ಐಸ್‌ಲ್ಯಾಂಡ್ ರಾಜಧಾನಿ ರೇಕ್‌ಜಾವಿಕ್‌ನ ನೈರುತ್ಯ ದಿಕ್ಕಿನಲ್ಲಿರುವ ರೇಕ್‌ಜನೆಸ್ ಪೆನಿನ್ಸುಲಾದ ಮೇಲೆ ಜ್ವಾಲಾಮುಖಿ ಸ್ಫೋಟ ಸಂಭವಿಸಿದೆ ಎಂದು ಎಂದು ಐಸ್ಲ್ಯಾಂಡಿಕ್ ಹವಾಮಾನ ಕಚೇರಿ (ಐಎಂಒ) ಶುಕ್ರವಾರ ಟ್ವೀಟ್ ಮಾಡಿದೆ.
“ಜ್ವಾಲಾಮುಖಿ ಸ್ಫೋಟವು ಶುಕ್ರವಾರ ಸಂಜೆ 08:45 ಕ್ಕೆ ಗೆಲ್ಡಿಂಗಡಲೂರಿನ ಫಾಗ್ರಾಡಾಲ್ಸ್‌ಫಾಲ್ ಬಳಿ ಪ್ರಾರಂಭವಾಯಿತು” ಎಂದು ಐಎಂಒ ಟ್ವೀಟ್‌ನಲ್ಲಿ ತಿಳಿಸಿದೆ.
A new video of the eruption at Geldingardalur valley in Reykjanes peninsula. Taken from the Coast Guard helicopter. #Reykjanes #Eruption #Fagradalsfjall pic.twitter.com/B862heMzQL
— Icelandic Meteorological Office – IMO (@Vedurstofan) March 19, 2021
ಇದನ್ನೂ ಓದಿ: ರಾಜ್ಯದ ಥಿಯೇಟರ್‌ಗಳಲ್ಲಿ ಶೇ. 50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶವೆಂಬ ಪ್ರಸ್ತಾಪವಿಲ್ಲ: ಸಿಎಂ
ಶುಕ್ರವಾರ ರಾತ್ರಿ ಪೊಲೀಸರು ಹಾಗೂ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದು, ಸಾರ್ವಜನಿಕರು ಈ ಪ್ರದೇಶದಿಂದ ದೂರ ಇರುವಂತೆ ಹೇಳಿದ್ದಾರೆ.
Volcano active in Iceland at the moment #fagradalsfjall #reykjanes #eldgos pic.twitter.com/FR6We2747p
— MOM air (@MOMairline) March 19, 2021
ಜ್ವಾಲಾಮುಖಿಯ ಹಲವಾರು ಮೈಲಿಗಳೊಳಗಿನ ಜನರಿಗೆ ತಮ್ಮ ಕಿಟಕಿಗಳನ್ನು ಮುಚ್ಚಿ ಮತ್ತು ಗಾಳಿಯಲ್ಲಿ ಜ್ವಾಲಾಮುಖಿ ಅನಿಲದ ಪರಿಣಾಮಗಳನ್ನು ತಪ್ಪಿಸಲು ಮನೆಯೊಳಗೆ ಇರಲು ಐಸ್ಲ್ಯಾಂಡ್‌ನ ನಾಗರಿಕ ಸಂರಕ್ಷಣೆ ಮತ್ತು ತುರ್ತುಸ್ಥಿತಿ ನಿರ್ವಹಣಾ ಇಲಾಖೆ ಸಲಹೆ ನೀಡುತ್ತಿದೆ.
ಐಸ್‌ಲ್ಯಾಂಡ್ 30 ಕ್ಕೂ ಹೆಚ್ಚು ಸಕ್ರಿಯ ಮತ್ತು ಅಳಿದುಳಿದ ಜ್ವಾಲಾಮುಖಿಗಳನ್ನು ಹೊಂದಿದೆ. 1784 ರ ಭಾರಿ ಸ್ಫೋಟದಿಂದಾಗಿ ಐಸ್‌ಲ್ಯಾಂಡ್ ಜನಸಂಖ್ಯೆಯ ಕಾಲು ಭಾಗದಷ್ಟು ಜನರು ಸಾವನ್ನಪ್ಪಿದ್ದರು.
ಇದನ್ನೂ ಓದಿ: ‘ಕೋರ್ಟುಗಳು ಮಹಿಳೆಯರ ಕುರಿತ ರೂಢಿಗತ ಅಪವಾದ ಪರಿಗಣಿಸಬಾರದು’: ಸುಪ್ರೀಂ ಕೋರ್ಟ್


