ತಮ್ಮ ಶಾಲೆಯ ತೋಟದಲ್ಲಿ ಬೆಳೆದ ತರಕಾರಿಗಳನ್ನು ದುಷ್ಕರ್ಮಿಗಳು ಕದ್ದೊಯ್ದಿರುವುದರಿಂದ ಮಕ್ಕಳು ಆಘಾತಕ್ಕೊಳಗಾಗಿರುವ ಘಟನೆ ತಿರುವನಂತಪುರಂನ ಸರ್ಕಾರಿ ಪ್ರಾಥಮಿಕ ಶಾಲೆಯೊಮದರಲ್ಲಿ ನಡೆದಿದೆ.
ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆ ಮಕ್ಕಳು ಸರ್ಕಾರಕ್ಕೆ ಪತ್ರ ಬರೆದಿದ್ದು, ಕೇರಳ ಶಿಕ್ಷಣ ಸಚಿವರು ವಿದ್ಯಾರ್ಥಿಗಳನ್ನು ಸಮಾಧಾನಪಡಿಸಿ, ನೈತಿಕ ಬೆಂಬಲ ನೀಡಿದ್ದಾರೆ. ಈ ಘಟನೆಯಿಂದ ಬೇಸರ ವ್ಯಕ್ತಪಡಿಸಿದ ಹಲವರು, ಮಕ್ಕಳಿಗೆ ಸಹಾಯ ಹಸ್ತ ಚಾಚಿದ್ದಾರೆ.
ನಗರದ ಸರ್ಕಾರಿ ಮಾದರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಾಥಮಿಕ ತರಗತಿಯ ಹೆಚ್ಚಿನ ವಿದ್ಯಾರ್ಥಿಗಳು ತರಕಾರಿ ತೋಟದಲ್ಲಿ ಭಾಗಿಯಾಗಿದ್ದರು. ಸೋಮವಾರ ಬೆಳಿಗ್ಗೆ ಶಾಲೆಗೆ ತಲುಪಿದಾಗ ಸುಮಾರು 30 ಹೂಕೋಸುಗಳು ಸೇರಿದಂತೆ ಎಲ್ಲ ತರಕಾರಿಗಳು ಕದ್ದಿರುವುದನ್ನು ನೋಡಿ ಅವರು ಆಘಾತಕ್ಕೊಳಗಾಗಿದ್ದಾರೆ.
ತರಕಾರಿ ತೋಟದ ಸಂಯೋಜಕಿ ಸುನೀತಾ ಜಿ ಎಸ್ ಮಾತನಾಡಿ, “ಮಕ್ಕಳು ಪ್ರತಿದಿನ ತೋಟವನ್ನು ನೋಡಿಕೊಳ್ಳುತ್ತಿದ್ದರು, ಕೊಯ್ಲಿಗೆ ಕಾತುರದಿಂದ ಕಾಯುತ್ತಿದ್ದರು. ಆದ್ದರಿಂದ ಅವರು ಕಳ್ಳತನದಿಂದ ನಿಜವಾಗಿಯೂ ಅಸಮಾಧಾನಗೊಂಡಿದ್ದರು” ಎಂದು ಹೇಳಿದರು.
ಶಾಲೆಯಲ್ಲಿ ಬೆಳೆದ ತರಕಾರಿಗಳನ್ನು ಶಾಲೆಯ ಮಧ್ಯಾಹ್ನದ ಊಟದ ಕಾರ್ಯಕ್ರಮಕ್ಕೆ ಬಳಸಲಾಗುತ್ತಿತ್ತು.
ಇದನ್ನೂ ಒದಿ; ಭಾರತಕ್ಕೆ ಮರಳಿದ ಅಕ್ರಮ ವಲಸಿಗರು; ಮೊದಲ ತಂಡದಲ್ಲಿ 25 ವರ್ಷಕ್ಕಿಂತ ಕಡಿಮೆ ವಯಸ್ಸಿನ 48 ಜನರು


