Homeಕರೋನಾ ತಲ್ಲಣ18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆ; ಕೇಂದ್ರ ಸರ್ಕಾರ ಅಸ್ತು

18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆ; ಕೇಂದ್ರ ಸರ್ಕಾರ ಅಸ್ತು

- Advertisement -
- Advertisement -

ಮೇ 1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬ ವ್ಯಕ್ತಿಗೂ ಕೊರೊನಾ ಲಸಿಕೆ ಹಾಕಲು ಅರ್ಹತೆ ಇದೆ ಎಂದು ಕೇಂದ್ರ ಸರ್ಕಾರ ಸೋಮವಾರ ಪ್ರಕಟಿಸಿದೆ.

ಕೊರೊನಾ ಪ್ರಕರಣಗಳ ತೀವ್ರ ಉಲ್ಬಣದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಸರ್ಕಾರದ ವ್ಯಾಕ್ಸಿನೇಷನ್ ನೀತಿಯ ನಾಲ್ಕು ಮಹತ್ವದ ಬದಲಾವಣೆಗಳಲ್ಲಿ ಒಂದಾಗಿ ಈ ಪ್ರಕಟಣೆ ಹೊರಬಂದಿದೆ.

18 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ವರ್ಗದ ಜನರಿಗೆ ಲಸಿಕೆ ನೀಡುವ ಅಧಿಕಾರವನ್ನು ರಾಜ್ಯಗಳಿಗೆ ನೀಡಲಾಗಿದೆ.

ಇದನ್ನೂ ಓದಿ: ಕೊರೋನಾ ಪಾಲಿಟಿಕ್ಸ್: ‘ಕೊರೋನಾ ಸಿಕ್ರೆ ಅದನ್ನ ಫಡ್ನವೀಸ್ ಬಾಯೊಳಗೆ ತುರುಕುತ್ತೇನೆ’ ಎಂದ ಸೇನಾ ಶಾಸಕ

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಸೋಮವಾರ ಪ್ರಧಾನಿ ಮೋದಿಗೆ ಪತ್ರ ಬರೆದು, “ಲಸಿಕೆ ಖರೀದಿಸಲು ರಾಜ್ಯಗಳಿಗೆ ಅನುಮತಿಸಬೇಕು. 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೂ ಸಹ ಕೊರೊನಾ ವಾರಿಯರ್ಸ್‌ಗೆ ಲಸಿಕೆ ನೀಡಬೇಕು” ಎಂದು ಶಿಫಾರಸು ಮಾಡಿದ ಒಂದು ದಿನದ ನಂತರ ಈ ತೀರ್ಮಾನವನ್ನು ಕೇಂದ್ರ ಸರ್ಕಾರ ತೆಗೆದು ಕೊಂಡಿದೆ.

ಎರಡನೆಯದಾಗಿ, ಹೆಚ್ಚುವರಿ ಲಸಿಕೆ ಪ್ರಮಾಣವನ್ನು ನೇರವಾಗಿ ಉತ್ಪಾದಕರಿಂದ ಖರೀದಸಲು ರಾಜ್ಯಗಳಿಗೆ ಅಧಿಕಾರ ನೀಡಲಾಗಿದೆ. ಇಲ್ಲಿಯವರೆಗೆ, ಕೇಂದ್ರವು ಎಲ್ಲಾ ಲಸಿಕೆಗಳ ಸರಬರಾಜುಗಳನ್ನು ತನ್ನ ವಶದಲ್ಲಿ ಇಟ್ಟು ಆದ್ಯತೆಯ ಗುಂಪುಗಳಿಗೆ ಲಸಿಕೆ ನೀಡಲು ರಾಜ್ಯಗಳಿಗೆ ಲಸಿಕೆಯನ್ನು ವಿತರಿಸುತ್ತಿತ್ತು.

ಇದನ್ನೂ ಓದಿ: ಸಂಘ ಪರಿವಾರ ಬೆಂಬಲಿಗ ಪತ್ರಿಕೆ ‘ಹೊಸದಿಗಂತ’ದ ಸಂಪಾದಕ ಮತ್ತು ಪ್ರಕಾಶಕರಿಗೆ ಏಳು ತಿಂಗಳ ಜೈಲು ಶಿಕ್ಷೆ

ಮೂರನೆಯದಾಗಿ, ಲಸಿಕೆ ಪೂರೈಕೆಯ ಶೇಕಡಾ 50 ರಷ್ಟು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ, ಇದರಿಂದಾಗಿ ರಾಜ್ಯ ಸರ್ಕಾರಗಳಿಗೆ ಮುಕ್ತ ಮಾರುಕಟ್ಟೆಯಲ್ಲೂ ಲಸಿಕೆ ಲಭ್ಯವಾಗಲಿದೆ.

ಮುಕ್ತ ಮಾರುಕಟ್ಟೆಯಲ್ಲಿ ಇರುವ ಪೂರೈಕೆಯ 50% ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳು ಕೂಡಾ ಖರೀದಿಸಬಹುದಾಗಿದ್ದು, ಲಸಿಕಾ ತಯಾರಕರು ನಿರ್ಧರಿಸಿದ ಬೆಲೆಯಲ್ಲಿ ಖರೀದಿಸಬೇಕಾಗುತ್ತದೆ. “ಲಸಿಕಾ ತಯಾರಕರು ತಮ್ಮ ಲಸಿಕೆಯ ಬೆಲೆಯನ್ನು ಮೇ 1 ರ ಮೊದಲು ರಾಜ್ಯ ಸರ್ಕಾರಗಳಿಗೆ ಮತ್ತು ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಿರುವ 50% ರಷ್ಟು ಪೂರೈಕೆ ಲಸಿಕೆಯ ಮುಂಗಡ ಬೆಲೆಯನ್ನು ಘೋಷಣೆ ಮಾಡುತ್ತಾರೆ” ಎಂದು ಕೇಂದ್ರ ತಿಳಿಸಿದೆ.

ನಾಲ್ಕನೆಯದಾಗಿ, ಆಮದು ಮಾಡಿಕೊಳ್ಳುವ, ಬಳಸಲು ಸಿದ್ಧವಾದ ಲಸಿಕೆಗಳನ್ನು ಸಂಪೂರ್ಣವಾಗಿ ಭಾರತ ಸರ್ಕಾರದ ಹೊರತಾಗಿ ಮುಕ್ತ ಮಾರುಕಟ್ಟೆಯಲ್ಲಿ ಮಾರಲು ಕೇಂದ್ರವು ಅನುಮತಿಸಿದೆ. ಇದರರ್ಥ ಫಿಜರ್‌ನಂತಹ ಔಷಧ ಕಂಪೆನಿಗಳು ತಮ್ಮ ಲಸಿಕೆಗಳನ್ನು ಭಾರತದಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ನೇರವಾಗಿ ಸ್ಪರ್ಧಾತ್ಮಕ ಬೆಲೆಯಲ್ಲಿ ಮಾರಾಟ ಮಾಡಬಹುದು.

ಇದನ್ನೂ ಓದಿ: ಬಂಗಾಳ: ಸೀತಾಲ್ಕುಚ್ಚಿ ಗೋಲಿಬಾರ್‌ ವಿಡಿಯೋ ವೈರಲ್, ಕೇಂದ್ರ ಪಡೆಗಳ ಮೇಲೆ ಸಂಶಯದ ಹುತ್ತ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮೊದಲು ಜಾತಿಗಣತಿ ಮಾಡುತ್ತೇವೆ: ರಾಹುಲ್‌ ಗಾಂಧಿ

0
ಜಾತಿ ಗಣತಿ ನನ್ನ ಜೀವನದ ಪ್ರಮುಖ ಗುರಿಯಾಗಿದೆ. ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದರೆ ಮೊದಲು ಜಾತಿಗಣತಿಯನ್ನು ಮಾಡುತ್ತೇವೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ. ಸಂಪತ್ತು ಮರುಹಂಚಿಕೆ ವಿವಾದದ ಬಗ್ಗೆ ಪ್ರಧಾನಿ ನರೇಂದ್ರ...