Homeಮುಖಪುಟಗಾಝಿಯಾಬಾದ್: ಶತಾಬ್ದಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ ಅವಘಡ

ಗಾಝಿಯಾಬಾದ್: ಶತಾಬ್ದಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ ಅವಘಡ

- Advertisement -
- Advertisement -

ದೆಹಲಿಯ ಗಾಜಿಯಾಬಾದ್ ರೈಲು ನಿಲ್ದಾಣದಲ್ಲಿ ಶತಾಬ್ದಿ ಎಕ್ಸ್‌ಪ್ರೆಸ್‌‌‌ ರೈಲಿನ ಜನರೇಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಶನಿವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಆರು ಅಗ್ನಿಶಾಮಕ ವಾಹನಗಳು ಬಂದು ಬೆಂಕಿಯನ್ನು ನಂದಿಸಿದವು ಎಂದು ವರದಿಯಾಗಿದೆ.

ಜನರೇಟರ್ ಮತ್ತು ಲಗೇಜ್ ಇಟ್ಟುಕೊಂಡಿದ್ದ ಕೊನೆಯ ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಂತರ ಬೋಗಿಯನ್ನು ಬೇರ್ಪಡಿಸಿ ಬೆಂಕಿಯನ್ನು ನಂದಿಸಲಾಯಿತು.

ಇದನ್ನೂ ಓದಿ: ಅಂಬಾನಿಗಾಗಿ NIA ತನಿಖೆ – ಪುಲ್ವಾಮಾ ದಾಳಿ ಹೇಗೆಂಬುದು ಪತ್ತೆಯಾಗಲಿಲ್ಲ?: ಶಿವಸೇನೆ ಪ್ರಶ್ನೆ

ಬೆಂಕಿಯು ಹರಡುತ್ತಿದ್ದರಿಂದ ಕೋಚ್‌ನ ಬಾಗಿಲು ತೆರೆಯಲಾಗಲಿಲ್ಲ, ಇದಕ್ಕಾಗಿ ಬಾಗಿಲು ಒಡೆದು ಬೆಂಕಿಯನ್ನು ನಂದಿಸಲಾಯಿತು. ಘಟನೆಯಲ್ಲಿ ಬೇರೆ ಯಾವುದೇ ಅಪಘಾತ ಸಂಭವಿಸಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಕಿ ಕಾಣಿಸಿಕೊಳ್ಳಲು ಕಾರಣ ಏನೆಂದು ಇನ್ನೂ ತಿಳಿದು ಬಂದಿಲ್ಲ ಎನ್ನಲಾಗಿದೆ.

ಮಾರ್ಚ್ 13 ರಂದು ಕೂಡಾ ಡೆಹ್ರಾಡೂನ್-ದೆಹಲಿ ಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅಪಘಾತ ಸಂಭವಿಸದ ಬೋಗಿಯಲ್ಲಿ 35 ಪ್ರಯಾಣಿಕರಿದ್ದರು. ಘಟನೆಯ ನಂತರ ಅವರನ್ನು ಇತರ ಬೋಗಿಗಳಿಗೆ ವರ್ಗಾಯಿಸಲಾಯಿತ್ತು.

ಇದನ್ನೂ ಓದಿ: ಉತ್ತರ ಪ್ರದೇಶ-ಅಂತರ್‌ಧರ್ಮಿಯ ವಿವಾಹ; ಗರ್ಭಿಣಿ ಸರ್ಕಾರಿ ಆಶ್ರಯತಾಣದಲ್ಲಿ, ಪತಿ ಜೈಲಿನಲ್ಲಿ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸಂಸತ್ತು ಅಂಗೀಕರಿಸಿರುವ ಹೊಸ ಕ್ರಿಮಿನಲ್ ಕಾನೂನುಗಳ ವಿರುದ್ಧದ ಅರ್ಜಿ: ಸುಪ್ರೀಂ ಕೋರ್ಟಿನಲ್ಲಿ ನಾಳೆ ವಿಚಾರಣೆ

0
"ಹಲವು ದೋಷಗಳು ಮತ್ತು ವ್ಯತ್ಯಾಸಗಳಿವೆ" ಎಂದು, ಭಾರತ ದಂಡ ಸಂಹಿತೆಗಳನ್ನು (ಐಪಿಸಿ) ಕೂಲಂಕಷವಾಗಿ ಪರಿಶೀಲಿಸುವ ಮೂರು ಹೊಸ ಕಾನೂನುಗಳ ಜಾರಿಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆಗೆ ನಿಗದಿಪಡಿಸಿದೆ. ನ್ಯಾಯಮೂರ್ತಿಗಳಾದ ಬೇಲಾ...