‘ನಮ್ಮ ಮಾತನ್ನೂ ಕೇಳಿ’- ಪ್ರಧಾನಿ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಜಾರ್ಖಂಡ್ ಸಿಎಂ | ನಾನುಗೌರಿ

ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ತಮ್ಮ ರಾಜ್ಯದ ಕೋವಿಡ್ ಪರಿಸ್ಥಿತಿ ಕುರಿತು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ನಂತರ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಪ್ರಧಾನಿ ಮೋದಿ ನಿನ್ನೆ ಆಂಧ್ರಪ್ರದೇಶ, ಒಡಿಶಾ, ತೆಲಂಗಾಣ ಮತ್ತು ಜಾರ್ಖಂಡ್ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದರು. ಜಾರ್ಖಂಡ್ ಮುಖ್ಯಮಂತ್ರಿ ಈ ಮಾತುಕತೆಯ ಬಗ್ಗೆ ತಮ್ಮ ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರು ಟ್ವಿಟರ್‌ನಲ್ಲಿ, “ಇಂದು, ಗೌರವಾನ್ವಿತ ಪ್ರಧಾನ ಮಂತ್ರಿ ಕರೆ ಮಾಡಿದರು. ಅವರು ತಮ್ಮ ‘ಮನ್ ಕಿ ಬಾತ್’ ಅನ್ನು ಮಾತ್ರ ಆಡಿದರು. ಅವರು ಕೆಲಸದ ಬಗ್ಗೆ ಮಾತನ್ನು ಆಡುತ್ತಿದ್ದರೆ ಮತ್ತು ಕೆಲಸ ಬಗೆಗಿನ ಮಾತನ್ನು ಆಲಿಸುತ್ತಿದ್ದರೆ ಚೆನ್ನಾಗಿತ್ತು” ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ‘ಬೆನ್ನೆಲುಬಿಲ್ಲದ ಮೋದಿ’ ‘ಡೈಪರ್‌ ಸೂರ್ಯ ಎಕ್ಸ್‌ಪೋಸ್ಡ್’- ಟ್ವಿಟರ್‌ನಲ್ಲಿ BJP ವಿರೋಧಿ ಹವಾ!

ಪ್ರಧಾನಿ ತಮ್ಮ ಕರೆಯಲ್ಲಿ ಅವರಷ್ಟೇ ಮಾತನಾಡಿದ್ದು, ಮುಖ್ಯಮಂತ್ರಿ ಸೊರೆನ್‌ಗೆ ಮಾತನಾಡಲು ಹಾಗೂ ಅವರ ಕಳವಳವನ್ನು ವ್ಯಕ್ತಪಡಿಸಲು ಅವಕಾಶ ನೀಡಿಲ್ಲದ ಕಾರಣ ಅವರು ಅಸಮಾಧಾನಗೊಂಡಿದ್ದಾರೆ ಎಂದು ಪಿಟಿಐ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.

ಮುಖ್ಯಮಂತ್ರಿಯ ಈ ಟ್ವೀಟ್‌ಗೆ ಬಿಜೆಪಿ ಮುಖಂಡರು ಟೀಕೆ ವ್ಯಕ್ತಪಡಿಸಿದ್ದಾರೆ. ಅಸ್ಸಾಂ ಬಿಜೆಪಿ ಮುಖಂಡ ಹಿಮಾಂತ ಬಿಸ್ವಾ ಶರ್ಮಾ ಇದನ್ನು ಕೀಳುಮಟ್ಟದ ಪ್ರಚಾರ ತಂತ್ರ ಎಂದು ಹೇಳಿದ್ದಾರೆ. ಜಾಖಾಂಡ್ ಬಿಜೆಪಿ ನಾಯಕ, ಬಾಬುಲಾಲ್ ಮರಂಡಿ, ‘ಹೇಮಂತ್ ಸೊರೆನ್ ಒಬ್ಬ ವಿಫಲ ಮುಖ್ಯಮಂತ್ರಿ’ ಎಂದು ಹೇಳಿದ್ದಾರೆ.

ಈ ಬಗ್ಗೆ ಕಾಂಗ್ರೆಸ್ ಪ್ರಧಾನಿ ಮೋದಿಯನ್ನು ಗುರಿಯಾಗಿಸಿದ್ದು, ಸೊರೆನ್ ಅವರಿಗೆ ಬೆಂಬಲಿಸಿದ್ದಾರೆ. ಕಾಂಗ್ರೆಸ್ ನಾಯಕ ಪವನ್ ಖೇರಾ, “ಇದು ತುಂಬಾ ಗಂಭೀರ ಮತ್ತು ಆತಂಕಕಾರಿ ಸಂಗತಿಯಾಗಿದೆ, ಈ ಸಮಯದಲ್ಲಿ ಕೂಡಾ ಪ್ರಧಾನಿ ಮಾತನಾಡಲು ಬಯಸುತ್ತಾರೆಯೆ ವಿನಃ, ಸಮಸ್ಯೆಯನ್ನು ಕೇಳಿಸಿಕೊಳ್ಳುತ್ತಿಲ್ಲ” ಎಂದು ಎಂದು ಬರೆದಿದ್ದಾರೆ.

ದೇಶದಲ್ಲಿ ದಿನನಿತ್ಯ ಸಂಭವಿಸುತ್ತಿರುವ ಕೊರೊನಾ ಸಾವುಗಳಲ್ಲಿ 75% ಕ್ಕಿಂತಲೂ ಹೆಚ್ಚು ಪಾಲು ಹೊಂದಿರುವ 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಟ್ಟಿಯಲ್ಲಿ ಜಾರ್ಖಂಡ್ ಕೂಡ ಸೇರಿದೆ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ. ಈ ಪಟ್ಟಿಯಲ್ಲಿ ಉಳಿದವುಗಳು ಮಹಾರಾಷ್ಟ್ರ, ಉತ್ತರ ಪ್ರದೇಶ, ಕರ್ನಾಟಕ, ದೆಹಲಿ,  ಛತ್ತೀಸ್‌ಗಡ, ಹರಿಯಾಣ, ಪಂಜಾಬ್, ತಮಿಳುನಾಡು ಮತ್ತು ರಾಜಸ್ಥಾನ ರಾಜ್ಯಗಳು ಸೇರಿವೆ.

ಇದನ್ನೂ ಓದಿ: ಬೆಂಬಲಿಗರನ್ನು ಸೆಳೆಯಲು ‘ಪಾಕಿಸ್ತಾನಿ’ ಯುವತಿಯ ಫೋಟೊ ಬಳಸುತ್ತಿರುವ BJP ಐಟಿ ಸೆಲ್!

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

2 COMMENTS

  1. ಮೋದಿ ಕಾಮ್ ಕಿ ಬಾತ್ ಆಡುವುದಿಲ್ಲ, ಅವ್ರು “ಕೋಮ್” ಕಿ ಬಾತ್ ಮಾತ್ರ ಆಡುವುದು. ಕಾರಣ ಕೋಮುವಾದಿಗಳು ಕೋಮ್ ಕಿ ಬಾತ್ ಮಾತ್ರ ಆಡುವುದು.

LEAVE A REPLY

Please enter your comment!
Please enter your name here