Homeಫ್ಯಾಕ್ಟ್‌ಚೆಕ್ರಾಕೇಶ್ ಟಿಕಾಯತ್‌ ‘ಅಲ್ಲಾಹು ಅಕ್ಬರ್ ಎಂದರೆ.. ರೈತರು ಕೋಪದಿಂದ ‘ಹರಹರ ಮಹಾದೇವ’ ಎಂದು ಕೂಗಿದ್ದು ನಿಜವೇ..?

ರಾಕೇಶ್ ಟಿಕಾಯತ್‌ ‘ಅಲ್ಲಾಹು ಅಕ್ಬರ್ ಎಂದರೆ.. ರೈತರು ಕೋಪದಿಂದ ‘ಹರಹರ ಮಹಾದೇವ’ ಎಂದು ಕೂಗಿದ್ದು ನಿಜವೇ..?

- Advertisement -
- Advertisement -

ದೆಹಲಿಯ ರೈತ ಚಳುವಳಿಯನ್ನು ಮುನ್ನಡೆಸುತ್ತಿರುವವರಲ್ಲಿ ಒಬ್ಬರಾದ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕಾಯತ್‌ ಮುಸ್ಲಿಮರ ಸಹಾನುಭೂತಿ ಪಡೆಯಲು “ಅಲ್ಲಾಹು ಅಕ್ಬರ್” ಎಂದು ಘೋಷಣೆ ಕೂಗುತ್ತಿದ್ದಾರೆ ಎಂದಿರುವ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿರುವುದು ಕಂಡುಬಂದಿದೆ.

ರಾಕೇಶ್ ಟಿಕಾಯತ್‌ ಕೃಷಿ ಕಾನೂನುಗಳ ವಿರುದ್ಧದ ಸಾರ್ವಜನಿಕ ಸಭೆಯಲ್ಲಿ ‘ಅಲ್ಲಾಹು ಅಕ್ಬರ್’ ಎಂದು ಘೋಷಣೆ ಕೂಗಿದ್ದಾರೆ. ಅದೇ ಸಾರ್ವಜನಿಕ ಸಭೆಯಲ್ಲಿ ಹಿಂದೂ ರೈತರು ಕೋಪದಿಂದ ‘ಹರ ಹರ ಮಹಾದೇವ’ ಎಂದು ಘೋಷಣೆ ಕೂಗಿದ್ದಾರೆ ಎಂದು ವಿಡಿಯೊ ಹಂಚಿಕೊಳ್ಳಲಾಗುತ್ತಿದ್ದು, ಇದು ನಿಜವೇ ಎಂಬುದನ್ನು ಈ ಸುದ್ದಿಯಲ್ಲಿ ಪರಿಶೀಲಿಸೋಣ.

ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ‘ಪಂಜಾಬ್ ತಕ್’ ಸುದ್ದಿ ಚಾನೆಲ್ ಲೋಗೋ ಇದೆ. ಈ ವಿಡಿಯೊಕ್ಕಾಗಿ ‘ಪಂಜಾಬ್ ತಕ್’ ನ ಅಧಿಕೃತ ಯೂಟ್ಯೂಬ್ ಚಾನೆಲ್ ನಲ್ಲಿ ಹುಡುಕಿದಾಗ, ‘ಪಂಜಾಬ್ ತಕ್’ ನ್ಯೂಸ್ ಚಾನೆಲ್ 05 ಸೆಪ್ಟೆಂಬರ್ 2021 ರಂದು ಇದನ್ನು ಪ್ರಕಟಿಸಿದೆ. ಈ ವಿಡಿಯೋ 05 ಸೆಪ್ಟೆಂಬರ್ 2021 ರಂದು ಮುಜಾಫರ್ ನಗರದಲ್ಲಿ ನಡೆದ ಕಿಸಾನ್ ಮಹಾ ಪಂಚಾಯತ್ ಕಾರ್ಯಕ್ರಮದ ನೇರ ದೃಶ್ಯಗಳನ್ನು ವಿವರಿಸುತ್ತದೆ.

ಇದನ್ನೂ ಓದಿ: ‘ಪಾಕಿಸ್ತಾನ್‌ ಮುರ್ದಾಬಾದ್‌’ ಘೋಷಣೆಯೊಂದಿಗೆ ಕಸದಬುಟ್ಟಿ ತಯಾರಿಸಿತೆ ನೀಲ್ ಕಮಲ್ ಸಂಸ್ಥೆ?

‘ಪಂಜಾಬ್ ತಕ್’ ಸುದ್ದಿ ಚಾನೆಲ್ ಪ್ರಕಟಿಸಿದ ವಿಡಿಯೋದಲ್ಲಿ 11:06 ನಿಮಿಷದಲ್ಲಿ, ರಾಕೇಶ್ ಟಿಕಾಯತ್ ಮಾತನಾಡಿರುವುದು ಇದು. “ಇಂತಹ (ಬಿಜೆಪಿ) ಸರ್ಕಾರಗಳು ದೇಶದಲ್ಲಿ ಮುಂದುವರಿದರೆ, ದೇಶದಲ್ಲಿ ಗಲಭೆಗಳನ್ನು ಸೃಷ್ಟಿಸುವುದನ್ನು ಮುಂದುವರಿಸುತ್ತಾರೆ. ಹಿಂದೆ, ಟಿಕಾಯತ್ (ರಾಕೇಶ್ ಟಿಕಾಯತ್ ತಂದೆ ಮತ್ತು ಬಿಕೆಯು ಮಾಜಿ ಅಧ್ಯಕ್ಷ ಮಹೇಂದ್ರ ಸಿಂಗ್ ಟಿಕಾಯತ್) ಸಮಯದಲ್ಲಿ ಘೋಷಣೆಗಳನ್ನು ಕೂಗಲಾಗುತ್ತಿತ್ತು. ‘ಅಲ್ಲಾಹು ಅಕ್ಬರ್’ (ತಕ್ಷಣ ಜನರ ಗುಂಪು ‘ಹರ ಹರ ಮಹಾದೇವ’ ಎಂದು ಕೂಗುತ್ತದೆ), ‘ಅಲ್ಲಾಹು ಅಕ್ಬರ್ (ಮತ್ತೆ ಜನರ ಗುಂಪು ‘ಹರ ಹರ ಮಹಾದೇವ’ ಎಂದು ಕೂಗಿತ್ತದೆ). ಈ ‘ಅಲ್ಲಾಹು ಅಕ್ಬರ್-ಹರ ಹರ ಮಹಾದೇವ್’ ಘೋಷಣೆಗಳು ದೇಶದಲ್ಲಿ ಇದುವರೆಗೆ ನಡೆದ ಚಳುವಳಿಗಳಲ್ಲಿ ಘೋಷಿಸಲಾಗಿದೆ. ಭವಿಷ್ಯದಲ್ಲಿ ನಡೆಯುವ ಚಳುವಳಿಗಳಲ್ಲಿಯೂ ಈ ಘೋಷಣೆಗಳನ್ನು ಕೂಗಲಾಗುತ್ತದೆ. ನಮ್ಮ ಬಳಿ ಗಲಭೆಗಳು ಉದ್ಭವಿಸುವುದಿಲ್ಲ. ಅವರು ಜನರನ್ನು ಬೇರ್ಪಡಿಸಲು ಪ್ರಯತ್ನಿಸಿದರೆ, ನಾವು ಒಂದಾಗಲು ಪ್ರಯತ್ನಿಸುತ್ತೇವೆ. ಸುಳ್ಳು ಪ್ರಚಾರದಿಂದ ಜನರು ಮೋಸ ಹೋಗಬಾರದು” ಎಂದು ಹೇಳಿದ್ದಾರೆ.

ಇತರ ಕೆಲವು ಸುದ್ದಿ ವಾಹಿನಿಗಳು ರಾಕೇಶ್ ಟಿಕಾಯತ್ ಕಿಸಾನ್ ಮಹಾ ಪಂಚಾಯತ್ ಸಭೆಯನ್ನು ಉದ್ದೇಶಿಸಿ ಮಾತನಾಡುವ ವೀಡಿಯೋವನ್ನು ಪ್ರಕಟಿಸಿವೆ. ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವಿಡಿಯೊವನ್ನು ಕಿಸಾನ್ ಮಹಾ ಪಂಚಾಯತ್ ಸಭೆಯಲ್ಲಿ ಭಾಷಣ ಮಾಡಿದ ರಾಕೇಶ್ ಟಿಕಾಯತ್ ವಿಡಿಯೊವನ್ನು ಎಡಿಟ್ ಮಾಡಿ ಹಂಚಿಕೊಳ್ಳಲಾಗುತ್ತಿದೆ.

ರಾಕೇಶ್ ಟಿಕಾಯತ್ ಅವರ ಅಲ್ಲಾ ಹೋ ಅಕ್ಬರ್ ‘ಘೋಷಣೆಯ ಕುರಿತು ಸಂಪೂರ್ಣ ಸ್ಪಷ್ಟತೆಯೊಂದಿಗೆ 07 ಸೆಪ್ಟೆಂಬರ್ 2021 ರಂದು ‘ಬಿಬಿಸಿ ನ್ಯೂಸ್ ಹಿಂದಿ’ಯಲ್ಲಿ’ ವಿಡಿಯೊವನ್ನು ಪ್ರಕಟಿಸಿದ್ದಾರೆ. ಈ ವಿವರಗಳನ್ನು ಆಧರಿಸಿ, ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವಿಡಿಯೊ ಹಳುವಂತೆ, ರಾಕೇಶ್ ಟಿಕಾಯತ್ ಮುಸ್ಲಿಮರ ಸಹಾನುಭೂತಿಗಾಗಿ ‘ಅಲ್ಲಾಹು ಅಕ್ಬರ್’ ಎಂದು ಘೋಷಣೆ ಕೂಗಲಿಲ್ಲ ಎಂದು ಹೇಳಬಹುದಾಗಿದೆ.

ಪ್ರತಿಪಾದನೆ: ರೈತ ಚಳುವಳಿಯ ನಾಯಕ ರಾಕೇಶ್ ಟಿಕಾಯತ್, ಮುಸ್ಲಿಮರ ಸಹಾನುಭೂತಿಗಾಗಿ ‘ಅಲ್ಲಾ ಹು ಅಕ್ಬರ್’ ಎಂದು ಘೋಷಣೆ ಕೂಗಿದರೆ, ಹಿಂದೂ ರೈತರು ಕೋಪದಿಂದ ‘ಹರಹರ ಮಹಾದೇವ್’ ಎಂದು ಘೋಷಣೆ ಕೂಗಿದ್ದಾರೆ.

ನಿಜಾಂಶ: ಪೋಸ್ಟ್‌ನಲ್ಲಿ ಹಂಚಲಾಗಿರುವ ವಿಡಿಯೊವನ್ನು ಎಡಿಟ್ ಮಾಡಲಾಗಿದೆ. ರಾಕೇಶ್ ಟಿಕಾಯತ್ ಮುಜಾಫರ್ ನಗರದಲ್ಲಿ 05 ಸೆಪ್ಟೆಂಬರ್ 2021 ರಂದು ನಡೆದ ಕಿಸಾನ್ ಮಹಾ ಪಂಚಾಯತ್ ಸಭೆಯಲ್ಲಿ ‘ಅಲ್ಲಾಹು ಅಕ್ಬರ್’ ಘೋಷಣೆಯನ್ನು ಕೂಗಿದ್ದು ನಿಜ. ಭಾರತದ ಏಕತೆಯನ್ನು ತಿಳಿಸಲು ರಾಕೇಶ್ ಟಿಕಾಯತ್ ‘ಅಲ್ಲಾಹು ಅಕ್ಬರ್’ಎಂದು ಘೋಷಣೆ ಕೂಗಿ, ರೈತರನ್ನು ‘ಹರ ಹರ ಮಹಾದೇವ್’ ಎಂದು ಕೂಗಲು ಪ್ರೇರೆಪಿಸಿದ್ದಾರೆ. ರೈತರು ಕೋಪದಿಂದ ‘ಹರಹರ ಮಹಾದೇವ್’ ಎಂದು ಘೋಷಣೆ ಕೂಗಿಲ್ಲ. ಅವರು ಮನಃಪೂರ್ವಕವಾಗಿ ಒಪ್ಪಿ ಕೂಗಿದ್ದಾರೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಹಕ್ಕು ತಪ್ಪಾಗಿದೆ.


ಇದನ್ನೂ ಓದಿ: ತಾಲಿಬಾನ್ ಪರ ಪಾಕ್‌ ಆರ್ಮಿ ದಾಳಿ ಎಂದು ವಿಡಿಯೊ ಗೇಮ್‌ ಕ್ಲಿಪ್‌ ಪ್ರಸಾರ ಮಾಡಿದ ರಿಪಬ್ಲಿಕ್ ಟಿವಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಹಾರ| ‘ಬಾಂಗ್ಲಾದೇಶಿ’ ಎಂದು ಆರೋಪಿಸಿ ಮುಸ್ಲಿಂ ಕಾರ್ಮಿಕನನ್ನು ಥಳಿಸಿದ ಗುಂಪು

ಬಾಂಗ್ಲಾದೇಶಿ ಎಂದು ಸುಳ್ಳು ಆರೋಪ ಹೊರಿಸಿ ಮುಸ್ಲಿಂ ಕಾರ್ಮಿಕನ ಮೇಲೆ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಬಿಹಾರದ ಮಧುಬನಿ ಜಿಲ್ಲೆಯಲ್ಲಿ ನಡೆದಿದೆ. ಬಲಿಪಶು ಖುರ್ಷಿದ್ ಆಲಂ, ಧಾರ್ಮಿಕ ಘೋಷಣೆಗಳನ್ನು ಪಠಿಸಲು ನಿರಾಕರಿಸಿದ ನಂತರ ಸುಮಾರು...

ರಾಜ್ಯ ಸರ್ಕಾರದ ಸಮೀಕ್ಷೆಯಲ್ಲಿ ಇವಿಎಂ ಮೇಲೆ ಜನ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದ ವರದಿ : ಅಲ್ಲಗಳೆದ ಸಚಿವ ಪ್ರಿಯಾಂಕ್ ಖರ್ಗೆ

ಹೆಚ್ಚಿನ ನಾಗರಿಕರು ಭಾರತದಲ್ಲಿ ಚುನಾವಣೆಗಳು ಮುಕ್ತ ಮತ್ತು ನ್ಯಾಯಯುತವಾಗಿ ನಡೆಯುತ್ತಿವೆ ಎಂದು ನಂಬುತ್ತಾರೆ ಹಾಗೂ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಮೇಲಿನ ನಂಬಿಕೆ ಹೆಚ್ಚಾಗಿದೆ ಎಂದು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಪ್ರಕಟಿಸಿದ ರಾಜ್ಯವ್ಯಾಪಿ ಸಮೀಕ್ಷೆಯ...

ಉಡುಗೊರೆಯಾಗಿ ನೀಡಿದ್ದ ಮೊಬೈಲ್ ಫೋನ್‌ಗಳನ್ನು ಅಸ್ಸಾಂ ಸರ್ಕಾರಕ್ಕೆ ಹಿಂದಿರುಗಿಸಿದ ಪತ್ರಕರ್ತರು

ಅಸ್ಸಾಂ ಸರ್ಕಾರದಿಂದ ಹೊಸ ವರ್ಷದ ಉಡುಗೊರೆಯಾಗಿ ಪಡೆದ ಮೊಬೈಲ್ ಫೋನ್‌ಗಳನ್ನು ಕನಿಷ್ಠ ಇಬ್ಬರು ಪತ್ರಕರ್ತರು ಗುರುವಾರ ಹಿಂದಿರುಗಿಸಿದ್ದಾರೆ ಎಂದು 'ಸ್ಕ್ರೋಲ್' ವರದಿ ಮಾಡಿದೆ. ಅಸ್ಸಾಂನ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ನಿರ್ದೇಶನಾಲಯದಲ್ಲಿ ನೋಂದಾಯಿಸಲಾದ 2,200...

ಕೋಗಿಲು ಬಡಾವಣೆ ಮನೆಗಳ ತೆರವು : ಸರ್ಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ

ಬೆಂಗಳೂರಿನ ಕೋಗಿಲು ಬಡಾವಣೆಯ ವಾಸಿಂ ಹಾಗೂ ಫಕೀರ್ ಕಾಲೊನಿಗಳ ಸುಮಾರು ‌300 ಮನೆಗಳನ್ನು ನೆಲಸಮ ಮಾಡಿ, ಮೂರು ಸಾವಿರಕ್ಕೂ ಹೆಚ್ಚು ಜನರನ್ನು ಬೀದಿಗೆ ತಳ್ಳಿರುವ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್​ಗೆ ಸಾರ್ವಜನಿಕ...

ರ‍್ಯಾಗಿಂಗ್ ದೈಹಿಕ ಹಿಂಸೆ; ಎರಡು ತಿಂಗಳ ಬಳಿಕ 19 ವರ್ಷದ ವಿದ್ಯಾರ್ಥಿನಿ ಸಾವು

ಹಿಮಾಚಲ ಪ್ರದೇಶದ ಧರ್ಮಶಾಲಾದ ಸರ್ಕಾರಿ ಪದವಿ ಕಾಲೇಜಿನಲ್ಲಿ ನಡೆದ ಘಟನೆಯು ಇಡೀ ರಾಜ್ಯವನ್ನೇ ಆಘಾತಕ್ಕೆ ದೂಡಿದೆ. 19 ವರ್ಷದ ಬಾಲಕಿಯ ಸಾವಿನ ಗಂಭೀರ ಪ್ರಕರಣಗಳಲ್ಲಿ ಕಾಲೇಜಿನ ಅಧ್ಯಾಪಕರು ಮತ್ತು ಮೂವರು ವಿದ್ಯಾರ್ಥಿನಿಯರ ಹೆಸರಿದೆ....

ಮುಸ್ಲಿಂ ಲೀಗ್‌ ಚಂದ್ರಿಕಾದ ಸಂಪಾದಕೀಯ ಪ್ರಕಟಿಸಿದ ಜನ್ಮಭೂಮಿ ಪತ್ರಿಕೆ : ಮುಜುಗರಕ್ಕೊಳಗಾದ ಬಿಜೆಪಿಯ ಮುಖವಾಣಿ

ವರ್ಷದ ಆರಂಭದಲ್ಲಿ ಅಚ್ಚರಿ ಎಂಬಂತೆ, ಕೇರಳ ಬಿಜೆಪಿಯ ಮುಖವಾಣಿಯಾದ ಮಲಯಾಳಂ ದಿನಪತ್ರಿಕೆ 'ಜನ್ಮಭೂಮಿ', ಪ್ರತಿಸ್ಪರ್ಧಿ ಪತ್ರಿಕೆಯಾದ ಇಂಡಿಯನ್‌ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್‌) ಪಕ್ಷದ ಮುಖವಾಣಿ 'ಚಂದ್ರಿಕಾ'ದ ಸಂಪಾದಕೀಯ ಪ್ರಕಟಿಸಿ ಮುಜುಗರಕ್ಕೀಡಾಗಿದೆ. 'ಜನ್ಮಭೂಮಿ' ಪತ್ರಿಕೆಯ...

ಕೆಕೆಆರ್ ತಂಡಕ್ಕೆ ಬಾಂಗ್ಲಾ ಕ್ರಿಕೆಟಿಗ ಮುಸ್ತಾಫಿಜುರ್ ರೆಹಮಾನ್ ಖರೀದಿ; ಶಾರುಖ್ ಖಾನ್ ಅವರನ್ನು ‘ದೇಶದ್ರೋಹಿ’ ಎಂದ ರಾಮಭದ್ರಾಚಾರ್ಯ

ಇಂಡಿಯನ್ ಪ್ರೀಮಿಯರ್ ಲೀಗ್ 2026 ರ ಸೀಸನ್‌ಗಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ಬಾಂಗ್ಲಾದೇಶದ ಕ್ರಿಕೆಟಿಗ ಮುಸ್ತಾಫಿಜುರ್ ರೆಹಮಾನ್ ಅವರನ್ನು ಖರೀದಿ ಮಾಡಿದ್ದಕ್ಕಾಗಿ ಬಾಲಿವುಡ್ ನಟ ಶಾರುಖ್ ಖಾನ್ ಅವರನ್ನು ಹಿಂದೂ ಆಧ್ಯಾತ್ಮಿಕ ನಾಯಕ...

“ನಾವೆಲ್ಲರೂ ನಿಮ್ಮ ಬಗ್ಗೆ ಯೋಚಿಸುತ್ತಿದ್ದೇವೆ”: ನ್ಯೂಯಾರ್ಕ್‌ನ ನೂತನ ಮೇಯರ್ ಝೊಹ್ರಾನ್ ಮಮ್ದಾನಿಯಿಂದ ಉಮರ್ ಖಾಲಿದ್‌ಗೆ ಪತ್ರ

ಜೈಲಿನಲ್ಲಿರುವ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ಅವರಿಗೆ ನ್ಯೂಯಾರ್ಕ್‌ ನಗರದ ನೂತನ ಮೇಯರ್ ಝೊಹ್ರಾನ್ ಮಮ್ದಾನಿ ಅವರು ಕೈಬರಹದ ಪತ್ರವೊಂದನ್ನು ಬರೆದಿದ್ದಾರೆ ಎಂದು, ಖಾಲಿದ್ ಸ್ನೇಹಿತೆ ಬನೋಜ್ಯೋತ್ಸ್ನಾ...

ಮಧ್ಯಪ್ರದೇಶ| ಹಸು ಮೇಯಿಸುವ ವಿಚಾರಕ್ಕೆ ಜಗಳ; ದಲಿತ ಕುಟುಂಬದ ಮೇಲೆ ಗುಂಡು ಹಾರಿಸಿದ ಗುಂಪು

ದಲಿತ ಕುಟುಂಬವೊಂದರ ಹೊಲದಲ್ಲಿ ಪ್ರಬಲ ಜಾತಿ ಜನರ ಹಸುಗಳು ಮೇಯಿಸುವುದನ್ನು ವಿರೋಧಿಸದ್ದಕ್ಕೆ ದಲಿತ ಕುಟುಂಬದ ಮೇಲೆ ಗುಂಡು ಹಾರಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ದಾಳಿಕೋರರು ಮನಬಂದಂತೆ ಗುಂಡು ಹಾರಿಸಿ ನಂತರ ದಲಿತ...

ಬಳ್ಳಾರಿ | ರೆಡ್ಡಿ ಬಣಗಳ ನಡುವೆ ಘರ್ಷಣೆ : ಗುಂಡಿನ ದಾಳಿಗೆ ಕಾಂಗ್ರೆಸ್ ಕಾರ್ಯಕರ್ತ ಬಲಿ

ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ಅಂಗವಾಗಿ ಗುರುವಾರ (ಜ.1) ರಾತ್ರಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಸಂಬಂಧಿಸಿ ರೆಡ್ಡಿ ಬಣಗಳ ನಡುವೆ ಘರ್ಷಣೆ ಉಂಟಾಗಿದ್ದು, ಈ ವೇಳೆ ಕಾಂಗ್ರೆಸ್ ಕಾರ್ಯಕರ್ತನೋರ್ವ ಗುಂಡು ತಗುಲಿ ಮೃತಪಟ್ಟ...