Homeಅಂತರಾಷ್ಟ್ರೀಯಪನ್ನುನ್ ಹತ್ಯೆ ಸಂಚಿನಲ್ಲಿ ಗುಜರಾತ್‌ನ ವ್ಯಕ್ತಿ: ಅಮೆರಿಕದಲ್ಲಿ ದೋಷಾರೋಪ ಪಟ್ಟಿ ಸಲ್ಲಿಕೆ

ಪನ್ನುನ್ ಹತ್ಯೆ ಸಂಚಿನಲ್ಲಿ ಗುಜರಾತ್‌ನ ವ್ಯಕ್ತಿ: ಅಮೆರಿಕದಲ್ಲಿ ದೋಷಾರೋಪ ಪಟ್ಟಿ ಸಲ್ಲಿಕೆ

- Advertisement -
- Advertisement -

ಅಮೆರಿಕದಲ್ಲಿ ಸಿಖ್ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್ ಸಿಂಗ್ ಪನ್ನುನ್‌ ಹತ್ಯೆಗೆ ಸಂಬಂಧಿಸಿ ಗುಜರಾತ್‌ನ ನಿಖಿಲ್ ಗುಪ್ತಾ ವಿರುದ್ಧ ಅಮೆರಿಕದ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ. ನಿಖಿಲ್ ಗುಪ್ತಾ ಗುಜರಾತ್‌ನಲ್ಲಿ ತನ್ನ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ವಜಾಗೊಳಿಸುವ ಬಗ್ಗೆ ಭರವಸೆ ನೀಡಿದ ನಂತರ ಸಂಚು ರೂಪಿಸಲು ಒಪ್ಪಿಕೊಂಡಿದ್ದಾನೆ ಎಂದು ಅಮೆರಿಕದ ಫೆಡರಲ್ ಪ್ರಾಸಿಕ್ಯೂಟರ್‌ಗಳು ಆರೋಪಿಸಿದ್ದಾರೆ.

ಅಮೆರಿಕದ ಫೆಡರಲ್ ಪ್ರಾಸಿಕ್ಯೂಟರ್‌ಗಳು ನ್ಯೂಯಾರ್ಕ್‌ ನ್ಯಾಯಾಲಯದಲ್ಲಿ ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿ ಗುಜರಾತ್‌ನ ನಿಖಿಲ್‌ ಗುಪ್ತಾ ಭಾರತದ ಅಧಿಕಾರಿಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಲಾಗಿದೆ. ಇದಲ್ಲದೆ ಭಾರತದ ಅಧಿಕಾರಿಯ ಸಹಾಯದಿಂದ ಗುಪ್ತಾ ಹಂತಕನಿಗೆ ಸಿಖ್ ಪ್ರತ್ಯೇಕತಾವಾದಿ ನಾಯಕನನ್ನು ಕೊಲ್ಲಲು 1,00,000 ಅಮೆರಿಕನ್ ಡಾಲರ್ ಪಾವತಿಸಲು ಗುಪ್ತಾ ಒಪ್ಪಿಕೊಂಡಿದ್ದಾನೆ. ಜೂ.9, 2023 ರಂದು ಗುಪ್ತಾ ಕೊಲೆಗೆ ಮುಂಗಡ ಪಾವತಿಯಾಗಿ ನ್ಯೂಯಾರ್ಕ್‌ನ ಮ್ಯಾನ್‌ಹ್ಯಾಟನ್‌ನಲ್ಲಿರುವ ಯುಸಿಯಲ್ಲಿ 15,000 ಅಮೆರಿಕನ್ ಡಾಲರ್ ನ್ನು ಹಂತಕನಿಗೆ ವ್ಯವಸ್ಥೆ ಮಾಡಿದ್ದಾನೆ ಎಂದು ದೋಷಾರೋಪ ಪಟ್ಟಿಯಲ್ಲಿ ಆರೋಪಿಸಲಾಗಿದೆ.

ಯುಎಸ್ ದಕ್ಷಿಣ ಜಿಲ್ಲೆಯ ಡಿಸ್ಟ್ರಿಕ್ಟ್ ಕೋರ್ಟ್‌ನಲ್ಲಿ ಬುಧವಾರ ಮುಚ್ಚಿದ ಲಕೋಟೆಯಲ್ಲಿ ಈ ದೋಷಾರೋಪಣೆ ಪಟ್ಟಿ ಸಲ್ಲಿಕೆ ಮಾಡಲಾಗಿದೆ.

ದಿ ಫೈನಾನ್ಷಿಯಲ್ ಟೈಮ್ಸ್ ವರದಿಯ ಪ್ರಕಾರ, ಅಮೆರಿಕದ ಅಧಿಕಾರಿಗಳು ಗುರುಪತ್ವಂತ್ ಸಿಂಗ್ ಪನ್ನುನ್‌ ಹತ್ಯೆ ಮಾಡುವ ಸಂಚನ್ನು ವಿಫಲಗೊಳಿಸಿದ್ದಾರೆ. ಭಾರತ ಸರ್ಕಾರವು ಈ ಸಂಚಿನಲ್ಲಿ ಭಾಗಿಯಾಗಿರುವ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು.

ಗುಜರಾತ್‌ನಲ್ಲಿ ಅವರ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ವಜಾಗೊಳಿಸಲಾಗುವುದು ಎಂದು ಭರವಸೆ ನೀಡಿದ ನಂತರ ಗುಪ್ತಾ ಈ ಸಂಚಿಗೆ ಹೇಗೆ ಒಪ್ಪಿಕೊಂಡರು ಎಂಬುದನ್ನು ದೋಷಾರೋಪಣೆಯಲ್ಲಿ ಪ್ರಾಸಿಕ್ಯೂಟರ್‌ಗಳು ವಿವರಿಸಿದ್ದಾರೆ.

2023ರ ಮೇ ತಿಂಗಳ ಆರಂಭದಲ್ಲಿ CC-1(ಭಾರತೀಯ ಸರ್ಕಾರಿ ನೌಕರ ಎಂದು ಹೇಳಿಕೊಂಡ ವ್ಯಕ್ತಿ) ಮತ್ತು ಗುಪ್ತಾ ನಡುವಿನ ಎಲೆಕ್ಟ್ರಾನಿಕ್ ಸಂವಹನದಲ್ಲಿ ಪನ್ನುನ್ ಕೊಲೆಗೆ ವ್ಯವಸ್ಥೆ ಮಾಡಲು ಗುಪ್ತಾಗೆ CC-1 ಹೇಳಿದ್ದಾರೆ. ಭಾರತದಲ್ಲಿ ಗುಪ್ತಾ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಇತ್ತು. ಅದನ್ನು ರದ್ದು ಮಾಡಿಸಲು CC-1 ಗುಪ್ತಾ ಜೊತೆ ಒಪ್ಪಂದ ಮಾಡಿದ್ದಾರೆ ಎಂದು ದೋಷಾರೋಪಣೆಯಲ್ಲಿ ಹೇಳಲಾಗಿದೆ.

CC-1 ಒಬ್ಬ ಭಾರತೀಯ ಸರ್ಕಾರಿ ನೌಕರ ಎಂದು ಹೇಳಲಾಗಿದೆ. ಮೇ 6, 2023 CC-1 ಅವರು ಗುಪ್ತಾ ಅವರಿಗೆ ಮೆಸೇಜ್‌ ಮಾಡಿದ್ದಾರೆ. ನನ್ನ ಹೆಸರನ್ನು CC- 1 ಅಲಿಯಾಸ್ ಎಂದು ಮೊಬೈಲ್‌ನಲ್ಲಿ ಸೇವ್ ಮಾಡಿ ಎಂದು ಮೆಸೇಜ್‌ನಲ್ಲಿ ಹೇಳಲಾಗಿತ್ತು. ಇದರಂತೆ CC-1 ಹೆಸರಿನಲ್ಲಿ ಗುಪ್ತಾ ಅವರ ಫೋನ್‌ನಲ್ಲಿ ದೂರವಾಣಿ ಸಂಖ್ಯೆಯನ್ನು ನಮೂದಿಸಲಾಗಿದೆ. ಕೆಲವು ನಿಮಿಷಗಳ ನಂತರ CC-1 ನ್ಯೂಯಾರ್ಕ್‌ನಲ್ಲಿ ಗುರಿ ಮತ್ತು ಕ್ಯಾಲಿಫೋರ್ನಿಯಾದಲ್ಲಿ ಮತ್ತೊಂದು ಗುರಿಯನ್ನು ಹೊಂದಿದೆ ಸಂದೇಶವನ್ನು ಕಳುಹಿಸಿದ್ದಾರೆ ಎಂದು ದೋಷಾರೋಪಣೆಯಲ್ಲಿ ಹೇಳಲಾಗಿದೆ.

ಮೇ 12, 2023ರಂದು ಸಿಸಿ-1 ಗುಪ್ತಾ ಅವರಿಗೆ ಕಳುಹಿಸಿದ ಸಂದೇಶದಲ್ಲಿ ಕ್ರಿಮಿನಲ್ ಪ್ರಕರಣವನ್ನು ಈಗಾಗಲೇ ರದ್ದು ಮಾಡಲಾಗಿದೆ ಮತ್ತು ಗುಜರಾತ್ ಪೊಲೀಸರು ಇನ್ನು ಬೆನ್ನ ಹಿಂದೆ ಬರಲ್ಲ ಎಂದು ಹೇಳಲಾಗಿದೆ. ಮೇ 23, 2023ರಂದು CC-1 ಮತ್ತೊಮ್ಮೆ ಗುಪ್ತಾ ಅವರಿಗೆ ಕಳುಹಿಸಿದ ಸಂದೇಶದಲ್ಲಿ ನಿಮ್ಮ ಗುಜರಾತ್ ಪ್ರಕರಣದ ಕುರಿತು ಬಾಸ್ ಜೊತೆ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ ಎಂದು ದೋಷಾರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಗುಪ್ತಾ ವಿರುದ್ಧದ ಕೊಲೆ ಸಂಚು ಆರೋಪವು ಗರಿಷ್ಠ 10 ವರ್ಷಗಳ ಜೈಲು ಶಿಕ್ಷೆಯ ಸಾಧ್ಯತೆಯನ್ನು ಹೊಂದಿದೆ.

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಎವರೆಸ್ಟ್, ಎಂಡಿಹೆಚ್ ಮಸಾಲೆ ಪದಾರ್ಥಗಳನ್ನು ನಿಷೇಧಿಸಿದ ನೇಪಾಳ

0
ನೇಪಾಳದ ಆಹಾರ ತಂತ್ರಜ್ಞಾನ ಮತ್ತು ಗುಣಮಟ್ಟ ನಿಯಂತ್ರಣ ಇಲಾಖೆಯು ಎರಡು ಭಾರತೀಯ ಮಸಾಲೆ ಬ್ರಾಂಡ್‌ಗಳಾದ ಎವರೆಸ್ಟ್ ಮತ್ತು ಎಂಡಿಎಂಹೆಚ್‌ಗಳ ಆಮದು, ಬಳಕೆ ಮತ್ತು ಮಾರಾಟವನ್ನು ನಿಷೇಧಿಸಿದೆ. ಅಲ್ಲದೆ ಈ ಮಸಾಲೆಗಳಲ್ಲಿನ ಎಥಿಲೀನ್ ಆಕ್ಸೈಡ್...