಲ್ಲರು ಒಂದು ಎನ್ನುವ ಅರಿವು ಮೂಡಿತ್ತು. ಸಿ.ಎಂ.ಆರ್ಮುಗಂರವರು ಕೆ.ಜಿ.ಎಫ್.ನ ಕಾರ್ಮಿಕರ ನಿಜವಾದ ನಾಯಕರೂ, ಬಾಬಾ ಸಾಹೇಬರ ಕಟ್ಟಾ ಅನುಯಾಯಿಯಾಗಿ ತಮ್ಮ ಕೊನೆ ಉಸಿರು ಇರುವವರೆಗೂ I am massenger of baba saheb Ambedkar ಎಂದು ಹೇಳುತ್ತಿದ್ದರು.

ಬಹಳ ಹಿಂದೆಯೇ ಎಂ.ಸಿ. ದೊರೆ ಎಂಬುವರು ಕೆ.ಜಿ.ಎಫ್‍ನಲ್ಲಿ ಮೈಸೂರು ಸಂಸ್ಥಾನ ಎಸ್ಸಿ/ಎಸ್ಟಿ ಫಡರೇಷನ್ ಸ್ಥಾಪಿಸಿ, ಒಂದು ಸಮ್ಮೇಳನವನ್ನೂ ಏರ್ಪಡಿಸಿದ್ದರು. ಈ ಎಂ.ಸಿ.ದೊರೈಯವರು ಆಲ್ ಇಂಡಿಯಾ ಎಸ್ಸಿ/ಎಸ್ಟಿ ಫಡರೇಷನ್ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರು. ಇವರು ರಟ್ಟಮಲೈ ಶ್ರೀನಿವಾಸ್‍ರವರ ಅನುಯಾಯಿ. ಬಾಬಾಸಾಹೇಬ್‍ಅಂಬೇಡ್ಕರ್ ರವರ ಜೋತೆ ದುಂಡು ಮೇಜಿನ ಸಭೆಗೆ ಇಂಗ್ಲೆಂಡಿಗೆ ಹೋಗಿದ್ದವರು ರಟ್ಟಮಲೈ ಶ್ರೀನಿವಾಸ್. ಇವರು ಅಯೋಧ್ಯದಾಸ್ ಪಂಡಿತ್‍ರ ಬಾಮೈದ ಕೂಡಾ ಹೌದು. ಇವರು ಅನುಯಾಯಿಯಾಗಿದ್ದ ಎಂ.ಸಿ.ದೊರೈಯವರು ಬಾಬಾ ಸಾಹೇಬರು ಕೆ.ಜಿ.ಎಫ್‍ಗೆ ಬರಬೇಕೆಂದು 1940ರಲ್ಲೇ ಪತ್ರ ಬರೆದಿದ್ದರು. ಅಪಾರ ಕೆಲಸಗಳ ಒತ್ತಡದ ನಡುವೆ ಬಾಬಾಸಾಹೇಬ್ ಅಂಬೇಡ್ಕರ್‍ರವರು 1954ರಲ್ಲಿ ಕರ್ನಾಟಕಕ್ಕೆ ಬಂದು ಕೆ.ಜಿ.ಎಫ್‍ಗೆ ಬೇಟಿ ನೀಡಿದರು. ಈ ಹೊತ್ತಿಗಾಗಲೇ ಮೈಸೂರು ರಾಜ್ಯಕ್ಕೆ ಸೇರಿದ ಕೆ.ಜಿ.ಎಫ್‍ನಲ್ಲಿ ಆಲ್ ಇಂಡಿಯಾ ಎಸ್ಸಿ/ಎಸ್ಟಿ ಫಡರೇಷನ್ ಸ್ಥಾಪನೆಗೊಂಡು ಸಕ್ರಿಯವಾಗಿ ಕೆಲಸ ಮಾಡುತ್ತಿತ್ತು.

1952ರಲ್ಲಿ ಕೆ.ಜಿ.ಎಫ್ ಶಾಸಕರಾಗಿ ಬಾಬಾ ಸಾಹೇಬರ ನೆರಳಿನಂತೆ ಕೆಲಸ ಮಾಡಿದ ಸಾಮಿದೊರೈಯವರು. ತಮ್ಮ ಅವಧಿ ಮುಗಿಯುವ ಹೊತ್ತಿಗೆ ರಿಪಬ್ಲಿಕನ್ ಪಾರ್ಟಿ ಅಫ್ ಇಂಡಿಯಾದ ಉಪಾಧ್ಯಕ್ಷರಾಗಿ ಆಗಿ ಬಡ್ತಿ ಹೊಂದಿದರು. ಇದರಿಂದ ತೆರವಾಗಿದ್ದ ಸ್ಥಾನ ತುಂಬಬೇಕಾದ ಅನಿವಾರ್ಯತೆ ಏರ್ಪಟ್ಟಿತು. ಇದೇ ಸಮಯದಲ್ಲಿ 1957ರ ಎರಡನೇ ಚುನಾವಣೆಯೂ ಬಂದಿತ್ತು. ಆಗ ಅನಿವಾರ್ಯವಾಗಿ ಸಿ.ಎಂ.ಆರ್ಮುಗಮ್‍ರವರು ಪೂರ್ಣಾವಧಿ ರಾಜಕಾರಣಿಯಾಗಿ ಕಣಕ್ಕಿಳಿದು ಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸಿದರು. ರಾಜ್ಯದ ಯಾವುದೇ ಮೂಲೆಯಲ್ಲಿ ಹಿಂದುಳಿದವರಿಗೆ ಸಣ್ಣ ಸಮಸ್ಯೆಗಳಾಗಿದೆ ಎಂದು ತಿಳಿದರೂ ಸಿ.ಎಂ.ಆರ್ಮುಗಮ್‍ರವರು ಅಲ್ಲಿಗೆ ಹೋಗಿ ಬಾದಿತರ ವಿವರ ಸಂಗ್ರಹಿಸಿ ವಿಧಾನ ಸಭೆಯಲ್ಲಿ ಮಾತನಾಡಿ ಈ ಜನತೆಗೆ ನ್ಯಾಯ ಒದಗಿಸಿಕೊಟ್ಟಿದ್ದಾರೆ.

ಕರ್ನಾಟಕದ ರಾಜ್ಯದ ರಾಜ್ಯಧಾನಿಯಾಗಿರುವ ಬೆಂಗಳೂರಿನಲ್ಲಿ ಅದೂ ವಿಧಾನಸೌಧದ ಮುಂದೆ ಬಾಬಾಸಾಹೆಬ್ ಅಂಬೇಡ್ಕರ್ ವಿಗ್ರಹವನ್ನು ಸ್ಥಾಪಿಸಿ, ಆ ರಸ್ತೆಗೆ ಅಂಬೇಡ್ಕರ್ ವೀದಿ ಎಂದು ನಾಮಕರಣ ಮಾಡಿಸಿದ್ದು ಸಿ.ಎಂ.ಆರ್ಮುಗಮ್‍ರವರ ಸಾಧನೆಗಳಲ್ಲಿ ಒಂದು. ಈ ಕಾರ್ಯಕ್ರಮಕ್ಕೆ ಪಕ್ಕದ ರಾಜ್ಯದ ಮಂತ್ರಿಗಳು ಆಗಮಿಸಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಕರ್ನಾಟಕ ಇತಿಹಾಸದಲ್ಲಿ ಮೊದಲ ಬಾರಿಗೆ ಅಂಬೇಡ್ಕರ್ ದಿನಾಚರಣೆಗೆ ಸರ್ಕಾರಿ ರಜಾ ದಿನವನ್ನು ನಿಗದಿಗೊಳಿಸಲು ಶ್ರಮಿಸಿದವರು ಸಿ.ಎಂ.ಆರ್ಮುಗಮ್‍ರವರು ಎನ್ನುವುದನ್ನು ನಮ್ಮ ಜನ ಮರೆಯಬಾರದು. ಸಿ.ಎಂ.ಆರ್ಮುಗಮ್‍ರವರು ಬಾಬಾ ಸಾಹೆಬರಂತೆ ಬೌದ್ಧ ಧರ್ಮದಲ್ಲಿಯೂ ಅಪಾರವಾದ ನಂಬಿಕೆ ಉಳ್ಳವರಾಗಿದ್ದರು. ಆದ್ದರಿಂದ ಬುದ್ಧಿಸ್ಟ್ ಸೊಸೈಟಿ ಅಫ್ ಇಂಡಿಯಾದ ಸದಸ್ಯರೂ ಆಗಿದ್ದರು ಎನ್ನುವುದು ಉಲ್ಲೇಖನೀಯಾ.

ದೇವರಾಜಅರಸು ಮುಖ್ಯ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಗುಲ್ಬರ್ಗದ ಈ ಭಾಗದಲ್ಲಿ ತೀವ್ರತರವಾದ ಬರಗಾಲ ಎರ್ಪಟ್ಟಿತ್ತು. ಕರ್ನಾಟಕ ಸರ್ಕಾರ ಆರ್ಮುಗಂರವರ ನೇತೃತ್ವದಲ್ಲಿ ಏಕ ಸದಸ್ಯರ ಆಯೋಗವನ್ನು ರಚಿಸಿ, ಅದಕ್ಕೆ ಸಿ.ಎಂ.ಆರ್ಮುಗಮ್ ಕಮಿಟಿ ಎಂದು ನಾಮಕರಣ ಮಾಡಿತು. ಈ ಕಮಿಟಿ ಬೆಳಗಾಂ, ಬೀದರ್, ರಾಯಚೂರು ಮತ್ತು ಬಿಜಾಪುರ ಜಿಲ್ಲೆಗಳ ಪ್ರತಿಯೊಂದು ಹಳ್ಳಿಯನ್ನೂ ಬೇಟಿಮಾಡಿ. ಅಲ್ಲಿನ ಸಮಸ್ಯೆಯನ್ನು ಕೂಲಂಕುಶವಾಗಿ ಅಧ್ಯಯನ ಮಾಡಿ. ಈ ಜಿಲ್ಲೆಗಳನ್ನು ಬರಪೀಡಿತ ಪ್ರದೇಶಗಳೆಂದು ಪರಿಗಣಿಸಿ, ಈ ಜಿಲ್ಲೆಗಳ ಅಭಿವೃದ್ಧಿಗೆ ವಿಶೇಷ ಸಲಹೆಗಳನ್ನು ಸರ್ಕಾರಕ್ಕೆ ಶಿಫಾರಸ್ಸು ಮಾಡಿತು. ಇದು ಕರ್ನಾಟಕ ಅತ್ಯುತ್ತಮ ವರದಿ ಎಂದರೆ ತಪ್ಪಾಗಲಾರದು.

ಉತ್ತಮ ವಾಗ್ಮೀ ಹಾಗೂ ಒಳ್ಳೆಯ ಸಂಸದೀಯ ಪಟುವಾಗಿ ಆರ್ಮುಗಂರವರು ಕಾರ್ಯ ನಿರ್ವಹಿಸಿದ್ದಾರೆ. ಅವರು ಎಂದೂ ಒಂದು ರೂಪಾಯಿ ಹಣವನ್ನೂ ತಮ್ಮ ಜೇಬಿನಲ್ಲಿ ಇಟ್ಟು ಕೊಂಡವರಲ್ಲ. ಕಂಚಿನ ಕಂಠದ ಅವರ ದ್ವನಿ, ಸಿಂಹ ಗರ್ಜನೆಯಂತೆ ಠೇಂಕರಿಸುತ್ತಿತ್ತು. ಇವರು ವಿಧಾನ ಸಭೆಯಲ್ಲಿ ಮಾತನಾಡಲು ಎದ್ದು ನಿಂತರೆ ಸದನವೇ ಮೌನವಹಿಸಿ ಸಿ.ಎಂ.ಆರ್ಮುಗಂರವರ ಬಾಷಣವನ್ನು ಆಲಿಸುತ್ತಿತ್ತು.

ಮುರಾರ್ಜಿ ದೇಸಾಯಿಯವರಿಗೆ ಎಸ್ಸಿ/ಎಸ್ಟಿ ಗಳನ್ನು ಕಂಡರೆ ಆಗುತ್ತಿರಲಿಲ್ಲ ಇವರು ಕೇಂದ್ರದ ಹಣಕಾಸು ಸಚಿವರಾಗಿದ್ದಾಗ ಗೋಲ್ಡ್ ಕಂಟ್ರೋಲ್ ಆಕ್ಟ್‍ನ ಅಡಿಯಲ್ಲಿ ಚಿನ್ನದ ಗಣಿಯನ್ನು ಮುಚ್ಚಬೇಕೆಂದು ಆದೇಶಿಸಿದರು. ಗಣಿಯ ಕೆಲಸವನ್ನೇ ನಂಬಿದ್ದ ಸಾವಿರಾರು ಬೀದಿ ಪಾಲಾಗುತ್ತಿದ್ದರು. ಇದಕ್ಕೆ ಪರ್ಯಾಯ ಕಲ್ಪಿಸಬೇಕೆಂದು ಸಿ.ಎಂ.ಆರ್ಮುಗಮ್‍ರವರು ಕೆಲಸ ಮಾಡಿದರೆ ಅಧಿಕಾರದಲ್ಲಿದ್ದವರು ಅದಕ್ಕೆ ತಡೆ ಒಡ್ಡುತ್ತಿದ್ದರು. ಅದನ್ನೂ ಮೆಟ್ಟಿ ನಿಂತು ಹಗಲಿರುಳು ಎನ್ನದೆ ಕೆಲಸ ಮಾಡಿ ಬಿ.ಇ.ಎಂ.ಎಲ್ (BEML)ಕಾರ್ಖಾನೆಯನ್ನು ಕೆ.ಜಿ.ಎಫ್.ಗೆ ತಂದವರು ಸಿ.ಎಂ.ಆರ್ಮುಗಮ್‍ರವರು. ಕೆಲವು ಜನ ರಾಜಕೀಯ ವಿರೋಧಿಗಳು ಈ ಕೆಲಸವನ್ನು ನಾವೇ ಮಾಡಿದ್ದು ಎಂದು ಹೇಳಿಕೊಳ್ಳುತ್ತಾರೆ. ಈ ಸಂಬಂಧವಾಗಿ RPIನ 500ಜನ ಕಾರ್ಯಕರ್ತರು ಬಿ.ಇ.ಎಂ.ಎಲ್.ನ್ನು ಕೆ.ಜಿ.ಎಫ್.ಗೆ ತರಲು ಒತ್ತಾಯಿಸಿ ಬಂಧನಕ್ಕೆ ಒಳಗಾದ ದಾಖಲೆಗಳಿವೆ. ಮೇಲಾಗಿ ವೈ,ಬಿ.ಚವಾಣ್‍ರವರು ಸಿ.ಎಂ.ಆರ್ಮುಗಮ್‍ರವರಿಗೆ ಖುದ್ದು ಒಂದು ಪತ್ರ ಬರೆದು, ನಿಮ್ಮ ಶ್ರಮದಿಂದ ಕೆ.ಜಿ.ಎಫ್‍ಗೆ ಬಿ.ಇ.ಎಂ.ಎಲ್ (BEML)ಬಂದಿದೆ. ಇದನ್ನು ಕಾಪಾಡಿಕೊಳ್ಳುವ ಹೊಣೆ ನಿಮ್ಮ ಮೇಲಿದೆ ಎಂದು ತಮ್ಮ ಒಕ್ಕಣೆಯಲ್ಲಿ ಹೇಳಿದ್ದಾರೆ. ಇದು ನಮ್ಮ ಸಾಧನೆÉ ಎಂದು ಹೇಳಿ ಆರ್ಮುಗಮ್ ಸಾರ್, ಎಂದು ಪಕ್ಕದಲ್ಲಿದ್ದವರು ಒತ್ತಾಯಿಸಿದರೆ, ಸ್ವಲ್ಪ ತಡೆಯಿರಿ ನಮ್ಮ ವಿರೋಧಿಗಳು ಆಗುವ ಕೆಲಸಕ್ಕೆ ಕಲ್ಲು ಹಾಕಿಬಿಡುತ್ತಾರೆ ಎಂದು ಹೇಳುತ್ತಿದ್ದರು. ಅವರೆಂದೂ ಹಿರೋಹಿಸಂನ್ನು ಇಷ್ಟಪಡುತ್ತಿರಲಿಲ್ಲ. ಎಂದು RPIನ ಹಿರಿಯ ಮುಖಂಡರಾದ ದೊರೈ ರಾಜೇಂದ್ರನ್ ನೆನಪು ಮಾಡಿಕೊಳ್ಳುತ್ತಾರೆ.

1957ರ ಎರಡನೇ ವಿಧಾನ ಸಭಾ ಚುನಾವಣೆಯಲ್ಲಿ ಸಿ.ಎಂ.ಆರ್ಮುಗಂ ಅತಿ ಹೆಚ್ಚು ಸಂಖ್ಯೆಯ ಮತಗಳಿಂದ ಆರಿಸಿ ಬಂದರು. 1962 ಮತ್ತೆ ಚುನಾವಣೆ ಎದುರಾಯಿತು. 1967ರಲ್ಲಿ ಮೂರನೆ ಚುನಾವಣೆ ಬಂತು. ಈ ಚುನಾವಣೆಯಲ್ಲಿ ಸಿ.ಎಂ.ಆರ್ಮುಗಂರವರು, ಕಮ್ಯೂನಿಸ್ಟ್ ಪಕ್ಷದ ರಾಜಗೋಪಾಲ್ ಎಂಬವರ ಎದುರು ಕಡಿಮೆ ಅಂತರದಿಂದ ಪರಾಭವಗೊಂಡರು. ರಾಜಗೋಪಾಲ್ ಎಂ.ಎಲ್.ಎ.ಆಗಿ ಆಯ್ಕೆಯಾದರು.

ತಮ್ಮ ಒತ್ತಡದ ಕೆಲಸದ ನಡುವೆಯೂ ಸಿ.ಎಂ.ಆರ್ಮುಗಂರವರು ತಮ್ಮ ಗೆಳೆಯರ ಸಹಾಯದಿಂದ ಒಂದು ಪುಸ್ತಕ ಬರೆದರು. ಈ ಪುಸ್ತಕದಲ್ಲಿ ಸರ್ಕಾರ ಮತ್ತು ಅಲ್ಲಿ ಕೆಲಸಮಾಡುವ ಅಧಿಕಾರಸ್ಥ ಜಾತಿಯ ಮನಸ್ಸುಗಳು ಅಸ್ಪøಷ್ಯರ ಹಕ್ಕು ಅವಕಾಶಗಳನ್ನು ಹೇಗೆ ವಂಚಿಸುತ್ತಿವೆ ಎನ್ನುವ ಬಗ್ಗೆ ವಿವರವಾಗಿ ಬರೆದು ಅದನ್ನು UNO ತಲುಪಿಸಿ ಅಸ್ಪೃಷ್ಯರಿಗಾಗಿ ನೆರವು ಕೇಳಬೇಕು ಎನ್ನುವ ಉದ್ದೇಶ ಉಳ್ಳವರಾಗಿದ್ದರು. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ.

ಬಂಗಾರಪ್ಪನವರು ಮುಖ್ಯ ಮಂತ್ರಿಯಾಗಿದ್ದ ಕಾಲದಲ್ಲಿ ಸಿ.ಎಂ.ಆರ್ಮುಗಮ್‍ರವರು ಕಿಡ್ನಿ ವೈಪಲ್ಯದಿಂದಾಗಿ ಮಣಿಪಾಲ್ ಆಸ್ಪತ್ರೆ ಸೇರಿದರು. ಇದೇ ಸಂದರ್ಭದಲ್ಲಿ ಪ್ರಬಲ ಜಾತಿಗಳಿಗೆ ಸೇರಿದ ಎಂ.ಎಲ್.ಎ.ಗಳು ಒಂದು ಗುಂಪನ್ನು ರಚಿಸಿಕೊಂಡು ಬಂಗಾರಪ್ಪನವರನ್ನು ಅಧಿಕಾರದಿಂದ ಕೆಳಗೆ ಇಳಿಸಬೇಕೆಂಬ ಪಿತೂರಿ ಮಾಡುತ್ತಿದ್ದರು. ಆಗ ಸಿ.ಎಂ.ಆರ್ಮುಗಮ್ ಇದನ್ನು ಖಂಡಿಸಿ ಅಸ್ಪತ್ರೆಯಿಂದಲೇ ಪತ್ರಿಕಾ ಹೇಳಿಕೆಯನ್ನು ನೀಡಿ, ಶೂದ್ರ ಜನಾಂಗಕ್ಕೆ ಸೇರಿದವರು ಎನ್ನುವ ಒಂದೇ ಕಾರಣಕ್ಕೆ ಬಂಗಾರಪ್ಪನವರನ್ನು ಅಧಿಕಾರದಿಂದ ಕೆಳಗೆ ಇಳಿಸಬೇಕೆಂದು ತಂತ್ರ ಮಾಡುತ್ತಿದ್ದಾರೆ, ಎಂದು ಶತೃಗಳ ಬಾಯಿ ಮುಚ್ಚಿಸಿದರು.

ಅಸ್ಪೃಷ್ಯ ಜನತೆಗಾಗಿ ಒಂದು ಶಿಕ್ಷಣ ಸಂಸ್ಥೆ ಬೇಕೆಂದು ಅಂಬೇಡ್ಕರ್ ಮೆಡಿಕಲ್ ಕಾಲೇಜನ್ನು ಸ್ಥಾಪಿಸಿದ ಕೀರ್ತಿ ಸಿ.ಎಂ.ಆರ್ಮುಗಂರವರಿಗೆ ಸಲ್ಲಬೇಕು. ಬಾಬಾ ಸಾಹೇಬರು ಬೆಂಗಳೂರಿಗೆ ಬಂದಾಗ ಅವರನ್ನು ಗೌರವಾದರಗಳಿಂದ ಬರಮಾಡಿಕೊಂಡು ಕೆಲವು ಯುವ ನಾಯಕರನ್ನು ಅವರಿಗೆ ಪರಿಚಯಿಸಿದ್ದ ಸಿ.ಎಂ.ಆರ್ಮುಗಮ್‍ರವರು ತಮ್ಮ 67ನೇ ವಯಸ್ಸಿನಲ್ಲಿ ಅಂದರೆ ದಿನಾಂಕ 14-12-1992 ಕೊನೆಯುಸಿರೆಳೆದರು.

ಇವರು ತಮಿಳಿಗರು ಎನ್ನುವ ಒಂದೇ ಕಾರಣಕ್ಕೆ ಕರ್ನಾಟಕದ ಅಸ್ಪೃಷ್ರ್ಯ ಸಮಾಜದ ಜನ ಇವರನ್ನು ತಮ್ಮ ನಾಯಕ ಎಂದು ಒಪ್ಪಿಕೊಳ್ಳಲಿಲ್ಲ. ಇವರು ಕರ್ನಾಟಕದಲ್ಲಿ ಚುನಾಯಿತರಾಗಿದ್ದರು ಎನ್ನುವ ಕಾರಣಕ್ಕೆ ತಮಿಳು ಅಸ್ಪೃಷ್ರ್ಯರು ಇವರನ್ನು ನಮ್ಮ ನಾಯಕ ಎಂದು ಒಪ್ಪಿಕೊಳ್ಳದೆ ಹೋದರು. ಈ ದೇಶದಲ್ಲಿ ಜಾತಿಯತೆ ಎನ್ನುವುದು ಅಸ್ಪೃಷ್ರ್ಯರಲ್ಲೂ ಹೇಗೆ ಜೀವಂತವಾಗಿದೆ ಎನ್ನುವುದಕ್ಕೆ ಇನ್ನೊಂದು ಜ್ವಲಂತ ಸಾಕ್ಷಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...