Homeಮುಖಪುಟ‘ಮೌಲ್ಯಗಳಿಗೆ ಸರಿ ಹೊಂದುತ್ತಿಲ್ಲ’: ಸುಪ್ರೀಂನಲ್ಲಿ ಚುನಾವಣಾ ಆಯೋಗವನ್ನು ಪ್ರತಿನಿಧಿಸುವ ವಕೀಲ ರಾಜೀನಾಮೆ

‘ಮೌಲ್ಯಗಳಿಗೆ ಸರಿ ಹೊಂದುತ್ತಿಲ್ಲ’: ಸುಪ್ರೀಂನಲ್ಲಿ ಚುನಾವಣಾ ಆಯೋಗವನ್ನು ಪ್ರತಿನಿಧಿಸುವ ವಕೀಲ ರಾಜೀನಾಮೆ

- Advertisement -
- Advertisement -

ಸುಪ್ರೀಂ ಕೋರ್ಟ್‌ನ ಮುಂದೆ ಚುನಾವಣಾ ಆಯೋಗವನ್ನು ಪ್ರತಿನಿಧಿಸುತ್ತಿರುವ ವಕೀಲರೊಬ್ಬರು, ಆಯೋಗದ ವಕೀಲರ ಸಮಿತಿಗೆ ರಾಜೀನಾಮೆ ನೀಡಿದ್ದು, ತನ್ನ ಮೌಲ್ಯಗಳು ಚುನಾವಣಾ ಆಯೋಗದ ಪ್ರಸ್ತುತ ಕಾರ್ಯನಿರ್ವಹಣೆಗೆ ಸರಿ ಹೊಂದುತ್ತಿಲ್ಲ ಎಂದು ಹೇಳಿದ್ದಾರೆ.

ವಕೀಲ ಮೋಹಿತ್ ಡಿ ರಾಮ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ಚುನಾವಣಾ ಆಯೋಗಕ್ಕೆ 2013 ರಿಂದ ಪ್ಯಾನಲ್ ಸಲಹೆಗಾರ ಆಗಿದ್ದರು.

ಇದನ್ನೂ ಓದಿ: ‘ನಮ್ಮ ಮಾತನ್ನೂ ಕೇಳಿ’- ಪ್ರಧಾನಿ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಜಾರ್ಖಂಡ್ ಸಿಎಂ

“ನನ್ನ ಮೌಲ್ಯಗಳು ಚುಣಾವಣಾ ಆಯೋಗದ ಪ್ರಸ್ತುತ ಕಾರ್ಯನಿರ್ವಹಣೆಗೆ ಸರಿ ಹೊಂದುತ್ತಿಲ್ಲ ಎಂದು ನಾನು ಕಂಡುಕೊಂಡಿದ್ದೇನೆ. ಆದ್ದರಿಂದ ನಾನು ಸುಪ್ರೀಂ ಕೋರ್ಟ್ ಮುಂದೆ ಆಯೋಗದ ಪ್ಯಾನೆಲ್ ಸಲಹೆಗಾರನ ಜವಾಬ್ದಾರಿಗಳಿಂದ ಹಿಂದೆ ಸರಿಯುತ್ತಿದ್ದೇನೆ” ಎಂದು ಹೇಳಿದ್ದಾರೆ.

“ನನ್ನ ಕಚೇರಿಯಲ್ಲಿ ಬಾಕಿ ಇರುವ ಎಲ್ಲಾ ಕೇಸುಗಳ ಫೈಲ್‌ಗಳು, ಎನ್‌ಒಸಿ ಮತ್ತು ‘ವಕಾಲತ್‌‌ನಾಮಾಗಳು’ ಸುಗಮವಾಗಿ ಪರಿವರ್ತನೆಯಾಗುವುದನ್ನು ಖಚಿತಪಡಿಸಿಕೊಳ್ಳಲು ನಾನು ಕ್ರಮ ಕೈಗೊಳ್ಳುತ್ತೇನೆ” ಎಂದು ಅವರು ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಸಂಸ್ಕಾರಕ್ಕೆ ಬರುವವರಿಗೆ ಉಚಿತ ಟಿ,ಕಾಫಿ ನೀಡುತ್ತೇವೆಂದು ನಗುಮುಖದ ಫ್ಲೆಕ್ಸ್‌; ಕನಿಷ್ಠ ಸಂವೇದನೆ ಮರೆತ BJP

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ನನ್ನ ಮೇಲೆ ಬಿಜೆಪಿ ವಕೀಲ ವಿವೇಕ್ ಸುಬ್ಬ ರೆಡ್ಡಿ ಎಫ್ ಐ ಆರ್ ಮಾಡಿ ಅರೆಸ್ಟ್ ಮಾಡಿಸಲು ಪ್ರಯತ್ನಿಸಿದ. ಚುನಾವಣೆ , ಇವಿಎಮ್ ವಿವಿಪಿಎಟಿ ಅಕ್ರಮಗಳ ಬಗ್ಗೆ ಮಾಡಿದ ವೀಡಿಯೋ ವಿರುಧ್ಧ ಕೇಸು ಮಾಡಿದ್ದಾರೆ

LEAVE A REPLY

Please enter your comment!
Please enter your name here

- Advertisment -

Must Read

ಪ್ರಧಾನಿ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾಗರಿಕ ಸಂಸ್ಥೆಗಳು, ಕಾಳಜಿಯುಳ್ಳ ನಾಗರಿಕರಿಂದ ಚುನಾವಣಾ ಆಯೋಗಕ್ಕೆ...

0
ರಾಜಸ್ಥಾನದಲ್ಲಿ ಭಾನುವಾರ (ಏ.21) ನಡೆದ ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸುಳ್ಳು ಸುದ್ದಿ ಮತ್ತು ದ್ವೇಷ ಹರಡಿದ್ದಾರೆ. ಈ ಹಿನ್ನೆಲೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನಾಗರಿಕ ಸಂಸ್ಥೆಗಳು...