ಆಗ್ರಾದಲ್ಲಿ ಪ್ರೇಮಿಗಳ ದಿನದಂದು ಹಲವು ಜೋಡಿಗಳೊಂದಿಗೆ ಅಸಭ್ಯವಾಗಿ ವರ್ತಿಸಿದ ಪ್ರಕರಣಗಳು ನಡೆದಿದ್ದು, ಉದ್ಯಾನವನಗಳಲ್ಲಿದ್ದ ಜೋಡಿಗಳ ಮೇಲೆ ಹಲ್ಲೆ ನಡೆಸಲಾಗಿದೆ. ಈ ಸಂಬಂಧ ರಾಷ್ಟ್ರೀಯ ಬಜರಂಗದಳದ 30 ರಿಂದ 35 ಮಂದಿ ಮೇಲೆ ಎಫ್‌ಐಆರ್ ದಾಖಲಾಗಿದೆ ಎಂದು ಆಗ್ರಾ ಪೊಲೀಸರು ತಿಳಿಸಿದ್ದಾರೆ.
ರಾಷ್ಟ್ರೀಯ ಬಜರಂಗದಳ ಮತ್ತು ಹಿಂದೂ ಮಹಾಸಭಾದ ಕಾರ್ಯಕರ್ತರು ಸೋಮವಾರ (ವ್ಯಾಲೆಂಟೈನ್ಸ್ ದಿನ) ಹಾಕಿ ಸ್ಟಿಕ್‌ಗಳೊಂದಿಗೆ ಬೀದಿಗಳಲ್ಲಿ ಓಡಾಡುತ್ತಿದ್ದದ್ದು ಕಂಡುಬಂದಿತು. ಇದೇ ವೇಳೆ ಉದ್ಯಾನವನದಲ್ಲಿ ಯುವತಿಯೊಬ್ಬಳ ಮೇಲೆ ಹಲ್ಲೆ ನಡೆಸಿ ಕಿರುಕುಳ ನೀಡಲಾಗಿತ್ತು. ಪ್ರೇಮಿಗಳ ವಿಡಿಯೋಗಳನ್ನು ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು.
ಇದರ ಜೊತೆಗೆ ಬಜರಂಗದಳದ ಜೊತೆ ಇದ್ದ ಹುಡುಗಿಯರೂ ಕೂಡ ಯುವತಿಯನ್ನು ಬೈದು ಆಕೆಯ ಬ್ಯಾಗ್‌ನಲ್ಲಿ ಹುಡುಕಾಟ ನಡೆಸಿದ್ದಾರೆ. ಕಾಲೇಜು ಡ್ರೆಸ್‌ನಲ್ಲಿದ್ದ ಯುವತಿಯನ್ನು ಬಲವಂತವಾಗಿ ವಿಡಿಯೋ ಮಾಡಿ ಆಕೆಯ ಕುಟುಂಬದ ಸದಸ್ಯರ ನಂಬರ್ ಪಡೆದು ದೌರ್ಜನ್ಯ ಎಸಗಿದ್ದಾರೆ. ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಕ್ಕೆ ವ್ಯಕ್ತಿಯೊಬ್ಬರು ಆಕ್ಷೇಪ ವ್ಯಕ್ತಪಡಿಸಿದಾಗ, ಬಜರಂಗದಳದವರು ಅವರೊಂದಿಗೂ ಜಗಳವಾಡಿದರು. ಇಷ್ಟೆಲ್ಲಾ ನಡೆದರೂ ಪಾರ್ಕ್ ಮುಂಭಾಗಗಳಲ್ಲಿದ್ದ ಪೊಲೀಸರೂ ಘಟನಾ ಸ್ಥಳಕ್ಕೆ ಬಂದಿಲ್ಲ ಎಂದು ದೈನಿಕ್ ಭಾಸ್ಕರ್ ವರದಿ ಮಾಡಿದೆ.
ಇದನ್ನೂ ಓದಿ: ನಾವು ತಾಳಿ, ಕಾಲುಂಗುರ ಸಹ ಹಾಕುವುದಿಲ್ಲ, ಕೇಳಲು ನೀವ್ಯಾರು?: ಬಜರಂಗದಳ ಸದಸ್ಯರಿಗೆ ಮಹಿಳೆಯ ಪ್ರಶ್ನೆ
ಬಳಿಕ ಈ ವಿಷಯವನ್ನು ಪೊಲೀಸ್ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದು, ವಿಷಯ ತಿಳಿದ ಎಸ್‌ಎಸ್‌ಪಿ ಸುಧೀರ್‌ಕುಮಾರ್ ಹರಿಪರ್ವತ್ ಪೊಲೀಸ್ ಠಾಣೆಗೆ ಪ್ರಕರಣ ದಾಖಲಿಸಿಕೊಳ್ಳಲು ಆದೇಶಿಸಿದ್ದರು.
राष्ट्रीय बजरंग दल द्वारा पालीवाल पार्क, थाना क्षेत्र हरीपर्वत अंतर्गत, नवयुवक लड़के-लड़कियों के साथ की गई अभद्रता के संबंध में अभियोग पंजीकृत करते हुए, की जा रही वैधानिक कार्यवाही के संबंध में #DIG/#SSP_AGRA द्वारा दी गई बाइट। pic.twitter.com/6hIC5YBZB0
— AGRA POLICE (@agrapolice) February 14, 2022
ಆಗ್ರಾ ಪೊಲೀಸರು ಈ ಬಗ್ಗೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.”ಹರಿಪರ್ವತ ಪೊಲೀಸ್ ಠಾಣಾ ವ್ಯಾಪ್ತಿಯ ಪಲಿವಾಲ್ ಪಾರ್ಕ್‌ನಲ್ಲಿ ರಾಷ್ಟ್ರೀಯ ಬಜರಂಗ ದಳವು ಯುವಕ-ಯುವತಿಯರ ಮೇಲೆ ಅಸಭ್ಯವಾಗಿ ವರ್ತಿಸಿದ ಪ್ರಕರಣವನ್ನು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ರಾಷ್ಟ್ರೀಯ ಬಜರಂಗದಳದ 30 ರಿಂದ 35 ಮಂದಿ ಮೇಲೆ ಎಫ್‌ಐಆರ್ ದಾಖಲಾಗಿದೆ. ಮುಂದಿನ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಬಜರಂಗದಳ ಮತ್ತು ಅಖಿಲ ಭಾರತ ಹಿಂದೂ ಮಹಾಸಭಾದ ಪದಾಧಿಕಾರಿಗಳು ಉದ್ಯಾನವನಗಳಲ್ಲಿ ಯಾರೇ ಅಶ್ಲೀಲವಾಗಿ ವರ್ತಿಸಿದರೆ ಅವರ ಮುಖ ಕಪ್ಪಾಗಿಸಿ ಕತ್ತೆಯ ಮೇಲೆ ಕೂರಿಸಿ ಮೆರವಣಿಗೆ ಮಾಡಲಾಗುವುದು. ಅಲ್ಲದೆ, ಹಿಂದೂ ಸಂಪ್ರದಾಯದ ಪ್ರಕಾರ ಅವರಿಗೆ ಸ್ಥಳದಲ್ಲೇ ಮದುವೆ ಮಾಡಲಾಗುತ್ತದೆ ಎಂದು ಘೋಷಿಸಿದ್ದರು.
ಅಖಿಲ ಭಾರತ ಹಿಂದೂ ಮಹಾಸಭಾದ ಮೀನಾ ದಿವಾಕರ್ ಮತ್ತು ರೌನಕ್ ಠಾಕೂರ್ ನೇತೃತ್ವದಲ್ಲಿ ಸೋಮವಾರ ದಿವಾಣಿ ಚೌಕದಲ್ಲಿ ಪ್ರೇಮಿಗಳ ಪ್ರತಿಕೃತಿ ದಹಿಸಲಾಯಿತು. ಇದಾದ ನಂತರ, ರಾಷ್ಟ್ರೀಯ ಬಜರಂಗದಳದ ಕಾರ್ಯಕರ್ತರು ವ್ಯಾಲೆಂಟೈನ್ ಪ್ರತಿಮೆಗೆ ಸೀರೆ ತೊಡಿಸಿ ಪ್ರತಿಭಟನೆ ನಡೆಸಿದ್ದರು. ಇದಾದ ನಂತರ ಉಭಯ ಪಕ್ಷಗಳ ಕಾರ್ಯಕರ್ತರು ಉದ್ಯಾನವನಗಳತ್ತ ತೆರಳಿ ಜೋಡಿಗಳ ಜೊತೆ ಅಸಭ್ಯವಾಗಿ ವರ್ತಿಸಿ, ಹಲ್ಲೆ ಮಾಡಿದ್ದರು.
ಇದನ್ನೂ ಓದಿ: ‘ಅಮೆಜಾನ್ ವ್ಯಾಲೆಂಟೈನ್ಸ್ ಡೇ’ ಗಿಫ್ಟ್ ಲಿಂಕ್ ವಾಟ್ಸ್‌ಆಪ್‌ನಲ್ಲಿ ಬಂದಿದೆಯೇ? ಎಚ್ಚರ!



ಪ್ರೀತಿ ಪ್ರೇಮ ಸಹನೆ ತಾಳ್ಮೆ ಮತ್ತು ವಿವೇಚನೆ ಇಲ್ಲದೆ ಈ ಅಂಧರು ಜಾತಿಗ್ರಸ್ಥ ಸಮಾಜ ನಿರ್ಮಾಣಕ್ಕಾಗಿ ಕುತಂತ್ರ ಮಾಡುತ್ತಿರುವುದು ತೀರಾ ಖಂಡನೀಯಾ