ವಿಧಾನಪರಿಷತ್‌ನ ಪದವೀಧರರು ಮತ್ತು ಶಿಕ್ಷಕರ ತಲಾ ಮೂರು ಕ್ಷೇತ್ರಗಳಿಗೆ ಇಂದು (ಜೂನ್ 3) ಮತದಾನ ನಡೆಯುತ್ತಿದೆ. ಒಟ್ಟು ಆರು ಕ್ಷೇತ್ರಗಳಿಗೆ 78 ಅಭ್ಯರ್ಥಿಗಳು ಕಣದಲ್ಲಿದ್ದು, 4.33 ಲಕ್ಷ ಮತದಾರರಿದ್ದಾರೆ.
ಈಶಾನ್ಯ, ನೈರುತ್ಯ ಮತ್ತು ಬೆಂಗಳೂರು ಪದವೀಧರರ ಕ್ಷೇತ್ರಗಳ ವ್ಯಾಪ್ತಿಯಲ್ಲಿ 16 ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ. ಪದವೀಧರ ಕ್ಷೇತ್ರಗಳಲ್ಲಿ ಒಟ್ಟು 3.63 ಲಕ್ಷ ಮತದಾರರಿದ್ದಾರೆ. ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಅತ್ಯಧಿಕ 1.56 ಲಕ್ಷ ಮತದಾರರಿದ್ದಾರೆ. ಒಟ್ಟು 16 ಜಿಲ್ಲೆಗಳಲ್ಲಿ 461 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಆಗ್ನೇಯ, ನೈರುತ್ಯ ಮತ್ತು ದಕ್ಷಿಣ ಶಿಕ್ಷಕರ ಕ್ಷೇತ್ರಗಳ ವ್ಯಾಪ್ತಿಯಲ್ಲಿ 15 ಜಿಲ್ಲೆಗಳಿವೆ. ಈ ಕ್ಷೇತ್ರಗಳಲ್ಲಿ ಒಟ್ಟು 70,260 ಮತದಾರರಿದ್ದಾರೆ. ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಅತ್ಯಧಿಕ 25,309 ಮತದಾರರಿದ್ದಾರೆ. ಈ ಕ್ಷೇತ್ರಗಳಲ್ಲಿ 170 ಮತಗಟ್ಟೆಗಳನ್ನು ತೆರೆಯಲಾಗಿದೆ.
ಪ್ರಾಶಸ್ತ್ಯದ ಮತ ಚಲಾವಣೆಗೆ ಅವಕಾಶ:
ವಿಧಾನಪರಿಷತ್‌ನ ಪದವೀಧರರು ಮತ್ತು ಶಿಕ್ಷಕರ ಕ್ಷೇತ್ರಗಳ ಚುನಾವಣೆಯಲ್ಲಿ ಪ್ರಾಶಸ್ತ್ಯದ ಮತ ಚಲಾವಣೆಗೆ ಅವಕಾಶವಿದೆ. ಮತಪತ್ರದ ಮೂಲಕ ಚುನಾವಣೆ ನಡೆಯಲಿದ್ದು, ಅಭ್ಯರ್ಥಿಗಳ ಹೆಸರಿನ ಮುಂದೆ ತಮ್ಮ ಆಯ್ಕೆಯ ಪ್ರಾಶಸ್ತ್ಯವನ್ನು ಸಂಖ್ಯೆಗಳಲ್ಲಿ ನಮೂದಿಸಬೇಕಾಗುತ್ತದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿರುವುದಾಗಿ ವರದಿಯಾಗಿದೆ.
ಪ್ರಮುಖ ಅಭ್ಯರ್ಥಿಗಳು
ದಕ್ಷಿಣ ಶಿಕ್ಷಕರ ಕ್ಷೇತ್ರ
ಕಾಂಗ್ರೆಸ್-ಮರಿತಿಬ್ಬೇಗೌಡ
ಜೆಡಿಎಸ್-ವಿವೇಕಾನಂದ
ನೈಋತ್ಯ ಶಿಕ್ಷಕರ ಕ್ಷೇತ್ರ
ಕಾಂಗ್ರೆಸ್-ಕೆ.ಕೆ.ಮಂಜುನಾಥ್
ಜೆಡಿಎಸ್-ಎಸ್.ಎಲ್ ಭೋಜೇಗೌಡ
ಆಗ್ನೇಯ ಶಿಕ್ಷಕರ ಕ್ಷೇತ್ರ
ಕಾಂಗ್ರೆಸ್- ಟಿ.ಡಿ ಶ್ರೀನಿವಾಸ್
ಬಿಜೆಪಿ-ವೈ.ಎ ನಾರಾಯಣಸ್ವಾಮಿ
ನೈಋತ್ಯ ಪದವೀಧರ ಕ್ಷೇತ್ರ
ಕಾಂಗ್ರೆಸ್- ಆಯನೂರು ಮಂಜುನಾಥ್
ಬಿಜೆಪಿ-ಡಾ. ಧನಂಜಯ ಸರ್ಜಿ
ಈಶಾನ್ಯ ಪದವೀಧರ ಕ್ಷೇತ್ರ
ಕಾಂಗ್ರೆಸ್- ಡಾ.ಚಂದ್ರಶೇಖರ ಪಾಟೀಲ್
ಬಿಜೆಪಿ- ಅಮರನಾಥ ಪಾಟೀಲ್
ಬೆಂಗಳೂರು ಪದವೀಧರ ಕ್ಷೇತ್ರ
ಕಾಂಗ್ರೆಸ್-ರಾಮೋಜಿ ಗೌಡ
ಬಿಜೆಪಿ-ಅ.ದೇವೇಗೌಡ
ನೈಋತ್ಯ ಪದವೀಧರ ಕ್ಷೇತ್ರ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಉಡುಪಿಯ ಮಾಜಿ ಶಾಸಕ ಕೆ. ರಘುಪತಿ ಭಟ್ ಕಣಕ್ಕಿಳಿದಿದ್ದಾರೆ. ಇವರನ್ನು ಬಿಜೆಪಿ ಇತ್ತೀಚೆಗೆ ಉಚ್ಚಾಟನೆ ಮಾಡಿದೆ. ಅಗ್ನೇಯ ಶಿಕ್ಷಕರ ಕ್ಷೇತ್ರದಿಂದ ರುಪ್ಸಾ ಸಂಘಟನೆ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಸ್ಪರ್ಧಿಸಿದ್ದಾರೆ.
ಇದನ್ನೂ ಓದಿ : ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ


