Homeಮುಖಪುಟಪಂಚರಾಜ್ಯಗಳ ಚುನಾವಣೆಯ ಮತದಾನೋತ್ತರ ಸಮೀಕ್ಷೆ ಇಲ್ಲಿದೆ...

ಪಂಚರಾಜ್ಯಗಳ ಚುನಾವಣೆಯ ಮತದಾನೋತ್ತರ ಸಮೀಕ್ಷೆ ಇಲ್ಲಿದೆ…

- Advertisement -
- Advertisement -

ತೆಲಂಗಾಣ ಸೇರಿದಂತೆ ದೇಶದ 5 ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗೆ ಮತದಾನ ಕೊನೆಗೊಂಡ ಬೆನ್ನಲ್ಲೇ ಎಕ್ಸಿಟ್ ಪೋಲ್‌ಗಳ (ಮತಗಟ್ಟೆ ಸಮೀಕ್ಷೆ) ಫಲಿತಾಂಶ ಹೊರಬಿದ್ದಿದೆ.

ಯಾವ ಪಕ್ಷಕ್ಕೆ ಯಾವ ರಾಜ್ಯದಲ್ಲಿ ಎಷ್ಟು ಸ್ಥಾನಗಳು ಸಿಗಲಿವೆ? ಅಲ್ಲಿ ಯಾರ ಸರ್ಕಾರ ರಚನೆಯಾಗಲಿದೆ ಎಂಬುದು ಎಕ್ಸಿಟ್ ಪೋಲ್ ಅಂದಾಜಿಸಿದೆ. ಆದರೆ, ಡಿಸೆಂಬರ್ 3 ರಂದು ಮತ ಎಣಿಕೆ ನಂತರ ಅಂತಿಮ ಫಲಿತಾಂಶ ಗೊತ್ತಾಗಲಿದೆ.

ತೆಲಂಗಾಣದಲ್ಲಿ 119 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 60ಸ್ಥಾನ ಪಡೆದ ಪಕ್ಷ ಬಹುಮತ ಸಾಧಿಸಲಿದೆ.

ಸಿಎನ್‌ನ್‌ ಸಮೀಕ್ಷೆ ಪ್ರಕಾರ ತೆಲಂಗಾಣದಲ್ಲಿ ಕಾಂಗ್ರೆಸ್‌ 56 ಸ್ಥಾನಗಳನ್ನು ಪಡೆಯಲಿದೆ. ಬಿಆರ್‌ಎಸ್‌ 58 ಸ್ಥಾನಗಳನ್ನು ಮತ್ತು ಬಿಜೆಪಿ 10ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಹೇಳುತ್ತದೆ.

ಜನ್‌ ಕಿ ಬಾತ್‌ ಸಮೀಕ್ಷೆ ಪ್ರಕಾರ, ಬಿಆರ್‌ಎಸ್‌ 40-55 ಕ್ಷೇತ್ರಗಳಲ್ಲಿ, ಕಾಂಗ್ರೆಸ್ 48-64, ಬಿಜೆಪಿ 7-13 ಎಐಎಂಐಎಂ 4-7ಕ್ಷೇತ್ರಗಳಲ್ಲಿ ಗೆಲುವಿನ ಸಾಧ್ಯತೆ ಇದೆ.

ಮ್ಯಾಟ್ರಿಜ್ ಎಕ್ಸಿಟ್ ಪೋಲ್ ಪ್ರಕಾರ ಕಾಂಗ್ರೆಸ್‌ಗೆ 58-71 ಸ್ಥಾನಗಳಲ್ಲಿ ಗೆಲುವಿನ ಮೂಲಕ ಕಾಂಗ್ರೆಸ್‌ ಸ್ಪಷ್ಟ ಬಹುಮತ ಪಡೆಯುವ ಸಾಧ್ಯತೆ ಇದೆ. ಬಿಆರ್‌ ಎಸ್‌ 37-51, ಬಿಜೆಪಿಗೆ 5 ಸ್ಥಾನಗಳು ಕೂಡ ಸಿಗುವ ಸಾಧ್ಯತೆ ಇದೆ.

ಛತ್ತಿಸ್‌ಗಢದಲ್ಲಿ 90 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 46 ಸ್ಥಾನ ಪಡೆದ ಪಕ್ಷ ಬಹುಮತ ಸಾಧಿಸಲಿದೆ. ಕಾಂಗ್ರೆಸ್‌ ಛತ್ತಿಸ್‌ಗಢದಲ್ಲಿ 40-50 ಸ್ಥಾನಗಳನ್ನು ಮತ್ತು 36-46 ಸ್ಥಾನಗಳಲ್ಲಿ ಬಿಜೆಪಿ ಗೆಲುವಿನ ಸಾಧ್ಯತೆ ಇದೆ ಎಂದು  ಇಂಡಿಯಾ ಟುಡೇ ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್‌ ಪೋಲ್‌ ಹೇಳಿದೆ.

ಟಿವಿ5 ನ್ಯೂಸ್ ಎಕ್ಸಿಟ್ ಪೋಲ್ ಬಿಜೆಪಿಗೆ 29-39 ಸ್ಥಾನಗಳು ಮತ್ತು ಕಾಂಗ್ರೆಸ್‌ಗೆ 54-64 ಸ್ಥಾನಗಳ ಗೆಲುವಿನ ಭವಿಷ್ಯ ನುಡಿದಿದೆ.

ಜನ್ ಕಿ ಬಾತ್ ಎಕ್ಸಿಟ್ ಪೋಲ್ ಪ್ರಕಾರ, ಕಾಂಗ್ರೆಸ್ 42-53 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಮತ್ತು ಬಿಜೆಪಿ 34-45 ಸ್ಥಾನಗಳನ್ನು ಗಳಿಸಲಿದೆ ಎಂದು ಹೇಳಿದೆ.

ಎಬಿಪಿ ಸಿ ವೋಟರ್‌ ಸಮೀಕ್ಷೆ ಪ್ರಕಾರ, ಬಿಜೆಪಿ 36-48, ಕಾಂಗ್ರೆಸ್‌ 41-53 ಸ್ಥಾನ ಪಡೆಯುವ ಮೂಲಕ ಬಹುಮತ ಪಡೆಯುವ ಸಾಧ್ಯತೆ ಇದೆ ಎಂದು ಹೇಳುತ್ತದೆ. ಇತರರು 4 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದೆ ಎಂದು ಹೇಳುತ್ತಿದೆ.

ಮಧ್ಯಪ್ರದೇಶದಲ್ಲಿ 230 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 116 ಸ್ಥಾನ ಪಡೆದ ಪಕ್ಷ ಬಹುಮತ ಸಾಧಿಸಲಿದೆ. ಮಧ್ಯಪ್ರದೇಶದ ರಿಪಬ್ಲಿಕ್ ಟಿವಿ-ಮ್ಯಾಟ್ರಿಜ್ ಎಕ್ಸಿಟ್ ಪೋಲ್ ಪ್ರಕಾರ, ಬಿಜೆಪಿ 118-130 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಮುನ್ನಡೆ ಸಾಧಿಸಿದೆ. ಆದರೆ ಕಾಂಗ್ರೆಸ್ 97-107 ಸ್ಥಾನಗಳನ್ನು ಗೆಲ್ಲಬಹುದು, ಇತರ ಪಕ್ಷಗಳು 2 ಸ್ಥಾನಗಳನ್ನು ಗೆಲ್ಲಬಹುದಾಗಿದೆ.

ಟಿವಿ9 ಭಾರತ್ ವರ್ಷ್ ಸಮೀಕ್ಷಾ ವರದಿಯ ಪ್ರಕಾರ ಕಾಂಗ್ರೆಸ್ 111-121 ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು, ಬಿಜೆಪಿ 106-116 ಸ್ಥಾನಗಳಲ್ಲಿ ನಿರೀಕ್ಷಿತ ಗೆಲುವಿನ ಸಾಧ್ಯತೆ ಇದೆ ಎಂದು ತಿಳಿಸಿದೆ.

ಜನ್‌ ಕಿ ಬಾತ್‌ ಸಮೀಕ್ಷೆ ಪ್ರಕಾರ, ಬಿಜೆಪಿ 100-123, ಕಾಂಗ್ರೆಸ್‌ 100-125, ಇತರರು 5ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದೆ.

ರಾಜಸ್ಥಾನದಲ್ಲಿ 200 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 101 ಸ್ಥಾನ ಪಡೆದ ಪಕ್ಷ ಬಹುಮತ ಸಾಧಿಸಲಿದೆ.

ಟಿವಿ9 ಭಾರತ್ ವರ್ಷ್ ಸಮೀಕ್ಷೆ ಪ್ರಕಾರ, ಬಿಜೆಪಿ 100-110ಕ್ಷೇತ್ರಗಳಲ್ಲಿ, ಕಾಂಗ್ರೆಸ್‌ 90-100, ಬಿಎಸ್ಪಿ-0 ಹಾಗೂ ಇತರರು 5-15ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದೆ.
ಜನ್‌ ಕಿ ಬಾತ್‌ ಸಮೀಕ್ಷೆ ಪ್ರಕಾರ, ಬಿಜೆಪಿ 100-112, ಕಾಂಗ್ರೆಸ್‌ 62-85, ಇತರರು 14-15ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆ ಹೇಳಿದೆ.

ಮಿಜೋರಾಂನಲ್ಲಿ 40 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 21 ಸ್ಥಾನ ಪಡೆದ ಪಕ್ಷ ಬಹುಮತ ಸಾಧಿಸಲಿದೆ. ಜನ್‌ ಕಿ ಬಾತ್‌ ಸಮೀಕ್ಷೆ ಪ್ರಕಾರ ಮಿಜೋರಾಂನಲ್ಲಿ ಎಮ್‌ ಎನ್‌ಎಫ್‌ಗೆ 10-14ಕ್ಷೇತ್ರಗಳು, ZPM 15-25ಕ್ಷೇತ್ರಗಳು, ಕಾಂಗ್ರೆಸ್ 5-9ಕ್ಷೆತ್ರಗಳಲ್ಲಿ, ಬಿಜೆಪಿ 0-2ಕ್ಷೇತ್ರಗಳಲ್ಲಿ ಗೆಲುವಿನ ಸಾಧ್ಯತೆ ಇದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read